ಸ್ವಾವಲಂಬಿ ಸಾರಥಿ ಯೋಜನೆ(Sarathi): ವಾಹನ ಖರೀದಿಗೆ ₹4 ಲಕ್ಷದವರೆಗೆ ಸಹಾಯಧನ

ಸ್ವಂತ ವಾಹನ ಖರೀದಿಸ ಬೇಕೆಂದು ಕೊಂಡವರಿಗೆ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ಕಾರು,ಟ್ಯಾಕ್ಸಿ,ಲಾರಿ ಹೀಗೆ ಹಲವಾರು ವಾಹನಗಳ ಖರೀದಿ ಮಾಡಲು ಸರ್ಕಾರ ಸ್ವಾವಲಂಬಿ  ಸಾರಥಿ ಯೋಜನೆಯಡಿಯಲ್ಲಿ ಆರ್ಥಿಕ ಸಹಾಯ ಮಾಡುತ್ತದೆ.ಸರಕು ಸಾಗಣೆ ಅಥವಾ ಇತರ ಸ್ವಯಂ ಉದ್ಯೋಗ ಆರಂಭಿಸಬೇಕು ಎಂದುಕೊಂಡಿರುವ ನಿರುದ್ಯೋಗಿ ಯುವಕರು ಮತ್ತು ಮಹಿಳೆಯರಿಗೆ ಕರ್ನಾಟಕ ಸರ್ಕಾರದ ಈ ಯೋಜನೆ ಸಹಾಯವಾಗಬಹುದು. ಈ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಸಂಬಂಧಪಟ್ಟ ಅಭಿವೃದ್ಧಿ ನಿಗಮಗಳ ಮೂಲಕ ವಾಹನ ಖರೀದಿಸಲು ಸಹಾಯಧನ ಹಾಗೂ ಬ್ಯಾಂಕ್ ಸಾಲದ ಸೌಲಭ್ಯವನ್ನು ಒದಗಿಸಲಾಗುತ್ತದೆ.ಅರ್ಜಿ ಸಲ್ಲಿಸಲು ಅಧಿಕೃತ ಮಾಹಿತಿಯಂತೆ ಸರಿಯಾದ ದಾಖಲೆಗಳನ್ನು ನೀಡಬೇಕು.

ಸ್ವಾವಲಂಬಿ ಸಾರಥಿ ಯೋಜನೆಯಡಿ ವಾಹನ ಖರೀದಿಗೆ ಸಹಾಯಧನ

ಸ್ವಾವಲಂಬಿ ಸಾರಥಿ ಯೋಜನೆ ಎಂದರೇನು?

ಉದ್ಯೋಗ ಸಿಗದೇ ಮನೆಯಲ್ಲಿ ಇರುವ ನಿರುದ್ಯೋಗಿ ಯುವಕರು ಮತ್ತು ಮಹಿಳೆಯರು ಸ್ವಂತ ಉದ್ಯೋಗ ಆರಂಭಿಸಿ ಆದಾಯ ಗಳಿಸಿ ಆರ್ಥಿಕವಾಗಿ ಸದೃಢರಾಗಲು ಈ ಯೋಜನೆ ಸಹಾಯ ಮಾಡುತ್ತದೆ ನಿರುದ್ಯೋಗ ಕಡಿಮೆ ಮಾಡುವುದು  ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಈ ಯೋಜನೆಯಡಿ ಅರ್ಹ ಫಲಾನುಭವಿಗಳು ಟ್ಯಾಕ್ಸಿ, ಸರಕು ಸಾಗಣೆ ವಾಹನ, ಆಟೋ, ಟ್ರ್ಯಾಕ್ಟರ್ ಸೇರಿದಂತೆ ಸಂಬಂಧಪಟ್ಟ ನಿಗಮದಿಂದ ಅನುಮೋದಿಸಲಾದ ವಾಹನಗಳನ್ನು ಖರೀದಿಸಲು ಆರ್ಥಿಕ ನೆರವು ಪಡೆಯಬಹುದು. ಕೆಲವು ನಿಗಮಗಳ ಮೂಲಕ ಸಣ್ಣ ಉದ್ಯಮ, ಸೇವಾ ಚಟುವಟಿಕೆಗಳು ಹಾಗೂ ಅನುಮೋದಿತ ಮೊಬೈಲ್ ಫುಡ್ ಟ್ರಕ್ ಅಥವಾ ಕಿಯೋಸ್ಕ್‌ಗಳಂತಹ ಸ್ವಯಂ ಉದ್ಯೋಗ ಘಟಕಗಳಿಗೂ ಆರ್ಥಿಕವಾಗಿ ನೆರವು ದೊರೆಯತ್ತದೆ.

ವಾಹನ ಖರೀದಿಗೆ ಎಷ್ಟು ಸಹಾಯಧನ ಸಿಗುತ್ತದೆ?

ಸ್ವಾವಲಂಬಿ ಸಾರಥಿ ಯೋಜನೆಯಡಿಅರ್ಜಿ ಸಲ್ಲಿಸಿದ ಎಲ್ಲಾ ಫಲಾನುಭವಿಗಳಿಗೂ ಒಂದೇ ರೀತಿಯ ಸಹಾಯಧನ ಸಿಗುವುದಿಲ್ಲ ಫಲಾನುಭವಿಯ ಸಮುದಾಯ ಮತ್ತು ಸಂಬಂಧಪಟ್ಟ ಅಭಿವೃದ್ಧಿ ನಿಗಮದ ನಿಯಮದ ಆಧಾರದ ಮೇಲೆ ಸಹಾಯಧನದ ಪ್ರಮಾಣದಲ್ಲಿ ಬದಲಾಗುತ್ತದೆ.

ಫಲಾನುಭವಿಗಳವರ್ಗಸಹಾಯಧನ
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಘಟಕ ವೆಚ್ಚದ 75% ಅಥವಾ ಗರಿಷ್ಠ ₹4 ಲಕ್ಷದವರೆಗೆ
ಹಿಂದುಳಿದ ವರ್ಗಸಂಬಂಧಪಟ್ಟ ನಿಗಮದ ನಿಯಮದಂತೆ 50% ಅಥವಾ ಗರಿಷ್ಠ ₹3 ಲಕ್ಷದವರೆಗೆ
ಅಲ್ಪಸಂಖ್ಯಾತರುಸಂಬಂಧಪಟ್ಟ ನಿಗಮದ ನಿಯಮದಂತೆ ಗರಿಷ್ಠ ₹3 ಲಕ್ಷದವರೆಗೆ

ವಾಹನ ಅಥವಾ ಘಟಕದ ಉಳಿದ ವೆಚ್ಚವನ್ನು ಸರ್ಕಾರ ಅರ್ಹ ಬ್ಯಾಂಕ್ ಸಾಲದ ಮೂಲಕ ಭರಿಸುವ ವ್ಯವಸ್ಥೆವಿದೆ . ಆದರೆ ನಿಖರವಾದ ಸಾಲದ ಮೊತ್ತ, ಬಡ್ಡಿ ಮತ್ತು ಇತರ ನಿಯಮಗಳು ಸಂಬಂಧಪಟ್ಟ ಬ್ಯಾಂಕ್ ಹಾಗೂ ನಿಗಮದ ನಿಯಮದ ಮೇಲೆ  ಬದಲಾಗುತ್ತಿರುತ್ತದೆ. ಈ ಯೋಜನೆ ಅಡಿಯಲ್ಲಿ ಬರೋಬ್ಬರಿ 3 ಲಕ್ಷದಿಂದ 4 ಲಕ್ಷದವರೆಗೆ ಆರ್ಥಿಕ ಸಹಾಯ ಸಿಗುತ್ತದೆ. ಹಾಗೆ ಕೆಲವೊಂದು ಸಂಧರ್ಭದಲ್ಲಿ ಶೇಖಡ 50% ರಷ್ಟು ಸಹಾಯಧನ ಸಿಗುತ್ತದೆ.

ಯಾವ ವಾಹನಗಳನ್ನು ಖರೀದಿಸಬಹುದು?

ಸ್ವಾವಲಂಬಿ ಸಾರಥಿ ಯೋಜನೆಯಡಿ ಸಂಬಂಧಪಟ್ಟ ನಿಗಮದ ಪ್ರಸ್ತುತ ನಿಯಮದ ಪ್ರಕಾರ ಇಂತಹದ್ದೇ ವಾಹನ ಖರೀದಿ ಮಾಡಬೇಕೆಂದಿಲ್ಲ ಬದಲಾಗಿ ನಿಯಮಗಳಿಗೆ ಸ್ವಂತ ಉದ್ಯೋಗ ಮಾಡಲಾಗುವಂತಹ ವಾಹನಗಳ ಖರೀದಿಗೆ ಹೆಚ್ಚು ಆದ್ಯತೆ ನೀಡಲಾಗುವುದು. ಉದಾಹರಣೆಗೆ ಪ್ರಯಾಣಿಕರ ಆಟೋ, ಟ್ಯಾಕ್ಸಿ, ಸರಕು ಸಾಗಣೆ ವಾಹನ, ಟ್ರ್ಯಾಕ್ಟರ್ ಹಾಗೂ ಕೆಲವು ಅನುಮೋದಿತ ಮೊಬೈಲ್ ಫುಡ್ ಟ್ರಕ್ ಅಥವಾ ಕಿಯೋಸ್ಕ್‌ಗಳನ್ನು ಈ ಯೋಜನೆಯಲ್ಲಿ ಪ್ರಮುಖವು ಎಂದುಕೊಳ್ಳಬಹುದು. ನೀವು ಖರೀದಿಸಲು ಬಯಸುವ ವಾಹನವು ಈ ಯೋಜನೆಯಡಿಲ್ಲಿ ಅರ್ಹವಾಗಿದೆಯೇ ಎಂಬುದನ್ನು ಅರ್ಜಿ ಸಲ್ಲಿಸುವ ಮೊದಲು ಸಂಬಂಧಪಟ್ಟ ನಿಗಮದಲ್ಲಿ ಪರಿಶೀಲಿಸಬೇಕು.

ಸ್ವಾವಲಂಬಿ ಸಾರಥಿ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು?

ಯೋಜನೆಯಡಿ ಅರ್ಜಿ ಸಲ್ಲಿಸುವವರಿಗೆ ಕೆಲವು ಮೂಲಭೂತ ಅರ್ಹತೆಗಳನ್ನು ಹೊಂದಿರಬೇಕು. ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು ಮತ್ತು ಸಂಬಂಧಪಟ್ಟ ಅಭಿವೃದ್ಧಿ ನಿಗಮದ ವ್ಯಾಪ್ತಿಗೆ ಬರುವ ಸಮುದಾಯಕ್ಕೆ ಸೇರಿದವರಾಗಿರಬೇಕು. ವಾಹನ ಖರೀದಿಗೆ ಅರ್ಜಿ ಸಲ್ಲಿಸುವವರು ಅಗತ್ಯವಾಗಿ ವಾಹನ ಚಲಾಯಿಸಲು ಕಲಿತುಕೊಂಡಿರಬೇಕು. ಇದರ ಜೊತೆಗೆ ನಿಗಮ ನಿಗದಿಪಡಿಸಿರುವ ವಯೋಮಿತಿ ಮತ್ತು ಕುಟುಂಬದ ವಾರ್ಷಿಕ ಆದಾಯದ ಮಿತಿಯೊಳಗಿರಬೇಕು.ಅರ್ಜಿದಾರರು ಸ್ವಯಂ ಉದ್ಯೋಗ ಆರಂಭಿಸುವ ಉದ್ದೇಶ ಹೊಂದಿರಬೇಕು. ಇದೇ ಉದ್ದೇಶಕ್ಕಾಗಿ ಈ ಹಿಂದೆ ಸಂಬಂಧಪಟ್ಟ ನಿಗಮ ಅಥವಾ ಸರ್ಕಾರಿ ಇಲಾಖೆಯಿಂದ ಸೌಲಭ್ಯ ಪಡೆದಿದ್ದರೆ ಅರ್ಹತೆ ಅನ್ವಯಿಸದಿರಬಹುದುಅಂದರೆ ಮೊದಲೇ ಒಂದು ಸಲ ಈ ಯೋಜನೆಯಿಂದ ಲಾಭ ಪಡೆದಿದ್ದು ಮತ್ತೆ ಅರ್ಜಿ ಹಾಕಿದರೆ ಅರ್ಜಿ ತಿರಸ್ಕಾರವಾಗುತ್ತದೆ. ಕೆಲವು ನಿಗಮಗಳ ನಿಯಮದಂತೆ ಕುಟುಂಬದಲ್ಲಿ ಸರ್ಕಾರಿ ಅಥವಾ ಅರೆ ಸರ್ಕಾರಿ ಸಂಸ್ಥೆಯಲ್ಲಿ ನಿಯಮಿತ ಉದ್ಯೋಗದಲ್ಲಿರುವ ಸದಸ್ಯರಿದ್ದರು ಕೂಡ ಅರ್ಹತೆಯ ಮೇಲೆ ಪರಿಣಾಮ ಬಿರುತ್ತದೆ ಮತ್ತು ನೀವು ಅರ್ಜಿ ಸಲ್ಲಿಸಲು ಅರ್ಹರಾಗದೆ ಇರಬಹುದು.

ವಯೋಮಿತಿ ಮತ್ತು ಆದಾಯ ಮಿತಿ

ಸ್ವಾವಲಂಬಿ ಸಾರಥಿ ಯೋಜನೆಯ ವಯೋಮಿತಿ ಮತ್ತು ಕುಟುಂಬದ ಆದಾಯ ಮಿತಿ ಎಲ್ಲ ವರ್ಗಗಳಿಗೂ ಒಂದೇ ಆಗಿರುವುದಿಲ್ಲ. ಉದಾಹರಣೆಗೆ ಕೆಲವು ನಿಗಮಗಳ ಯೋಜನಾ ನಿಯಮಗಳಲ್ಲಿ 18ರಿಂದ 55 ಅಥವಾ 56 ವರ್ಷಗಳವರೆಗೆ ವಯೋಮಿತಿ ಇದೆ. SC/ST ಹಾಗೂ ಅಲ್ಪಸಂಖ್ಯಾತರು ಅಥವಾ ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ನಿಯಮಗಳು ಇದೆ .ಅದೇ ರೀತಿ ಕುಟುಂಬದ ವಾರ್ಷಿಕ ಆದಾಯದ ಮಿತಿಯೂ ನಿಗಮದ ಪ್ರಕಾರ ಅರ್ಹತೆಯನ್ನು ಬದಲಾಯಿಸುತ್ತಿರುತ್ತೆತ್ತದೆ. ಆದ್ದರಿಂದ ನಿಮ್ಮ ಸಮುದಾಯಕ್ಕೆ ಸಂಬಂಧಿಸಿದ ಅಭಿವೃದ್ಧಿ ನಿಗಮದ ಪ್ರಸ್ತುತ ಅಧಿಸೂಚನೆಯಲ್ಲಿ ನೀಡಿರುವ ಆದಾಯ ಮತ್ತು ವಯೋಮಿತಿಯನ್ನು ಪರಿಶೀಲಿಸಿದ ನಂತರವೇ ಅರ್ಜಿ ಸಲ್ಲಿಸುವುದು ಉತ್ತಮ ನಿರ್ಧಾರವಾಗಿರುತ್ತದೆ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು

ಅರ್ಜಿಯ ಸಂದರ್ಭದಲ್ಲಿ ಕಡ್ಡಾಯವಾಗಿ ಕೆಲವು ಪ್ರಮುಖ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.

  • ಆಧಾರ್ ಕಾರ್ಡ್
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ಕರ್ನಾಟಕ ನಿವಾಸದ ಪುರಾವೆ
  • ಡ್ರೈವಿಂಗ್ ಲೈಸನ್ಸ್
  • ಬ್ಯಾಂಕ್ ಖಾತೆಯ ವಿವರ ಮತ್ತು
  • ಇತ್ತೀಚಿನ ಭಾವಚಿತ್ರ ಪ್ರಮುಖವಾಗಿವೆ
  • ಮೊಬೈಲ್ ನಂಬರ್

ಹೀಗೆ ಅಧಿಕೃತ ಆದೇಶದಂತೆ ಸರಿಯಾದ ದಾಖಲೆಗಳನ್ನು ಒದಗಿಸುವುದರ ಮೂಲಕ ಈ ಯೋಜನೆ ಲಾಭ ಪಡೆದುಕೊಳ್ಳಬಹುದು. ಹಾಗೆ ಮುಖ್ಯವಾಗಿ ಕೆಲವೊಮ್ಮೆ ಮಾಹಿತಿಗಳು ಬದಲಾಗುತ್ತದೆ ಅದರಿಂದ ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಮಾಹಿತಿ ಪರಿಶೀಲಿಸಿಕೊಂಡು ಅರ್ಜಿ ಸಲ್ಲಿಸಿ.

ಸ್ವಾವಲಂಬಿ ಸಾರಥಿ ಯೋಜನೆಗೆ ಅರ್ಜಿ ಹೇಗೆ ಸಲ್ಲಿಸಬೇಕು?

ಸ್ವಾವಲಂಬಿ ಸಾರಥಿ ಯೋಜನೆಯ ಅರ್ಜಿ ಪ್ರಕ್ರಿಯೆಯು  ಆನ್‌ಲೈನ್ ಮೂಲಕ ನಡೆಯುತ್ತದೆ. ಅರ್ಹ ಅಭ್ಯರ್ಥಿಗಳು ಸೇವಾ ಸಿಂಧು ಪೋರ್ಟಲ್ ಅಥವಾ ಸಂಬಂಧ ಪಟ್ಟ ಇಲಾಖೆಯಲ್ಲಿ ಸಂಬಂಧಿಸಿದ ಅಭಿವೃದ್ಧಿ ನಿಗಮದ ಅಧಿಕೃತ ಪೋರ್ಟಲ್‌ನಲ್ಲಿ ಸರಿಯಾದ ದಾಖಲೆಗಳನ್ನು ನೀಡುವುದರ ಮೂಲಕ ಅರ್ಜಿ ಸಲ್ಲಿಸಬಹುದು.ಅರ್ಜಿಯಲ್ಲಿ ಕೇಳಲಾಗುವ ವೈಯಕ್ತಿಕ ವಿವರಗಳು, ಜಾತಿ, ಆದಾಯ, ಬ್ಯಾಂಕ್ ಖಾತೆ ಹಾಗೂ ಇತರ ಮಾಹಿತಿಯನ್ನು ಸರಿಯಾಗಿ ನಮೂದಿಸಬೇಕು. ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿದ ನಂತರ ಅರ್ಜಿಯನ್ನು ಸಲ್ಲಿಸಿ ಅದರ ಅರ್ಜಿ ಸಂಖ್ಯೆ ಅಥವಾ ಸ್ವೀಕೃತಿ ವಿವರವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು.ನಂತರ ಅರ್ಜಿ  ಯಶಸ್ವಿಯಾದಮೇಲೆ SMS ಮೂಲಕ ನಿಮಿಗೆ ಅರ್ಜಿ ಸ್ಥಿತಿ ತಿಳಿಸಲಾಗುತ್ತದೆ.

ಅರ್ಜಿ ಸಲ್ಲಿಸಿದ ನಂತರ ಏನಾಗುತ್ತದೆ?

ಅರ್ಜಿ ಸಲ್ಲಿಸಿದ ನಂತರ ಸಂಬಂಧಪಟ್ಟ ಅಧಿಕಾರಿಗಳು ಅರ್ಜಿದಾರರು ನೀಡಿರುವ ದಾಖಲೆಗಳನ್ನು ಪರಿಶೀಲಿಸುತ್ತಾರೆ. ಅರ್ಹ ಅಭ್ಯರ್ಥಿಗಳ ಅರ್ಜಿಗಳನ್ನು ಆಯ್ಕೆ ಸಮಿತಿಯ ಮುಂದೆ ಮಂಡಿಸಲಾಗುತ್ತದೆ. ನಂತರ ಆಯ್ಕೆಯಾದ ಅರ್ಜಿಗಳನ್ನು ವಾಹನದ ದರಪಟ್ಟಿ ಸೇರಿದಂತೆ ಬ್ಯಾಂಕ್ ಸಾಲ ಮಂಜೂರಾತಿಗಾಗಿ ಸಂಬಂಧಪಟ್ಟ ಬ್ಯಾಂಕ್‌ಗೆ ಶಿಫಾರಸು ಮಾಡಲಾಗುತ್ತದೆ.ಬ್ಯಾಂಕ್ ಅರ್ಜಿಯನ್ನು ಪರಿಶೀಲಿಸಿ ಸಾಲ ಮಂಜೂರು ಮಾಡಿದ ನಂತರ ವಾಹನ ಖರೀದಿ ಪ್ರಕ್ರಿಯೆ ಮುಂದುವರಿಯುತ್ತದೆ. ವಾಹನ ಖರೀದಿಸಿದ ನಂತರ ಆರ್‌ಸಿ ಪುಸ್ತಕ, ತೆರಿಗೆ ಪಾವತಿ ರಸೀದಿ ಮತ್ತು ವಿಮಾ ದಾಖಲೆಗಳಂತಹ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಯೋಜನೆಯ ಲಾಭ ಪಡೆದುಕೊಳ್ಳಬಹುದು.

ಸಹಾಯಧನ ಹೇಗೆ ಸಿಗುತ್ತದೆ?

ಬ್ಯಾಂಕ್ ಸಾಲ ಮಂಜೂರಾದ ನಂತರ ಮತ್ತು ವಾಹನ ಖರೀದಿಯ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಸಂಬಂಧಪಟ್ಟ ನಿಗಮದಿಂದ ಸಹಾಯಧನ ಬಿಡುಗಡೆ ಮಾಡುವ ಪ್ರಕ್ರಿಯೆ ಆರಂಭವಾಗುತ್ತದೆ ನಂತರ ನಿಯಮಾನುಸಾರ ಸಹಾಯಧನವನ್ನು ಫಲಾನುಭವಿಯ ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ DBT ಮೂಲಕ ಜಮೆ ಮಾಡಲಾಗುವುದು.ವಾಹನದ ನೋಂದಣಿ, ವಿಮೆ ಮತ್ತು ಇತರ ವೆಚ್ಚಗಳಿಗೆ ಸಂಬಂಧಿಸಿದಂತೆ ಫಲಾನುಭವಿಯೇ ಕೆಲವೊಂದು ಸಂಧರ್ಭದಲ್ಲಿ ಭರಿಸಬೇಕಾಗುತ್ತದೆ. ಆದ್ದರಿಂದ ವಾಹನ ಖರೀದಿಸುವ ಮೊದಲು ಬ್ಯಾಂಕ್ ಮತ್ತು ಸಂಬಂಧಪಟ್ಟ ನಿಗಮದಿಂದ ಎಲ್ಲಾ ವೆಚ್ಚಗಳ ಬಗ್ಗೆ ಮಾಹಿತಿ ಪಡೆದುಕೊಂಡು ಅರ್ಜಿ ಸಲ್ಲಿಸುವುದು ಒಳ್ಳೆಯದು.

Yellow Board ವಾಹನದ ನಿಯಮ

ಉದ್ಯಮ ಅಥವಾ ಸರಕು ಸಾಗಣೆಯ ಉದ್ದೇಶಕ್ಕಾಗಿ ವಾಹನ ಖರೀದಿಸುವ ಫಲಾನುಭವಿಗಳು ವಾಹನವನ್ನು ಸಂಬಂಧಪಟ್ಟ ಸಾರಿಗೆ ಕಚೇರಿಯ ನಿಯಮದಂತೆ Yellow Boardನಲ್ಲಿ ನೋಂದಾಯಿಸಬೇಕು. ಯೋಜನೆಯಡಿ ಖರೀದಿಸಿದ ವಾಹನವನ್ನು ಸಾಲ ಸಂಪೂರ್ಣವಾಗಿ ತೀರಿಸುವ ಮೊದಲು ಮಾರಾಟ ಮಾಡಲು ಅಥವಾ Yellow Boardನಿಂದ White Boardಗೆ ಬದಲಾಯಿಸಲು ಅವಕಾಶವಿರುದಿಲ್ಲ.ವಾಹನದ ವಿಮೆಯನ್ನು ಪ್ರತಿವರ್ಷ ಸರಿಯಾದ ಸಮಯಕ್ಕೆ ಕಟ್ಟಲೇಬೇಕು. ವಾಹನಕ್ಕೆ ಸಂಬಂಧಿಸಿದ ಆರ್‌ಸಿ ಪುಸ್ತಕ, ತೆರಿಗೆ ಪಾವತಿ ರಸೀದಿ ಮತ್ತು ವಿಮಾ ದಾಖಲೆಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಅತ್ಯಾಗತ್ಯ.

ಮಹಿಳೆಯರಿಗೆ ಮತ್ತು ನಿರುದ್ಯೋಗಿ ಯುವಕರಿಗೆ ಅವಕಾಶ

ಕೆಲಸವೇ ಸಿಗದೇ ಮನೆಯಲಿದ್ದು ಸ್ವಂತ ಉದ್ಯೋಗ ಆರಂಭಿಸಲು ಬಯಸುವ ನಿರುದ್ಯೋಗಿ ಯುವಕರು ಮತ್ತು ಮಹಿಳೆಯರಿಗೆ ಈ ಯೋಜನೆಯಿಂದ ಆರ್ಥಿಕವಾಗಿ ನೆರವು ಪಡೆಯುವ ಅವಕಾಶವಿದೆ. ವಿಶೇಷವಾಗಿ ವಾಹನ ಚಾಲನೆ ಅಥವಾ ಸರಕು ಸಾಗಣೆ ಕ್ಷೇತ್ರದಲ್ಲಿ ಸ್ವಂತ ಉದ್ಯೋಗ ಆರಂಭಿಸಲು ಬಯಸುವವರುಈ ಯೋಜನೆಗೆ ಅರ್ಜಿ ಸಲ್ಲಿಸಿ ಲಾಭ ಪಡೆದುಕೊಳ್ಳಬಹುದು. ಆದರೆ ಅರ್ಜಿ ಸಲ್ಲಿಸುವ ಮೊದಲು ಅಭಿವೃದ್ಧಿ ನಿಗಮದ ನಿಯಮಗಳನ್ನು ತಿಲೋದುಕೊಳ್ಳುವುದು ಉತ್ತಮ.

ಮುಖ್ಯವಾಗಿ ಗಮನಿಸಬೇಕಾದ ವಿಷಯ

ಸ್ವಾವಲಂಬಿ ಸಾರಥಿ ಯೋಜನೆಯಡಿ ಎಲ್ಲಾ ಫಲಾನುಭವಿಗಳಿಗೂ ₹4 ಲಕ್ಷ ಸಹಾಯಧನ ಸಿಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ.  ಆದರೆ SC/ST ಸೇರಿದಂತೆ ವಿವಿಧ ವರ್ಗಗಳಿಗೆ ಸಂಬಂಧಪಟ್ಟ ಅಭಿವೃದ್ಧಿ ನಿಗಮಗಳ ಮೂಲಕ ಬೇರೆ ಬೇರೆ ಸಹಾಯಧನ, ಆದಾಯ ಮಿತಿ, ವಯೋಮಿತಿ ಮತ್ತು ಅರ್ಹತಾ ನಿಯಮಗಳಿಗೆ ತಕ್ಕಂತೆ ಹಣ ಸಿಗುತ್ತದೆ.ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಮಾಹಿತಿಯನ್ನು ಮಾತ್ರ ಆಧಾರವಾಗಿಟ್ಟುಕೊಂಡು ಅರ್ಜಿ ಸಲ್ಲಿಸದೆ, ಸಂಬಂಧಪಟ್ಟ ಇಲಾಖೆಯನ್ನು ಭೇಟಿ ನೀಡಿ ನಂತರ ಅರ್ಜಿ ಸಲ್ಲಿಸಿ.ಸ್ವಂತ ವಾಹನ ಖರೀದಿಸಿ ಟ್ಯಾಕ್ಸಿ ಅಥವಾ ಸರಕು ಸಾಗಣೆ ಮೂಲಕ ಸ್ವಯಂ ಉದ್ಯೋಗ ಆರಂಭಿಸಲು ಬಯಸುವವರಿಗೆ ಸ್ವಾವಲಂಬಿ ಸಾರಥಿ ಯೋಜನೆ ಉತ್ತಮ ಅವಕಾಶವಾಗಬಹುದು.ಆದರಿಂದ ಮನೆಯಲ್ಲೇ ಸುಮ್ಮನೆ ಇರುವಬದಲು ಒಮ್ಮೆ ಅರ್ಜಿ ಸಲ್ಲಿಸಿ ಲಾಭ ಪಡೆದುಕೊಳ್ಳಿ. ಜೀವನಕ್ಕೆ ಆರ್ಥಿಕವಾಗಿ ನೆರವನ್ನು ಕಂಡುಕೊಳ್ಳಿ. ಹಾಗೆ ಅಧಿಕೃತವಾಗಿ ದಲ್ಲಾಳಿಗಳಿಗೆ ಯಾವುದೇ ಹಣವನ್ನು ನೀಡಿ ಮೋಸ ಹೋಗಬೇಡಿ ಅಧಿಕೃತ ಮಾಹಿತಿಯನ್ನು ಮಾತ್ರ ಪರಿಶೀಲಿಸಿ. ಹಾಗೆ ಮಾಹಿತಿ ಇಷ್ಟವಾದರೆ ಎಲ್ಲರೊಂದಿಗೆ ಹಂಚಿಕೊಳ್ಳಿ.

Leave a Comment