ರೈತರಿಗೆ ಕೃಷಿ ಕೆಲಸದಲ್ಲಿ ಆಗುವ ಖರ್ಚುಗಳನ್ನು ನಿಭಾಯಿಸಲು ಸರ್ಕಾರದಿಂದ ಸಿಗುವ ಆರ್ಥಿಕ ನೆರವು ರೈತರಿಗೆ ಪ್ರಕೃತಿ ವಿಕೋಪ ಅಥವಾ ತಮ್ಮ ಕೃಷಿಯ ಮೇಲಿನ ಖರ್ಚುನ್ನು ನಿಭಾಯಿಸಿ ಕೊಳ್ಳುವುದಕ್ಕೆ ಸಾಕಷ್ಟು ಸಹಾಯವಾಗುತ್ತದೆ. ಇದೇ ಉದ್ದೇಶದಿಂದ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM-KISAN) ಅನ್ನು ಜಾರಿಗೆ ತರಲಾಗಿದೆ. ಈ ಯೋಜನೆಯನ್ನು ಸಾಮಾನ್ಯವಾಗಿ ಕೃಷಿ ಸಮ್ಮಾನ್ ಯೋಜನೆ (Krushi-samman-yojana) ಅಥವಾ ಕಿಸಾನ್ ಸಮ್ಮಾನ್ ಯೋಜನೆಯೆಂದು ಕರೆಯಲಾಗುತ್ತದೆ.

ಈ ಯೋಜನೆಯ ಮೂಲಕ ಅರ್ಹ ರೈತ ಕುಟುಂಬಗಳಿಗೆ ವರ್ಷಕ್ಕೆ ಒಟ್ಟು ₹6,000 ಆರ್ಥಿಕ ನೆರವು ನೀಡಲಾಗುತ್ತದೆ. ಈ ಹಣವನ್ನು ಮೂರು ಕಂತುಗಳಲ್ಲಿ ತಲಾ ₹2,000ರಂತೆ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತದೆ. PM-KISAN ಯೋಜನೆಯಡಿ ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.
ಕೃಷಿ ಸಮ್ಮಾನ್ ಯೋಜನೆ 2026 ಎಂದರೇನು?
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM-KISAN) ಕೇಂದ್ರ ಸರ್ಕಾರದ ಪ್ರಮುಖ ರೈತ ಕಲ್ಯಾಣ ಯೋಜನೆಗಳಲ್ಲಿ ಒಂದಾಗಿದ್ದು. ಕೃಷಿ ಕೆಲಸಕ್ಕೆ ಬೇಕಾಗುವ ಬೀಜ, ಗೊಬ್ಬರ ಮತ್ತು ಇತರ ಅಗತ್ಯ ವಸ್ತುಗಳ ಖರ್ಚಿಗೆ ರೈತರಿಗೆ ಆರ್ಥಿಕವಾಗಿ ನೆರವು ನೀಡುವುದೇ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಈ ಯೋಜನೆಯು ಪ್ರಮುಖವಾಗಿ 2018ರಿಂದ ಜಾರಿಯಲ್ಲಿದ್ದು, ಅರ್ಹ ಭೂಮಿ ಹೊಂದಿರುವ ರೈತ ಕುಟುಂಬಗಳಿಗೆ ವರ್ಷಕ್ಕೆ ₹6,000 ಹಣವನ್ನು ಮೂರು ಸಮಾನ ಕಂತುಗಳಲ್ಲಿ ನೀಡಲಾಗುತ್ತದೆ. ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಈ ಯೋಜನೆಯ ಮೂಲಕ ವರ್ಗಾವಣೆ ಮಾಡಲಾಗುತ್ತದೆ.
ಕೃಷಿ ಸಮ್ಮಾನ್ ಯೋಜನೆಯ ಪ್ರಮುಖ ಮಾಹಿತಿ
| ಮಾಹಿತಿವಿವರ | ಮಾಹಿತಿ |
| ಯೋಜನೆಯ ಹೆಸರು | ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ |
| ಸಾಮಾನ್ಯ ಹೆಸರು | PM-KISAN |
| ಯೋಜನೆ ಯಾರಿಗಾಗಿ | ಅರ್ಹ ರೈತ ಕುಟುಂಬಗಳಿಗಾಗಿ |
| ವರ್ಷಕ್ಕೆ ಸಿಗುವ ನೆರವು | ₹6,000 |
| ಹಣ ನೀಡುವ ವಿಧಾನ | 3 ಕಂತುಗಳಲ್ಲಿ |
| ಪ್ರತಿ ಕಂತಿನ ಮೊತ್ತ | ₹2,000 |
| ಹಣ ಜಮೆಯಾಗುವ ಸ್ಥಳ | ರೈತರ ಬ್ಯಾಂಕ್ ಖಾತೆಗೆ ನೇರವಾಗಿ |
| ಪ್ರಮುಖವಾಗಿ ಬೇಕಾಗಿರುವುದು | ಆಧಾರ್, ಬ್ಯಾಂಕ್ ಖಾತೆ, ಭೂ ದಾಖಲೆಗಳು ಮತ್ತು e-KYC |
ಕೃಷಿ ಸಮ್ಮಾನ್ ಯೋಜನೆ 2026 ಯಾರಿಗಾಗಿ?
ಕೇಂದ್ರ ಸರ್ಕಾರದ ಈ ಯೋಜನೆಯು ಪ್ರಮುಖವಾಗಿ ಕೃಷಿ ಭೂಮಿ ಹೊಂದಿರುವ ರೈತರು ಮತ್ತು PM-KISAN ಯೋಜನೆಯ ನಿಯಮಗಳ ಪ್ರಕಾರ ಅರ್ಹರಾಗಿರುವ ರೈತ ಕುಟುಂಬಗಳಿಗೆ ಈ ಯೋಜನೆಯ ನೆರವು ಸಿಗುತ್ತದೆ . ರೈತರ ಅರ್ಹತೆಯನ್ನು ಪರಿಶೀಲಿಸುವಾಗ ಭೂ ದಾಖಲೆಗಳು ಸೇರಿದಂತೆ ಸರ್ಕಾರದ ದಾಖಲೆಗಳನ್ನು ಪರಿಗಣಿಸಲಾಗುತ್ತದೆ. ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶದ ಆಡಳಿತವು ಯೋಜನೆಯ ಮಾರ್ಗಸೂಚಿಗಳ ಪ್ರಕಾರ ಅರ್ಹ ರೈತ ಕುಟುಂಬಗಳನ್ನು ಗುರುತಿಸಿ ಈ ಯೋಜನೆಯ ಲಾಭವನ್ನು ನೀಡಲಾಗುತ್ತದೆ.
ಆದರೆ ಕೃಷಿ ಮಾಡುವ ಎಲ್ಲ ರೈತರೂ ಈ ಯೋಜನೆಗೆ ಅರ್ಹರಾಗಿರುವುದಿಲ್ಲ. ಸರ್ಕಾರ ನಿಗದಿಪಡಿಸಿರುವ ಕೆಲವು ನಿಯಮಗಳ ಪ್ರಕಾರ ಕೆಲವು ವರ್ಗದವರು ಯೋಜನೆಯಿಂದ ಹೊರಗಿರುತ್ತಾರೆ. ಉದಾಹರಣೆಗೆ ಕೆಲವು ಉನ್ನತ ಆರ್ಥಿಕ ಸ್ಥಿತಿಯ ವರ್ಗಗಳು ಮತ್ತು ಕೆಲವು ಸರ್ಕಾರಿ ಹುದ್ದೆ ಹೊಂದಿರುವವರು ಯೋಜನೆಯ ಲಾಭಕ್ಕೆ ಅರ್ಹರಾಗಿರುವುದಿಲ್ಲ. ಹಾಗಾಗಿ PM-KISAN ಅರ್ಹತೆ ಪರಿಶೀಲಿಸಿಕೊಂಡು ಅರ್ಜಿ ಸಲ್ಲಿಸುವುದು ಒಳ್ಳೆಯದು.
ಕೃಷಿ ಸಮ್ಮಾನ್ ಯೋಜನೆಯ ಮಹತ್ವ ಏನು?
ಕೃಷಿ ಮಾಡುವಾಗ ರೈತರಿಗೆ ವರ್ಷವಿಡೀ ಒಂದಲ್ಲ ಒಂದು ರೀತಿಯ ಖರ್ಚು ಇದ್ದೇ ಇರುತ್ತದೆ. ಬೀಜ, ಗೊಬ್ಬರ, ಔಷಧಿ ಮತ್ತು ಇತರ ಕೃಷಿ ಸಾಮಗ್ರಿಗಳಿಗೆ ಹಣ ಬೇಕಾಗುತ್ತದೆ ಅಥವಾ ಮಳೆ ಸರಿಯಾಗದೆ ನೀರಾವರಿ ಸಮಸ್ಸೆ ಕೂಡ ಉಂಟಾಗುತ್ತದೆ.ಇಂತಹ ಸಮಯದಲ್ಲಿ ಸರ್ಕಾರದಿಂದ ಸಿಗುವ ₹6,000 ಹಣ ರೈತರಿಗೆ ತಮ್ಮ ಕೃಷಿ ಖರ್ಚಿನ ಒಂದು ಭಾಗವನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಮೊತ್ತ ದೊಡ್ಡದಾಗಿರದಿದ್ದರೂ, ಅಗತ್ಯದ ಸಮಯದಲ್ಲಿ ಸಿಗುವ ಈ ಹಣ ರೈತರಿಗೆ ಉಪಯೋಗವಾಗುತ್ತದೆ.
ಕೃಷಿ ಸಮ್ಮಾನ್ ಯೋಜನೆಯ ಪ್ರಮುಖ ಲಾಭಗಳು
- ಅರ್ಹ ರೈತ ಕುಟುಂಬಗಳಿಗೆ ವರ್ಷಕ್ಕೆ ₹6,000 ಆರ್ಥಿಕ ನೆರವು ಸಿಗುತ್ತದೆ.
- ಹಣವನ್ನು ಮೂರು ಕಂತುಗಳಲ್ಲಿ ರೈತರಿಗೆ ನೀಡಲಾಗುತ್ತದೆ.
- ಪ್ರತಿ ಕಂತಿನಲ್ಲಿ ₹2,000 ಹಣ ಜಮೆಯಾಗುತ್ತದೆ.
- ಹಣ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಬರುತ್ತದೆ.
- ಕೃಷಿಗೆ ಸಂಬಂಧಿಸಿದ ಅಗತ್ಯ ಖರ್ಚುಗಳಿಗೆ ಈ ಹಣವನ್ನು ಬಳಸಿಕೊಳ್ಳಬಹುದು.
- ಯೋಜನೆಯ ಫಲಾನುಭವಿ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು.
- e-KYC ಪೂರ್ಣಗೊಳಿಸುವುದು ಯೋಜನೆಯ ಲಾಭ ಪಡೆಯಲು ಮುಖ್ಯವಾಗಿದೆ.
ಕೃಷಿ ಸಮ್ಮಾನ್ ಯೋಜನೆಯ ಮುಖ್ಯ ಅಂಶಗಳು
ಕೃಷಿ ಸಮ್ಮಾನ್ ಯೋಜನೆಯ ಬಗ್ಗೆ ತಿಳಿದುಕೊಳ್ಳಬೇಕಾದ ಮುಖ್ಯ ವಿಷಯಗಳು ಇವು:
- ಯೋಜನೆಯ ಹೆಸರು PM-KISAN
- ಅರ್ಹ ರೈತ ಕುಟುಂಬಗಳಿಗೆ ಆರ್ಥಿಕ ನೆರವು
- ವರ್ಷಕ್ಕೆ ಒಟ್ಟು ₹6,000
- ಮೂರು ಕಂತುಗಳಲ್ಲಿ ಹಣ ಪಾವತಿ
- ಪ್ರತಿ ಕಂತಿಗೆ ₹2,000
- ಹಣವನ್ನು ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತದೆ
- e-KYC ಪೂರ್ಣಗೊಳಿಸುವುದು ಮುಖ್ಯ
- ರೈತರ ಭೂ ದಾಖಲೆಗಳು ಮತ್ತು ಇತರ ವಿವರಗಳು ಸರಿಯಾಗಿರಬೇಕು
- ಫಲಾನುಭವಿಗಳು ತಮ್ಮ PM-KISAN Payment Status ಅನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು.
ಕೃಷಿ ಸಮ್ಮಾನ್ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
ಕೃಷಿ ಸಮ್ಮಾನ್ ಯೋಜನೆಗೆ ಅರ್ಜಿ ಸಲ್ಲಿಸುವಾಗ ರೈತರ ವೈಯಕ್ತಿಕ ಮತ್ತು ಬ್ಯಾಂಕ್ ವಿವರಗಳು ಸರಿಯಾಗಿರುವುದು ಮುಖ್ಯ.
ಸಾಮಾನ್ಯವಾಗಿ ಬೇಕಾಗುವ ದಾಖಲೆಗಳು ಮತ್ತು ಮಾಹಿತಿಗಳು:
- ಆಧಾರ್ ಕಾರ್ಡ್
- ಮೊಬೈಲ್ ಸಂಖ್ಯೆ
- ಬ್ಯಾಂಕ್ ಖಾತೆ ವಿವರಗಳು
- ಬ್ಯಾಂಕ್ IFSC Code
- ಭೂಮಿಗೆ ಸಂಬಂಧಿಸಿದ ದಾಖಲೆಗಳು
ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ನೀಡುವ ಮಾಹಿತಿಯಲ್ಲಿ ಯಾವುದೇ ತಪ್ಪು ಇದ್ದರೆ ನೋಂದಣಿ ಅಥವಾ ಹಣ ಜಮೆಯಾಗುವ ಪ್ರಕ್ರಿಯೆಯಲ್ಲಿ ಸಮಸ್ಯೆ ಉಂಟಾಗಬಹುದು. ಆದ್ದರಿಂದ PM-KISAN ಅರ್ಜಿ ಸಲ್ಲಿಸುವಾಗ ಎಲ್ಲಾ ವಿವರಗಳನ್ನು ಸರಿಯಾಗಿ ನಮೂದಿಸುವುದು ಮುಖ್ಯ.
ಕೃಷಿ ಸಮ್ಮಾನ್ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸುವುದು?
ಅರ್ಹ ರೈತರು PM-KISAN ಅಧಿಕೃತ ವೆಬ್‌ಸೈಟ್ ಮೂಲಕ ಹೊಸ ರೈತ ನೋಂದಣಿ ಮಾಡಬಹುದು. ಅಧಿಕೃತ ಪೋರ್ಟಲ್‌ನಲ್ಲಿ New Farmer Registration ಆಯ್ಕೆ ಲಭ್ಯವಿದೆ.
ಹಂತ 1: ಮೊದಲಿಗೆ PM-KISAN ಅಧಿಕೃತ ಪೋರ್ಟಲ್‌ಗೆ ಹೋಗಬೇಕು.
ಹಂತ 2: ಅಲ್ಲಿ New Farmer Registration ಆಯ್ಕೆಯನ್ನು ತೆರೆಯಬೇಕು.
ಹಂತ 3: ನಂತರ ಕೇಳಲಾಗುವ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ಮತ್ತು ರಾಜ್ಯದಂತಹ ಮಾಹಿತಿಯನ್ನು ನಮೂದಿಸಬೇಕು.
ಹಂತ 4: ಆಧಾರ್ ಪರಿಶೀಲನೆ ಪೂರ್ಣಗೊಂಡ ನಂತರ ಅಗತ್ಯವಿರುವ ವೈಯಕ್ತಿಕ, ಭೂಮಿ ಮತ್ತು ಬ್ಯಾಂಕ್ ವಿವರಗಳನ್ನು ಭರ್ತಿ ಮಾಡಬೇಕು.
ಹಂತ 5: ನಮೂದಿಸಿರುವ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ ರೈತ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.
ಹಂತ 6: ನೋಂದಣಿ ಮಾಡಿದ ನಂತರ e-KYC ಪೂರ್ಣಗೊಳಿಸುವುದು ಮುಖ್ಯ. PM-KISANನಲ್ಲಿ e-KYC ಕಡ್ಡಾಯವಾಗಿದ್ದು, OTP ಆಧಾರಿತ, biometric ಮತ್ತು face authentication ಸೇರಿದಂತೆ ವಿವಿಧ ವಿಧಾನಗಳು ಲಭ್ಯವಿವೆ.
ಹಂತ 7: ನೋಂದಣಿ ಮತ್ತು e-KYC ಪೂರ್ಣಗೊಂಡ ನಂತರ ನಿಮ್ಮ ಅರ್ಜಿ ಹಾಗೂ ಹಣದ ಸ್ಥಿತಿಯನ್ನು PM-KISAN ಪೋರ್ಟಲ್‌ನಲ್ಲಿ ಪರಿಶೀಲಿಸಬಹುದು.
ಕಾಲ ಕಾಲಕ್ಕೆ ಅರ್ಜಿ ಸಲ್ಲಿಸುವ ವಿಧಾನ ಬದಲಾಗಬಹುದು ಹಾಗೆ ಧಾಖಲೆಗಳು ಬದಲಾಗಬಹುದು ಅದಕ್ಕೆ ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಮಾಹಿತಿಯನ್ನು ಪರಿಶೀಲಿಸಿ ಅರ್ಜಿ ಸಲ್ಲಿಸಿ ವಂಚನೆಗಳಿಂದ ದೂರವಿರಿ.
ರೈತರಿಗೆ ಭರ್ಜರಿ ಸಹಾಯಧನ! ಹಸುಗಳಿಗೆ ರಬ್ಬರ್ ಮ್ಯಾಟ್ ಮತ್ತು ಮೇವು ಕತ್ತರಿಸುವ ಯಂತ್ರ!
PM-KISAN ಹಣ ಬಂದಿದೆಯೇ ಎಂದು ಹೇಗೆ ಪರಿಶೀಲಿಸುವುದು?
PM-KISANನಲ್ಲಿ ನೋಂದಾಯಿಸಿಕೊಂಡಿರುವ ರೈತರು ತಮ್ಮ Payment Status ಅನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು. ಅಧಿಕೃತ Know Your Status ಪುಟದಲ್ಲಿ Payment Status, Bank Name, UTR Number, Payment Mode, Account Credited ಮತ್ತು ಹಣ ಜಮೆಯಾದ ದಿನಾಂಕದಂತಹ ವಿವರಗಳನ್ನು ನೋಡಬಹುದು.
ಹೀಗಾಗಿ ಕಂತಿನ ಹಣ ಖಾತೆಗೆ ಬಂದಿದೆಯೇ ಅಥವಾ ಯಾವುದೇ ಕಾರಣದಿಂದ ಪಾವತಿ ಬಾಕಿಯಿದೆಯೇ ಎಂಬುದನ್ನು ರೈತರು ಆನ್‌ಲೈನ್‌ನಲ್ಲಿ ಪರಿಶೀಲಿಸಿಕೊಳ್ಳಬಹುದು.
ಕೊನೆಯ ಮಾತು
ಕೃಷಿ ಸಮ್ಮಾನ್ ಯೋಜನೆ 2026, ಅಂದರೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN), ಅರ್ಹ ರೈತ ಕುಟುಂಬಗಳಿಗೆ ವರ್ಷಕ್ಕೆ ₹6,000 ಆರ್ಥಿಕ ನೆರವು ನೀಡುವ ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಕೃಷಿಗೆ ಸಂಬಂಧಿಸಿದ ಸಣ್ಣಪುಟ್ಟ ಖರ್ಚುಗಳನ್ನು ನಿಭಾಯಿಸಲು ಈ ಹಣ ರೈತರಿಗೆ ಸಹಾಯವಾಗುತ್ತದೆ.
ಯೋಜನೆಯ ಲಾಭ ಪಡೆಯಲು ಅರ್ಹತೆ, ಆಧಾರ್ ವಿವರಗಳು, ಬ್ಯಾಂಕ್ ಖಾತೆ, ಭೂ ದಾಖಲೆಗಳು ಮತ್ತು e-KYC ಸರಿಯಾಗಿರುವುದು ಮುಖ್ಯ. ಅರ್ಜಿ ಸಲ್ಲಿಸುವ ಮೊದಲು ಎಲ್ಲಾ ವಿವರಗಳನ್ನು ಒಮ್ಮೆ ಪರಿಶೀಲಿಸಿಕೊಂಡರೆ ಮುಂದೆ ಸಮಸ್ಯೆ ಆಗುವುದನ್ನು ತಪ್ಪಿಸಬಹುದು.
ಅದೇ ರೀತಿ, ಈಗಾಗಲೇ ಯೋಜನೆಯ ಫಲಾನುಭವಿಯಾಗಿರುವ ರೈತರು ತಮ್ಮ PM-KISAN Payment Status ಮತ್ತು e-KYC ಸ್ಥಿತಿಯನ್ನು ಅಧಿಕೃತ ಪೋರ್ಟಲ್‌ನಲ್ಲಿ ಪರಿಶೀಲಿಸಿಕೊಳ್ಳುವುದು ಒಳ್ಳೆಯದು.
ಮಾಹಿತಿ ಇಷ್ಟವಾದರೆ ನಿಮ್ಮ ಫ್ರೆಂಡ್ಸ್ ಹಾಗೆ ಫ್ಯಾಮಿಲಿ ಜೊತೆ ಹಂಚಿಕೊಳ್ಳಿ. ಅರ್ಜಿ ಸಲ್ಲಿಸುವ ಕೊನೆ ದಿನಕದೊಳಗೆ ಅರ್ಜಿ ಸಲ್ಲಿಸಿ. ಯೋಜನೆಯ ಲಾಭ ಪಡೆದುಕೊಳ್ಳಿ.