
ಹೈನುಗಾರಿಕೆ ಮಾಡುವ ರೈತರಿಗೆ ಹಸುಗಳ ಆರೈಕೆ ಹಾಗೂ ಮೇವು ನಿರ್ವಹಣೆಯ ವೆಚ್ಚ ಕಡಿಮೆ ಮಾಡಲು ಕರ್ನಾಟಕ ಸರ್ಕಾರದ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಮೂಲಕ ವಿವಿಧ ಪಶುಪಾಲನಾ ಉಪಕರಣಗಳ ಸಹಾಯಧನ ಯೋಜನೆಗಳು ಜಾರಿಯಲ್ಲಿವೆ. ಇವುಗಳಲ್ಲಿ ಕೆಲವು ಯೋಜನೆಗಳಡಿ ಹಸುಗಳಿಗೆ ರಬ್ಬರ್ ಮ್ಯಾಟ್, ಹಾಲು ಕರೆಯುವ ಯಂತ್ರ ಹಾಗೂ ಮೇವು ಕತ್ತರಿಸುವ ಯಂತ್ರಗಳಂತಹ ಉಪಕರಣಗಳನ್ನು ಸಬ್ಸಿಡಿ ದರದಲ್ಲಿ ಪಡೆಯುವ ಅವಕಾಶವನ್ನು ನೀಡಿದೆ.
ಆದರೆ ಎಲ್ಲ ರೈತರಿಗೆ ಒಂದೇ ರೀತಿಯಾದ ಸಬ್ಸಿಡಿ ಸಿಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ.ಯಾಕೆಂದರೆ ಸಹಾಯಧನದ ಪ್ರಮಾಣವು ಯೋಜನೆ, ಜಿಲ್ಲೆ, ಆರ್ಥಿಕ ವರ್ಷ, ರೈತರ ವರ್ಗ ಮತ್ತು ಲಭ್ಯವಿರುವ ಅನುದಾನಕ್ಕೆ ಅನುಗುಣವಾಗಿ ಸರ್ಕಾರ ನೀಡುವ ಸಬ್ಸಿಡಿ ಅಲ್ಲಿ ಬದಲಾವಣೆ ನೋಡಬಹುದಾಗಿದೆ.
ರಬ್ಬರ್ ಹಸು ಮ್ಯಾಟ್ಗೆ ಸಬ್ಸಿಡಿ ಹೇಗೆ ಸಿಗುತ್ತದೆ?
ಹಸು ಸಾಕಿ ಹೈನುಗಾರಿಕೆ ಮಾಡುವ ರೈತರಿಗಾಗಿ ಕೆಲವು ಜಿಲ್ಲೆಗಳಲ್ಲಿ ಪಶುಪಾಲನಾ ಇಲಾಖೆಯ ಯೋಜನೆಗಳಡಿ ರಬ್ಬರ್ ನೆಲಹಾಸು (Rubber Cow Mat) ವಿತರಣೆ ಮಾಡಲಾಗಿದೆ.ಹಿಂದಿನ ಅಧಿಕೃತವಾಗಿ ಪ್ರಕಟಿಸಲಾದ ಕೆಲವು ಜಿಲ್ಲಾ ಯೋಜನೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹೈನುಗಾರರಿಗೆ 90% ಸಹಾಯಧನ ಮತ್ತು 10% ಫಲಾನುಭವಿ ವಂತಿಕೆಯಲ್ಲಿ ಎರಡು ರಬ್ಬರ್ ಮ್ಯಾಟ್ಗಳ ಜೊತೆಗೆ ಹಾಲು ಕರೆಯುವ ಯಂತ್ರ ನೀಡುವ ಸೌಲಭ್ಯ ಜಾರಿಯಲ್ಲಿತ್ತು.
2026ರಲ್ಲಿ ಸಹ ರಬ್ಬರ್ ಮ್ಯಾಟ್ಗೆ ಸಂಬಂಧಿಸಿದ ಸ್ಥಳೀಯ ವಿತರಣೆ ಮತ್ತು ಸಬ್ಸಿಡಿ ಪ್ರಕಟಣೆಗಳು ಹೊರಬಂದಿದೆ. ಕೆಲವು ಇತ್ತೀಚಿನ ಸ್ಥಳೀಯ ಪ್ರಕಟಣೆಗಳಲ್ಲಿ ರಬ್ಬರ್ ಮ್ಯಾಟ್ಗಳನ್ನು 50% ಸಹಾಯಧನದಲ್ಲಿ ವಿತರಿಸಲು ಅರ್ಹ ಹೈನುಗಾರರಿಂದ ಅರ್ಜಿ ಆಹ್ವಾನಿಸಿರುವ ಮಾಹಿತಿ ಕಂಡುಬರುತ್ತದೆ.ಆದ್ದರಿಂದ 90% ಸಬ್ಸಿಡಿ ಎಲ್ಲ ರೈತರಿಗೆ ಸಿಗುತ್ತದೆ ಎಂದು ಹೇಳುವುದು ಸರಿಯಲ್ಲ.
ಮೇವು ಕತ್ತರಿಸುವ ಯಂತ್ರಕ್ಕೆ ಸಬ್ಸಿಡಿ ಇದೆಯೇ?
ರೈತರು ಮನೆಯಲ್ಲಿ ಹಸು, ಎಮ್ಮೆ ಮುಂತಾದ ಜಾನುವಾರುಗಳಿಗೆ ಹಸಿರು ಅಥವಾ ಒಣ ಮೇವನ್ನು ಸಣ್ಣ ತುಂಡುಗಳಾಗಿ ಕತ್ತರಿಸಲು ಬಳಸುವ ಚಾಫ್ ಕಟರ್ ಅಥವಾ ಮೇವು ಕತ್ತರಿಸುವ ಯಂತ್ರ ರೈತರಿಗೆ ಸಮಯ ಮತ್ತು ಕಾರ್ಮಿಕ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇಂತಹ ಕೃಷಿ ಅಥವಾ ಪಶುಪಾಲನಾ ಉಪಕರಣಗಳಿಗೆ ಸರ್ಕಾರದ ವಿವಿಧ ಯೋಜನೆಗಳಡಿ ಸಹಾಯಧನ ದೊರೆಯುತ್ತದೆ.ಆದರೆ 50%, 75% ಅಥವಾ 90% ಎಂಬ ಒಂದೇ ಪ್ರಮಾಣವನ್ನು ಎಲ್ಲಾ ರೈತ ಫಲಾನುಭವಿಗಳಿಗೆ ಅನ್ವಯಿಸುತ್ತದೆ ಎಂದು ಹೇಳಲಾಗುವುದಿಲ್ಲ. ಯಂತ್ರದ ವಿಧ,ಘಟಕದ ವೆಚ್ಚ, ರೈತರ ವರ್ಗ ಮತ್ತು ಸಂಬಂಧಿತ ಯೋಜನೆಯ ನಿಯಮಗಳ ಆಧಾರದ ಮೇಲೆ ಅಂತಿಮ ಸಬ್ಸಿಡಿ ಪ್ರಮಾಣ ನಿಗದಿಯಾಗುತ್ತದೆ.
ಆದ್ದರಿಂದ ನಿಮ್ಮ ಜಿಲ್ಲೆಯಲ್ಲಿ ಪ್ರಸಕ್ತವಾಗಿ ಯಾವ ಯೋಜನೆ ತೆರೆದಿದೆ ಮತ್ತು ಯಂತ್ರಕ್ಕೆ ಎಷ್ಟು ಸಬ್ಸಿಡಿ ಇದೆ ಎಂಬುದನ್ನು ಸ್ಥಳೀಯ ಪಶುಪಾಲನಾ ಇಲಾಖೆ ಅಥವಾ ಕೃಷಿ ಇಲಾಖೆಯ ಅಧಿಕೃತ ವೆಬ್ಸೈಟ್ ಮೂಲಕ ತಿಳಿದುಕೊಳ್ಳುವುದು ಉತ್ತಮ.
ಈ ಯೋಜನೆಯ ಮುಖ್ಯ ಪ್ರಯೋಜನವೇನು?
ರೈತರು ಹಸುಗಳಿಗೆ ರಬ್ಬರ್ ಮ್ಯಾಟ್ ಬಳಸುವುದರಿಂದ ಗಟ್ಟಿಯಾದ ನೆಲದ ಮೇಲೆ ನೇರವಾಗಿ ಹಸು ಮಲಗುವುದು ಅಥವಾ ನಿಲ್ಲುವುದರಿಂದ ಉಂಟಾಗುವ ಅಸೌಕರ್ಯವನ್ನು ಕಡಿಮೆ ಮಾಡಲು ಸಹಾಯವಾಗತ್ತದೆ. ಕೊಟ್ಟಿಗೆಯನ್ನು ಸ್ವಚ್ಛವಾಗಿಡಲು ಮತ್ತು ಜಾನುವಾರುಗಳ ಆರೈಕೆಯನ್ನು ಸುಲಭಗೊಳಿಸಲು ಸಹ ಇದು ಉಪಯುಕ್ತವಾಗಿದೆ.
ಮೇವು ಕತ್ತರಿಸುವ ಯಂತ್ರ ಬಳಸುವುದರಿಂದ ರೈತರು ಪ್ರತಿದಿನ ಕೈಯಿಂದ ಮೇವು ಕತ್ತರಿಸುವ ಸಮಯ ಮತ್ತು ಶ್ರಮವನ್ನು ಕಡಿಮೆ ಮಾಡಬಹುದು. ದೊಡ್ಡ ಪ್ರಮಾಣದಲ್ಲಿ ಜಾನುವಾರುಗಳನ್ನು ಸಾಕುವ ಹೈನುಗಾರರಿಗೆ ಇದು ಹೆಚ್ಚು ಉಪಯುಕ್ತವಾಗಬಹುದು.
ಯಾರು ಅರ್ಜಿ ಸಲ್ಲಿಸಬಹುದು?
ಅರ್ಹತೆ ಯೋಜನೆಗೆ ಅನುಗುಣವಾಗಿ ಬದಲಾಗುತ್ತದೆ.
- ಕರ್ನಾಟಕದ ರೈತರಾಗಿರಬೇಕು.
- ಪಶುಪಾಲನೆ ಅಥವಾ ಹೈನುಗಾರಿಕೆಯಲ್ಲಿ ತೊಡಗಿರಬೇಕು.
- ಸಂಬಂಧಿತ ಯೋಜನೆಯಡಿ ಸೂಚಿಸಿರುವ ಜಾನುವಾರುಗಳನ್ನು ಹೊಂದಿರಬೇಕು.
- SC/ST ಅಥವಾ ಇತರೆ ಮೀಸಲು ವರ್ಗದ ಯೋಜನೆಯಾಗಿದ್ದರೆ ಸಂಬಂಧಿತ ಪ್ರಮಾಣಪತ್ರ ಹೊಂದಿರಬೇಕು.
- ಕೆಲವು ಯೋಜನೆಗಳಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯತ್ವ ಅಥವಾ ಸ್ಥಳೀಯ ಇಲಾಖೆಯ ನೋಂದಣಿ ಅಗತ್ಯವಾಗಬಹುದು.
- ಯೋಜನೆಯು ಕೇಳಿದರೆ FRUITS Farmer ID ಹೊಂದಿರಬೇಕು.
ಅರ್ಹತೆಯ ಅಂತಿಮ ಮಾನದಂಡವನ್ನು ಸ್ಥಳೀಯ ಅಧಿಸೂಚನೆಯ ಆಧಾರದ ಮೇಲೆ ಮಾತ್ರ ನಿರ್ಧರಿಸಲಾಗುತ್ತದೆ.
FRUITS ID ಏಕೆ ಮುಖ್ಯ?
ಕರ್ನಾಟಕದ FRUITS (Farmer Registration and Unified Information System) ವ್ಯವಸ್ಥೆಯಲ್ಲಿ ನೋಂದಣಿ ಮಾಡಿಕೊಂಡು Farmer ID (FID) ಪಡೆಯುವುದು ಪಶುಪಾಲನಾ ಇಲಾಖೆಯ ಕೆಲವು ಯೋಜನೆಗಳಿಗೆ ಅರ್ಜಿ ಸಲ್ಲಿಸುವಾಗ ಬಹಳ ಉಪಯುಕ್ತವಾಗಿದೆ.
ಪಶು ಭಾಗ್ಯ ಇಲಾಖೆಯ ಅಧಿಕೃತ FAQ ಪ್ರಕಾರ, ಅರ್ಜಿ ಸಲ್ಲಿಸುವ ಮೊದಲು FRUITSನಲ್ಲಿ ನೋಂದಣಿ ಮಾಡಿಕೊಂಡು Farmer ID ಪಡೆಯುವುದು ಸೂಕ್ತ. Farmer ID ಇಲ್ಲದಿದ್ದರೂ ಕೆಲವು ಸಂದರ್ಭಗಳಲ್ಲಿ ಸಂಬಂಧಿತ ಅಧಿಕಾರಿಗಳು ಅರ್ಜಿಯ ಮಾಹಿತಿಯ ಆಧಾರದ ಮೇಲೆ ನೋಂದಣಿ ಮಾಡಲು ಸಹಾಯ ಮಾಡುತ್ತಾರೆ.
ಅಗತ್ಯ ದಾಖಲೆಗಳು ಯಾವುವು?
ಯೋಜನೆಯು ಜಿಲ್ಲೆಗಳ ಆಧಾರದ ಮೇಲೆ ಅರ್ಜಿ ಸಲ್ಲಿಸಲು ಬೇಕಾಗುವ ಧಾಖಲೆಗಳು ಬದಲಾಗಬಹುದು.
- ಆಧಾರ್ ಕಾರ್ಡ್
- FRUITS Farmer ID
- ಬ್ಯಾಂಕ್ ಪಾಸ್ಬುಕ್
- ಜಾತಿ ಪ್ರಮಾಣಪತ್ರ, ಅನ್ವಯಿಸಿದಲ್ಲಿ
- ಆದಾಯ ಪ್ರಮಾಣಪತ್ರ, ಕೇಳಿದಲ್ಲಿ
- ಜಮೀನಿನ ದಾಖಲೆಗಳು ಅಥವಾ RTC, ಅಗತ್ಯವಿದ್ದಲ್ಲಿ
- ಹಾಲು ಉತ್ಪಾದಕರ ಸಂಘದ ಸದಸ್ಯತ್ವದ ದಾಖಲೆ, ಯೋಜನೆಗೆ ಅನ್ವಯಿಸಿದಲ್ಲಿ
- ಜಾನುವಾರುಗಳ ವಿವರ ಅಥವಾ ಟ್ಯಾಗ್ ಸಂಖ್ಯೆ, ಕೇಳಿದಲ್ಲಿ
ಅಂತಿಮ ದಾಖಲೆಗಳ ಪಟ್ಟಿಯನ್ನು ನಿಮ್ಮ ತಾಲ್ಲೂಕಿನ ಸಂಬಂಧಿತ ಕಚೇರಿಯಿಂದ ಖಚಿತಪಡಿಸಿಕೊಳ್ಳಬೇಕು.
ಅರ್ಜಿ ಸಲ್ಲಿಸುವುದು ಹೇಗೆ?
ರೈತರಿಗೆ ನೀಡುವಂತ ಪಶುಪಾಲನಾ ಉಪಕರಣಗಳ ಕೆಲವು ಯೋಜನೆಗಳಿಗೆ ಆಫ್ಲೈನ್ ಅರ್ಜಿ ಸಲ್ಲಿಸುವ ವಿಧಾನವೂ ಇನ್ನೂ ಬಳಸಲಾಗುತ್ತಿದೆ.
- ಮೊದಲು FRUITS Farmer ID ಇಲ್ಲದಿದ್ದರೆ ನೋಂದಣಿ ಮಾಡಿಕೊಳ್ಳಿ.
- ನಿಮ್ಮ ಹತ್ತಿರದ ಸರ್ಕಾರಿ ಪಶುವೈದ್ಯಕೀಯ ಸಂಸ್ಥೆ ಅಥವಾ ತಾಲ್ಲೂಕು ಪಶು ಆಸ್ಪತ್ರೆಗೆ ಭೇಟಿ ನೀಡಿ.
- ಪ್ರಸ್ತುತ ಲಭ್ಯವಿರುವ ರಬ್ಬರ್ ಮ್ಯಾಟ್ ಅಥವಾ ಮೇವು ಕತ್ತರಿಸು ಯಂತ್ರದ ಸಬ್ಸಿಡಿ ಅರ್ಜಿ ಪಡೆದುಕೊಳ್ಳಿ .
- ಅರ್ಜಿ ನಮೂನೆ ಬರ್ತಿ ಮಾಡಿ ಅದನ್ನು ಸರಿಯಾದ ಅಧಿಕಾರಿಗೆ ನೀಡುವುದು .
- ಕೇಳಲಾದ ಅಗತ್ಯ ದಾಖಲೆಗಳನ್ನು ಕೊಡುವುದು.
- ಅರ್ಜಿಯನ್ನು ಕಚೇರಿಯಲ್ಲಿ ಸಲ್ಲಿಸಿ.
- ಸ್ವೀಕೃತಿ ಸಂಖ್ಯೆಯನ್ನು ಪಡೆದು ಸುರಕ್ಷಿತವಾಗಿ ಇಟ್ಟುಕೊಳ್ಳಿ.
ಪಶು ಭಾಗ್ಯ ಇಲಾಖೆಯ ಅಧಿಕೃತ ಘೋಷಣೆಯ ಪ್ರಕಾರ , ಪ್ರಸ್ತುತ ಈ ಯೋಜನೆಯ ಅರ್ಜಿಗಳನ್ನು ಆನ್ಲೈನ್ನಲ್ಲಿ ನೇರವಾಗಿ ಸಲ್ಲಿಸುವ ಆಗದೆ ಇರುವ ಸಂದರ್ಭಗಳಲ್ಲಿ ಹತ್ತಿರದ ಪಶುವೈದ್ಯಕೀಯ ಸಂಸ್ಥೆಯ ಮೂಲಕ ಅರ್ಜಿ ಸಲ್ಲಿಸಬೇಕು ಮತ್ತು ನಂತರ ಸ್ವೀಕೃತಿ ಸಂಖ್ಯೆಯಿಂದ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಬಹುದು.
ಅರ್ಜಿ ಸ್ಥಿತಿ ಹೇಗೆ ಪರಿಶೀಲಿಸಬೇಕು?
ಅರ್ಜಿಯನ್ನು ಸಲ್ಲಿಸಿದ ನಂತರ ದೊರೆಯುವ Acknowledgement Number ಅಥವಾ Farmer ID ಮೂಲಕ ಸಂಬಂಧಿತ ಪೋರ್ಟಲ್ನಲ್ಲಿ ಸ್ಥಿತಿ ಪರಿಶೀಲಿಸಲು ಅವಕಾಶವಿದೆ. ಇಲ್ಲವಾದರೆ ನಿಮ್ಮ ತಾಲ್ಲೂಕು ಪಶು ಆಸ್ಪತ್ರೆ ಅಥವಾ ಸಂಬಂಧಿತ ಅಧಿಕಾರಿಯನ್ನು ಸಂಪರ್ಕಿಸಬಹುದು. ಇಲಾಖೆಯ ಅಧಿಕೃತ ಸಂಪರ್ಕ ಮಾಹಿತಿಯಲ್ಲೂ ಹತ್ತಿರದ ಪಶುವೈದ್ಯಕೀಯ ಸಂಸ್ಥೆ, ತಾಲ್ಲೂಕು ಸಹಾಯಕ ನಿರ್ದೇಶಕರ ಕಚೇರಿ ಅಥವಾ ಜಿಲ್ಲಾ ಉಪನಿರ್ದೇಶಕರ ಕಚೇರಿಯನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.
ಪ್ರಮುಖವಾಗಿ ಗಮನಿಸಬೇಕಾದದ್ದು
“ಉಚಿತ ರಬ್ಬರ್ ಮ್ಯಾಟ್” ಅಥವಾ “90% ಸಬ್ಸಿಡಿಯಲ್ಲಿ ಚಾಫ್ ಕಟರ್” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರುವ ಪ್ರತಿಯೊಂದು ಸಂದೇಶವನ್ನೂ ನಂಬಬೇಡಿ. ಸಬ್ಸಿಡಿ ಪ್ರಮಾಣ, ಉಪಕರಣದ ಸಂಖ್ಯೆ ಮತ್ತು ಅರ್ಜಿ ಕೊನೆಯ ದಿನಾಂಕ ಜಿಲ್ಲೆ ಹಾಗೂ ಪ್ರಸಕ್ತ ವರ್ಷದ ಯೋಜನೆಗೆ ಅನುಗುಣವಾಗಿ ಬದಲಾಗುತ್ತಿರುತ್ತದೆ.
ಆದ್ದರಿಂದ ನಿಮ್ಮ ತಾಲ್ಲೂಕಿನಲ್ಲಿ ಪ್ರಸ್ತುತ ಅರ್ಜಿ ಆರಂಭವಾಗಿದೆಯೇ,ಎಷ್ಟು ಸಬ್ಸಿಡಿ ಇದೆ, ಯಾವ ವರ್ಗದ ರೈತರಿಗೆ ಸಿಗುತ್ತದೆ ಎಂಬುದನ್ನು ಮೊದಲು ಸಂಬಂಧಿತ ಸರ್ಕಾರಿ ಕಚೇರಿಯಿಂದ ಖಚಿತಪಡಿಸಿಕೊಳ್ಳಿ. ಪಶುಪಾಲನಾ ಇಲಾಖೆಯ ಅಧಿಕೃತ ಪಶು ಭಾಗ್ಯ ಪೋರ್ಟಲ್ನಲ್ಲಿ ಯೋಜನೆಗಳ ವಿವರ ಮತ್ತು ಸರ್ಕಾರಿ ಆದೇಶಗಳನ್ನು ತಿಳಿದುಕೊಳ್ಳಬಹುದಾಗಿದೆ.
ರಬ್ಬರ್ ಮ್ಯಾಟ್ ಸಂಪೂರ್ಣ ಉಚಿತವೇ?
ಇದು ಎಲ್ಲರಿಗೂ ಉಚಿತವಾಗಿ ಸಿಗುತ್ತದೆ ಎಂಬ ಸಾಮಾನ್ಯ ನಿಯಮ ಇಲ್ಲ. ಕೆಲವು ಯೋಜನೆಗಳಲ್ಲಿ ಅರ್ಹ ಫಲಾನುಭವಿಗಳಿಗೆ ಹೆಚ್ಚಿನ ಪ್ರಮಾಣದ ಸಹಾಯಧನ ನೀಡಲಾಗುತ್ತದೆ. ಹಿಂದಿನ ಕೆಲವು SC/ST ಘಟಕಗಳಲ್ಲಿ 90% ಸಹಾಯಧನದ ಉದಾಹರಣೆಗಳಿವೆ.
ಚಾಫ್ ಕಟರ್ಗೆ ಎಷ್ಟು ಸಬ್ಸಿಡಿ ಸಿಗುತ್ತದೆ?
ಒಂದೇ ಪ್ರಮಾಣದ ಸಬ್ಸಿಡಿ ಎಲ್ಲರಿಗೂ ಅನ್ವಯಿಸುವುದಿಲ್ಲ.ಬದಲಾಗಿ ಯಂತ್ರದ ವಿಧ, ಯೋಜನೆ, ರೈತರ ವರ್ಗ ಮತ್ತು ಪ್ರಸಕ್ತ ವರ್ಷದ ಮಾರ್ಗಸೂಚಿಯ ಆಧಾರದ ಮೇಲೆ ಮೊತ್ತ ನಿರ್ಧಾರವಾಗುತ್ತದೆ.
ಎಲ್ಲಿ ಅರ್ಜಿ ಸಲ್ಲಿಸಬೇಕು?
ಪ್ರಸ್ತುತ ಲಭ್ಯವಿರುವ ಯೋಜನೆಯ ಪ್ರಕಾರ ನಿಮ್ಮ ಹತ್ತಿರದ ಪಶುವೈದ್ಯಕೀಯ ಸಂಸ್ಥೆ ಅಥವಾ ತಾಲ್ಲೂಕು ಪಶು ಆಸ್ಪತ್ರೆಯನ್ನು ಸಂಪರ್ಕಿಸಿ.ಅಥವಾ ಅಧಿಕೃತ ಸರ್ಕಾರಿ ವೆಬ್ಸೈಟ್ ಅಲ್ಲಿ ಅರ್ಜಿ ಸಲ್ಲಿಸಬಹುದು.
ತೀರ್ಮಾನ
ಕರ್ನಾಟಕದ ರೈತರಿಗೆ ಹೈನುಗಾರರಿಗೆ ಮಾಡಲು ರಬ್ಬರ್ ಮ್ಯಾಟ್, ಮೇವು ಕತ್ತರಿಸುವ ಯಂತ್ರ ಮತ್ತು ಇತರೆ ಪಶುಪಾಲನಾ ಉಪಕರಣಗಳ ಮೇಲೆ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಸಹಾಯಧನ ದೊರೆಯುವ ಅವಕಾಶವಿದೆ. ಆದರೆ ಸಬ್ಸಿಡಿ ಪ್ರಮಾಣ ಮತ್ತು ಅರ್ಹತೆ ಎಲ್ಲರಿಗೂ ಒಂದೇ ಆಗಿರುವುದಿಲ್ಲ. ವಿಶೇಷವಾಗಿ SC/ST ರೈತರಿಗೆ ಕೆಲವು ಯೋಜನೆಗಳಲ್ಲಿ ಹೆಚ್ಚಿನ ಸಹಾಯಧನ ನೀಡುವಂತ ಅವಕಾಶವಿದೆ.
ನೀವು ಅರ್ಜಿ ಸಲ್ಲಿಸುವ ಮೊದಲು FRUITS Farmer ID, ಆಧಾರ್, ಬ್ಯಾಂಕ್ ದಾಖಲೆಗಳು ಮತ್ತು ಅಗತ್ಯ ಪ್ರಮಾಣಪತ್ರಗಳನ್ನು ಸಿದ್ಧಪಡಿಸಿಕೊಂಡು, ನಿಮ್ಮ ತಾಲ್ಲೂಕು ಪಶು ಆಸ್ಪತ್ರೆ ಅಥವಾ ಪಶುಪಾಲನಾ ಇಲಾಖೆಯ ಕಚೇರಿಯಲ್ಲಿ ಪ್ರಸಕ್ತ ವರ್ಷದ ಅಧಿಸೂಚನೆಯನ್ನು ಪರಿಶೀಲಿಸಿ ಅರ್ಜಿ ಸಲ್ಲಿಸುವುದು ಅತ್ಯಂತ ಸುರಕ್ಷಿತ ಮಾರ್ಗವಾಗಿದೆ.ವಂಚನೆಗಳಿಂದ ದೂರವಿರಿ.