
LPG Gas e-KYC ಮಾಡಿಸಬೇಕಂದು ಕರ್ನಾಟಕ ಸರ್ಕಾರ ತಿಳಿಸಿದ್ದು ಆದರೆ ಇದರ ಬಗ್ಗೆ ಜನರಲ್ಲಿ ಸಾಕಷ್ಟು ಗೊಂದಲಗಳು ಸೃಷ್ಟಿ ಆಗಿದೆ . ಗ್ಯಾಸ್ ಖಾತೆಗೆ ಆಧಾರ್ ಲಿಂಕ್ ಆಗಿದೆಯಾ? e-KYC ಮಾಡಬೇಕಾ? ಮೊಬೈಲ್ನಲ್ಲೇ ಮಾಡಬಹುದಾ? ಗ್ಯಾಸ್ ಏಜೆನ್ಸಿಗೆ ಹೋಗಬೇಕಾ? ಎನ್ನುವ ಪ್ರಶ್ನೆಗಳು ಹಲವರಲ್ಲಿವೆ ಹೆಚ್ಚಾಗಿದ್ದು . ಸದಾದ ಸರ್ಕಾರದ ಅಧಿಕೃತ ಮಾಹಿತಿಯ ಪ್ರಕಾರ ಈಗಾಗಲೇ ಗ್ಯಾಸ್ e-KYC ಅಥವಾ ಆಧಾರ್ ದೃಢೀಕರಣ ಅಥವಾ ಲಿಂಕ್ ಮಾಡಿರುವವರು ಮತ್ತೆ ಅದೇ ಕೆಲಸವನ್ನು ಮಾಡಬೇಕಾಗಿಲ್ಲ. ಆದರೆ ನಿಮ್ಮ LPG ಖಾತೆಯಲ್ಲಿ e-KYC ಒಮ್ಮೆ ಪರಿಶೀಲಿಸಿ ಇನ್ನೂ ಆಗಿಲ್ಲದಿದ್ದರೆ, ಅದನ್ನು ಪೂರ್ಣ ಮಾಡಿಕೊಳ್ಳ ಬಹುದು ಎಂದು ತಿಳಿಸಲಾಗಿದೆ. ಸರ್ಕಾರದ ಅಧಿಕೃತ ಜಾಲತಾಣದಲ್ಲೂ ಮೊಬೈಲ್ ಮೂಲಕ ಮುಖ ಗುರುತಿಸುವಿಕೆಯ ಸಹಾಯದಿಂದ ಆಧಾರ್ e-KYC ಮಾಡುವ ವಿಧಾನವನ್ನು ನೀಡಲಾಗಿದೆ . ಇದಕ್ಕಾಗಿ LPG ಕಂಪನಿಯ App ಮತ್ತು Aadhaar FaceRD App ಬಳಸಿ ಗ್ಯಾಸ್ e KYC ಮಾಡಿಕೊಳ್ಳಬಹುದು.
LPG Gas e-KYC ಬಗ್ಗೆ ಸದ್ಯದ ಅಪ್ಡೇಟ್
LPG ಗ್ರಾಹಕರ ಗುರುತು ಮರು ಪರಿಶೀಲಿಸಲು ಸರ್ಕಾರವು ಈ ekyc ಆಧಾರ್ ಆಧಾರಿತ ವ್ಯವಸ್ಥೆಯನ್ನು ಜಾರಿ ತಂದಿದ್ದು . ಗ್ರಾಹಕರು ತಮ್ಮ ಗ್ಯಾಸ್ ಖಾತೆಯಲ್ಲಿ e-KYC ಆಗಿದೆಯಾ ಅಥವಾ ಇನ್ನೂ ಬಾಕಿ ಇದೆಯಾ ಎನ್ನುವುದನ್ನು ಮೊದಲು ಚೆಕ್ ಮಾಡಿಕೊಂಡು e-KYC ಮಾಡಿಕೊಳ್ಳಬಹುದು ಯಾಕೆಂದರೆ e KYC ಆಗದೇ ಇದ್ದರೆ ನಿಮಗೆ ಸಿಗುವ ಸಬ್ಸಿಡಿ ಸೌಲಭ್ಯ ನಿಲ್ಲಬಹುದು . e-KYC ಆಗಿಲ್ಲದಿದ್ದರೆ, LPG ಕಂಪನಿಯ ಅಧಿಕೃತ Appನಲ್ಲಿ e ಸೇವೆ ಇದ್ದರೆ ಸುಲಭವಾಗಿ ಮಾಡಿಕೊಳ್ಳಬಹುದು . ಇಲ್ಲವಾದರೆ ನಿಮ್ಮ ಹತ್ತಿರದ ಗ್ಯಾಸ್ ಏಜೆನ್ಸಿಗೆ ಹೋಗಿ ಮಾಡಿಸಿಕೊಳ್ಳಬಹುದು.ಸದ್ಯಕ್ಕೆ ಸರ್ಕಾರವು ಗ್ಯಾಸ್ ಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯ ಎಂದು ತಿಳಿಸಿದೆ.
ಯಾರೆಲ್ಲ LPG Gas e-KYC ಮಾಡಿಸಿಕೊಳ್ಳಬೇಕು?
ಗ್ರಾಹಕರು ತಮ್ಮ ಗ್ಯಾಸ್ ಖಾತೆಯಲ್ಲಿ ಇನ್ನೂ e-KYC ಆಗದೇ ಇದ್ದರೆ ಅಂಥವರು ಮಾಡಿಕೊಳ್ಳಬೇಕು .
ಮುಖ್ಯವಾಗಿ:
- e-KYC ಇನ್ನೂ ಆಗದಿರುವ LPG ಗ್ರಾಹಕರು
- ಆಧಾರ್ ದೃಢೀಕರಣ ಅಥವಾ ಲಿಂಕ್ ಬಾಕಿ ಇರುವವರು
- ಪ್ರಧಾನಮಂತ್ರಿ ಉಜ್ವಲ ಯೋಜನೆಯ ಲಾಭ ಪಡೆಯುತ್ತಿರುವವರು
- ಗ್ಯಾಸ್ ಖಾತೆಯಲ್ಲಿ ಆಧಾರ್ ವಿವರಗಳಲ್ಲಿ ಬದಲಾವಣೆ ಮಾಡಿರುವವರು
- LPG ಕಂಪನಿಯ Appನಲ್ಲಿ e-KYC ಮಾಡಲು ಹೊಸದಾಗಿ ನೋಟಿಫಿಕೇಷನ್ ಬಂದವರು
ಈಗಾಗಲೇ ಗ್ಯಾಸ್ e-KYC ಆಗಿದ್ದರೆ ಮತ್ತೆ ಮಾಡುವ ಅವಶ್ಯಕತೆ ಇಲ್ಲ,ಆದರೂ ಒಮ್ಮೆ ತಮ್ಮ ಗ್ಯಾಸ್ ಖಾತೆ ಪರಿಶೀಲಿಸುವುದು ಉತ್ತಮ.
ಮೊಬೈಲ್ನಲ್ಲೇ LPG Gas e-KYC ಮಾಡಬಹುದೇ?
ಹೌದು ಮೊಬೈಲ್ ಮೂಲಕ ಮಾಡಬಹುದು, ಕೆಲವು LPG ಗ್ರಾಹಕರು ಮೊಬೈಲ್ನಲ್ಲೇ e-KYC ಮಾಡಲು ಸುಲಭ ವಿಧಾನವಿದೆ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಅಧಿಕೃತ ವೆಬ್ಸೈಟ್ ಅಲ್ಲಿ ಮೊಬೈಲ್ ಮೂಲಕ Face-based Aadhaar e-KYC ಮಾಡುವ ವಿಧಾನವನ್ನು ನೀಡಿದ್ದು . ಇದಕ್ಕಾಗಿ ಗ್ರಾಹಕ ಬಳಸುವ LPG ಕಂಪನಿಯ ಅಧಿಕೃತ App ಬಳಸಿಕೊಂಡು ಸುಲಭವಾಗಿ e-KYC ಮಾಡಿಕೊಳ್ಳಬಹುದು. ಅಗತ್ಯವಿದ್ದರೆ Aadhaar FaceRD App ಸಹ ಬಳಸಬೇಕಾಗುತ್ತದೆ. ಆದರೆ ಕೆಲವೊಮ್ಮೆ APP ಸರಿಯಾಗಿ ಕಾರ್ಯ ನಿರ್ವಹಿಸದೆ ಇದ್ದಾಗ ನಿಮ್ಮ ಹತ್ತಿರ ಗ್ಯಾಸ್ ಎಂಜೆನ್ಸಿ ಗೆ ಬೇಟಿ ನೀಡಿ KYC ಮಾಡಿಸಬಹುದು.
Indane, Bharatgas ಮತ್ತು HP Gas e-KYC
ಪ್ರಸ್ತುತವಾಗಿ ಬೇರೆ ಬೇರೆ ಕಂಪನಿಗಳ LPG ಗ್ಯಾಸ್ ಸಂಪರ್ಕಗಳು . ಆದ್ದರಿಂದ e-KYC ಮಾಡುವ ವಿಧಾನವು ಆಯಾ ಕಂಪನಿಗೆ ತಕ್ಕ ಹಾಗೆ ನಿಯಮಗಳು ಸ್ವಲ್ಪ ಬದಲಾಗಬಹುದು.
Indane Gas
Indane ಗ್ರಾಹಕರು IndianOilನ ಅಧಿಕೃತ LPG ಸೇವೆಗಳನ್ನು ಮೊಬೈಲ್ ಮೂಲಕ ಬಳಸಬಹುದು. ಗ್ಯಾಸ್ ಖಾತೆಗೆ ಸಂಬಂಧಿಸಿದ ಹಲವು ಸೇವೆಗಳು ಅಧಿಕೃತ App ಮತ್ತು ವೆಬ್ಸೈಟ್ ಅಲ್ಲಿ ಸಂಪೂರ್ಣ ವಿವರಗಳು ಲಭ್ಯವಿವೆ.
Bharatgas
Bharatgas ಗ್ರಾಹಕರು ತಮ್ಮ ಅಧಿಕೃತ ಸೇವೆಗಳ ಮೂಲಕ ಗ್ಯಾಸ್ ಖಾತೆಗೆ ಸಂಬಂಧಿಸಿದ ಮಾಹಿತಿಯನ್ನು ಪರಿಶೀಲಿಸಿ KYC ಪ್ರಕ್ರಿಯೆ ಪೂರ್ಣಗೊಳಿಸಬಹುದು. ಆಧಾರ್ಗೆ ಸಂಬಂಧಿಸಿದ ಸೇವೆಗಳಿಗೂ ಅಧಿಕೃತ ವ್ಯವಸ್ಥೆಯ ಅವಕಾಶ ನೀಡಿದ್ದು . ಹಾಗೆ ನೇರವಾಗಿ ಕೆವೈಸಿ ಮಾಡಿಕೊಳ್ಳಬಹುದು.
HP Gas
HP Gas ಗ್ರಾಹಕರಿಗೆ ಆಧಾರ್ ದೃಢೀಕರಣಕ್ಕೆ ಸಂಬಂಧಿಸಿದ ಸೇವೆಗಳನ್ನು ಮೊಬೈಲ್ ಮೂಲಕ ಮಾಡಲು ಅಧಿಕೃತವಾಗಿ ಅವಕಾಶ ನೀಡಲಾಗಿದ್ದು ಕೆಲವು ಸಂದರ್ಭಗಳಲ್ಲಿ ಆಗದೇ ಇದ್ದಾಗ ನಿಮ್ಮ ಗ್ಯಾಸ್ ಏಜೆನ್ಸಿಯನ್ನು ಸಂಪರ್ಕಿಸಿ ಅಲ್ಲಿ ನಿಮಗೆ ಬೇಕಾದ ಮಾಹಿತಿ ಪಡೆದು ಅಗತ್ಯ ದಾಖಲೆಯೊಂದಿಗೆ ಕೆವೈಸಿ ಮಾಡಿಸುವ ಅವಕಾಶ ನೀಡಲಾಗಿದೆ.
ಯೋಜನೆಯ ಪ್ರಮುಖ ಮಾಹಿತಿ
| ಪ್ರಮುಖಮಾಹಿತಿ | ವಿವರ |
| ಸೇವೆ | LPG e-KYC |
| ಮುಖ್ಯದಾಖಲೆ | ಆಧಾರ್ ಕಾರ್ಡ್ & ಗ್ರಾಹಕ ಐಡಿ |
| ಮಾಡುವವಿಧಾನ | ಮೊಬೈಲ್ App ಅಥವಾ ಗ್ಯಾಸ್ ಏಜೆನ್ಸಿ |
| ಮೊಬೈಲ್ e-KYC | ಕೆಲವು ಗ್ರಾಹಕರಿಗೆ ಲಭ್ಯ |
| Face e-KYC | Aadhaar FaceRD App ಮೂಲಕ |
| ಗ್ಯಾಸ್ಕಂಪನಿಗಳು | Indane, Bharatgas, HP Gas ಮುಂತಾದವು |
| ಉಜ್ವಲಯೋಜನೆ | ಫಲಾನುಭವಿಗಳಿಗೆ ಸಂಬಂಧಿಸಿದ ನಿಯಮಗಳು ಅನ್ವಯ |
| ಮುಖ್ಯವಾಗಿ | ಅಧಿಕೃತ App/ಜಾಲತಾಣ ಬಳಸಬಹುದು |
ಬೇಕಾಗುವ ದಾಖಲೆಗಳು
- ಆಧಾರ್ ಕಾರ್ಡ್
- LPG ಗ್ರಾಹಕರ ಸಂಖ್ಯೆ
- ಗ್ಯಾಸ್ ಖಾತೆಗೆ ಸಂಬಂಧಿಸಿದ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ
- ಆಧಾರ್ಗೆ ಸಂಬಂಧಿಸಿದ ವಿವರಗಳು
- ಬ್ಯಾಂಕ್ ಖಾತೆಯ ವಿವರಗಳು, ಸಬ್ಸಿಡಿಗೆ ಬೇಕಾದರೆ
ಪ್ರಮುಖವಾಗಿ ಭಾರತದಲ್ಲಿ ಮೂರು ಗ್ಯಾಸ್ ಕಂಪನಿಗಳಿದ್ದು ಪ್ರತಿ ಕಂಪನಿಯಲ್ಲಿ ತಮ್ಮದೇ ಆದ ನಿಯಮಗಳನ್ನು ಪಾಲಿಸುವುದರಿಂದ ಕಂಪನಿಯ ಪ್ರಕಾರ ದಾಖಲೆಗಳು ಹಾಗೆ ಅರ್ಹತೆಯ ನಿಯಮಗಳು ಬದಲಾಗುತ್ತವೆ ಅದಕ್ಕೆ ಮೊಬೈಲ್ ಮೂಲಕ KYC ಮಾಡುವ ಮೊದಲು ಹತ್ತಿರದ ಏಜೆನ್ಸಿಯನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಳ್ಳುವುದು ಉತ್ತಮ.
ಇದನ್ನೂ ಓದಿ
→ ಕರ್ನಾಟಕ ರೇಷನ್ ಕಾರ್ಡ್ e-KYC 2026: ಸೆಪ್ಟೆಂಬರ್ 30ರೊಳಗೆ e-KYC ಕಡ್ಡಾಯ
→ ರೈತರಿಗೆ ಭರ್ಜರಿ ಸಹಾಯಧನ! ಹಸುಗಳಿಗೆ ರಬ್ಬರ್ ಮ್ಯಾಟ್ ಮತ್ತು ಮೇವು ಕತ್ತರಿಸುವ ಯಂತ್ರ
ಮೊಬೈಲ್ ಮೂಲಕ LPG Gas e-KYC ಮಾಡುವ ವಿಧಾನ
ಹಂತ 1: ನಿಮ್ಮ LPG ಕಂಪನಿಯ ಅಧಿಕೃತ App ಅನ್ನು ಮೊಬೈಲ್ನಲ್ಲಿ ಓಪನ್ ಮಾಡಿ .
ಹಂತ 2: ಗ್ಯಾಸ್ ಖಾತೆಗೆ ಲಾಗಿನ್ ಮಾಡಿ.
ಹಂತ 3: e-KYC ಅಥವಾ ಆಧಾರ್ ದೃಢೀಕರಣದ ಆಯ್ಕೆ ಇದೆಯಾ ಎಂದು ನೋಡಿ.
ಹಂತ 4: ಕೇಳುವ ಆಧಾರ್ ವಿವರಗಳನ್ನು ನೀಡಿ .
ಹಂತ 5: ಅಗತ್ಯವಿದ್ದರೆ Aadhaar FaceRD App ತೆರೆಯಿರಿ.
ಹಂತ 6: ಮುಖ ಗುರುತಿಸುವಿಕೆಯ ಮೂಲಕ e-KYC ಪೂರ್ಣಗೊಳಿಸಿ.
ಹಂತ 7: ಕೆಲಸ ಮುಗಿದ ನಂತರ ನಿಮ್ಮ ಗ್ಯಾಸ್ ಖಾತೆಯಲ್ಲಿ e-KYC ಆಗಿದೆಯಾ ಎಂದು ಚೆಕ್ ಮಾಡಿ.
ಈ ಮೊಬೈಲ್ ಮೂಲಕ kyc ಮಾಡುವ ವಿಧಾನವನ್ನು ಸರ್ಕಾರದ ಅಧಿಕೃತ ಮೂಲಗಳಲ್ಲೂ ತಿಳಿಸಲಾಗಿದೆ.
ಗ್ಯಾಸ್ ಏಜೆನ್ಸಿಯಲ್ಲಿ LPG Gas e-KYC ಮಾಡಿಸುವುದು ಹೇಗೆ?
ಮೊಬೈಲ್ನಲ್ಲಿ e-KYC ಮಾಡಲು ಆಗದೇ ಇರುವ ಸಂದರ್ಭದಲ್ಲಿ ನಿಮ್ಮ ಹತ್ತಿರದ ಗ್ಯಾಸ್ ಏಜೆನ್ಸಿಯಲ್ಲಿ KYC ಮಾಡಿಸುವ ಅವಕಾಶವಿದೆ. ಏಂಜೆನ್ಸಿಗೆ ಹೋಗುವ ಮೊದಲು ಆಧಾರ್ ಕಾರ್ಡ್ ಮತ್ತು LPG ಗ್ರಾಹಕರ ಸಂಖ್ಯೆ ತೆಗೆದುಕೊಂಡು ಹೋಗುವುದು ಉತ್ತಮ. ನಿಮ್ಮ ಖಾತೆಯಲ್ಲಿ e-KYC ಬಾಕಿ ಇದೆಯಾ ಎಂದು ಏಜೆನ್ಸಿಯ ಅಧಿಕಾರಿಗಳ ಮೂಲಕ ಮಾಹಿತಿ ತಿಳಿದುಕೊಂಡು. ಬಾಕಿ ಇದ್ದರೆ ಲಭ್ಯವಿರುವ ವ್ಯವಸ್ಥೆಯ ಮೂಲಕ e-KYC ಮಾಡಿಸಿಕೊಳ್ಳಬಹುದು.
e-KYC ಆಗಿದೆಯೇ ಎಂದು ಹೇಗೆ ತಿಳಿಯುವುದು?
LPG e-KYC ಪೂರ್ಣವಾಗಿದಿಯ ಎಂದು ಸುಲಭವಾಗಿ ಮೊಬೈಲ್ ಮೂಲಕ ಗ್ರಾಹಕನಿಗೆ ಸಂಭದಪ್ಪಟ್ಟ LPG ಕಂಪನಿಯ ಅಧಿಕೃತ App ಅಥವಾ ಗ್ಯಾಸ್ ಏಜೆನ್ಸಿಯ ಮೂಲಕ ನಿಮ್ಮ ಖಾತೆಯ ಸ್ಥಿತಿಯನ್ನು ಪರಿಶೀಲಿಸಬಹುದು.ಅಧಿಕೃತ App ಮೂಲಕ ನೋಡುವುದಾದರೆ APP ಓಪನ್ ಮಾಡಿಕೊಂಡು e-KYC ಗೆ ಸಂಬಂಧಿಸಿದ ಆಪ್ಷನ್ ಕ್ಲಿಕ್ ಮಾಡುವುದರ ಮೂಲಕ ತಿಳಿದುಕೊಳ್ಳಬಹುದು ಈಗಾಗಲೇ ಆಗಿದ್ದರೆ ಮತ್ತೆ ಕಿಕ್ ಮಾಡುವ ಅಗತ್ಯವಿಲ್ಲ. ಆದ್ದರಿಂದ ಯಾರಾದರೂ WhatsAppನಲ್ಲಿ “ಮತ್ತೆ e-KYC ಮಾಡಬೇಕು” ಎಂದು ಮೆಸೇಜ್ ಕಳುಹಿಸಿದರೆ, ಮೊದಲು ನಿಮ್ಮ ಖಾತೆಯಲ್ಲಿ e-KYC ಸ್ಥಿತಿ ಏನಿದೆ ಎಂದು ಪರಿಶೀಲಿಸಿ.ಅನಧಿಕೃತ ವ್ಯಕ್ತಿಗಳನ್ನು ನಂಬಬೇಡಿ.
e-KYC ಮಾಡದಿದ್ದರೆ ಏನಾಗಬಹುದು?
LPG e-KYC ಬಾಕಿ ಇರುವವರು ತಮ್ಮ LPG ಖಾತೆಯ ಸ್ಥಿತಿಯನ್ನು ಒಮ್ಮೆ ಪರಿಶೀಲಿಸಿಕೊಳ್ಳುವುದು ಒಳ್ಳೆಯದು. ಆದರೆ “e-KYC ಮಾಡದಿದ್ದರೆ ಎಲ್ಲರಿಗೂ ಗ್ಯಾಸ್ ಸಿಗುವುದಿಲ್ಲ” ಅಥವಾ “ಗ್ಯಾಸ್ ಕನೆಕ್ಷನ್ ಕಟ್ ಆಗುತ್ತದೆ” ಎಂದು ಎಲ್ಲ ಗ್ರಾಹಕರಿಗೂ ಒಂದೇ ರೀತಿಯ ನಿಯಮ ಅನ್ವಯಿಸುವುದು ಎಂದು ಹೇಳಲು ಸಾಧ್ಯವಿಲ್ಲ ಅರ್ಹತೆ ಹಾಗೆ ಗ್ರಾಹಕರ ಮೇಲೆ ನಿಯಮಗಳು ನಿರ್ಧಾರವಾಗುತ್ತದೆ. ನಿಮ್ಮ ಖಾತೆಗೆ e-KYC ಗೆ ಸಂಬಂಧಿಸಿದ ನಿರ್ದಿಷ್ಟ ಸೂಚನೆ ಬಂದಿದ್ದರೆ, ಅದನ್ನು ನಿಮ್ಮ LPG ಕಂಪನಿಯ ಅಧಿಕೃತ App, ಅಥವ ವೆಬ್ಸೈಟ್ ಅಥವಾ ಗ್ಯಾಸ್ ಏಜೆನ್ಸಿಯ ಮೂಲಕ ಖಚಿತಪಡಿಸಿಕೊಳ್ಳಬಹುದು.ಅಧಿಕೃತ ಮಾಹಿತಿ ತಿಳಿದುಕೊಂಡ ನಂತರವೇ ಮುಂದೆ ಏನು ಮಾಡಬೇಕು ಎಂದು ನಿರ್ಧಾರ ತೆಗೆದುಕೊಳ್ಳಿ.
LPG Gas e-KYC ಮಾಡುವಾಗ ಗಮನಿಸಿ
- ಅಧಿಕೃತ LPG App ಮಾತ್ರ ಬಳಸಿ.
- ಅಪರಿಚಿತ ಲಿಂಕ್ಗಳಲ್ಲಿ ಆಧಾರ್ ವಿವರ ನೀಡಬೇಡಿ .
- OTP ಅನ್ನು ಯಾವುದೇ ಅನ್ಯ ವ್ಯಕ್ತಿಗೆ ಹೇಳಬೇಡಿ.
- e-KYC ಹೆಸರಿನಲ್ಲಿ ಯಾರಾದರೂ ಹಣ ಕೇಳಿದರೆ ಎಚ್ಚರವಾಗಿರಿ.
- LPG e-KYC ಈಗಾಗಲೇ ಪೂರ್ಣವಾಗಿದ್ದರೆ ಮತ್ತೆ ಮಾಡುವ ಮೊದಲು status ಚೆಕ್ ಮಾಡಿ.
- ಸಬ್ಸಿಡಿಗೆ ಸಂಬಂಧಿಸಿದ ಮಾಹಿತಿಯನ್ನು ಅಧಿಕೃತ ಮೂಲದಿಂದಲೇ ಪರಿಶೀಲಿಸಿ.
- ಸಮಸ್ಯೆ ಇದ್ದರೆ ನಿಮ್ಮ ಹತ್ತಿರದ ಗ್ಯಾಸ್ ಏಜೆನ್ಸಿಯನ್ನು ಸಂಪರ್ಕಿಸಿ.
ಅಧಿಕೃತ ಲಿಂಕ್ಗಳು
ಕೊನೆಯ ಮಾತು
LPG Gas e-KYC ಯ ಬಗ್ಗೆ ಗೊಂದಲ ಇರುವವರು ಮೊಬೈಲ್ ಮೂಲಕ ಮಾಡುವ ಮೊದಲು ನಿಮ್ಮ ಹತ್ತಿರದ ಗ್ಯಾಸ್ ಏಜನ್ಸಿ ಗೆ ಬೇಟಿ ನೀಡಿ ಅಧಿಕೃತ ಮಾಹಿತಿಯನ್ನು ತಿಳಿದುಕೊಂಡು ತಮ್ಮ ಖಾತೆಯ ಸ್ಥಿತಿಯನ್ನು ಪರಿಶೀಲಿಸಿಡಾ ನಂತರವೇ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು.