DL Mobile Number Update ಮಾಡಿಸಲು ಹುಡುಕುತ್ತಿರುವ ವಾಹನ ಚಾಲಕರು ತಿಳಿಯಲೇ ಬೇಕಾದ ಸುದ್ದಿ ಇದು. ಡ್ರೈವಿಂಗ್ ಲೈಸನ್ಸ್ ಹೊಂದಿರುವವರು ಪ್ರತಿಯೊಬ್ಬರೂ ತಮ್ಮ ಹಳೆಯ ಮೊಬೈಲ್ ನಂಬರ್ ಬದಲಾಯಿಸಿದ್ದರೆ ಸರ್ಕಾರದ ಆದೇಶದ ಪ್ರಕಾರ ಹೊಸ ಮೊಬೈಲ್ ನಂಬರ್ ಡ್ರೈವಿಂಗ್ ಲೈಸನ್ಸ್ ಗೆ ಅಪ್ಡೇಟ್ ಮಾಡಿಕೊಳ್ಳಬೇಕು ಎಂದು ತಿಳಿಸಿದೆ,ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಪ್ರಸ್ತುತ ಮೊಬೈಲ್ ನಂಬರ್ಗಳನ್ನು ಅಪ್ಡೇಟ್ ಮಾಡಿಕೊಳ್ಳುವಂತೆ ಸೂಚನೆ ನೀಡಿದೆ. ಇದರಿಂದ ಸಾರಿಗೆ ಇಲಾಖೆಗೆ ಸಂಬಂಧಿಸಿದ ಮಾಹಿತಿ ಮತ್ತು ಅಗತ್ಯ ಸೂಚನೆಗಳು ಸರಿಯಾದ ವ್ಯಕ್ತಿಗೆ ತಲುಪಲು ಸಹಾಯವಾಗುತ್ತದೆ ಎಂದು ಸಾರಿಗೆ ಇಲಾಖೆ ಈ ನಿರ್ಧಾರ ತೆಗೆದುಕೊಂಡಿದೆ.
ಡಿಎಲ್ ಗೆ ಮೊಬೈಲ್ ನಂಬರ್ ಅಪ್ಡೇಟ್ ಮಾಡಲೂ RTO ಕಚೇರಿಗೆ ಹೋಗುವ ಅಗತ್ಯವಿಲ್ಲ, ಅಧಿಕೃತ Parivahan ಪೋರ್ಟಲ್ನಲ್ಲಿಯೂ ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರು ತಮ್ಮ ಮೊಬೈಲ್ ನಂಬರ್ ಅಪ್ಡೇಟ್ ಮಾಡಿಕೊಳ್ಳಲು ಸಾರಿಗೆ ಇಲಾಖೆ ಆನ್ಲೈನ್ ಸೌಲಭ್ಯವನ್ನು ಎಲ್ಲಾರಿಗೆ ಒದಗಿಸಿದೆ.

DL Mobile Number Update ಸರ್ಕಾರದ ಸೂಚನೆ ಏನು?
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು VAHAN ಮತ್ತು SARATHI ಡೇಟಾಬೇಸ್ಗಳಲ್ಲಿ ದಾಖಲಾಗಿರುವ ಹಳೆಯ ಮೊಬೈಲ್ ನಂಬರ್ಗಳನ್ನು ಪ್ರಸ್ತುತ ಚಾಲ್ತಿಯಲ್ಲಿರುವ ದಾಖಲೆಗಳೊಂದಿದೆ ಹೊಂದಿಕೆ ಯಾಗುವ ಮೊಬೈಲ್ ನಂಬರ್ ನ್ನು ಸರಿಯಾದ ಮಾಹಿತಿಯೊಂದಿಗೆ ಡಿಎಲ್ ಗೆ ಅಪ್ಡೇಟ್ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
ಈಗಾಗಲೇ ಡ್ರೈವಿಂಗ್ ಲೈಸೆನ್ಸ್ನಲ್ಲಿ ಹಳೆಯ ಅಥವಾ ತಪ್ಪಾದ ಮೊಬೈಲ್ ನಂಬರ್ ಇದ್ದರೆ ಸಾರಿಗೆ ಇಲಾಖೆಯಿಂದ ಕಳುಹಿಸುವ ಕೆಲವು ಮಾಹಿತಿ, ಸೇವಾ ಸಂದೇಶಗಳು ಅಥವಾ ಅಗತ್ಯ ಸೂಚನೆಗಳು ಸರಿಯಾದ ವ್ಯಕ್ತಿಗೆ ಮಾಹಿತಿ ತಲುಪುವುದಿಲ್ಲ. ಈ ಕಾರಣದಿಂದ ಡಿಎಲ್ ಹೊಂದಿರುವವರು ತಮ್ಮ ಪ್ರಸ್ತುತ ಚಾಲ್ತಿಯಲ್ಲಿರುವ ಮೊಬೈಲ್ ನಂಬರ್ ಅನ್ನು ದಾಖಲೆಯಲ್ಲಿ ಅಪ್ಡೇಟ್ ಮಾಡಿಕೊಳ್ಳುವುದು ಒಳ್ಳೆಯದು.
ಸಾರಿಗೆ ಇಲಾಖೆಯ ಅಧಿಕೃತ Parivahan ವ್ಯವಸ್ಥೆಯಲ್ಲಿ ಮೊಬೈಲ್ ನಂಬರ್ ಅಪ್ಡೇಟ್ ಮಾಡಲು ಆನ್ಲೈನ್ ಸೌಲಭ್ಯವಿರುವುದರಿಂದ, ಮೊಬೈಲ್ ಅಥವಾ ನಿಮ್ಮ ಬಳಿ ಕಂಪ್ಯೂಟರ್ ಇದ್ದರೆ ಅದರ ಮೂಲಕವೇ ಈ ಪ್ರಕ್ರಿಯೆಯನ್ನು ಸುಲಭವಾಗಿ ಮಾಡಬಹುದು.
ಯಾರಿಗೆ ಈ ನಿಯಮ ಅನ್ವಯಿಸುತ್ತದೆ?
DL Mobile Number Update ಮುಖ್ಯವಾಗಿ ಕೆಳಗಿನ ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರಿಗೆ ಸಂಬಂಧಿಸಿದೆ:
- ಡಿಎಲ್ನಲ್ಲಿ ಹಳೆಯ ಮೊಬೈಲ್ ನಂಬರ್ ಇರುವವರು
- ಡಿಎಲ್ ಮಾಡಿಸಿ ತುಂಬ ಸಮಯ ಆದವರು
- ಮೊಬೈಲ್ ನಂಬರ್ ಬದಲಾಯಿಸಿಕೊಂಡಿರುವವರು
- ಡಿಎಲ್ ದಾಖಲೆಯಲ್ಲಿ ಮೊಬೈಲ್ ನಂಬರ್ ಅಪ್ಡೇಟ್ ಆಗದೇ ಇರುವವರು
- ತಪ್ಪಾದ ಮೊಬೈಲ್ ನಂಬರ್ ದಾಖಲಾಗಿರುವವರು
- ಪ್ರಸ್ತುತ ಬಳಸುತ್ತಿರುವ ಮೊಬೈಲ್ ನಂಬರ್ ಮತ್ತು ಡಿಎಲ್ ದಾಖಲೆಯಲ್ಲಿರುವ ನಂಬರ್ ಬೇರೆ ಇರುವವರು
ನಿಮ್ಮ ಡ್ರೈವಿಂಗ್ ಲೈಸೆನ್ಸ್ನಲ್ಲಿ ಈಗಾಗಲೇ ನೀವು ಬಳಸುತ್ತಿರುವ ಮೊಬೈಲ್ ನಂಬರ್ ಚಾಲ್ತಿಯಲಿದ್ದು ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದು ದಾಖಲೆಯಲ್ಲಿ ಸರಿಯಾಗಿ ಅಪ್ಡೇಟ್ ಆಗಿದ್ದರೆ ಮತ್ತೆ ಅಪ್ಡೇಟ್ ಮಾಡುವ ಅಗತ್ಯವಿಲ್ಲ.
ಡಿಎಲ್ ಮೊಬೈಲ್ ನಂಬರ್ ಅಪ್ಡೇಟ್ ಮಾಡಿಸದೆ ಇದ್ದರೆ ಏನಾಗುತ್ತದೆ?
ಈ ವಿಷಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ಸುದ್ದಿಗಳು ಹರಿದಾಡುತ್ತಿವೆ. ವಿಶೇಷವಾಗಿ ಮೊಬೈಲ್ ನಂಬರ್ ಅಪ್ಡೇಟ್ ಮಾಡದಿದ್ದರೆ ಡ್ರೈವಿಂಗ್ ಲೈಸೆನ್ಸ್ ಕ್ಯಾನ್ಸಲ್ ಆಗುತ್ತದೆ ಅಥವಾ ನಿರ್ದಿಷ್ಟ ದಿನಗಳ ನಂತರ ಲೈಸೆನ್ಸ್ ಸಸ್ಪೆಂಡ್ ಆಗುತ್ತೆ ಎಂಬ ಮಾಹಿತಿಯೂ ಹರಿದಾಡುತ್ತಿದೆ. ಆದರೆ ಮೊಬೈಲ್ ನಂಬರ್ ಅಪ್ಡೇಟ್ ಮಾಡದಿದ್ದರೆ ಡ್ರೈವಿಂಗ್ ಲೈಸೆನ್ಸ್ ರದ್ದಾಗುತ್ತದೆ ಎಂಬ ಅಧಿಕೃತ ಆದೇಶವನ್ನು ಸಾರಿಗೆ ಇಲಾಖೆ ತಿಳಿಸಿಲ್ಲ .ಹೀಗಾಗಿ ಅಂತಹ ಮಾಹಿತಿಯನ್ನು ನೋಡಿ ಭಯಪಡುವ ಅಗತ್ಯವಿಲ್ಲ. ಆದರೆ ಹಳೆಯ ಮೊಬೈಲ್ ನಂಬರ್ ದಾಖಲಾಗಿದ್ದರೆ ಅದರಿಂದ ಪ್ರಾಯೋಗಿಕ ತೊಂದರೆಗಳು ಊಟಾಗುತ್ತವೆ.ಉದಾಹರಣೆಗೆ ಸಾರಿಗೆ ಇಲಾಖೆಗೆ ಸಂಬಂಧಿಸಿದ ಸೇವಾ ಮಾಹಿತಿ ಅಥವಾ ಸಂದೇಶಗಳು ನಿಮ್ಮ ಪ್ರಸ್ತುತ ಮೊಬೈಲ್ಗೆ ತಲುಪದೇ ಇರಬಹುದು. ಕೆಲವು ಆನ್ಲೈನ್ ಸೇವೆಗಳಲ್ಲಿ OTP ಅಥವಾ ಇತರ ಪರಿಶೀಲನಾ ಸಂದೇಶಗಳ ಅಗತ್ಯವಿದ್ದಾಗಲೂ ಸಮಸ್ಯೆ ಉಂಟಾಗಬಹುದು.ಆದ್ದರಿಂದ ಡಿಎಲ್ನಲ್ಲಿ ಹಳೆಯ ನಂಬರ್ ಇದ್ದರೆ ಸಾಧ್ಯವಾದಷ್ಟು ಬೇಗ ಪ್ರಸ್ತುತ ನಂಬರ್ ಅನ್ನು ಅಪ್ಡೇಟ್ ಮಾಡಿಕೊಳ್ಳುವುದು ಉತ್ತಮ.
ಡಿಎಲ್ ಮೊಬೈಲ್ ನಂಬರ್ ಅಪ್ಡೇಟ್ ಮಾಡಲು ಬೇಕಾಗುವ ದಾಖಲೆಗಳು
ಆನ್ಲೈನ್ನಲ್ಲಿ ಮೊಬೈಲ್ ನಂಬರ್ ಅಪ್ಡೇಟ್ ಮಾಡುವಾಗ ಮುಖ್ಯವಾಗಿ ನಿಮ್ಮ ಡ್ರೈವಿಂಗ್ ಲೈಸೆನ್ಸ್ಗೆ ಸಂಬಂಧಿಸಿದ ವಿವರಗಳು ಮತ್ತು ಹೊಸ ಮೊಬೈಲ್ ನಂಬರ್ ಅಗತ್ಯವಾಗುತ್ತದೆ.
ಸಾಮಾನ್ಯವಾಗಿ ಬೇಕಾಗುವ ವಿವರಗಳು:
- ಡ್ರೈವಿಂಗ್ ಲೈಸೆನ್ಸ್ ಸಂಖ್ಯೆ
- ಜನ್ಮ ದಿನಾಂಕ ಸೇರಿದಂತೆ ಕೇಳಲಾಗುವ ಡಿಎಲ್ ವಿವರಗಳು
- ಪ್ರಸ್ತುತ ಬಳಕೆಯಲ್ಲಿರುವ ಮೊಬೈಲ್ ನಂಬರ್
- OTP ಸ್ವೀಕರಿಸಲು ಸಾಧ್ಯವಾಗುವ ಮೊಬೈಲ್ ಫೋನ್
ಪೋರ್ಟಲ್ನಲ್ಲಿ ಕೇಳಲಾಗುವ ವಿವರಗಳನ್ನು ಮಾತ್ರ ಸರಿಯಾಗಿ ನಮೂದಿಸಿ. OTP ಬಂದರೆ ಅದನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
DL Mobile Number Update ಮಾಡುವುದು ಹೇಗೆ?
ಡ್ರೈವಿಂಗ್ ಲೈಸೆನ್ಸ್ನಲ್ಲಿರುವ ಮೊಬೈಲ್ ನಂಬರ್ ಅನ್ನು ಆನ್ಲೈನ್ನಲ್ಲಿ ಅಪ್ಡೇಟ್ ಮಾಡಲು ಕೆಳಗಿನ ಹಂತಗಳನ್ನು ಅನುಸರಿಸಬಹುದು.
ಹಂತ 1: ಅಧಿಕೃತ Parivahan ಅಥವಾ Sarathi ಪೋರ್ಟಲ್ ತೆರೆಯಿರಿ.
ಹಂತ 2: ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿ.
ಹಂತ 3: ಡ್ರೈವಿಂಗ್ ಲೈಸೆನ್ಸ್ಗೆ ಸಂಬಂಧಿಸಿದ ಸೇವೆಗಳ ವಿಭಾಗಕ್ಕೆ ಹೋಗಿ.
ಹಂತ 4: ಮೊಬೈಲ್ ನಂಬರ್ ಅಪ್ಡೇಟ್ ಮಾಡುವ ಸೇವೆಯನ್ನು ಆಯ್ಕೆ ಮಾಡಿ.
ಹಂತ 5: ನಿಮ್ಮ ಡ್ರೈವಿಂಗ್ ಲೈಸೆನ್ಸ್ ಸಂಖ್ಯೆ ಮತ್ತು ಕೇಳಲಾಗುವ ಇತರ ವಿವರಗಳನ್ನು ನಮೂದಿಸಿ.
ಹಂತ 6: ನೀವು ಪ್ರಸ್ತುತ ಬಳಸುತ್ತಿರುವ ಮೊಬೈಲ್ ನಂಬರ್ ಅನ್ನು ನಮೂದಿಸಿ.
ಹಂತ 7: ಪೋರ್ಟಲ್ ಸೂಚಿಸುವ ಪರಿಶೀಲನಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
ಹಂತ 8: OTP ಬಂದರೆ ಅದನ್ನು ನಮೂದಿಸಿ.
ಹಂತ 9: ಪರಿಶೀಲನೆ ಪೂರ್ಣಗೊಂಡ ನಂತರ ಅರ್ಜಿಯನ್ನು ಸಲ್ಲಿಸಿ.
ಹಂತ 10: ಮೊಬೈಲ್ ನಂಬರ್ ಅಪ್ಡೇಟ್ ಆಗಿರುವುದನ್ನು ಖಚಿತಪಡಿಸಿಕೊಳ್ಳಿ.
Parivahan ಪೋರ್ಟಲ್ನಲ್ಲಿ ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರು ಮೊಬೈಲ್ ನಂಬರ್ ಅಪ್ಡೇಟ್ ಮಾಡಿಕೊಳ್ಳಲು ಆನ್ಲೈನ್ ಸೌಲಭ್ಯವಿದೆ.
RTO ಕಚೇರಿಗೆ ಹೋಗಬೇಕಾ?
DL Mobile Number Update ಮಾಡಲು RTO ಕಚೇರಿಗೆ ಹೋಗುವ ಅಗತ್ಯವಿಲ್ಲಾ ಅಧಿಕೃತವಾಗಿ ಸಾರಿಗೆ ಇಲಾಖೆಯಿಂದ ಅಧಿಕೃತ Parivahan/Sarathi ಪೋರ್ಟಲ್ ಮೂಲಕ ಆನ್ಲೈನ್ನಲ್ಲಿ ಈ ಸೇವೆಯನ್ನು ಬಳಸಿಕೊಂಡು ಮೊಬೈಲ್ ನಂಬರ್ ಅಪ್ಡೇಟ್ ಮಾಡುವ ಅವಕಾಶ ನೀಡಲಾಗಿದೆ.ಆದರೆ ನಿಮ್ಮ ಡಿಎಲ್ ದಾಖಲೆಗಳಲ್ಲಿ ಸಮಸ್ಯೆ ಇದ್ದರೆ, ವಿವರಗಳು ಹೊಂದಿಕೆಯಾಗದಿದ್ದರೆ ಅಥವಾ ಆನ್ಲೈನ್ ಸೇವೆ ಕಾರ್ಯನಿರ್ವಹಿಸದೇ ಇದ್ದರೆ ಸಂಬಂಧಪಟ್ಟ RTO ಕಚೇರಿಯನ್ನು ಸಂಪರ್ಕಿಸಬೇಕಾಗಬಹುದು.ಯಾವುದೇ ಮಧ್ಯವರ್ತಿಗೆ ನಿಮ್ಮ ಡಿಎಲ್ ಸಂಖ್ಯೆ, ವೈಯಕ್ತಿಕ ಮಾಹಿತಿ, ಹಣ ಅಥವಾ OTP ನೀಡಬೇಡಿ. ಅಧಿಕೃತ ವೆಬ್ಸೈಟ್ ಮೂಲಕ ಅಥವಾ ಕಚೇರಿಯ ಮೂಲಕ ಮಾಹಿತಿ ಪಡೆದು ಅರ್ಜಿ ಸಲ್ಲಿಸುವುದು ಉತ್ತಮ.
ಅಪ್ಡೇಟ್ ಆಗದೆ ಇದ್ದರೆ ಏನು ಮಾಡಬೇಕು?
ಕೆಲವೊಮ್ಮೆ ಆನ್ಲೈನ್ನಲ್ಲಿ ಪ್ರಯತ್ನಿಸಿದರೂ ಮೊಬೈಲ್ ನಂಬರ್ ಅಪ್ಡೇಟ್ ಆಗದೇ ಇದ್ದಾಗ . ಅಂತಹ ಸಂದರ್ಭದಲ್ಲಿ ಮೊದಲು ನೀವು ನಮೂದಿಸಿರುವ ಮಾಹಿತಿಯನ್ನು ಪರಿಶೀಲಿಸಿ.
- ಡಿಎಲ್ ಸಂಖ್ಯೆ ಸರಿಯಾಗಿದೆಯೇ ನೋಡಿ.
- ಜನ್ಮ ದಿನಾಂಕ ಸರಿಯಾಗಿ ನಮೂದಿಸಿದ್ದೀರಾ ಎಂದು ಪರಿಶೀಲಿಸಿ.
- ಹೊಸ ಮೊಬೈಲ್ ನಂಬರ್ ಸರಿಯಾಗಿದೆಯೇ ನೋಡಿ.
- OTP ಬರಲು ಸ್ವಲ್ಪ ಸಮಯ ಕಾಯಿರಿ.
- ಮತ್ತೆ ಅಧಿಕೃತ Sarathi ಪೋರ್ಟಲ್ನಲ್ಲಿ ಪ್ರಯತ್ನಿಸಿ.
- ಬೇರೆ ಬ್ರೌಸರ್ ಅಥವಾ ಬೇರೆ ಮೊಬೈಲ್ ಮೂಲಕ ಪ್ರಯತ್ನಿಸಿ.
- ಸಮಸ್ಯೆ ಮುಂದುವರಿದರೆ ಸಂಬಂಧಪಟ್ಟ RTO ಕಚೇರಿ ಅಥವಾ Sarathi ಸಹಾಯವಾಣಿಯನ್ನು ಸಂಪರ್ಕಿಸಿ.
ತಾಂತ್ರಿಕ ಸಮಸ್ಯೆ ಇದ್ದಾಗ ಅಪರಿಚಿತ ವ್ಯಕ್ತಿಗಳ ಸಹಾಯ ಪಡೆಯುವುದಕ್ಕಿಂತ ಅಧಿಕೃತ ಸಾರಿಗೆ ಇಲಾಖೆಯ ಸಹಾಯ ಪಡೆಯುವುದು ಉತ್ತಮ ಯಾಕೆಂದರೆ ವಂಚನೆಗಳಿಂದ ತಪ್ಪಿಸಿಕೊಳ್ಳಬಹುದು.
ಹೊಸ ಡ್ರೈವಿಂಗ್ ಲೈಸೆನ್ಸ್ ಅಪ್ಲೈ ಮಾಡುವುದು ಹೇಗೆ?
ನೀವು ಹೊಸದಾಗಿ ಡ್ರೈವಿಂಗ್ ಲೈಸೆನ್ಸ್ ಪಡೆಯಬೇಕಾದರೆ ಮೊದಲು Learning Licence ಪಡೆಯುವ ಪ್ರಕ್ರಿಯೆ ಪೂರ್ಣಗೊಳಿಸಬೇಕು. ನಂತರ ನಿಯಮಾನುಸಾರ Permanent Driving Licenceಗೆ ಅರ್ಜಿ ಸಲ್ಲಿಸಬಹುದು.
ಸಂಕ್ಷಿಪ್ತವಾಗಿ ಅರ್ಜಿ ಸಲ್ಲಿಸುವ ವಿಧಾನ:
- ಅಧಿಕೃತ Sarathi Parivahan ಪೋರ್ಟಲ್ ತೆರೆಯಿರಿ.
- ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿ.
- Learning Licenceಗೆ ಅರ್ಜಿ ಸಲ್ಲಿಸಿ.
- ವೈಯಕ್ತಿಕ ಮತ್ತು ಅಗತ್ಯ ದಾಖಲೆಗಳ ವಿವರಗಳನ್ನು ನಮೂದಿಸಿ.
- ನಿಗದಿತ ಶುಲ್ಕ ಪಾವತಿಸಿ.
- ಅಗತ್ಯವಿರುವ ಪರೀಕ್ಷೆಯನ್ನು ಪೂರ್ಣಗೊಳಿಸಿ.
- Learning Licence ಪಡೆದ ನಂತರ Permanent Driving Licenceಗೆ ಅರ್ಜಿ ಸಲ್ಲಿಸಿ.
- ಚಾಲನಾ ಪರೀಕ್ಷೆಗೆ ದಿನಾಂಕ ಆಯ್ಕೆ ಮಾಡಿ.
- ನಿಗದಿತ ದಿನಾಂಕದಂದು ಚಾಲನಾ ಪರೀಕ್ಷೆಗೆ ಹಾಜರಾಗಿ.
- ಪರೀಕ್ಷೆಯಲ್ಲಿ ಅರ್ಹತೆ ಪಡೆದ ನಂತರ ಡ್ರೈವಿಂಗ್ ಲೈಸೆನ್ಸ್ ನೀಡಲಾಗುತ್ತದೆ.
ಹೊಸ ಡ್ರೈವಿಂಗ್ ಲೈಸೆನ್ಸ್ಗೆ ಸಂಬಂಧಿಸಿದ ಶುಲ್ಕ ಮತ್ತು ಪ್ರಕ್ರಿಯೆಯಲ್ಲಿ ರಾಜ್ಯ ಅಥವಾ ಸೇವೆಯ ಪ್ರಕಾರ ವ್ಯತ್ಯಾಸವಿರುತ್ತದೆ. ಆದ್ದರಿಂದ ಅರ್ಜಿ ಸಲ್ಲಿಸುವಾಗ ಅಧಿಕೃತ ಸಾರಿಗೆ ಇಲಾಖೆಯ Sarathi ಪೋರ್ಟಲ್ನಲ್ಲಿ ನೀಡಿರುವ ಪ್ರಸ್ತುತ ಸೂಚನೆಗಳನ್ನು ಪರಿಶೀಲಿಸಿದ ನಂತರ ಅರ್ಜಿ ಸಲ್ಲಿಸಿ.
DL Mobile Number Update ಮಾಡುವಾಗ ಗಮನಿಸಿ
ಮೊಬೈಲ್ ನಂಬರ್ ಅಪ್ಡೇಟ್ ಮಾಡುವಾಗ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
- ಅಧಿಕೃತ Parivahan ಅಥವಾ Sarathi ವೆಬ್ಸೈಟ್ ಮಾತ್ರ ಬಳಸಿ.
- ಅಪರಿಚಿತ ಲಿಂಕ್ಗಳ ಮೂಲಕ ಡಿಎಲ್ ಸೇವೆ ಪಡೆಯಬೇಡಿ.
- ಪ್ರಸ್ತುತ ಬಳಕೆಯಲ್ಲಿರುವ ಮೊಬೈಲ್ ನಂಬರ್ ನೀಡಿ.
- OTP ಅನ್ನು ಯಾರಿಗೂ ನೀಡಬೇಡಿ.
- ಡಿಎಲ್ ಸಂಖ್ಯೆ ಮತ್ತು ಇತರ ವೈಯಕ್ತಿಕ ವಿವರಗಳನ್ನು ಎಚ್ಚರಿಕೆಯಿಂದ ನಮೂದಿಸಿ.
- ಅಪ್ಡೇಟ್ ಯಶಸ್ವಿಯಾಗಿದೆಯೇ ಎಂಬುದನ್ನು ಪರಿಶೀಲಿಸಿ.
- ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುಳ್ಳು ಸುದ್ದಿಗಳನ್ನು ಅಧಿಕೃತ ಮೂಲದಲ್ಲಿ ಪರಿಶೀಲಿಸಿ.
ಪ್ರಮುಖ ಮಾಹಿತಿ
| ವಿಷಯ | ವಿವರ |
| ಸೇವೆ | DL Mobile Number Update |
| ಪೋರ್ಟಲ್ | Parivahan / Sarathi |
| ಯಾರಿಗೆ | ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರಿಗೆ |
| ವಿಧಾನ | ಆನ್ಲೈನ್ |
| RTO ಭೇಟಿ | ಸಾಮಾನ್ಯವಾಗಿ ಅಗತ್ಯವಿಲ್ಲ |
| ಬೇಕಾಗುವ ಮಾಹಿತಿ | ಡಿಎಲ್ ಸಂಖ್ಯೆ, ಜನ್ಮ ದಿನಾಂಕ, ಮೊಬೈಲ್ ನಂಬರ್ |
| ಪರಿಶೀಲನೆ | OTP / ಪೋರ್ಟಲ್ ಸೂಚಿಸುವ ವಿಧಾನ |
| ಉದ್ದೇಶ | ದಾಖಲೆಗಳಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಮೊಬೈಲ್ ನಂಬರ್ ಇಡುವುದು |
ಅಧಿಕೃತ ವೆಬ್ಸೈಟ್
ಪ್ರತಿಯೊಬ್ಬರೂ ಡ್ರೈವಿಂಗ್ ಲೈಸೆನ್ಸ್ಗೆ ಸಂಬಂಧಿಸಿದ ಮೊಬೈಲ್ ನಂಬರ್ ಅಪ್ಡೇಟ್, ಹೊಸ ಡ್ರೈವಿಂಗ್ ಲೈಸೆನ್ಸ್ ಅರ್ಜಿ ಮತ್ತು ಇತರ ಸಾರಿಗೆ ಸೇವೆಗಳಿಗಾಗಿ ಅಧಿಕೃತ Parivahan/Sarathi ಪೋರ್ಟಲ್ ಬಳಸುವುದು ಉತ್ತಮ. ಅಧಿಕೃತ ಪೋರ್ಟಲ್ನಲ್ಲಿ ಮೊಬೈಲ್ ನಂಬರ್ ಅಪ್ಡೇಟ್ ಮಾಡುವ ಸೌಲಭ್ಯವನ್ನು ಸಾರಿಗೆ ಇಲಾಖೆ ಎಲ್ಲರಿಗೂ ಸುಲಭವಾಗುವಂತೆ ಸೇವೆಯನ್ನು ಜಾರಿ ಮಾಡಿದೆ.
ತೀರ್ಮಾನ
ಪ್ರತಿಯೊಬ್ಬರೂ ಡಿಎಲ್ ಮೊಬೈಲ್ ನಂಬರ್ ಅಪ್ಡೇಟ್ ಮಾಡಿಸುವವರು ಗಮನಿಸಬೇಕಾಗಿದ್ದು ಸಾರಿಗೆ ಇಲಾಖೆಯು ಯಾವುದೇ ನಿರ್ದಿಷ್ಟವಾದ ಗಡುವನ್ನು ಡಿಎಲ್ ಮೊಬೈಲ್ ನಂಬರ್ ಅಪ್ಡೇಟ್ ಮಾಡಲು ಇನ್ನು ಖಚಿತ ಪಡಿಸಿಲ್ಲ,ಸೋಶಿಯಲ್ ಮೀಡಿಯಾದಲ್ಲಿ ಬರುವ ಯಾವುದೇ ಮಾಹಿತಿಯನ್ನು ಅಧಿಕೃತ ಮಾಹಿತಿಯಿಂದ ತಿಳಿದುಕೊಳ್ಳುವ ಮೊದಲು ನಂಬಬೇಡಿ ಅರ್ಜಿ ಸಲ್ಲಿಸುವಾಗ ಯಾವಾಗಲೂ ಅಧಿಕೃತ ಮಾಹಿತಿ ಹಾಗೆ ಅಧಿಕೃತ ವೆಬ್ಸೈಟ್ ಬಳಸಿ.ಈ ಡಿಎಲ್ ಮೊಬೈಲ್ ನಂಬರ್ ಅಪ್ಡೇಟ್ ಕೇವಲ ಹಳೆಯ ಮೊಬೈಲ್ ನಂಬರ್ ಚಾಲ್ತಿಯಲ್ಲಿ ಇಲ್ಲದೆ ಇರುವವರು ಮಾತ್ರ ಮಾಡಿಸಿದರೆ ಸಾಕು ಈಗಾಗಲೇ ಚಾಲ್ತಿಯಲ್ಲಿರುವ ಮೊಬೈಲ್ ನಂಬರ್ ಡಿಎಲ್ ಗೆ ಲಿಂಕ್ ಆಗಿದ್ದರೆ ಯಾವುದೇ ಆತಂಕ ಬೇಡ ಒಮ್ಮೆ ದಾಖಲೆಗಳನ್ನ ಪರಿಶೀಲನೆ ಮಾಡಿದರೆ ಸಾಕು,ಯಾವುದೇ ಮದ್ಯವರ್ತಿಗೆ ಹಣ ನೀಡಬೇಡಿ,ಮಾಹಿತಿ ಇಷ್ಟವಾದರೆ ಬೇರೆಯವರಿಗೂ ತಿಳಿಸಿ.