ವಿದ್ಯಾರ್ಥಿಗಳಿಗೆ 2026ರಲ್ಲಿ ಅತ್ಯುತ್ತಮ ಎಲೆಕ್ಟ್ರಿಕ್ ಸೈಕಲ್‌ಗಳು

ಎಲೆಕ್ಟ್ರಿಕ್ ಸೈಕಲ್‌ Best electric cycle for students in India featuring five electric cycle models from different brands.

ಶಾಲೆಗೆ ಹಾಗೆ ಕಾಲೇಜಿಗೆ ಊರಿಂದ ನಡೆದುಕೊಂಡು ಹೋಗುವ ಬದಲು ಒಂದು ಉತ್ತಮ ಗುಣ ಮಟ್ಟದ ಸೈಕಲ್ ಖರೀದಿಸುವುದು ಒಳ್ಳೆಯದು, ಹಾಗೆಯೇ ಪ್ರತಿದಿನ ಟ್ಯೂಷನ್ ಹಾಗೆ ಹತ್ತಿರದ ಪ್ರದೇಶಗಳಿಗೆ ಹೋಗಲು ಒಂದು ಒಳ್ಳೆಯ ಎಲೆಕ್ಟ್ರಿಕ್ ಸೈಕಲ್ ಹುಡುಕುತ್ತಿದ್ದರೆ ಈ ಮಾಹಿತಿ ನಿಮಗಾಗಿ. ಸೈಕಲ್ ಖರೀದಿಸುವ ಮೊದಲು ಯಾವ ಬ್ರಾಂಡ್ ಸೈಕಲ್ ಖರೀದಿಸಿದರೆ ಒಳ್ಳೆಯದು,ಕಡಿಮೆ ಬೆಲೆ ಅಲ್ಲಿ ಉತ್ತಮ ಗುಣಮಟ್ಟದ ಸೈಕಲ್ ಯಾವುದೇ ಹಾಗೆ ಹೇಗೆ ಖರೀದಿ ಮಾಡಬೇಕು ಎಂದು ಮೊದಲೇ ತಿಳಿಯುವುದು ಮುಖ್ಯ.ನಿಮ್ಮೆಯಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿ ಸಿಗುತ್ತದೆ, ಯಾವ ಬ್ರಾಂಡ್,ಯಾವ ಮೊತ್ತದ ಸೈಕಲ್ ನಿಮಗೆ ಅನುಕೂಲ ಎಂಬುದನ್ನು ಇಲ್ಲಿ ತಿಳಿಯ ಬಹುದಾಗಿದೆ.

ಮೊದಲು ಬಳಕೆಯಲ್ಲಿದ್ದ ಸಾಮಾನ್ಯ ಸೈಕಲ್ ಗೆ ಹೋಲಿಸಿದರೆ ಇತ್ತೀಚಿನ ತಂತ್ರಜ್ಞಾನ ಅಳವಡಿಕೆ ಇಂದ ಹೊಸದಾಗಿ ಬ್ಯಾಟರಿ ಸಾಮರ್ಥ್ಯದಿಂದ ಚಲಿಸುವ ಎಲೆಕ್ಟ್ರಿಕ್ ಸೈಕಲ್ ಬಳಕೆಗೆ ತರಲಾಗಿದೆ, ಖರೀದಿ ಮಾಡುವ ಮೊದಲು ವಿದ್ಯಾರ್ಥಿಗಳು ಗಮನಿಸ ಬೇಕಾಗಿದ್ದು ಏನು ಅಂದರೆ ಪ್ರತಿಯೊಂದು ಬ್ರಾಂಡ್ ಸೈಕಲ್ ಒಂದೇ ಬೆಲೆ,ಗುಣಮಟ್ಟ,ಬಣ್ಣ ಇರುವುದಿಲ್ಲ ಕಂಪೆನಿಗೆ ತಕ್ಕಂತೆ ಬದಾಗುತ್ತದೆ.ನೀವು ಯಾವ ಸೈಕಲ್ ಖರೀದಿ ಮಾಡಿದರೆ ನಿಮ್ಮ ಅನುಕಲಕ್ಕೆ ತಕ್ಕ ಹಾಗೆ ಎಂಬುದನ್ನು ತಿಳಿಯಬಹುದು.

ಎಲೆಕ್ಟ್ರಿಕ್ ಸೈಕಲ್ ಖರೀದಿಸುವ ಮೊದಲು ತಿಳಿಯಬೇಕಾದ 2 ಪ್ರಮುಖ ವಿಷಯಗಳು

1. ನಿಮ್ಮ ಬಜೆಟ್ ಮತ್ತು ಪ್ರಯಾಣದ ದೂರವನ್ನು ನಿರ್ಧರಿಸಿ

ಸೈಕಲ್ ಖರೀದಿಸುವ ಮೊದಲು ನೀವು ಎಷ್ಟು ಹಣ ಖರ್ಚು ಮಾಡಲು ಬಯಸುತ್ತೀರಾ ಹಾಗೆ ನಿಮ್ಮ ಬಜೆಟ್ ಅಲ್ಲಿ ಸೈಕಲ್ ಲಭ್ಯವಿದ್ಯಾ ಎಂಬುದನ್ನು ತಿಳಿದುಕೊಳ್ಳಿ,ನಂತರ ನೀವು ಸೈಕಲ್ ಖರೀದಿಸಿದ ಮೇಲೆ ಪ್ರತಿನಿತ್ಯ ಚಲಿಸುವ ದೂರ ಎಷ್ಟು ಎಂಬುದನ್ನು ಲೆಕ್ಕ ಹಾಕಿ ನೀವು ಖರೀದಿಸುವ ಸೈಕಲ್ ನಿಮಗೆ ಬೇಕಾಗುವಷ್ಟು ಮೈಲೇಜ್ ಕೊಡಬಹುದ ಎಂಬುದನ್ನು ತಿಳಿದ್ಕೊಳ್ಳಿ.

ಉದಾಹರಣೆಗೆ, ನಿಮ್ಮ ಶಾಲೆ ಅಥವಾ ಕಾಲೇಜು ಮನೆಗೆ ಹತ್ತಿರದಲ್ಲಿದ್ದರೆ ಕಡಿಮೆ ಬೆಲೆಯ ಸೈಕಲ್ ಸಾಕಾಗುತ್ತದೆ ಆದರೆ ಹೆಚ್ಚು ದೂರದ ಪ್ರಯಾಣವಿದ್ದರೆ ಹೆಚ್ಚು ಬ್ಯಾಟರಿ ಸಾಮರ್ಥ್ಯ ಹೊಂದಿರುವಂತ ಕಂಪನಿ ಸೈಕಲ್ ಬೇಕಾಗಬಹುದು.

2. ಗ್ಯಾರಂಟಿ, ಸರ್ವಿಸ್ ಮತ್ತು ಸುರಕ್ಷತೆಯನ್ನು ಪರಿಶೀಲಿಸಿ

ಸೈಕಲ್ ಖರೀದಿ ಮಾಡುವಾಗ ಕೇವಲ ಬೆಲೆ ಹಾಗೆ ಬ್ಯಾಟರಿ ಸಾಮರ್ಥ್ಯ ನೋಡಿದರೆ ಸಾಕಾಗುವುದಿಲ್ಲ,ಕಂಪನಿಯಿಂದ ಸೈಕಲ್ ಗೆ ಸಿಗುವ ಗ್ಯಾರಂಟಿ ಹಾಗೆ ಸರಿಯಾದ ಸಮಯಕ್ಕೆ ಸರ್ವಿಸ್ ಹಾಗೆ ಸುರಕ್ಷತೆಯ ನಿಯಮವನ್ನು ಸರಿಯಾಗಿ ವಿಚಾರಿಸಿ ತಿಳಿದುಕೊಳ್ಳುವುದು ಒಳ್ಳೆಯದು.

ಸಾಧ್ಯವಾದರೆ ಸೈಕಲ್ ಖರೀದಿಸುವ ಮೊದಲು ಒಮ್ಮೆ ಚಲಾಯಿಸಿ ನಿಮ್ಮ ಪ್ರತಿದಿನದ ಓಡಾಟಕ್ಕೆ ಸರಿ ಆಗುತ್ತದೆ ಎಂದು ಖಚಿತ ಪಡಿಸಿಕೊಂಡ ನಂತರವೇ ಖರೀದಿಸಿ.

ವಿದ್ಯಾರ್ಥಿಗಳು ಪರಿಗಣಿಸಬಹುದಾದ 5 ಎಲೆಕ್ಟ್ರಿಕ್ ಸೈಕಲ್ ಮಾದರಿಗಳು

1. Hero Lectro Y3

ಕಡಿಮೆ ಬಜೆಟ್ ಅಲ್ಲಿ ಸೈಕಲ್ ಖರೀದಿ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ Hero Lectro Y3 ಒಂದು ಒಳ್ಳೆಯ ಆಯ್ಕೆ ಆಗಬಹುದು.

ಪ್ರಮುಖ ಮಾಹಿತಿ:

  • ಕಂಪನಿಯ ಆರಂಭಿಕ ಸೈಕಲ್ ಎಕ್ಸ್-ಶೋರೂಮ್ ಬೆಲೆ ಸರಿಸುಮಾರು: ₹25,999
  • ಕಂಪನಿ ತಿಳಿಸಿರುವ ಪ್ರಯಾಣದ ದೂರ: ಒಂದೇ ಚಾರ್ಜ್‌ನಲ್ಲಿ 40 ಕಿ.ಮೀ.ವರೆಗೆ
  • ಲೈಟ್ ಹಾಗೆ ಹಾರ್ನ್ ಸೌಲಭ್ಯವಿದೆ,
  • ಕಂಪನಿ ತಿಳಿಸಿರುವಂತೆ ಗರಿಷ್ಠ ವೇಗ ಗಂಟೆಗೆ 25 ಕಿ ಮೀ,
  • ಬ್ಯಾಟರಿ (Battery) 7.8Ah, 36V ಲಿಥಿಯಂ-ಐಯಾನ್ (IP67 ವಾಟರ್ ಪ್ರೂಫ್ ಬ್ಯಾಟರಿ)
  • ಮೋಟರ್ (Motor) 250W ಹೈ ಟಾರ್ಕ್ BLDC ಹಬ್ ಮೋಟರ್

ಈ ಕಂಪನಿಯ ಸೈಕಲ್ ಆಯ್ಕೆ ಮಾಡುವ ಮೊದಲು ಬ್ಯಾಟರಿ ಸಾಮರ್ಥ್ಯ ಹಾಗೆ ವೇಗದ ಮಿತಿ ನಿಮ್ಮ ಪ್ರಯಾಣಕ್ಕೆ ಸರಿ ಆಗುತ್ತದೆಯೇ ಎಂದು ಪರಿಶೀಲಿಸಿ.ಹಾಗೆ ನಿಮ್ಮ ರಸ್ತೆ ಗೆ ಈ ಮಾದರಿಯ ಸೈಕಲ್ ಸರಿ ಹೋದುವುದೇ ಎನ್ನುವುದನ್ನು ತಿಳಿದುಕೊಳ್ಳಿ.

ಅಧಿಕೃತ ವೆಬ್‌ಸೈಟ್: https://herolectro.com/

2. Hero Lectro Y5

ವಿದ್ಯಾರ್ಥಿಗಳಲ್ಲಿ ಸ್ವಲ್ಪ ಹೆಚ್ಚಿನ ಹಣವನ್ನು ಹಾಕಲು ಬಯಸುವವರು ಆಗೆ ಹೆಚ್ಚು ಪ್ರಮಾಣದ ದೂರದ ಚಾಲನೆಯನ್ನು ಬಯಸುವವರು Hero Lectro Y5 ಕಂಪನಿಯ ಸೈಕಲ್ ಪರಿಗಣಿಸಬಹುದು.

ಪ್ರಮುಖ ಮಾಹಿತಿ:

  • ಕಂಪನಿಯ ಬೆಲೆ : ₹30,999
  • ಪ್ರಯಾಣದ ದೂರ: ಒಂದೇ ಚಾರ್ಜ್‌ನಲ್ಲಿ 60 ಕಿ.ಮೀ.ವರೆಗೆ ಚಲಿಸಬಹುದು
  • ಬ್ಯಾಟರಿ ಲೆವೆಲ್ ಮತ್ತು ರೈಡಿಂಗ್ ಮೋಡ್ ತೋರಿಸುವ LED/LCD ಡಿಸ್ಪ್ಲೇ ಸೌಲಭ್ಯವಿದೆ
  • ಚಾರ್ಜಿಂಗ್ ಸಮಯ ಪೂರ್ತಿ ಚಾರ್ಜ್ ಆಗಲು 5 ರಿಂದ 6 ಗಂಟೆಗಳು ಬೇಕು

ಅಧಿಕೃತ ವೆಬ್‌ಸೈಟ್: https://herolectro.com/

3. EMotorad X1

EMotorad X1 ಕೂಡ ವಿದ್ಯಾರ್ಥಿಗಳು ಖರೀದಿಸಲು ಪರಿಗಣಿಸಬಹುದಾದ ಉತ್ತಮ ಎಲೆಕ್ಟ್ರಿಕ್ ಸೈಕಲ್.

ಪ್ರಮುಖ ಮಾಹಿತಿ:

  • ಕಂಪನಿ ಬೆಲೆ : ₹27,999
  • ಬ್ಯಾಟರಿ ಸಾಮರ್ಥ್ಯ: 7.65 Ah
  • ಕಂಪನಿ ತಿಳಿಸಿರುವ ಹಾಗೆ ಸರಿ ಸುಮಾರು 35 ರಿಂದ 45 ಕಿ ಮೀ ಚಲಿಸಬಹುದು
  • 3 ರಿಂದ 4 ಗಂಟೆ ಬ್ಯಾಟರಿ ಚಾರ್ಜಿಂಗ್ ಸಮಯ

ಅಧಿಕೃತ ವೆಬ್‌ಸೈಟ್: https://www.emotorad.com/

4. EMotorad ST-X

ವಿದ್ಯಾರ್ಥಿಗಳು ಮತ್ತೊಂದು ಒಳ್ಳೆಯ ಆಯ್ಕೆಯಾಗಿ EMotorad ST-X ಮಾದರಿಯನ್ನು ಪರಿಶೀಲಿಸಬಹುದು.

ಪ್ರಮುಖ ಮಾಹಿತಿ:

  • ಕಂಪನಿ ಬೆಲೆ : ₹34,999
  • ಬ್ಯಾಟರಿ ಸಾಮರ್ಥ್ಯ: 7.65 Ah
  • ಪ್ರಯಾಣದ ದೂರ: 35 ರಿಂದ 45 ಕಿ ಮೀ ಚಲಿಸಬಹುದು
  • ಚಾರ್ಜಿಂಗ್ ಸಮಯ: ಸುಮಾರು 3–4 ಗಂಟೆಗಳು ಎಂದು ಕಂಪನಿ ತಿಳಿಸಿದೆ.

ಖರೀದಿಸುವ ಮೊದಲು ನೀವು ಕೊಡುವ ಬೆಲೆ ಹಾಗೆ ನಿಮ್ಮ ಅಗತ್ಯಗಳನ್ನು ಪೂರೈಸುತ್ತದೆಯೇ ಎಂದು ಖಚಿತ ಪಡಿಸಿಕೊಂಡ ಮೇಲೆ ಬೇರೆ ಮಾದರಿಯ ಸೈಕಲ್ ಜೊತೆ ಹೊಂದಾಣಿಕೆ ಮಾಡಿ ನೋಡಿ.

ಅಧಿಕೃತ ವೆಬ್‌ಸೈಟ್: https://www.emotorad.com/

5. EMotorad T-Rex Air

ಸ್ವಲ್ಪ ಹೆಚ್ಚಿನ ಬಜೆಟ್ ಹೊಂದಿರುವ ವಿದ್ಯಾರ್ಥಿಗಳು EMotorad T-Rex Air ಮಾದರಿಯನ್ನೂ ಪರಿಗಣಿಸಬಹುದು.

ಪ್ರಮುಖ ಮಾಹಿತಿ:

  • ಬೆಲೆ: ₹37,499
  • ಬ್ಯಾಟರಿ ಸಾಮರ್ಥ್ಯ: 10.2 Ah
  • ಪ್ರಯಾಣಿಸುವ ದೂರ: ಒಂದೇ ಚಾರ್ಜ್‌ನಲ್ಲಿ 50 ಕಿ.ಮೀ.ವರೆಗೆ
  • ಕಂಪನಿ ತಿಳಿಸಿರುವ ಚಾರ್ಜಿಂಗ್ ಸಮಯ: ಸುಮಾರು 4–5 ಗಂಟೆಗಳು ಬೇಕಾಗುತ್ತದೆ

ಈ ಮಾದರಿಯ ಬೆಲೆ ಹೆಚ್ಚಿದ್ದರೂ ಕಂಪನಿ ನೀಡುವ ಸೇವೆ ಹಾಗೆ ನಿಮ್ಮ ಅಗತ್ಯಕ್ಕೆ ಸರಿ ಹೊಂದುವ ಹಾಗಿದ್ದರೆ ಈ ಮಾದರಿಯನ್ನು ಪರಿಗಣಿಸಬಹದು.

ಅಧಿಕೃತ ವೆಬ್‌ಸೈಟ್: https://www.emotorad.com/

ಗಮನಿಸಿ: ಮೇಲೆ ನೀಡಿರುವ ಮಾಹಿತಿ ಹಾಗೆ ಕಂಪನಿ ಬೆಲೆ,ಬಣ್ಣ ಹಾಗೆ ಸ್ಥಳಗಳ ಬಗ್ಗೆ ಇರುವ ಮಾಹಿತಿ ಕಂಪನಿಗೆ ಅನುಗುಣವಾಗಿ ಬದಲಾಗಬಹುದು ಖರೀದಿಸುವ ಮೊದಲು ಅಧಿಕೃತ ವೆಬ್ಸೈಟ್ ಹೇಗ್ ಸ್ಟೋರ್ ಗೆ ಬೇಟಿ ನೀಡಿ ಮಾಹಿತಿ ತಿಳಿದುಕೊಂಡ ನಂತರ ಖರೀದಿಸಿ.

ಎಲೆಕ್ಟ್ರಿಕ್ ಸೈಕಲ್ ಅನ್ನು ಹೇಗೆ ಖರೀದಿಸಬೇಕು?

ಎಲೆಕ್ಟ್ರಿಕ್ ಸೈಕಲ್ ಖರೀದಿಸಲು ಈ ಸರಳ ವಿಧಾನ ಅನುಸರಿಸಬಹುದು.

ಹಂತ 1: ನೀವು ಖರೀದಿಸಲು ಬಯಸುವ ಕಂಪನಿಯ ಅಧಿಕೃತ ವೆಬ್ಸೈಟ್ ಓಪನ್ ಮಾಡಿ.

ಹಂತ 2: ಎಲೆಕ್ಟ್ರಿಕ್ ಸೈಕಲ್ ವಿಭಾಗಕ್ಕೆ ಹೋಗಿ, ನಿಮ್ಮ ಬಜೆಟ್‌ಗೆ ಹೊಂದುವ ಮಾದರಿಗಳನ್ನು ನೋಡಿ .

ಹಂತ 3: ಬೆಲೆ, ಬ್ಯಾಟರಿ ಸಾಮರ್ಥ್ಯ, ಪ್ರಯಾಣದ ದೂರ, ಚಾರ್ಜಿಂಗ್ ಸಮಯ ಮತ್ತು ಖಾತರಿ ವಿವರಗಳನ್ನು ಒಂದಕೊಂಡು ಹೊಂದಾಣಿಕೆ ಮಾಡಿ.

ಹಂತ 4: ನೀವು ಖರೀದಿ ಮಾಡಲು ಬಯಸುವ ಪ್ರದೇಶಕ್ಕೆ ಕಂಪನಿಯಾ ಡೆಲಿವೆರಿ ಸೌಲಭ್ಯ ಇದೆಯಾ ಎಂದು ತಿಳಿದುಕೊಳ್ಳಿ.

ಹಂತ 5: ಸಾಧ್ಯವಾದರೆ ಹತ್ತಿರದ ಸ್ಟೋರ್ ಗೆ ಬೇಟಿ ನೀಡಿ ಒಂದು ಸಲ ಚಲಾಯಿಸಿ ನಿಮಗೆ ಸರಿಯಾಗುತ್ತದೆಯ ನೋಡಿ.

ಹಂತ 6: ಎಲ್ಲಾ ಸರಿಯಾಗಿ ಇದ್ದರೆ ಮಾತ್ರ ಹಣ ಪಾವತಿಸಿ ಹಾಗೆಯೇ ಹಣ ಪಾವತಿಸುವ ಮೊದಲು ಅಧಿಕೃತ ವೆಬ್ಸೈಟ್ ಎಂದು ಖಚಿತ ಮಾಡಿಕೊಳ್ಳಿ ಯಾವುದೇ ಅನ್ಯವ್ಯಕ್ತಿಗೆ ಹಣ ನೀಡಬೇಡಿ.ವಂಚನೆಗಳಿಂದ ದೂರವಿರಿ.

ಯಾವ ಬ್ರ್ಯಾಂಡ್ ಆಯ್ಕೆ ಮಾಡಬೇಕು?

ವಿದ್ಯಾರ್ಥಿಗಳ ಬಜೆಟ್ ಹಾಗೆ ಅನುಕಲಕ್ಕೆ ತಕ್ಕ ಹಾಗೆ ಯಾವ ಬ್ರಾಂಡ್ ಒಳ್ಳೆಯದು ಎಂದು ನಿರ್ಧಾರವಾಗುತ್ತದೆ.

  • ಕಡಿಮೆ ಬಜೆಟ್ ಪರಿಶೀಲನೆಗೆ: Hero Lectro Y3 ಅಥವಾ EMotorad X1 ಪರಿಗಣಿಸಬಹುದು.
  • ಹೆಚ್ಚಿನ ಪ್ರಯಾಣದ ದೂರ ಬೇಕಾದರೆ: Hero Lectro Y5 ಮತ್ತು EMotorad T-Rex Air ಮಾದರಿಗಳನ್ನು ನೋಡಿ .
  • ಬೆಲೆ ಮತ್ತು ಸೌಲಭ್ಯಗಳ ಹೋಲಿಕೆಗೆ: EMotorad ST-X ಸೇರಿದಂತೆ ಹಲವು ಮಾದರಿಗಳ ವಿವರಗಳನ್ನು ಪರಿಗಣಿಸಬಹುದು.

ಕೊನೆಯ ಮಾತು

ವಿದ್ಯಾರ್ಥಿಗಳು ಎಲೆಕ್ಟಿಕ್ ಸೈಕಲ್ ಖರೀದಿಸುವಾಗ ಕೇವಲ ಕಂಪನಿ ಹೆಸರನ್ನ ನೋಡಿ ಖರೀದಿಸಬೇಡಿ, ಸೈಕಲ್ ಬೆಲೆ ಸೇವೆ ಹಾಗೆ ನಿಮ್ಮ ಪ್ರಯಾಣಕ್ಕೆ ಸೂಕ್ತವಾಗಿದೆಯ ಎಂದು ಖಚಿತ ಪಡಿಸಿಕೊಂಡ ನಂತರವೇ ಅಧಿಕೃತ ಮೂಲಗಳಿಂದ ಖರೀದಿ ಮಾಡಿ ಮೇಲೆ ನೀಡಿರುವ ಕಂಪನಿ ಗಳಿಗೆ ಮಾತ್ರ ಸೀಮಿತವಾಗ ಬೇಡಿ ನಿಮ್ಮ ಅನುಕೂಲಕ್ಕೆ ತಕ್ಕ ಹಾಗೆ ಯಾವ ಮಾದರಿಯ ಸೈಕಲ್ ಒಳ್ಳೆಯದನ್ನು ನೀವೇ ನಿರ್ಧರಿಸಿ ಖರೀದಿಸಿ. ವನ್ ರೀತಿಯ ಮಾದರಿ ಸೈಕಲ್ ಎಲ್ಲರಿಗೂ ಇಷ್ಟವಾಗುವುದಿಲ್ಲ ಖರೀದಿಸುವ ಮೊದಲು ನಿಮ್ಮ ಹತ್ತಿರದ ಸ್ಟೋರ್ ಗೆ ಅಥವಾ ಅಧಿಕೃತ ವೆಬ್ಸೈಟ್ ಅಲ್ಲಿ ಪ್ರಸ್ತುತ ಬೆಲೆ ಹಾಗೆ ನಿಯಮಗಳ ಬಗ್ಗೆ ತಿಳಿದುಕೊಂಡು ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳಿ.

ಅಧಿಕೃತ ವೆಬ್‌ಸೈಟ್‌ಗಳು

ಈ ಲೇಖನವು ಕೇವಲ ಮಾಹಿತಿ ಉದ್ದೇಶಕ್ಕೆ ಸಿದ್ಧಪಡಿಸಲಾಗಿದ್ದು ಖಚಿತ ಮಾಹಿತಿ ಹಾಗೆ ಪ್ರಸ್ತುತ ಬೆಲೆಗಾಗಿ ಅಧಿಕೃತ ವೆಬ್ಸೈಟ್ ಪರಿಶೀಲಿಸಿ.

Leave a Comment