ಅನ್ನ ಸೇವೆ ಆ್ಯಪ್: ಮೊಬೈಲ್‌ನಲ್ಲೇ ರೇಷನ್ ಕಾರ್ಡ್ e-KYC ಮಾಡಿಕೊಳ್ಳುವ ಸುಲಭ ವಿಧಾನ

ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಜನರು ರೇಷನ್ ಕಾರ್ಡ್ e-KYC ಮಾಡಿಸಲು ನ್ಯಾಯ ಬೆಲೆ ಅಂಗಡಿಗೆ ಅಲೆಯುವುದನ್ನು ತಪ್ಪಿಸಿ ಕರ್ನಾಟಕದ ರೇಷನ್ ಕಾರ್ಡ್ ಫಲಾನುಭವಿಗಳಿಗೆ e-KYC ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಇನ್ನಷ್ಟು ಸುಲಭಗೊಳಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ‘ಅನ್ನ ಸೇವೆ (Anna Seve)’ ಎಂಬ ಹೊಸ ಮೊಬೈಲ್ ಆ್ಯಪ್ ಅಕ್ಟೋಬರ್ 1, 2026 ರಂದು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ . ಈ ಆ್ಯಪ್‌ನ ಸಹಾಯದಿಂದ ಅರ್ಹ ಫಲಾನುಭವಿಗಳು Aadhaar ಆಧಾರಿತ ಮುಖ ದೃಢೀಕರಣದ ಮೂಲಕ ಮೊಬೈಲ್‌ನಲ್ಲೇ e-KYC ಯನ್ನು ನ್ಯಾಯಬೆಲೆ ಅಂಗಡಿಗೆ ಹೋಗದೆ ಮನೆಯಲ್ಲೇ ಪೂರ್ಣಗೊಳಿಸಿಕೊಳ್ಳಬಹುದು. ಇದರಿಂದ e-KYCಗಾಗಿ ಪ್ರತಿಬಾರಿಯೂ ನ್ಯಾಯಬೆಲೆ ಅಂಗಡಿಗೆ ತೆರಳಿ ಸರತಿ ಸಾಲು ನಿಲ್ಲುವ ಅವಶ್ಯಕತೆ ಕಡಿಮೆಯಾಗಲಿದೆ. ಆದರೆ ನಿಮ್ಮ ರೇಷನ್ ಕಾರ್ಡ್‌ನ ಪ್ರತಿಯೊಬ್ಬ ಅರ್ಹ ಸದಸ್ಯರ e-KYC ಪೂರ್ಣಗೊಂಡಿದೆಯೇ ಎಂಬುದನ್ನು ಪರಿಶೀಲಿಸುವುದು ಮುಖ್ಯ.ಯಾಕೆಂದರೆ ಸರ್ಕಾರದ ನಿಯಮದ ಪ್ರಕಾರ ಮನೆಯ ಪ್ರತಿಯೊಬ್ಬ ಅರ್ಹ ವ್ಯಕ್ತಿಯ e-KYC ಮಾಡುವುದು ಕಡ್ಡಾಯ.ಅನ್ನ ಸೇವೆ ಅಪ್ಲಿಕೇಶನ್ ಮೂಲಕ ಸುಲಭವಾಗಿ ಪ್ರತಿಯೊಬ್ಬ ಅರ್ಹರು ರೇಷನ್ ಕಾರ್ಡ್ ದಾರರು e-KYC ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

ಅನ್ನ ಸೇವೆ ಆ್ಯಪ್: ಮೊಬೈಲ್‌ನಲ್ಲೇ ರೇಷನ್ ಕಾರ್ಡ್ e-KYC ಮಾಡಿಕೊಳ್ಳುವ ಸುಲಭ ವಿಧಾನ

ಅನ್ನ ಸೇವೆ ಆ್ಯಪ್ ಎಂದರೇನು?

Anna Seve ಕರ್ನಾಟಕ ರೇಷನ್ ಕಾರ್ಡ್ ಫಲಾನುಭವಿಗಳ e-KYC ಪರಿಶೀಲನೆಗಾಗಿ ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿರುವ ಮೊಬೈಲ್ ಅಪ್ಲಿಕೇಶನ್ ಆಗಿದೆ.ಈ ಅಪ್ಲಿಕೇಶನ್ನಲ್ಲಿ Aadhaar ಆಧಾರಿತ Face Authentication ಮೂಲಕ ಫಲಾನುಭವಿಯ ಗುರುತನ್ನು ಪರಿಶೀಲಿಸುವ ವ್ಯವಸ್ಥೆ ಇದೆ. ಇದರ ಉದ್ದೇಶ ರೇಷನ್ ಕಾರ್ಡ್ ಫಲಾನುಭವಿಗಳ ಮಾಹಿತಿಯನ್ನು ನವೀಕರಿಸಿ, e-KYC ಪ್ರಕ್ರಿಯೆಯನ್ನು ಸುಲಭವಾಗಿ ಪೂರ್ಣಗೊಳಿಸಲು ಅವಕಾಶ ನೀಡುವುದಾಗಿದೆ.ಜನರು ನ್ಯಾಯಬೆಲೆ ಅಂಗಡಿಯ ಮುಂದೆ ನಿಲ್ಲುವುದನ್ನು ತಪ್ಪಿಸುವ ಉದ್ದೇಶದಿಂದ ಈ ಅಪ್ಲಿಕೇಶನ್ ಮೂಲಕ ಮೊಬೈಲ್ ಹೊಂದಿರುವ ಅರ್ಹ ಫಲಾನುಭವಿಗಳು ತಮ್ಮ ಮನೆಯಲ್ಲೇ ಕುಳಿತುಕೊಂಡು ರೇಷನ್ e-KYC ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಅವಕಾಶ ನೀಡಲಾಗಿದೆ .

ಅನ್ನ ಸೇವೆ ಆ್ಯಪ್ ಯಾವಾಗ ಬಿಡುಗಡೆಯಾಗಿದೆ?

ಕರ್ನಾಟಕ ಆಹಾರ ಇಲಾಖೆಯು 2026ರ ಅಕ್ಟೋಬರ್ 1ರಂದು ‘ಅನ್ನ ಸೇವೆ’ ಮೊಬೈಲ್ ಆ್ಯಪ್‌ಗೆ ಚಾಲನೆ ನೀಡಲಾಗಿದೆ .

ಆರಂಭದಲ್ಲಿ ಈ ಸೌಲಭ್ಯವನ್ನು ಪ್ರಾಯೋಗಿಕವಾಗಿ ಕೆಲವು ಜಿಲ್ಲೆಗಳಲ್ಲಿಮಾತ್ರ ಜಾರಿಗೆ ತರಲಾಗಿದ್ದು, ನಂತರ ಹಂತ ಹಂತವಾಗಿ ರಾಜ್ಯದ ಇತರ ಜಿಲ್ಲೆಗಳಿಗೂ ವಿಸ್ತರಿಸುವ ವ್ಯವಸ್ಥೆ ಮಾಡಲಾಗಿದೆ. ಅಂದರೆ ಮುಂದಿನ ದಿನಗಳಲ್ಲಿ ಜಿಲ್ಲೆಗಳ ವ್ಯಾಪ್ತಿ ಬದಲಾಗಬಹುದು. ಆದ್ದರಿಂದ e-KYC ಮಾಡುವ ಮೊದಲು ನಿಮ್ಮ ಜಿಲ್ಲೆಯಲ್ಲಿ ಅನ್ನ ಸೇವೆ ಅಪ್ಲಿಕೇಶನ್ ಸೌಲಭ್ಯ ಲಭ್ಯವಿದೆಯೇ ಎಂಬುದನ್ನು ಪರಿಶೀಲಿಸುವುದು ಉತ್ತಮ.

ಪ್ರಸ್ತುತ ಲಭ್ಯತೆಯ ಮಾಹಿತಿ

ಇತ್ತೀಚಿನ ಮಾಹಿತಿಯ ಪ್ರಕಾರ ಸರ್ಕಾರ , ಅನ್ನ ಸೇವೆ ಆ್ಯಪ್‌ನ ಮೊಬೈಲ್ e-KYC ಸೌಲಭ್ಯವನ್ನು ಮೊದಲ ಹಂತದಲ್ಲಿ ಈ 8 ಜಿಲ್ಲೆಗಳಲ್ಲಿ ಮಾತ್ರ ಪ್ರಾರಂಭಿಸಲಾಗಿದ್ದು ನಂತರ ಅಪ್ಲಿಕೇಶನ್ ಸರಿಯಾಗಿ ಕಾರ್ಯ ನಿರ್ವಹಿಸಿ ಯಶಸ್ವಿಯಾದ ಮೇಲೆ ಅಕ್ಟೋಬರ್ 10, 2026ರ ನಂತರ ರಾಜ್ಯದ ಉಳಿದ ಎಲ್ಲಾ ಜಿಲ್ಲೆಗಳಿಗೂ ಈ ಮೊಬೈಲ್ ಆ್ಯಪ್ ಸೇವೆಯನ್ನು ವಿಸ್ತರಿಸಲು ಇಲಾಖೆ ನಿರ್ಧಾರ ಮಾಡಿದೆ.ಸದ್ಯಕ್ಕೆ ಈ ಕೆಳಗೆ ಇರುವ ಜಿಲ್ಲೆಗಳಲ್ಲಿ ಸೌಲಭ್ಯ ಜಾರಿಯಲ್ಲಿದೆ.

  • ಬೆಂಗಳೂರು ನಗರ
  • ಬೆಂಗಳೂರು ಗ್ರಾಮಾಂತರ
  • ಉಡುಪಿ
  • ಹಾವೇರಿ
  • ಉತ್ತರ ಕನ್ನಡ
  • ಬಳ್ಳಾರಿ
  • ಬೀದರ್
  • ಕೊಪ್ಪಳ

ರೇಷನ್ ಕಾರ್ಡ್ e-KYC ಯಾಕೆ ಮಾಡಬೇಕು?

e-KYC ಎಂದರೆ ರೇಷನ್ ಕಾರ್ಡ್‌ನಲ್ಲಿ ನಮೂದಿಸಿರುವ ಫಲಾನುಭವಿಯ ಗುರುತನ್ನು ಅಧಿಕೃತವಾಗಿ ಪರಿಶೀಲಿಸುವ ಪ್ರಕ್ರಿಯೆ. ಐದು ವರ್ಷಗಳ ಕಾಲಾವಧಿಯಲ್ಲಿ ಮರಣ ಹೊಂದಿದವರು ಹಾಗೆ ಆರ್ಥಿಕ ಸ್ಥಿತಿ ಬದಲಾದವರನ್ನು ಪತ್ತೆ ಹಚ್ಚಲು ಹಾಗೂ ಕಾರ್ಡ್ ಫಲಾನುಭವಿಗಳ ಮಾಹಿತಿಯನ್ನು ಸರಿಯಾಗಿ ನಿರ್ವಹಿಸಲು ಮತ್ತು ಅರ್ಹ ಫಲಾನುಭವಿಗಳ ವಿವರಗಳನ್ನು ಮರು ಪರಿಶೀಲಿಸಲು e-KYC ಮಾಡಲಾಗುತ್ತದೆ.ಅಧಿಕೃತ ಮಾಹಿತಿಯ ಪ್ರಕಾರ, e-KYC ಅನ್ನು ಪ್ರತಿ ಐದು ವರ್ಷಗಳಿಗೊಮ್ಮೆ ಮಾಡಬೇಕಾಗುತ್ತದೆ. ಇದೇ ವೇಳೆ ರೇಷನ್ ಕಾರ್ಡ್‌ನಲ್ಲಿರುವ ಪ್ರತಿಯೊಬ್ಬ ಅರ್ಹ ಕುಟುಂಬ ಸದಸ್ಯರೂ ಪ್ರತಿಯೊಬ್ಬರೂ ರೇಷನ್ e-KYC ಪೂರ್ಣಗೊಳಿಸಬೇಕಾಗುತ್ತದೆ.ಹೀಗಾಗಿ ಮನೆಯ ಮುಖ್ಯಸ್ಥರು ಮಾತ್ರ e-KYC ಮಾಡಿಸಿಕೊಂಡು ಸುಮ್ಮನಾದರೆ ಸಾಕಾಗುವುದಿಲ್ಲ ಮನೆಯ ಅರ್ಹ ವ್ಯಕ್ತಿಗಳ e-KYC ಪೂರ್ಣಗೊಳಿಸಲೇಬೇಕು.

ಅನ್ನ ಸೇವೆ ಆ್ಯಪ್ ಮೂಲಕ e-KYC ಮಾಡಲು ಏನು ಬೇಕು?

ಮೊಬೈಲ್ ಮೂಲಕ e-KYC ಮಾಡುವ ಮೊದಲು ಕೆಲವು ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳುವುದು ಉತ್ತಮ.

  • ರೇಷನ್ ಕಾರ್ಡ್ ಸಂಖ್ಯೆ
  • ರೇಷನ್ ಕಾರ್ಡ್‌ಗೆ ಸಂಬಂಧಿಸಿದ ಮೊಬೈಲ್ ಸಂಖ್ಯೆ
  • Aadhaar ಆಧಾರಿತ Face Authentication ಮಾಡಲು ಸ್ಮಾರ್ಟ್‌ಫೋನ್
  • ಉತ್ತಮ ಇಂಟರ್‌ನೆಟ್ ಸಂಪರ್ಕ
  • ಮೊಬೈಲ್ ಕ್ಯಾಮೆರಾ
  • ಅಗತ್ಯವಿರುವ ಅಧಿಕೃತ ಸಹಾಯಕ ಆ್ಯಪ್‌ಗಳು

ಪ್ರಸ್ತುತ ಲಭ್ಯವಿರುವ ಮಾಹಿತಿಯ ಪ್ರಕಾರ, ಅನ್ನ ಸೇವೆ ಆ್ಯಪ್‌ನ Face Authentication ಪ್ರಕ್ರಿಯೆಗೆ CeG Face KYC App ಮತ್ತು AadhaarFaceRD App ಅಗತ್ಯವಿರಬಹುದು. ಆಹಾರ ಇಲಾಖೆ ಸೂಚಿಸಿರುವ ಅಧಿಕೃತ ಮೂಲಗಳಿಂದಲೇ ಈ ಆ್ಯಪ್‌ಗಳನ್ನು ಡೌನ್ಲೋಡ್ ಮಾಡಿಕೊಂಡು ಬಳಸುವುದು ಉತ್ತಮ.

ಅನ್ನ ಸೇವೆ ಆ್ಯಪ್ ಡೌನ್‌ಲೋಡ್ ಮಾಡುವುದು ಹೇಗೆ?

Anna Seve ಆ್ಯಪ್ Google Play Storeನಲ್ಲಿ ಕರ್ನಾಟಕ ಸರ್ಕಾರದ Director of e-Governance, Government of Karnataka ಹೆಸರಿನ developer ಅಡಿಯಲ್ಲಿ ಲಭ್ಯವಿದೆ. ಅಧಿಕೃತ Play Store ಮಾಹಿತಿಯಲ್ಲಿ ಇದನ್ನು ರೇಷನ್ ಕಾರ್ಡ್ e-KYC ಪರಿಶೀಲನೆಗಾಗಿ ಬಳಸುವ ಆ್ಯಪ್ ಎಂದು ವಿವರಿಸಲಾಗಿದೆ.ಆ್ಯಪ್ ಡೌನ್‌ಲೋಡ್ ಮಾಡುವಾಗ developer ಹೆಸರನ್ನು ಪರಿಶೀಲಿಸಿ. ಅಪರಿಚಿತ ವೆಬ್‌ಸೈಟ್‌ಗಳಿಂದ APK ಫೈಲ್ ಡೌನ್‌ಲೋಡ್ ಮಾಡಿಕೊಂಡು ಇನ್‌ಸ್ಟಾಲ್ ಮಾಡಬೇಡಿ.

ಮೊಬೈಲ್‌ನಲ್ಲಿ ರೇಷನ್ ಕಾರ್ಡ್ e-KYC ಮಾಡುವುದು ಹೇಗೆ?

ಅನ್ನ ಸೇವೆ ಆ್ಯಪ್‌ನಲ್ಲಿ e-KYC ಮಾಡುವಾಗ ಮೊಬೈಲ್‌ನಲ್ಲಿ ತೋರಿಸುವ ಅಧಿಕೃತ ಸೂಚನೆಗಳನ್ನು ಅನುಸರಿಸಬೇಕು. ಸಾಮಾನ್ಯವಾಗಿ ಪ್ರಕ್ರಿಯೆ ಈ ರೀತಿಯಲ್ಲಿರುತ್ತದೆ.

1. ಅಗತ್ಯ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಿ

ಮೊದಲು Anna Seve ಜೊತೆಗೆ ಅಗತ್ಯವಿರುವ Face KYC ಮತ್ತು Aadhaar Face Authentication ಆ್ಯಪ್‌ಗಳನ್ನು ಅಧಿಕೃತ ಮೂಲದಿಂದ ಇನ್‌ಸ್ಟಾಲ್ ಮಾಡಿಕೊಂಡು .

2. ಅನ್ನ ಸೇವೆ ಆ್ಯಪ್ ತೆರೆಯಿರಿ

ನಿಮ್ಮ ಮೊಬೈಲ್‌ನಲ್ಲಿ Anna Seve ಆ್ಯಪ್ ತೆರೆಯಿರಿ. ಕೇಳಲಾಗುವ ರೇಷನ್ ಕಾರ್ಡ್ ಮತ್ತು ಫಲಾನುಭವಿಗೆ ಸಂಬಂಧಿಸಿದ ವಿವರಗಳನ್ನು ನಮೂದಿಸಿ.

3. e-KYC ಪ್ರಕ್ರಿಯೆ ಆಯ್ಕೆ ಮಾಡಿ

ಆ್ಯಪ್‌ನಲ್ಲಿ ಲಭ್ಯವಿರುವ e-KYC ಅಥವಾ Face Authentication ಪ್ರಕ್ರಿಯೆಯನ್ನು ಮುಂದುವರಿಸಿ.

4. Face Authentication ಪೂರ್ಣಗೊಳಿಸಿ

ಮೊಬೈಲ್ ಕ್ಯಾಮೆರಾ ಮೂಲಕ ಫಲಾನುಭವಿಯ ಮುಖವನ್ನು ಪರಿಶೀಲಿಸುವ ಪ್ರಕ್ರಿಯೆ ನಡೆಯುತ್ತದೆ. ಈ ಸಂದರ್ಭದಲ್ಲಿ ಮುಖವನ್ನು ಕ್ಯಾಮೆರಾ ಮುಂದೆ ಸರಿಯಾಗಿ ಇರಿಸಿ. ಬೆಳಕು ಸರಿಯಾಗಿರುವಂತೆ ನೋಡಿಕೊಳ್ಳುವುದು ಸಹಾಯ ಮಾಡಬಹುದು.

5. ಪರಿಶೀಲನೆ ಪೂರ್ಣಗೊಳಿಸಿ

Face Authentication ಯಶಸ್ವಿಯಾದ ನಂತರ e-KYC ಪ್ರಕ್ರಿಯೆ ಪೂರ್ಣಗೊಂಡಿದೆಯೇ ಎಂಬುದನ್ನು ಆ್ಯಪ್‌ನಲ್ಲಿ ಪರಿಶೀಲಿಸಿ.

ಅನ್ನ ಸೇವೆ ಆ್ಯಪ್‌ನಲ್ಲಿ ಮುಂದೆ ಮಾಹಿತಿಗಳು ಹಾಗೆ e-KYC ಮಾಡುವ ವಿಧಾನ ಬದಲಾಗುತ್ತಿರಬಹುದು ಯಾವಾಗಲು ಅರ್ಜಿ ಸಲ್ಲಿಸಿವ ಮೊದಲು ಅಧಿಕೃತ ಮಾಹಿತಿಯನ್ನು ಪರಿಶೀಲಿಸಿ ನಂತರ ದಾಖಲೆಗಳ ವಿವರವನ್ನು ನೀಡಿ.ವಂಚನೆಗಳಿಂದ ದೂರವಿರಿ,ಅನಧಿಕೃತ ಅಪ್ಲಿಕೇಶನ್ ಅಲ್ಲಿ ನಿಮ್ಮ ಮಾಹಿತಿ ಹಂಚಿಕೊಳ್ಳಬೇಡಿ ಜಾಗೃತರಾಗಿರಿ.

ಪ್ರತಿಯೊಬ್ಬ ಕುಟುಂಬ ಸದಸ್ಯರೂ e-KYC ಮಾಡಬೇಕೇ?

ಹೌದು. ಕುಟುಂಬದಲ್ಲಿ ಇರುವ ಪ್ರತಿಯೊಬ್ಬ ಅರ್ಹವ್ಯಕ್ತಿ ಕೂಡ ರೇಷನ್ ಕಾರ್ಡ್ e-KYC ಮಾಡಿಕೊಳ್ಳಬೇಕು ಎನ್ನುವುದು ಸರ್ಕಾರದ ಅಧಿಕೃತ ಮಾಹಿತಿ ಸದ್ಯಕ್ಕೆ ಸರ್ಕಾರವು ಅಕ್ಟೋಬರ್ 20, 2026, e-KYC ಮಾಡಿಸಿಕೊಳ್ಳುವುದಕ್ಕೆ ಕೊನೆಯ ದಿನವೆಂದು ತಿಳಿಸಿದೆ,ಆದರೆ ಇದೇ ಕೊನೆಯ ದಿನವಾಗಿರುತ್ತದೆ ಎಂದಲ್ಲ ಸಮಯಕ್ಕೆ ತಕ್ಕ ಹಾಗೆ ಸಮಸ್ಯೆ ಉಂಟಾದರೆ ದಿನಾಂಕ ಬದಲಾಗಬಹುದು,ಸಮಸ್ಯೆಗಳು ಬರಬಾರದು ಎಂದು ಸರ್ಕಾರವು ಹೊಸದಾಗಿ ಅನ್ನ ಸೇವೆ ಎಂಬ ಹೊಸ ಅಪ್ಲಿಕೇಶನ್ ಬಿಡುಗಡೆ ಮಾಡಿದೆ.ಇದರ ಮೂಲಕ ಮನೆಯಲ್ಲೇ ಕುಳಿತುಕೊಂಡು e-KYC ಮಾಡಿಕೊಳ್ಳಬಹುದು.

ಮೊಬೈಲ್‌ನಲ್ಲಿ e-KYC ಆಗದಿದ್ದರೆ ಏನು ಮಾಡಬೇಕು?

ಕೆಲವು ಸಂದರ್ಭಗಳಲ್ಲಿ ಮೊಬೈಲ್ ಮೂಲಕ Face Authentication ಯಶಸ್ವಿಯಾಗದೇ ಇರಬಹುದು. ಇಂಟರ್‌ನೆಟ್ ಸಮಸ್ಯೆ, ಕ್ಯಾಮೆರಾ ಸಮಸ್ಯೆ, ತಾಂತ್ರಿಕ ದೋಷ ಅಥವಾ ದೃಢೀಕರಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಬಹುದು. ಅಂತಹ ಸಂದರ್ಭದಲ್ಲಿ e-KYC ಮಾಡಲು ನ್ಯಾಯಬೆಲೆ ಅಂಗಡಿಯಲ್ಲಿರುವ ಅಧಿಕೃತ ವ್ಯವಸ್ಥೆಯ ಮೂಲಕ ರೇಷನ್ ಕಾರ್ಡ್ e-KYC ಯನ್ನು ಅಲ್ಲಿ ಲಭ್ಯವಿರುವ ಅನುಮೋದಿತ ಬಯೋಮೆಟ್ರಿಕ್ ಅಥವಾ ಐರಿಸ್ ದೃಢೀಕರಣದ ಮೂಲಕ e-KYC ಪೂರ್ಣಗೊಳಿಸುವ ಅವಕಾಶವನ್ನು ನೀಡಲಾಗಿದೆ.

ಹೀಗಾಗಿ ಮೊಬೈಲ್‌ನಲ್ಲಿ e-KYC ಆಗಲಿಲ್ಲ ಎಂದರೆ ರೇಷನ್ ಕಾರ್ಡ್‌ಗೆ ಸಮಸ್ಯೆಯಾಗಿದೆ ಎಂದು ಗೊಂದಲಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ.

e-KYC ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ

e-KYC ಹೆಸರಿನಲ್ಲಿ ನಕಲಿ ಆ್ಯಪ್‌ಗಳು ಮತ್ತು ಲಿಂಕ್‌ಗಳ ಮೂಲಕ ವಂಚನೆ ನಡೆಯುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ಇರಬೇಕು.ಅಪರಿಚಿತ ವ್ಯಕ್ತಿಗಳು ಕಳುಹಿಸುವ APK ಫೈಲ್‌ಗಳನ್ನು ಇನ್‌ಸ್ಟಾಲ್ ಮಾಡಬೇಡಿ. WhatsApp ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಅನುಮಾನಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡಿ Aadhaar ಅಥವಾ ಬ್ಯಾಂಕ್ ಮಾಹಿತಿಯನ್ನು ನೀಡಬೇಡಿ .ಯಾರಾದರೂ e-KYC ಹೆಸರಿನಲ್ಲಿ ನಿಮ್ಮ OTP, UPI PIN, ATM PIN ಅಥವಾ ಬ್ಯಾಂಕ್ ಖಾತೆಯ ರಹಸ್ಯ ಮಾಹಿತಿಯನ್ನು ಕೇಳಿದರೆ ಕೊಡಬೇಡಿ .ಯಾವಾಗಲೂ e-KYCಗಾಗಿ ಅಧಿಕೃತ ಆಹಾರ ಇಲಾಖೆ ವೆಬ್‌ಸೈಟ್ ಮತ್ತು ಅಧಿಕೃತ Google Play Store ಆ್ಯಪ್‌ಗಳನ್ನೇ ಬಳಸುವುದು ಸುರಕ್ಷಿತ.

‘ಅನ್ನ ಸೇವೆ’ ಆ್ಯಪ್‌ನ ಪ್ರಮುಖ ಮಾಹಿತಿ

ಮಾಹಿತಿವಿವರ
ಆ್ಯಪ್ ಹೆಸರುAnna Seve
ಬಳಕೆರೇಷನ್ ಕಾರ್ಡ್ e-KYC
e-KYC ವಿಧಾನAadhaar ಆಧಾರಿತ Face Authentication
ಬಿಡುಗಡೆ2026ರ ಅಕ್ಟೋಬರ್ 1
ಪ್ರಸ್ತುತ ಸೇವೆಹಂತ ಹಂತವಾಗಿ ವಿಸ್ತರಣೆ
e-KYC ಅವಧಿಪ್ರತಿ 5 ವರ್ಷಕ್ಕೊಮ್ಮೆ
ಯಾರಿಗೆ e-KYCರೇಷನ್ ಕಾರ್ಡ್‌ನ ಪ್ರತಿಯೊಬ್ಬ ಅರ್ಹ ಸದಸ್ಯರಿಗೆ
ಪರ್ಯಾಯ ವಿಧಾನನ್ಯಾಯಬೆಲೆ ಅಂಗಡಿಯಲ್ಲಿ ಅನುಮೋದಿತ e-KYC ವಿಧಾನ

ಕೊನೆಯ ಮಾತು

ರೇಷನ್ ಕಾರ್ಡ್ e-KYC ಪ್ರಕ್ರಿಯೆಯನ್ನು ಜನರಿಗೆ ಸುಲಭಗೊಳಿಸುವ ಉದ್ದೇಶದಿಂದ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ‘ಅನ್ನ ಸೇವೆ’ ಮೊಬೈಲ್ ಆ್ಯಪ್ ಅನ್ನು ಬಿಡುಗಡೆ ಮಾಡಿದ್ದು . Aadhaar ಆಧಾರಿತ Face Authentication ಮೂಲಕ ಅರ್ಹ ಫಲಾನುಭವಿಗಳು ಮೊಬೈಲ್‌ನಲ್ಲೇ e-KYC ಪೂರ್ಣಗೊಳಿಸುವ ಅವಕಾಶವನ್ನು ಈ ಆ್ಯಪ್ ಒದಗಿಸುತ್ತದೆ.ಮುಖ್ಯವಾಗಿ, ರೇಷನ್ ಕಾರ್ಡ್‌ನಲ್ಲಿರುವ ಪ್ರತಿಯೊಬ್ಬ ಅರ್ಹ ಸದಸ್ಯರ e-KYC ಪೂರ್ಣಗೊಳಿಸುವುದು ಅಗತ್ಯ. ಮೊಬೈಲ್ ಮೂಲಕ e-KYC ಮಾಡಲು ಸಾಧ್ಯವಾಗದಿದ್ದರೆ ನ್ಯಾಯಬೆಲೆ ಅಂಗಡಿಯ ಅಧಿಕೃತ e-KYC ವ್ಯವಸ್ಥೆಯನ್ನೂ ಬಳಸಬಹುದು.ಅನ್ನ ಸೇವೆ’ ಮೊಬೈಲ್ ಆ್ಯಪ್ ಬಳಸಿಕೊಂಡು e-KYC ಮಾಡುವುದರಿಂದ ಮೊದ್ಲಿನ ಹಾಗೆ ಗಂಟೆ ಗಟ್ಟಲೆ ನ್ಯಾಯಬೆಲೆ ಅಂಗಡಿಯ ಮುಂದೆ ಸಾಲುಗಟ್ಟಿ ನಿಲ್ಲುವುದು ತಪ್ಪುತ್ತದೆ ಸಮಯ ವ್ಯರ್ಥವಾಗುವುದಿಲ್ಲ ಪ್ರತಿಯೊಬ್ಬರೂ ಈ ಸೌಲಭ್ಯವನ್ನು ಉಪಯೋಗಿಸಿಕೊಳ್ಳಿ.

Leave a Comment