SSP Scholarship 2026: ಕರ್ನಾಟಕ ವಿದ್ಯಾರ್ಥಿಗಳಿಗೆ ₹3,000 ರಿಂದ ₹60,000 ವರೆಗೆ ವಿದ್ಯಾರ್ಥಿವೇತನ!

 

SSP Scholarship 2026 ಕರ್ನಾಟಕ ವಿದ್ಯಾರ್ಥಿಗಳಿಗೆ ₹3,000 ರಿಂದ ₹60,000 ವಿದ್ಯಾರ್ಥಿವೇತನ

SSP Scholarship ಇದು ಕರ್ನಾಟಕದ ವಿದ್ಯಾರ್ಥಿಗಳಿಗೆ ಸಿಗುವ ಒಂದು ಮುಖ್ಯ ವಿದ್ಯಾರ್ಥಿವೇತನವಾಗಿದ್ದು ಅರ್ಹ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿವೇತನದ ಹಣ ಉಚಿತವಾಗಿ ಸಿಗುತ್ತದೆ . SSP ಅಂದರೆ State Scholarship Portal ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳ ಮೂಲಕ ನೀಡುವ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಈ ಅಧಿಕೃತ ಪೋರ್ಟಲ್ ಬಳಸಲಾಗುತ್ತದೆ. ವಿದ್ಯಾರ್ಥಿಯ ತರಗತಿ, ಓದುತ್ತಿರುವ ಕೋರ್ಸ್, ವರ್ಗ, ಕುಟುಂಬದ ಆದಾಯ ಮತ್ತು ಯಾವ ಇಲಾಖೆಯ ಯೋಜನೆಗೆ ಅರ್ಹರಾಗಿದ್ದಾರೆ ಎನ್ನುವುದರ ಮೇಲೆ ವಿದ್ಯಾರ್ಥಿವೇತನದ ಮೊತ್ತ ಹಾಗು ಅರ್ಹತೆ ನಿಯಮಗಳು ಬದಲಾಗುತ್ತವೆ. ಹಾಗೆಯೇ ಪ್ರತಿಯೊಬ್ಬ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗೆ ಒಂದೇ ರೀತಿಯ ಮೊತ್ತದ ವಿದ್ಯಾರ್ಥಿವೇತನ ಸಿಗುವುದಿಲ್ಲ ಅರ್ಹತೆಗೆ ಅನುಗುಣವಾಗಿ ವಿದ್ಯಾರ್ಥಿವೇತನವು ಬದಲಾಗುತ್ತದೆ. ಈ ವಿದ್ಯಾರ್ಥಿವೇತನದ ಅರ್ಹತೆ ಅರ್ಜಿ ಸಲ್ಲಿಸುವ ವಿಧಾನ ಹಾಗೆ ಬೇಕಾಗುವ ದಾಖಲೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದೆ ಸಮೂರ್ಣ ಮಾಹಿತಿ ಓದಿ ತಿಳಿದುಕೊಂಡು ಅರ್ಜಿ ಸಲ್ಲಿಸಿ.

SSP Scholarship 2026 ಎಂದರೇನು?

SSP ಅಂದರೆ ಕರ್ನಾಟಕ ಸರ್ಕಾರದ State Scholarship Portal.ವಿವಿಧ ಇಲಾಖೆಗಳ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿವೇತನದ ಅರ್ಜಿಗಳನ್ನು ಒಂದೇ ವ್ಯವಸ್ಥೆಯ ಮೂಲಕ ಸಲ್ಲಿಸಲು ಈ ಪೋರ್ಟಲ್ ಸಹಾಯ ಮಾಡುತ್ತದೆ.ವಿದ್ಯಾರ್ಥಿಗಳ ಶಿಕ್ಷಣ ಹಂತಕ್ಕೆ ಅನುಗುಣವಾಗಿ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಸೇರಿದಂತೆ ವಿವಿಧ ಯೋಜನೆಗಳು ಇಲ್ಲಿ ಬಗೆಗಿನ ಮಾಹಿತಿ ಇಲ್ಲಿ ದೊರೆಯುತ್ತದೆ.ಸದ್ಯದ 2026-27ನೇ ಸಾಲಿನ ವಿದ್ಯಾರ್ಥಿಗಳ SSP ಸ್ಕಾಲರ್ಶಿಪ್ ಬಗ್ಗೆ ಸಂಬಂಧಿಸಿದ ಮಾಹಿತಿಯನ್ನು ಇಲ್ಲಿ ತಿಳಿಯಬಹುದಾಗಿದೆ ಅಥವಾ ಅಧಿಕೃತ SSP ಪೋರ್ಟಲ್ ಬಳಸಿ ಮಾಹಿತಿ ತಿಳಿಯಬಹುದು.

2026-27ರಲ್ಲಿ SSP Scholarship ಅರ್ಜಿ ಹಾಕಬಹುದೇ?

ಹೌದು. 2026-27ನೇ ಸಾಲಿನ ವಿದ್ಯಾರ್ಥಿವೇತನಕ್ಕೆ ಸಂಬಂಧಿಸಿದಂತೆ SSP ಪೋರ್ಟಲ್‌ನಲ್ಲಿ ವಿವಿಧ ಇಲಾಖೆಗಳ ವಿದ್ಯಾರ್ಥಿವೇತನಗಳ ಅರ್ಜಿ ಆರಂಭವಾಗಿದೆ.ಆದರೆ ಎಲ್ಲಾ ಇಲಾಖೆಗಳ ವಿದ್ಯಾರ್ಥಿವೆತಕ್ಕೆ ಕೊನೆಯ ದಿನಾಂಕ ಒಂದೇ ಆಗಿರುವುದಿಲ್ಲ ಇಲಾಖೆಗೆ ತಕ್ಕ ಹಾಗೆ ಅರ್ಜಿ ವಿಧಾನ ಹಾಗೆ ಕೊನೆಯ ದಿನಾಂಕ ಬದಲಾಗುತ್ತಿರುತ್ತದೆ.ಆದ್ದರಿಂದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ತಮ್ಮ ತರಗತಿ ಹಾಗೆ ಕೋರ್ಸ್‌ಗೆ ಸಂಬಂಧಿಸಿದ ಇಲಾಖೆಯ ಅಧಿಕೃತ ಮಾಹಿತಿ ಒಮ್ಮೆ ಪರಿಶೀಲಿಸಿ ನಂತರ ಅರ್ಜಿ ಸಲ್ಲಿಸುವುದು ಉತ್ತಮ.

ಯಾವ ವಿದ್ಯಾರ್ಥಿಗೆ ಎಷ್ಟು ವಿದ್ಯಾರ್ಥಿವೇತನ ಸಿಗುತ್ತದೆ?

SSP Scholarship ನಲ್ಲಿ ವಿದ್ಯಾರ್ಥಿವೇತನದ ಮೊತ್ತ ವಿದ್ಯಾರ್ಥಿಯ ಕೋರ್ಸ್ ಮತ್ತು ಯೋಜನೆಗೆ ಅನುಗುಣವಾಗಿ ಬದಲಾಗುತ್ತದೆ. ಸಾಮಾನ್ಯವಾಗಿ ಕೆಳಗಿನ ರೀತಿಯಲ್ಲಿ ಮೊತ್ತವನ್ನು ನೋಡಬಹುದು:

  • 9 ಮತ್ತು 10ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸಾಮಾನ್ಯವಾಗಿ ₹3,000 ರಿಂದ ₹8,000 ವರೆಗೆ ವಿದ್ಯಾರ್ಥಿವೇತನ.
  • ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸುಮಾರು ₹5,000 ರಿಂದ ₹12,000 ವರೆಗೆ ಸಹಾಯ.
  • ಐಟಿಐ ಮತ್ತು ಡಿಪ್ಲೊಮಾ ಓದುತ್ತಿರುವ ವಿದ್ಯಾರ್ಥಿಗಳಿಗೆ ₹7,000 ರಿಂದ ₹20,000 ವರೆಗೆ ವಿದ್ಯಾರ್ಥಿವೇತನ.
  • ಪದವಿ ಕೋರ್ಸ್‌ಗಳು ಅಂದರೆ BA, BCom, BSc, BCA ಸೇರಿದಂತೆ ಇತರೆ ಪದವಿ ಕೋರ್ಸ್‌ಗಳಿಗೆ ಸಾಮಾನ್ಯವಾಗಿ ₹8,000 ರಿಂದ ₹25,000 ವರೆಗೆ ಸಹಾಯ.
  • ಇಂಜಿನಿಯರಿಂಗ್, ಮೆಡಿಕಲ್, ನರ್ಸಿಂಗ್, ಫಾರ್ಮಸಿ, ಕೃಷಿ, ಕಾನೂನು ಹಾಗೂ ಇತರೆ ವೃತ್ತಿಪರ ಕೋರ್ಸ್‌ಗಳಿಗೆ ಯೋಜನೆಗೆ ಅನುಗುಣವಾಗಿ ₹20,000 ರಿಂದ ₹60,000 ಅಥವಾ ಅದಕ್ಕಿಂತ ಹೆಚ್ಚಿನ ಶುಲ್ಕ ಮರುಪಾವತಿ ಮತ್ತು ವಿದ್ಯಾರ್ಥಿವೇತನ .

ಮುಖ್ಯ ಸೂಚನೆ: ಮೇಲಿನ ಮೊತ್ತಗಳು ಎಲ್ಲ ವಿದ್ಯಾರ್ಥಿಗಳಿಗೂ ಒಂದೇ ರೀತಿಯ ಮೊತ್ತದಲ್ಲಿ ಸಿಗುವುದಿಲ್ಲ. ವಿದ್ಯಾರ್ಥಿಯ ವರ್ಗ, ಕುಟುಂಬದ ಆದಾಯ, ಕೋರ್ಸ್ ಮತ್ತು ಸಂಬಂಧಿಸಿದ ಇಲಾಖೆಯ ಪ್ರಸ್ತುತ ನಿಯಮದ ಮೇಲೆ ಅಂತಿಮ ಮೊತ್ತ ಬದಲಾಗುತ್ತದೆ.

ಯಾರು SSP Scholarshipಗೆ ಅರ್ಜಿ ಹಾಕಬಹುದು?

SSP Scholarship ನಲ್ಲಿ ಬೇರೆ ಬೇರೆ ಇಲಾಖೆಗಳ ಬೇರೆ ಬೇರೆ ವಿದ್ಯಾರ್ಥಿವೇತನ ನೋಡಬಹುದು

ಸಾಮಾನ್ಯವಾಗಿ:

  • ಕರ್ನಾಟಕದ ಅರ್ಹ ವಿದ್ಯಾರ್ಥಿಯಾಗಿರಬೇಕು.
  • ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿರಬೇಕು.
  • ಸಂಬಂಧಿಸಿದ ಇಲಾಖೆಯ ವರ್ಗಕ್ಕೆ ಸೇರಿರಬೇಕು.
  • ಕುಟುಂಬದ ಆದಾಯ ನಿಗದಿತ ಮಿತಿಯೊಳಗಿರಬೇಕು.
  • ಅಗತ್ಯ ಜಾತಿ ಮತ್ತು ಆದಾಯ ಪ್ರಮಾಣಪತ್ರ ಹೊಂದಿರಬೇಕು.
  • ಆಧಾರ್ ಮತ್ತು ಬ್ಯಾಂಕ್ ವಿವರಗಳು ಸರಿಯಾಗಿರಬೇಕು.
  • ಆಯಾ ಯೋಜನೆಯ ಇತರೆ ನಿಯಮಗಳನ್ನು ವಿದ್ಯಾರ್ಥಿ ಪೂರೈಸಬೇಕು.

ಯಾವ ವಿದ್ಯಾರ್ಥಿವೇತನಕ್ಕೆ ನೀವು ಅರ್ಹರು ಎನ್ನುವುದರ ಮೇಲೆ ನಿಖರವಾದ ನಿಯಮ ಹಾಗು ಅರ್ಹತೆ ಬದಲಾಗುತ್ತದೆ.

ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ

ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ: ಸಾಮಾನ್ಯವಾಗಿ 1ರಿಂದ 10ನೇ ತರಗತಿಯ ಅರ್ಹ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಯೋಜನೆಗಳು.ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ: 10ನೇ ತರಗತಿಯ ನಂತರ PUC, ITI, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಮತ್ತು ಇತರೆ ಕೋರ್ಸ್‌ಗಳನ್ನು ಓದುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ ಸಿಗುವ ವಿದ್ಯಾರ್ಥಿವೇತನಗಳು.

ಯೋಜನೆಯ ಪ್ರಮುಖ ಮಾಹಿತಿ

ಪ್ರಮುಖಮಾಹಿತಿವಿವರ
ಯೋಜನೆSSP Scholarship
ಪೂರ್ಣಹೆಸರುState Scholarship Portal
ಶೈಕ್ಷಣಿಕವರ್ಷ2026-27
ಅರ್ಜಿವಿಧಾನಆನ್‌ಲೈನ್
ಅರ್ಹರುನಿಯಮ ಪೂರೈಸುವ ವಿದ್ಯಾರ್ಥಿಗಳು
ವಿದ್ಯಾರ್ಥಿವೇತನಕೋರ್ಸ್ ಮತ್ತು ಯೋಜನೆಗೆ ಅನುಗುಣವಾಗಿ
ಸಾಮಾನ್ಯಮೊತ್ತಸುಮಾರು ₹3,000 ರಿಂದ ₹60,000+ ವರೆಗೆ ಸಾಮಾನ್ಯವಾಗಿ ಸಿಗುತ್ತದೆ
ಮುಖ್ಯದಾಖಲೆಗಳುಆಧಾರ್, ಜಾತಿ, ಆದಾಯ, ಬ್ಯಾಂಕ್ ವಿವರಗಳು
ಹಣಜಮಾನಿಯಮದಂತೆ DBT ಮೂಲಕ
ಅಧಿಕೃತಪೋರ್ಟಲ್SSP Karnataka

ಬೇಕಾಗುವ ದಾಖಲೆಗಳು

  • ಆಧಾರ್ ಕಾರ್ಡ್
  • ಜಾತಿ ಪ್ರಮಾಣಪತ್ರ
  • ಆದಾಯ ಪ್ರಮಾಣಪತ್ರ
  • ಬ್ಯಾಂಕ್ ಪಾಸ್‌ಬುಕ್
  • ಹಿಂದಿನ ತರಗತಿಯ ಅಂಕಪಟ್ಟಿ
  • ಶಿಕ್ಷಣ ಸಂಸ್ಥೆಯ ವಿವರ
  • ಮೊಬೈಲ್ ಸಂಖ್ಯೆ
  • ವಿದ್ಯಾರ್ಥಿಯ ಫೋಟೋ
  • ವಿಕಲಚೇತನ ಪ್ರಮಾಣಪತ್ರ, ಅನ್ವಯಿಸಿದರೆ
  • ಇತರೆ ಅಗತ್ಯ ದಾಖಲೆಗಳು

ಸಂಬಂಧಿಸಿದ ಇಲಾಖೆಗೆ ತಕ್ಕ ಹಾಗೆ ಹೆಚ್ಚುವರಿ ದಾಖಲೆಗಳನ್ನು ಕೇಳಬಹುದು ಅಥವಾ ಕೇಳದೇ ಇರಬಹುದು ಆದರೂ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಮೊದಲೇ ಎಲ್ಲ ದಾಖಲೆಗಳು ಸಿದ್ಧಪಡಿಸಿಕೊಳ್ಳುವುದು ಉತ್ತಮ.

SSP Scholarshipಗೆ ಅರ್ಜಿ ಸಲ್ಲಿಸುವ ವಿಧಾನ

ಹಂತ 1: SSPನ ಅಧಿಕೃತ ವೆಬ್ಸೈಟ್ ಓಪನ್ ಮಾಡಿ.

ಹಂತ 2: ನಿಮ್ಮ ಶಿಕ್ಷಣಕ್ಕೆ ಸಂಬಂಧಿಸಿದ ಮೆಟ್ರಿಕ್ ಪೂರ್ವ ಅಥವಾ ಮೆಟ್ರಿಕ್ ನಂತರದ ವಿಭಾಗ ಆಯ್ಕೆ ಮಾಡಿ.

ಹಂತ 3: ಹೊಸ ವಿದ್ಯಾರ್ಥಿಯಾಗಿದ್ದರೆ ಖಾತೆ ರಚಿಸಿ.

ಹಂತ 4: ಕೇಳಲಾಗುವ ವಿದ್ಯಾರ್ಥಿಯ ವೈಯಕ್ತಿಕ ವಿವರಗಳನ್ನು ತುಂಬಿ.

ಹಂತ 5: ಆಧಾರ್, ಜಾತಿ ಮತ್ತು ಆದಾಯದ ವಿವರಗಳನ್ನು ಸರಿಯಾಗಿ ಹಾಕಿ .

ಹಂತ 6: ನಿಮ್ಮ ಕಾಲೇಜು ಅಥವಾ ಶಾಲೆ ಮತ್ತು ಓದುತ್ತಿರುವ ಕೋರ್ಸ್ ವಿವರಗಳನ್ನು ಹಾಕಿ.

ಹಂತ 7: ಬ್ಯಾಂಕ್ ಖಾತೆಯ ವಿವರಗಳನ್ನು ಸರಿಯಾಗಿ ನಮೂದಿಸಿ.

ಹಂತ 8: ಅರ್ಜಿಯಲ್ಲಿರುವ ಎಲ್ಲಾ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ.

ಹಂತ 9: ಅರ್ಜಿ ಸಲ್ಲಿಸಿ ಮತ್ತು ಅರ್ಜಿ ಸಂಖ್ಯೆಯನ್ನು ಉಳಿಸಿಕೊಂಡಿರಿ.

ವಿದ್ಯಾರ್ಥಿವೇತನ ಹಣ ಹೇಗೆ ಸಿಗುತ್ತದೆ?

SSP Scholarship ಗೆ ವಿದ್ಯಾರ್ಥಿಯು ಅರ್ಜಿ ಸಲ್ಲಿಸಿದ ನಂತರ ಸಂಬಂಧಿಸಿದ ಇಲಾಖೆ ಮತ್ತು ಶಿಕ್ಷಣ ಸಂಸ್ಥೆಯ ಅರ್ಜಿ ಪರಿಶೀಲನೆಯನ್ನು ನೆಡೆಸುತ್ತದೆ.ವಿದ್ಯಾರ್ಥಿ ಅರ್ಹರಾಗಿದ್ದು, ದಾಖಲೆಗಳು ಸರಿಯಾಗಿದ್ದರೆ ಸರ್ಕಾರದ ನಿಯಮದಂತೆ ವಿದ್ಯಾರ್ಥಿವೇತನದ ಹಣವನ್ನು ನೇರವಾಗಿ ವಿದ್ಯಾರ್ಥಿ ನೀಡಿರುವ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.ಅರ್ಜಿಯಲ್ಲಿ ತಪ್ಪು ಮಾಹಿತಿ ಇದ್ದರೆ ಅಥವಾ ದಾಖಲೆಗಳಲ್ಲಿ ಸಮಸ್ಯೆ ಇದ್ದರೆ ಅರ್ಜಿ ತಿರಸ್ಕೃತವಾಗಬಹುದು ಅಥವಾ ಹಣ ಬರುವುದರಲ್ಲಿ ತಡವಾಗಬಹುದು.ಅದಕ್ಕಾಗಿ ಅರ್ಜಿ ಸಲ್ಲಿಸುವಾಗ ಎರಡು ಭಾರಿ ಪರಿಶೀಲಿಸಿದ ನಂತರವೇ ಅರ್ಜಿ ಸಲ್ಲಸಿ.

ಅರ್ಜಿ ಹಾಕುವ ಮೊದಲು ಗಮನಿಸಿ

  • ನಿಮ್ಮ ವಿದ್ಯಾರ್ಥಿವೇತನಕ್ಕೆ ನೀವು ಅರ್ಹರೇ ಎಂದು ಮೊದಲು ಅಧಿಕೃತ ಮಾಹಿತಿ ಪರಿಶೀಲಿಸಿ.
  • ಜಾತಿ ಮತ್ತು ಆದಾಯ ಪ್ರಮಾಣಪತ್ರ ಸರಿಯಾಗಿದೆಯೇ ನೋಡಿ.
  • ಬ್ಯಾಂಕ್ ಖಾತೆಯ ವಿವರ ಸರಿಯಾಗಿ ಹಾಕಿ.
  • ಆಧಾರ್ ವಿವರಗಳನ್ನು ಪರಿಶೀಲಿಸಿ.
  • ಒಂದೇ ಯೋಜನೆಗೆ ಮತ್ತೆ ಮತ್ತೆ ಅರ್ಜಿ ಹಾಕಬೇಡಿ.
  • ಅರ್ಜಿ ಸಲ್ಲಿಸಿದ ನಂತರ ಅದರ ಸ್ಥಿತಿಯನ್ನು ಪರಿಶೀಲಿಸುತ್ತಿರಿ.
  • ಕೊನೆಯ ದಿನಾಂಕವನ್ನು ಅಧಿಕೃತ ಜಾಲತಾಣದಲ್ಲಿ ಪರಿಶೀಲಿಸಿ.
  • ಹಳೆಯ WhatsApp ಅಥವಾ ಸಾಮಾಜಿಕ ಜಾಲತಾಣದ ತಪ್ಪು ಮಾಹಿತಿಯನ್ನು ನಂಬಬೇಡಿ.

2026-27ರ ಅರ್ಜಿ ಕೊನೆಯ ದಿನಾಂಕ

SSP Scholarship ಅಡಿಯಲ್ಲಿ ಬರುವ ಎಲ್ಲಾ ವಿದ್ಯಾರ್ಥಿವೇತನಗಳಿಗೆ ಒಂದೇ ಕೊನೆಯ ದಿನಾಂಕ ಇರುವುದಿಲ್ಲ.ಯಾವ ಇಲಾಖೆಯ ವಿದ್ಯಾರ್ಥಿವೇತನಕ್ಕೆ ನೀವು ಅರ್ಜಿ ಹಾಕುತ್ತಿದ್ದೀರಿ ಎನ್ನುವುದರ ಮೇಲೆ ಕೊನೆಯ ದಿನಾಂಕ ಬದಲಾಗುತ್ತದೆ .ಉದಾಹರಣೆಗೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 2026-27ನೇ ಸಾಲಿನ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಸಂಬಂಧಿಸಿದ ದಿನಾಂಕವನ್ನು ಇಲಾಖೆಯ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಲಾಗಿದೆ.ಆದ್ದರಿಂದ ಅರ್ಜಿ ಸಲ್ಲಿಸುವ ಮೊದಲು ನೀವು ಅರ್ಜಿ ಸಲ್ಲಿಸುವ ನಿಮ್ಮ ಇಲಾಖೆಯ ಇತ್ತೀಚಿನ ಪ್ರಕಟಣೆಯನ್ನು ಒಮ್ಮೆ ಪರಿಶೀಲಿಸಿ ಅದರಲ್ಲಿ ಸ್ಪಷ್ಟವಾಗಿ ತಿಳಿಸಲಾಗಿರುತ್ತದೆ ಅರ್ಜಿ ಆರಂಭವಾದ ದಿನಾಂಕ ಹಾಗೆ ಕೊನೆಯ ದಿನಾಂಕ ತಿಳಿದುಕೊಂಡು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಿ.

ಅಧಿಕೃತ ಲಿಂಕ್

SSP Karnataka ಅಧಿಕೃತ ಪೋರ್ಟಲ್:
https://ssp.postmatric.karnataka.gov.in/

ಮೆಟ್ರಿಕ್ ಪೂರ್ವ SSP:
https://ssp.karnataka.gov.in/ssppre/PreHome

ಮೆಟ್ರಿಕ್ ನಂತರದ SSP:
https://ssp.postmatric.karnataka.gov.in/

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ:
https://bcwd.karnataka.gov.in/

ಕೊನೆಯ ಮಾತು

SSP Scholarship ಒಂದು ರೀತಿಯಾದ ಬಡ ವಿದ್ಯಾರ್ಥಿಗಳಿಗೆ ಹಾಗೆ ಅರ್ಹ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ನೀಡುವ ಕರ್ನಾಟಕದ ಒಂದು ಮುಖ್ಯ ಯೋಜನೆಯಾಗಿದೆ,ನೀವು ಅರ್ಹ ವಿದ್ಯಾರ್ಥಿಗಳಾಗಿದ್ದರೆ ನಿಮ್ಮ ಇಲಾಖೆ ಹಾಗೆ ಕೋರ್ಸ್ ಗೆ ತಕ್ಕ ಅರ್ಹತಾ ನಿಯಮವನ್ನು ಪೂರ್ಣಗೊಳಿಸಿ ಅರ್ಜಿ ಸಲ್ಲಿಸಿ.ಇದರಿಂದ ನಿಮ್ಮ ವಿದ್ಯಾಭ್ಯಾಸದ ಖರ್ಚಿಗೆ ಆರ್ಥಿಕ ನೆರವು ಸಿಕ್ಕಿದಂತಾಗುತ್ತದೆ ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನ ಸಿಗುತ್ರತದೆ ಅಂತಲ್ಲ ಅರ್ಹ ವಿದ್ಯಾರ್ಥಿಗಳಿಗೆ ವಿವಿಧ ಯೋಜನೆಗಳ ಮೂಲಕ ಸಿಗುತ್ತದೆ.ಯಾವುದೇ ಸೋಶಿಯಲ್ ಮೀಡಿಯಾದಲ್ಲಿ ಬರುವ ಮಾಹಿತಿಯನ್ನು ತಕ್ಷಣ ನಂಬಬೇಡಿ ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಮಾಹಿತಿಯನ್ನು ಪರಿಶೀಲಿಸಿದ ನಂತರ ಅರ್ಜಿ ಸಲ್ಲಿಸಿ ಯಾವಾಗಲೂ ಸರ್ಕಾರದ ಅಧಿಕೃತ ವೆಸ್ಬೈಟ್ ಮೂಲಕ ಅರ್ಜಿ ಸಲ್ಲಸಿ.ಮಾಹಿತಿ ಇಷ್ಟವಾದರೆ ನಿಮ್ಮ ಫ್ರೆಂಡ್ಸ್ ಗು ಈ ಯೋಜನೆ ಬಗ್ಗೆ ತಿಳಿಸಿ.

1 thought on “SSP Scholarship 2026: ಕರ್ನಾಟಕ ವಿದ್ಯಾರ್ಥಿಗಳಿಗೆ ₹3,000 ರಿಂದ ₹60,000 ವರೆಗೆ ವಿದ್ಯಾರ್ಥಿವೇತನ!”

Leave a Comment