ರಾಜ್ಯದ ಮಹಿಳೆಯರಿಗೆ ಸರ್ಕಾರದ ಗೃಹಲಕ್ಷ್ಮಿ(Gruhalakshmi) ಯೋಜನೆಯು ಆರ್ಥಿಕ ಸಹಾಯ ಉದ್ದೇಶದಿಂದ ಜಾರಿಮಾಡಿದ ಪ್ರಮುಖ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯು ಒಂದು. ಈ ಯೋಜನೆಯಡಿ ಕುಟುಂಬದ ಮಹಿಳಾ ಮುಖ್ಯಸ್ಥರಿಗೆ ಪ್ರತಿ ತಿಂಗಳು ₹2,000 ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.ರಾಜ್ಯದ ಲಕ್ಷಾಂತರ ತಾಯಂದಿರ ಜೀವನಮಟ್ಟವನ್ನು ಸುಧಾರಿಸುವುದು ಹಾಗೂ ಅವರ ಆರ್ಥಿಕ ಸಬಲೀಕರಣವೇ ಪ್ರಮುಖ ಆಶಯವಾಗಿದೆ. ‘ಗೃಹಲಕ್ಷ್ಮಿ’ ಕಾರ್ಯಕ್ರಮದ ಮೂಲಕ ಈವರೆಗೆ 1.24 ಕೋಟಿಗೂ ಹೆಚ್ಚು ಮಹಿಳೆಯರಿಗೆ ಯಶಸ್ವಿಯಾಗಿ ಆರ್ಥಿಕ ನೆರವು ತಲುಪಿದ್ದು, ಡಿಕೆ ಶಿವಕುಮಾರ್ ರವರು ಪ್ರಸ್ತುತ 2026-27ನೇ ವರ್ಷದ ಕಂತು ವಿತರಣೆಗಾಗಿ 2,500 ಕೋಟಿ ರೂಪಾಯಿಗಳ ನಿಧಿಯನ್ನು ಬಿಡುಗಡೆ
ಮಾಡಲಾಗಿದ್ದು ಈ ಹಣವನ್ನು ಡಿಬಿಟಿ (DBT) ವ್ಯವಸ್ಥೆಯ ಮೂಲಕ ಯಾವುದೇ ಅಡೆತಡೆಯಿಲ್ಲದೆ ನೇರವಾಗಿ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ
ಎಂದು ತಿಳಿಸಿದ್ದಾರೆ. ಮಹಿಳೆಯರ ಆರ್ಥಿಕ ಸ್ವಾತಂತ್ರ್ಯಕ್ಕಾಗಿ ನಾವು ನೀಡಿದ್ದ ಭರವಸೆಯನ್ನು ಈಡೇರಿಸಲು ನಮ್ಮ ಸರ್ಕಾರ ಸದಾ ಸಿದ್ಧವಾಗಿದೆ. ನಾಡಿನ ಜನತೆಯ ಬೆನ್ನಲುಬಾಗಿರುವ ಎಲ್ಲಾ ಗ್ಯಾರಂಟಿ ಕಾರ್ಯಕ್ರಮಗಳು ಮುಂದೆಯೂ ಯಾವುದೇ ಅಡ್ಡಿಯಿಲ್ಲದೆ ನಿರಂತರವಾಗಿ ಸಾಗಲಿವೆ.
ಈ ತಿಂಗಳ ಹಣವನ್ನು
ಸೆಪ್ಟೆಂಬರ್ 15 ರ ಒಳಗೆ ಹಾಕುವುದಾಗಿ ಸರ್ಕಾರ ತಿಳಿಸಿದೆ. 2026ರಲ್ಲಿ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಫಲಾನುಭವಿಗಳ ಮರುಪರಿಶೀಲನೆ, ಹೊಸ ಅರ್ಜಿ ನಮೂನೆಯಲ್ಲಿ ಹೆಚ್ಚುವರಿ ಮಾಹಿತಿಯ ಸೇರ್ಪಡೆ, ಮೊಬೈಲ್ ಸಂಖ್ಯೆ, ಆಧಾರ್, ಬ್ಯಾಂಕ್ ಖಾತೆ ಹಾಗೂ ಹಣದ ಕಂತಿನ ಬಗ್ಗೆ ಹಲವು ಪ್ರಮುಖ ಬೆಳವಣಿಗೆಗಳು ನಡೆದಿವೆ. ಹೀಗಾಗಿ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಇಲ್ಲಿ ಓದಿ ತಿಳಿದಿಕೊಳ್ಳಿ.

2026ರಲ್ಲಿ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಹೊಸ ಮಾಹಿತಿ ಏನು?
2026ರಲ್ಲಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಮರುಪರಿಶೀಲನೆ ಪ್ರಕ್ರಿಯೆಗೆ ಡಿಕೆ ಶಿವಕುಮಾರ್ ಸರ್ಕಾರ ಚಾಲನೆ ನೀಡಿದೆ. 2026ರ ಆಗಸ್ಟ್ 30ರಿಂದ ಫಲಾನುಭವಿಗಳ ಮನೆಮನೆಗೆ ತೆರಳಿ ಮರುಪರಿಶೀಲನೆ ನಡೆಸುವ ಪ್ರಕ್ರಿಯೆ ಆರಂಭವಾಗಿದ್ದು, ಅರ್ಹ ಫಲಾನುಭವಿಗಳನ್ನು ಖಚಿತಪಡಿಸಿಕೊಳ್ಳುವುದು ಮತ್ತು ಪ್ರಸ್ತುತ ಅರ್ಹತೆ ಇಲ್ಲದವರನ್ನು ಗುರುತಿಸುವುದು ಇದರ ಉದ್ದೇಶವಾಗಿದೆ. ಈ ಪ್ರಕ್ರಿಯೆಯಲ್ಲಿ ಬೆರಳಚ್ಚು ಆಧಾರಿತ ಗುರುತಿನ ದೃಢೀಕರಣ ಮತ್ತು ಮುಖದ ಗುರುತಿನ ದೃಢೀಕರಣವನ್ನು ಬಳಸಲಾಗುತ್ತಿದೆ.
ಸರ್ಕಾರದ ಮಾಹಿತಿಯ ಪ್ರಕಾರ ಗೃಹಲಕ್ಷ್ಮಿ ಯೋಜನೆಯಲ್ಲಿ ಸುಮಾರು 1.24 ಕೋಟಿ ಫಲಾನುಭವಿಗಳ ವಿವರಗಳನ್ನು ಮರುಪರಿಶೀಲಿಸಲಾಗುತ್ತಿದೆ. ಈ ಕಾರ್ಯಕ್ಕಾಗಿ ವಿದ್ಯುನ್ಮಾನ ನಾಗರಿಕ ಸೇವೆಗಳ ನಿರ್ದೇಶನಾಲಯದ ಮೂಲಕ ವಿಶೇಷ ಜಾಲತಾಣ ಮತ್ತು ಮೊಬೈಲ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ.
ಸರ್ಕಾರ ನಿಗದಿಪಡಿಸಿರುವ ಮರುಪರಿಶೀಲನಾ ಪ್ರಕ್ರಿಯೆಯಲ್ಲಿ ಫಲಾನುಭವಿಗಳು ತಮ್ಮ ವಿವರಗಳನ್ನು ಪರಿಶೀಲಿಸಿಕೊಳ್ಳುವುದು ಮುಖ್ಯವಾಗಿದೆ ಇಲ್ಲವಾದರೆ ಯೋಜನೆಯಿಂದ ಬರುವ ಲಾಭ ಸಿಗುವುದಿಲ್ಲ.
ಗೃಹಲಕ್ಷ್ಮಿ ಯೋಜನೆಯ ಉದ್ದೇಶವೇನು?
ಗೃಹಲಕ್ಷ್ಮಿ ಯೋಜನೆಯ ಮುಖ್ಯ ಉದ್ದೇಶವೇ ಮಹಿಳೆಯರಿಗೆ ಆರ್ಥಿಕ ಸಹಾಯ ನೀಡುವುದು. ದಿನನಿತ್ಯದ ಕುಟುಂಬದ ಖರ್ಚು, ಆಹಾರ, ಮಕ್ಕಳ ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಅಗತ್ಯಗಳಿಗೆ ಮಹಿಳೆಯರಿಗೆ ಹಣಕಾಸಿನ ನೆರವು ಸಿಗಬೇಕು ಎನ್ನುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ.
ಯೋಜನೆಯಡಿ ಅರ್ಹ ಫಲಾನುಭವಿಗೆ ಪ್ರತಿ ತಿಂಗಳು ₹2,000 ಹಣ ನೀಡಲಾಗುತ್ತದೆ. ಈ ಹಣವನ್ನು ನೇರವಾಗಿ ಫಲಾನುಭವಿಯ ಆಧಾರ್ಗೆ ಜೋಡಿಸಲಾದ ಬ್ಯಾಂಕ್ ಖಾತೆ ಅಥವಾ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು.
ಗೃಹಲಕ್ಷ್ಮಿ ಯೋಜನೆಯಡಿ ಯಾರಿಗೆ ಹಣ ಸಿಗುತ್ತದೆ?
ಗೃಹಲಕ್ಷ್ಮಿ ಯೋಜನೆಯಡಿ ಕರ್ನಾಟಕದ ನಿವಾಸಿಯಾಗಿರುವ ಕುಟುಂಬದ ಮಹಿಳಾ ಮುಖ್ಯಸ್ಥರಿಗೆ ಹಣ ಸಿಗುತ್ತದೆ. ಫಲಾನುಭವಿಯ ಹೆಸರು ಕುಟುಂಬದ ಪಡಿತರ ಚೀಟಿಯಲ್ಲಿ ಮನೆಯ ಮುಖ್ಯಸ್ಥೆಯಾಗಿ ನಮೂದಾಗಿರಬೇಕು.
ಅಂತ್ಯೋದಯ ಅನ್ನ ಯೋಜನೆ, ಬಡತನ ರೇಖೆಗಿಂತ ಕೆಳಗಿನ ಹಾಗೂ ಬಡತನ ರೇಖೆಗಿಂತ ಮೇಲಿನ ಪಡಿತರ ಚೀಟಿಗಳನ್ನು ಹೊಂದಿರುವ ಕುಟುಂಬಗಳ ಅರ್ಹ ಮಹಿಳೆಯರು ಯೋಜನೆಯ ವ್ಯಾಪ್ತಿಗೆ ಬರುತ್ತಾರೆ. ಪಡಿತರ ಚೀಟಿಯಲ್ಲಿ ಮಹಿಳೆ ಕುಟುಂಬದ ಮುಖ್ಯಸ್ಥೆಯಾಗಿ ನಮೂದಾಗಿರುವುದು ಪ್ರಮುಖ ಅರ್ಹತೆಯಾಗಿದೆ.
ಅಂದರೆ ಕೇವಲ ಮಹಿಳೆಯ ಬಳಿ ಪಡಿತರ ಚೀಟಿ ಇದೆ ಎನ್ನುವುದರಿಂದ ಮಾತ್ರ ಗೃಹಲಕ್ಷ್ಮಿ ಯೋಜನೆಯ ಹಣ ಸಿಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಸರ್ಕಾರ ನಿಗದಿಪಡಿಸಿರುವ ಇತರ ಅರ್ಹತಾ ನಿಯಮಗಳನ್ನೂ ಪೂರೈಸಿದರೆ ಮಾತ್ರ ಯೋಜನೆಯ ಲಾಭ ಸಿಗುತ್ತದೆ.
ಯಾರಿಗೆ ಗೃಹಲಕ್ಷ್ಮಿ ಯೋಜನೆ ಸಿಗುವುದಿಲ್ಲ?
ಗೃಹಲಕ್ಷ್ಮಿ ಯೋಜನೆಗೆ ಕೆಲವು ಅನರ್ಹತಾ ನಿಯಮಗಳೂ ಇವೆ. ಕುಟುಂಬದ ಮಹಿಳಾ ಮುಖ್ಯಸ್ಥೆ ಅಥವಾ ಆಕೆಯ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದರೆ ಯೋಜನೆಯಿಂದ ಹೊರಗಿಡಲಾಗುತ್ತದೆ.ಅರ್ಜಿ ಸಲ್ಲಿಸಿದರು ಪ್ರಯೋಜನವಿಲ್ಲಾ.
ಅದೇ ರೀತಿ ಮಹಿಳಾ ಮುಖ್ಯಸ್ಥೆ ಅಥವಾ ಆಕೆಯ ಪತಿ ಸರಕು ಮತ್ತು ಸೇವಾ ತೆರಿಗೆಗೆ ಸಂಬಂಧಿಸಿದ ತೆರಿಗೆ ರಿಟರ್ನ್ ಸಲ್ಲಿಸುವ ವರ್ಗಕ್ಕೆ ಸೇರಿದವರಾಗಿದ್ದರೆ ಯೋಜನೆಯ ಅರ್ಹತೆ ಇರುವುದಿಲ್ಲ.
ಇದಲ್ಲದೆ ಫಲಾನುಭವಿಯ ಮರಣ, ಕುಟುಂಬದ ಸ್ಥಿತಿಯಲ್ಲಿ ಬದಲಾವಣೆ, ಸ್ಥಳಾಂತರ ಅಥವಾ ದಾಖಲೆಗಳಲ್ಲಿ ವ್ಯತ್ಯಾಸದಂತಹ ಪ್ರಕರಣಗಳನ್ನೂ ಸದ್ಯ ನಡೆಯುತ್ತಿರುವ ಮರುಪರಿಶೀಲನೆಯ ಸಂದರ್ಭದಲ್ಲಿ ಯೋಜನೆಯಿಂದ ಹೊರಗಿಡಲಾಗುವುದು.
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಅರ್ಹ ಮಹಿಳೆಯು ತನ್ನ ಅಗತ್ಯ ದಾಖಲೆಗಳೊಂದಿಗೆ ಸರ್ಕಾರದ ಅಧಿಕೃತ ಸೇವಾ ವ್ಯವಸ್ಥೆಯನ್ನು ಬಳಸಬೇಕು.
ಅರ್ಜಿ ಸಲ್ಲಿಸಲು ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಹಾಗೂ ಸರ್ಕಾರ ಸೂಚಿಸುವ ಇತರ ಅಧಿಕೃತ ಸೇವಾ ಕೇಂದ್ರಗಳ ಸಹಾಯ ಪಡೆಯಬಹುದು. ಅರ್ಜಿ ಸಲ್ಲಿಸುವಾಗ ಪಡಿತರ ಚೀಟಿ, ಆಧಾರ್ ಹಾಗೂ ಬ್ಯಾಂಕ್ ಖಾತೆಗೆ ಸಂಬಂಧಿಸಿದ ವಿವರಗಳನ್ನು ಸಿದ್ಧವಾಗಿಟ್ಟುಕೊಳ್ಳುವುದು ಉತ್ತಮ.
ಅರ್ಜಿ ಸಲ್ಲಿಸಿದ ನಂತರ ಸಿಗುವ ಸ್ವೀಕೃತಿ ಸಂಖ್ಯೆ ಅಥವಾ ಅರ್ಜಿ ಸಂಖ್ಯೆಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಅರ್ಜಿಯ ಸ್ಥಿತಿ ಅಥವಾ ಫಲಾನುಭವಿ ವಿವರಗಳನ್ನು ಪರಿಶೀಲಿಸಲು ಇದು ಸಹಾಯವಾಗಬಹುದು.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
ಗೃಹಲಕ್ಷ್ಮಿ ಯೋಜನೆಯ ಅರ್ಜಿ ಅಥವಾ ಮರುಪರಿಶೀಲನೆ ಸಂದರ್ಭದಲ್ಲಿ ಕೆಳಗಿನ ದಾಖಲೆಗಳು ಅಗತ್ಯವಾಗಿದೆ:
- ಆಧಾರ್ ಕಾರ್ಡ್
- ಪಡಿತರ ಚೀಟಿ
- ಬ್ಯಾಂಕ್ ಪಾಸ್ಬುಕ್ ಅಥವಾ ಬ್ಯಾಂಕ್ ಖಾತೆಯ ವಿವರ
- ಮೊಬೈಲ್ ಸಂಖ್ಯೆ
- ಕುಟುಂಬಕ್ಕೆ ಸಂಬಂಧಿಸಿದ ಅಗತ್ಯ ಮಾಹಿತಿ
2026ರ ಮರುಪರಿಶೀಲನೆ ಸಂದರ್ಭದಲ್ಲಿ ಅಧಿಕಾರಿಗಳು ಫಲಾನುಭವಿಯ ಛಾಯಾಚಿತ್ರ, ಗುರುತಿನ ವಿವರ ಮತ್ತು ಇತರ ಅಗತ್ಯ ಮಾಹಿತಿಯನ್ನು ದಾಖಲಿಸಿಕೊಳ್ಳುತ್ತಾರೆ. ಆದ್ದರಿಂದ ದಾಖಲೆಗಳಲ್ಲಿ ಹೆಸರು ಮತ್ತು ಇತರ ವಿವರಗಳು ಸರಿಯಾಗಿವೆಯೇ ಎಂದು ಮೊದಲೇ ಪರಿಶೀಲಿಸಿಕೊಳ್ಳುವುದು ಉತ್ತಮ.
ಮೊಬೈಲ್ನಲ್ಲಿ ಯೋಜನೆಗೆ ಅರ್ಜಿ ಹಾಕುವುದು ಹೇಗೆ?
ಮೊಬೈಲ್ನಲ್ಲೇ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಬಗ್ಗೆ ಸಾಕಷ್ಟು ಮಹಿಳೆಯರು ಹುಡುಕುತ್ತಿದ್ದಾರೆ. ಸರ್ಕಾರದ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅಗತ್ಯ ದಾಖಲಾಗಳನ್ನು ಅಪ್ಲೋಡ್ ಮಾಡಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ 2 ಸಾವಿರ ಹಣ ಪಡೆದುಕೊಳ್ಳಬಹುದು.
2026ರಲ್ಲಿ ಗೃಹಲಕ್ಷ್ಮಿ ಯೋಜನೆಯ ಹೊಸ ಅರ್ಜಿ ನಮೂನೆಯಲ್ಲಿ ಏನು ಬದಲಾವಣೆ?
2026ರಲ್ಲಿ ಗೃಹಲಕ್ಷ್ಮಿ ಯೋಜನೆಯ ಹೊಸ ಅರ್ಜಿ ನಮೂನೆಯಲ್ಲಿ ಕೆಲವು ಹೆಚ್ಚುವರಿ ಅಂಶಗಳನ್ನು ಸೇರಿಸಿದೆ ಯಾಕೆಂದರೆ, ಯೋಜನೆಯು ಜಾರಿ ಮಾಡಿ 3 ವರ್ಷಗಳಾಗಿದ್ದು ಇಲ್ಲಿಯತನಕ ಯೋಜನೆಯ ಲಾಭ ಪಡೆಯುತ್ತಿದ್ದವರು ಅರ್ಹರಾಗಿದ್ದಾರಾ ಅಥವಾ ಲಾಭ ಅನರ್ಹರಿಗೆ ಸಿಗುತ್ತಿದೀಯಾ ಅನ್ನುವುದನ್ನು ಪತ್ತೆ ಹಚ್ಚಿ ಬದುಕಿರುವವರು ಹಾಗೆ ಮರಣ ಹೊಂದಿದವರ ಮಾಹಿತಿ ದಾಖಲಾಯಿಸಲು ಯೋಜನೆಯಲ್ಲಿ ಹಲವಾರು ಹೊಸ ಅಂಶವನ್ನು ಸೇರಿಸಿದ್ದು. ಮಹಿಳೆಯ ಆದಾಯ,ಆಧಾರ್ ಲಿಂಕ್,ಮೊಬೈಲ್ ನಂಬರ್ ಅಪ್ಡೇಟ್, ಹೀಗೆ ಮುಂತಾದ ಹೊಸ ಅಂಶಗಳನ್ನು ಸೇರಿಸಿದ್ದು. ಅನರ್ಹ ಮಹಿಳೆಗೆ ಲಾಭ ಸಿಗದಂತೆ ತಡೆಯುವುದು ಇದರ ಉದ್ದೇಶವಾಗಿದೆ.
ಕರ್ನಾಟಕ ಸರ್ಕಾರ ಗೃಹಲಕ್ಷ್ಮಿ ಮರುಪರಿಶೀಲನೆ ಏಕೆ ಮಾಡುತ್ತಿದೆ?
ಗೃಹಲಕ್ಷ್ಮಿ ಯೋಜನೆಯ ಮೂಲಕ ದೊಡ್ಡ ಪ್ರಮಾಣದಲ್ಲೇ ಹಣವನ್ನು ಖರ್ಚು ಮಾಡುತ್ತಿದೆ ಇದರ ಮುಖ್ಯ ಉದ್ದೇಶ ಅರ್ಹ ಮಹಿಳೆಯರಿಗೆ ಯೋಜನೆಯ ಲಾಭ ಸಿಗುವಂತೆ ಮಾಡುವುದಾಗಿದೆ ಆದರೆ
ಕೆಲವು ಸಂದರ್ಭಗಳಲ್ಲಿ ಮೃತಪಟ್ಟ ಫಲಾನುಭವಿಗಳ ಹೆಸರಿನಲ್ಲಿಯೂ ಹಣ ಜಮೆಯಾಗುತ್ತಿರುವುದು,ಸರ್ಕಾರಕ್ಕೆ ತಿಳಿದು ಬಂದಿದ್ದು ಕೆಲವು ಫಲಾನುಭವಿಗಳು ಬೇರೆ ಸ್ಥಳಕ್ಕೆ ಸ್ಥಳಾಂತರಗೊಂಡಿರುವುದು ಹಾಗೂ ಕೆಲವರ ತೆರಿಗೆ ಸ್ಥಿತಿಯಲ್ಲಿ ಬದಲಾವಣೆ ಆಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ.ಇದೆ ಕಾರಣಕ್ಕೆ ಮತ್ತೊಮ್ಮೆ ಯೋಜನೆಯ ಪಟ್ಟಿಯನ್ನು ಪರಿಷ್ಕರಣೆ ಮಾಡಲು ಸರ್ಕಾರ ಮುಂದಾಗಿದೆ.
ಈ ಮರುಪರಿಶೀಲನೆಯ ಮೂಲಕ ಪ್ರಸ್ತುತ ಅರ್ಹರಾಗಿರುವ ಫಲಾನುಭವಿಗಳನ್ನು ಮುಂದುವರಿಸುವುದು ಮತ್ತು ಅರ್ಹತೆ ಕಳೆದುಕೊಂಡವರನ್ನು ಗುರುತಿಸಿ ಯೋಜನೆಯಿಂದ ದೂರ ಹೊರಗೆ ಇಡುವುದು. ಮುಖ್ಯ ಉದ್ದೇಶವಾಗಿದೆ.
ಮರುಪರಿಶೀಲನೆ ಹೇಗೆ ನಡೆಯುತ್ತಿದೆ?
ಕರ್ನಾಟಕ ಸರ್ಕಾರ ತಿಳಿಸಿರುವಂತೆ ಮರುಪರಿಶೀಲನೆ ಪ್ರಕ್ರಿಯೆಯನ್ನು ಫಲಾನುಭವಿಗಳ ಮನೆಗಳಿಗೆ ಸಂಬಂಧಪಟ್ಟ ಸಿಬ್ಬಂದಿ ಭೇಟಿ ನೀಡಿ ಅಗತ್ಯ ವಿವರಗಳನ್ನು ಪರಿಶೀಲಿಸುವುದರ ಜೊತೆಗೆ ಫಲಾನುಭವಿಗಳ ಅಗತ್ಯವಿರುವ ಮಾಹಿತಿಯನ್ನು ದಾಖಲಿಸಲಾಗುತ್ತದೆ.
ಪರಿಶೀಲನೆಯ ಸಂದರ್ಭದಲ್ಲಿ ಆಧಾರ್, ಪಡಿತರ ಚೀಟಿ, ಬ್ಯಾಂಕ್ ವಿವರ, ಛಾಯಾಚಿತ್ರ ಹಾಗೂ ಗುರುತಿನ ದೃಢೀಕರಣದಂತಹ ಮಾಹಿತಿಗಳನ್ನು ಸಿಬ್ಬಂದ್ದಿ ಪರಿಶೀಲಿಸುತ್ತಾರೆ.ವಿಶೇಷ ಮೊಬೈಲ್ ಮೂಲಕ ಫಲಾನುಭವಿಯ ಫೋಟೋ , ಸ್ಥಳದ ಮಾಹಿತಿ ಹಾಗೂ ಮುಖದ ಗುರುತಿನ ದೃಢೀಕರಣವನ್ನು ದಾಖಲಾಯಿಸಿಕೊಂಡು ಮರು ಅರ್ಜಿ ಹಾಕಲಾಗುವುದು.ಮೊಬೈಲ್ ಮೂಲಕ ಅಭ್ಯರ್ಥಿಯ ದಾಖಲೆ ಪರಿಶೀಲಿಸುವ ಸಂಧರ್ಭದಲ್ಲಿ
ಮುಖದ ಗುರುತಿನ ದೃಢೀಕರಣ ಸಾಧ್ಯವಾಗದೆ ಇದ್ದಾಗ ಕೆಲವು ಸೇವಾ ಕೇಂದ್ರಗಳಲ್ಲಿ ಬೆರಳಚ್ಚು ಆಧಾರಿತ ದೃಢೀಕಾರಣ ಮಾಡುವ ಅವಕಾಶವಿದೆ. ಗ್ರಾಮ ಒನ್, ಕರ್ನಾಟಕ ಒನ್ ಹಾಗೂ ಇತರ ನಿಗದಿತ ಕೇಂದ್ರಗಳ ಮೂಲಕ ಈ ಪ್ರಕ್ರಿಯೆ ಪೂರ್ಣಗೊಳಿಸಲು ಅವಕಾಶವಿದೆ.
ಮೊಬೈಲ್ ನಂಬರ್ ಬದಲಾಯಿಸುವುದು ಹೇಗೆ?
ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಯ ಮೊಬೈಲ್ ಸಂಖ್ಯೆ ಬದಲಾಗಿದ್ದರೆ, ಮೊದಲು ಆಧಾರ್ನಲ್ಲಿ ನೋಂದಾಯಿಸಿರುವ ಮೊಬೈಲ್ ಸಂಖ್ಯೆ ಸರಿಯಾಗಿದೆಯೇ ಎಂದು ಪರಿಶೀಲಿಸಿಕೊಳ್ಳ ಬೇಕು.
ಹಳೆಯ ಮೊಬೈಲ್ ಸಂಖ್ಯೆ ಬಳಕೆಯಲ್ಲಿ ಇಲ್ಲದಿದ್ದರೆ ಆಧಾರ್ನಲ್ಲಿರುವ ಮೊಬೈಲ್ ಸಂಖ್ಯೆಯನ್ನು ಅಧಿಕೃತ ಆಧಾರ್ ಸೇವಾ ಕೇಂದ್ರದ ಮೂಲಕ ಬದಲಾಯಿಸಿ. ನಂತರ ಗೃಹಲಕ್ಷ್ಮಿ ಫಲಾನುಭವಿ ವಿವರಗಳಲ್ಲಿ ಮೊಬೈಲ್ ಸಂಖ್ಯೆಗೆ ಸಂಬಂಧಿಸಿದ ತಿದ್ದುಪಡಿ ಮಾಡಿಸಬಹುದು.
ಎಲ್ಲ ಫಲಾನುಭವಿಗಳಿಗೂ ನೇರವಾಗಿ ತಮ್ಮ ಮೊಬೈಲ್ನಿಂದ ಗೃಹಲಕ್ಷ್ಮಿ ಫಲಾನುಭವಿ ವಿವರದಲ್ಲಿರುವ ಮೊಬೈಲ್ ಸಂಖ್ಯೆಯನ್ನು ಬದಲಾಯಿಸುಲು ಸರಕಾರದ ಅಧಿಕೃತ ವೆಬ್ಸೈಟ್ ಮೂಲಕ ತಿದ್ದುಪಡಿ ಮಾಡಬಹುದು. ಆದ್ದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಿಗುವ ಅನಧಿಕೃತ “ಮೊಬೈಲ್ ಸಂಖ್ಯೆ ಬದಲಾವಣೆ” ಜಾಲತಾಣಗಳನ್ನು ಮಾಹಿತಿ ಪರಿಶೀಲಿಸದೇ ನಂಬಬೇಡಿ.
ಮೊಬೈಲ್ ನಂಬರ್ ಬದಲಾವಣೆ ಆಗದಿದ್ದರೆ ಏನು ಮಾಡಬೇಕು?
ಮೊಬೈಲ್ ಸಂಖ್ಯೆ ಬದಲಾವಣೆ ಆಗುತ್ತಿಲ್ಲ ಎಂದರೆ ಮೊದಲು ಆಧಾರ್ನಲ್ಲಿ ನೋಂದಾಯಿಸಿರುವ ಮೊಬೈಲ್ ಸಂಖ್ಯೆ ಪರಿಶೀಲಿಸಿ. ನಂತರ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಗ್ರಾಹಕರ ಗುರುತು ಪರಿಶೀಲನೆ ಪೂರ್ಣಗೊಂಡಿದೆಯೇ ಮತ್ತು ಆಧಾರ್–ಬ್ಯಾಂಕ್ ಜೋಡಣೆ ಸರಿಯಾಗಿದೆಯೇ ಎಂದು ಪರಿಶೀಲಿಸಿಕೊಳ್ಳುವುದು ಉತ್ತಮ ಇಲ್ಲವಾದರೆ ಯೋಜನೆಯ ಹಣ ಬಾರದೆ ಇರಬಹುದು.
ಗೃಹಲಕ್ಷ್ಮಿ ಫಲಾನುಭವಿ ವಿವರಗಳಲ್ಲಿ ತಿದ್ದುಪಡಿ ಬೇಕಿದ್ದರೆ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಅಥವಾ ಸಂಬಂಧಪಟ್ಟ ಅಧಿಕೃತ ಸೇವಾ ಕೇಂದ್ರದ ಸಹಾಯ ಪಡೆಯಬಹುದು.ಅಥವಾ ಸಿಬ್ಬಂದಿಗಳು ಮನೆಗೆ ಭೇಟಿ ನೀಡಿದಾಗ ತಿದ್ದುಪಡಿ ಮಾಡಿಸಬಹುದು.
ಗೃಹಲಕ್ಷ್ಮಿ ಯೋಜನೆಯಡಿ ಎಷ್ಟು ಹಣ ಸಿಗುತ್ತದೆ?
ಗೃಹಲಕ್ಷ್ಮಿ ಯೋಜನೆಯಡಿ ಅರ್ಹ ಕುಟುಂಬದ ಮುಖ್ಯಸ್ತಾ ಮಹಿಳಾ ಫಲಾನುಭವಿಗೆ ಪ್ರತಿ ತಿಂಗಳು ₹2,000 ಹಣ ಸಿಗುತ್ತದೆ. ಈ ಹಣವನ್ನು ಫಲಾನುಭವಿಯ ಆಧಾರ್ಗೆ ಜೋಡಿಸಲಾದ ಬ್ಯಾಂಕ್ ಖಾತೆ ಅಥವಾ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು.
ಯೋಜನೆಯ ಆರಂಭದಿಂದಲೂ ಪ್ರತಿ ಕಂತಿಗೆ ₹2,000ರಂತೆ ಹಣ ನೀಡಲಾಗುತ್ತಿದೆ. 32 ಕಂತುಗಳು ಪೂರ್ಣಗೊಂಡಿದ್ದು ಒಟ್ಟು ₹64,000 ಆಗುತ್ತದೆ.
ಈಗ ಗೃಹಲಕ್ಷ್ಮಿಯ ಎಷ್ಟುನೇ ಕಂತು ಬಂದಿದೆ?
2026ರ ಆಗಸ್ಟ್ನಲ್ಲಿ 32ನೇ ಕಂತಿನ ಹಣ ಬಿಡುಗಡೆ ಮಾಡಿರುವ ಬಗ್ಗೆ ಸರ್ಕಾರ ವರದಿ ನೀಡಿದೆ. ಈ ಕಂತಿಗಾಗಿ ಸುಮಾರು ₹2,443 ಕೋಟಿ ಬಿಡುಗಡೆ ಮಾಡಲಾಗಿದ್ದು, ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡಲಾಗಿದೆ
32 ಕಂತುಗಳಿಗೆ ಪ್ರತಿ ಕಂತಿಗೆ ₹2,000ರಂತೆ ಲೆಕ್ಕ ಹಾಕಿದರೆ, ಅರ್ಹ ಫಲಾನುಭವಿಗೆ ಒಟ್ಟು ₹64,000 ಆಗುತ್ತದೆ. ಆದರೆ ಎಲ್ಲರ ಖಾತೆಗೆ ಒಂದೇ ದಿನ ಹಣ ಜಮೆಯಾಗುವುದಿಲ್ಲ. ಬ್ಯಾಂಕ್ ಪ್ರಕ್ರಿಯೆ ಮತ್ತು ಇತರ ತಾಂತ್ರಿಕ ಕಾರಣಗಳಿಂದ ಹಣ ಜಮೆಯಾಗುವ ಸಮಯದಲ್ಲಿ ವ್ಯತ್ಯಾಸವಾಗಬಹುದು.ಸರಿಯಾದ ವಿವರಗಳನ್ನು ನೀಡುವುದರ ಮೂಲಕ ಹಣ ಪಡೆದುಕೊಳ್ಳಬಹುದು.
ಗೃಹಲಕ್ಷ್ಮಿ ಹಣ ಯಾರಿಗೆ ಬರುತ್ತಿದೆ?
ಸರ್ಕಾರ ನೆಡೆಸುತ್ತಿರುವ ಮರುಪರಿಶೀಲನೆಗೆ ಅರ್ಹತಾ ನಿಯಮಗಳನ್ನು ಪೂರೈಸಿರುವ ಮತ್ತು ಫಲಾನುಭವಿ ವಿವರಗಳಲ್ಲಿ ಯಾವುದೇ ಸಮಸ್ಯೆ ಇಲ್ಲದಿರುವ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಮುಂದುವರಿಯುತ್ತದೆ.
ಆಧಾರ್ ವಿವರ, ಬ್ಯಾಂಕ್ ಖಾತೆ, ಪಡಿತರ ಚೀಟಿ ಹಾಗೂ ಇತರ ದಾಖಲೆಗಳಲ್ಲಿ ಸಮಸ್ಯೆ ಇದ್ದರೆ ಹಣ ಜಮೆಯಾಗುವುದು ತಡವಾಗಬಹುದು. ಮರುಪರಿಶೀಲನೆಯ ಸಂದರ್ಭದಲ್ಲಿ ಅರ್ಹತೆ ದೃಢಪಟ್ಟ ಫಲಾನುಭವಿಗಳಿಗೆ ಯೋಜನೆಯ ಪ್ರಯೋಜನ ಮುಂದುವರಿಸುವುದು ಸರ್ಕಾರದ ಉದ್ದೇಶವಾಗಿದೆ. ಮರುಪರಿಶೀಲನೆಯ ಉದ್ದೇಶ ನಿಜವಾದ ಅರ್ಹ ಫಲಾನುಭವಿಗಳಿಗೆ ಹಣ ತಲುಪುವಂತೆ ಮಾಡುವುದು ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ
→ ಉಚಿತ ಸೈಟ್ 2026: ಕರ್ನಾಟಕದಲ್ಲಿ 30×40 ನಿವೇಶನ, 15 ಲಕ್ಷ ಕುಟುಂಬಗಳಿಗೆ ಉಚಿತ ಸೈಟ್
→ ಕರ್ನಾಟಕ ರೇಷನ್ ಕಾರ್ಡ್ e-KYC 2026: ಸೆಪ್ಟೆಂಬರ್ 30ರೊಳಗೆ e-KYC ಕಡ್ಡಾಯ– ಮಹತ್ವದ ಸೂಚನೆ
→ SSP Scholarship 2026: ಕರ್ನಾಟಕ ವಿದ್ಯಾರ್ಥಿಗಳಿಗೆ ₹3,000 ರಿಂದ ₹60,000 ವರೆಗೆ ವಿದ್ಯಾರ್ಥಿವೇತನ!
ಗೃಹಲಕ್ಷ್ಮಿ ಹಣ ಬರದಿದ್ದರೆ ಏನು ಮಾಡಬೇಕು?
ಗೃಹಲಕ್ಷ್ಮಿಯೋಜನೆಯ ಹಣ ಖಾತೆಗೆ ಬಂದಿಲ್ಲ ಎಂದರೆ ಮೊದಲಿಗೆ ನಿಮ್ಮ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿ. ಖಾತೆ ಚಲಾವಣೆಯಲ್ಲಿ ಇದೆಯೇ ಮತ್ತು ಆಧಾರ್–ಬ್ಯಾಂಕ್ ಜೋಡಣೆ ಸರಿಯಾಗಿದೆಯೇ ಎಂದು ಬ್ಯಾಂಕ್ನಲ್ಲಿ ವಿಚಾರಿಸಿ.
ನಂತರ ಗೃಹಲಕ್ಷ್ಮಿ ಫಲಾನುಭವಿ ವಿವರಗಳಲ್ಲಿ ನಿಮ್ಮ ಹೆಸರು, ಪಡಿತರ ಚೀಟಿ ಮಾಹಿತಿ ಹಾಗೂ ಇತರ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿಕೊಳ್ಳಿ.
ಮರುಪರಿಶೀಲನೆ ಬಾಕಿ ಇದ್ದರೆ ಅದನ್ನು ಪೂರ್ಣಗೊಳಿಸುವುದು ಮುಖ್ಯ.ಸಿಬ್ಬಂದಿ ಮನೆಗೆ ಭೇಟಿ ನೀಡಿದಾಗ ಅಗತ್ಯ ದಾಖಲೆಗಳನ್ನು ನೀಡಿ ಸಹಕರಿಸಿ.
ಯೋಜನೆಯ ಮರುಅರ್ಜಿಯ ಬಗ್ಗೆ ಮುಖ್ಯ ಮಾಹಿತಿ
2026ರ ಜೂನ್ನಲ್ಲಿ ಗೃಹಲಕ್ಷ್ಮಿ ಸೇರಿದಂತೆ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಮರುಅರ್ಜಿ ಸಲ್ಲಿಸಬೇಕೆಂದು ನೂತನ ಮುಖ್ಯಮಂತ್ರಿ ತಿಳಿಸಿದ್ದರು. ಇದರ ಉದ್ದೇಶ ನಕಲಿ ಮತ್ತು ಅನರ್ಹ ಫಲಾನುಭವಿಗಳನ್ನು ತೆಗೆದುಹಾಕಿ ಅರ್ಹರಿಗೆ ಮಾತ್ರ ಯೋಜನೆಯ ಪ್ರಯೋಜನ ಮುಂದುವರಿಸುವುದಾಗಿತ್ತು.
ನಂತರ ಗೃಹಲಕ್ಷ್ಮಿ ಫಲಾನುಭವಿಗಳ ಮರುಪರಿಶೀಲನೆಗಾಗಿ ಮನೆಮನೆಗೆ ತೆರಳಿ ಪರಿಶೀಲನೆ ನಡೆಸುವ ಪ್ರಕ್ರಿಯೆ ಮತ್ತು ವಿಶೇಷ ಮೊಬೈಲ್ ಹಾಗೂ ಅಧಿಕೃತ ವೆಬ್ಸೈಟ್ ಆಧಾರಿತ ವ್ಯವಸ್ಥೆ ಜಾರಿಗೊಂಡಿದೆ. ಆದ್ದರಿಂದ ಎಲ್ಲರೂ ಮರುಅರ್ಜಿಯನ್ನು ಹಾಕಬೇಕು.ನಿಮ್ಮ ಮನೆಗೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿನೀಡಿದಾಗ ಸರಿಯಾದ ಮಾಹಿತಿ ನೀಡಿ ಸಹಕರಿಸಿ ಹಾಗೂ ಮರುಪರಿಶೀಲನೆ ಪೂರ್ಣಗೊಂಡ ನಂತರ ಅರ್ಜಿಯ ಸ್ಥಿತಿ ಪರಿಶೀಲಿಸಿ.
ಗೃಹಲಕ್ಷ್ಮಿ ಫಲಾನುಭವಿಗಳು ಈಗ ಏನು ಮಾಡಬೇಕು?
ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ತಮ್ಮ ಆಧಾರ್, ಪಡಿತರ ಚೀಟಿ, ಬ್ಯಾಂಕ್ ಖಾತೆ ಮತ್ತು ಮೊಬೈಲ್ ಸಂಖ್ಯೆ ಸರಿಯಾಗಿದೆಯೇ ಎಂದು ಪರಿಶೀಲಿಸಿಕೊಂಡು ಅಧಿಕಾರಿಗಳು ಮನೆಗೆ ಬಂದಾಗ ಸರಿಯಾಗಿ ದಾಖಲೆಗಳನ್ನು ನೀಡುವುದರ ಮೂಲಕ ಸಹಕರಿಸಿ ಯೋಜನೆಯ ಲಾಭ ಪಡೆದುಕೊಳ್ಳಬೇಕು.
ಕೊನೆಯದಾಗಿ
ಕರ್ನಾಟಕ ಸರ್ಕಾರ ಜಾರಿ ಮಾಡಿರುವ ಈ ಮಹಾತ್ವದ ಯೋಜನೆಯ ಲಾಭವನ್ನು ಪ್ರತಿಯೊಬ್ಬ ಅರ್ಹ ಮಹಿಳೆಯರು ಪಡೆದುಕೊಳ್ಳಬೇಕು ಆರ್ಥಿಕವಾಗಿ ಸದೃಢರನ್ನಗಿಸಬೇಕು.ಅದಕ್ಕೆ ಪ್ರತಿಯೊಬ್ಬ ಮಹಿಳೆಯರು ಕೂಡ ಸರಿಯಾದ ದಾಖಲೆಯನ್ನು ಅಧಿಕಾರಿಗಳಿಗೆ ನೀಡಿ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದು ವಿನಂತಿ. ಯಾವುದೇ ಅನಾಮಿಕ ವ್ಯಕ್ತಿ ಅಥವಾ ಸೋಶಿಯಲ್ ಮೀಡಿಯಾದಲ್ಲಿ ತೋರಿಸುವ ಹಾಗೆ ಅಧಿಕೃತ ವೆಬ್ಸೈಟ್ ಅಥವಾ ಲಿಂಕ್ ಕ್ಲಿಕ್ ಮಾಡಬೇಡಿ ಅರ್ಜಿ ಸಲ್ಲಿಸುವ ಮುನ್ನ ಅಧಿಕಾರಿಗಳಿಗೆ ದಾಖಲೆ ನೀಡುವ ಮೊದಲು ಅಧಿಕೃತ ಮಾಹಿತಿ ಪರಿಶೀಲಿಸಿ. ಮಾಹಿತಿ ಇಷ್ಟವಾದರೆ ಎಲ್ಲರೊಂದಿಗಿ ಹಂಚಿಕೊಳ್ಳಿ.
Vijaya
Satsa
Gruh Lakshmi dudu bundela
Magadi