ಕರ್ನಾಟಕ ರೇಷನ್ ಕಾರ್ಡ್ ತಿದ್ದುಪಡಿ 2026: ತಿದ್ದುಪಡಿ ಸೇವೆ ಬಗ್ಗೆ ಹೊಸ ಅಪ್‌ಡೇಟ್

ಕರ್ನಾಟಕ ಸರ್ಕಾರವು ರೇಷನ್ ಕಾರ್ಡ್ ದಾರರಿಗೆ ಸಿಹಿಸುದ್ದಿ ನೀಡಿದೆ ಈಗಾಗಲೇ ರೇಷನ್ ಕಾರ್ಡ್ ಹೋದಿದ್ದು ತಿದ್ದುಪಡಿ ಮಾಡಿಸಲು ಕಾಯುತ್ತಿರುವವರಿಗೆ ಇದು ಸರಿಯಾದ ಸಮಯ ಯಾಕೆಂದರೆ.ಕರ್ನಾಟಕ ಸರ್ಕಾರವು ಕುಟುಂಬದ ಸದಸ್ಯರ ಹೆಸರು ಸೇರ್ಪಡೆ, ಹೆಸರು ತೆಗೆದುಹಾಕುವುದು, ವಿಳಾಸ ಬದಲಾವಣೆ, ಮೊಬೈಲ್ ಸಂಖ್ಯೆ ಜೋಡಣೆ ಸೇರಿದಂತೆ ಹಲವು ತಿದ್ದುಪಡಿಗಳಿಗೆ ಅವಕಾಶವನ್ನು ನೀಡಿದೆ. ಈ ತಿದ್ದುಪಡಿ ಸೇವೆಗೆ 2026ರ ಮೇ 8ರಿಂದ 2027ರ ಮಾರ್ಚ್ 31ರವರೆಗೆ ಅವಕಾಶ ನೀಡಲಾಗಿದೆ ಎಂದು ಅಧಿಕೃತ ಆಹಾರ ಇಲಾಖೆ ತಿಳಿಸಿದೆ.ರೇಷನ್ ಕಾರ್ಡ್‌ನಲ್ಲಿ ಈಗಾಗಲೇ ಇರುವ ಮಾಹಿತಿಯಲ್ಲಿ ತಪ್ಪಿದ್ದು ಅದನ್ನು ತಿದ್ದುಪಡಿ ಮಾಡಿಸಲು ಇದೆ ಸರಿಯಾದ ಸಮಯವಾಗಿದೆ,

ಕರ್ನಾಟಕ ರೇಷನ್ ಕಾರ್ಡ್ ತಿದ್ದುಪಡಿ

ರೇಷನ್ ಕಾರ್ಡ್ ತಿದ್ದುಪಡಿ ಬಗ್ಗೆ ಇತ್ತೀಚಿನ ಅಪ್‌ಡೇಟ್ ಏನು?

ಕರ್ನಾಟಕ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಅಡಿಯಲ್ಲಿ ರೇಷನ್ ಕಾರ್ಡ್ ಸೇವೆಗಳನ್ನು ನಿರ್ವಹಿಸಲಾಗುತ್ತಿದ್ದು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಕರ್ನಾಟಕದ ಅಧಿಕೃತ ಪುಟದಲ್ಲಿ ರಾಜ್ಯ ಆಹಾರ ಇಲಾಖೆಯ ವೆಬ್‌ಸೈಟ್, ರೇಷನ್ ಕಾರ್ಡ್ ಮ್ಯಾನೇಜ್‌ಮೆಂಟ್ ಸಿಸ್ಟಂ ಮತ್ತು ದೂರು ದಾಖಲಿಸುವ ವ್ಯವಸ್ಥೆಯ ಅಧಿಕೃತ ಲಿಂಕ್ ಅನ್ನು ಗ್ರಾಹಕ ಸೇವೆಗಾಗಿ ನೀಡಲಾಗಿದೆ . ಆಹಾರ ಇಲಾಖೆಯು 2026ರ ಮೇ 8ರಿಂದ ರೇಷನ್ ಕಾರ್ಡ್ ತಿದ್ದುಪಡಿಗೆ ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅರ್ಹ ಗ್ರಾಹಕರಿಗೆ ಅವಕಾಶವನ್ನು ನೀಡಿದೆ . ಈ ಅವಕಾಶದ ಕೊನೆಯ ದಿನಾಂಕ 2027ರ ಮಾರ್ಚ್ 31 ಇಲಾಕೆ ತಿಳಿಸಿದೆ.ಆದರೆ ಇಲ್ಲಿ ಮುಖ್ಯವಾಗಿ ಗಮನಿಸಬೇಕಾಗಿದ್ದು ಇನ್ನು ಯಾವುದೇಹೊಸ ರೇಷನ್ ಕಾರ್ಡ್ ಗೆ ಇಲಾಖೆ ಅಪ್ಲಿಕೇಶನ್ ಬಿಟ್ಟಿಲ್ಲ ಕೇವಲ ಈಗಾಗಲೇ ಇರುವ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶವನ್ನು ಇಲಾಖೆ ಗ್ರಾಹಕರಿಗೆ ನೀಡಿದೆ.

ರೇಷನ್ ಕಾರ್ಡ್‌ನಲ್ಲಿ ಯಾವ ತಿದ್ದುಪಡಿಗಳನ್ನು ಮಾಡಬಹುದು?

ರೇಷನ್ ಕಾರ್ಡ್ ತಿದ್ದುಪಡಿ ಸೇವೆಯಡಿಯಲ್ಲಿ ಕುಟುಂಬದ ಅಗತ್ಯಕ್ಕೆ ಅನುಗುಣವಾಗಿ ಹಲವು ವಿವರಗಳನ್ನು ಸದ್ಯಕ್ಕೆ ಬದಲಾಯಿಸಬಹುದು :

  • ಹೊಸ ಕುಟುಂಬ ಸದಸ್ಯರ ಹೆಸರು ಸೇರ್ಪಡೆ
  • ರೇಷನ್ ಕಾರ್ಡ್‌ನಿಂದ ಸದಸ್ಯರ ಹೆಸರು ತೆಗೆದುಹಾಕುವುದು
  • ಹೆಸರು ಅಥವಾ ವೈಯಕ್ತಿಕ ವಿವರ ತಿದ್ದುಪಡಿ
  • ಕುಟುಂಬದ ಮುಖ್ಯಸ್ಥರ ಬದಲಾವಣೆ
  • ವಿಳಾಸ ಬದಲಾವಣೆ
  • ಮೊಬೈಲ್ ಸಂಖ್ಯೆ ಜೋಡಣೆ
  • ಫೋಟೋ ಬದಲಾವಣೆ
  • ಸದಸ್ಯರ ಜಾತಿ ಮತ್ತು ಆದಾಯ ಪ್ರಮಾಣಪತ್ರದ ವಿವರಗಳ ನವೀಕರಣ
  • 6 ವರ್ಷದೊಳಗಿನ ಮಕ್ಕಳಿಗೆ ಜನನ ಪ್ರಮಾಣಪತ್ರದ ವಿವರ ನೀಡುವುದು

ಈ ಸೇವೆಗಳಲ್ಲಿ ನೀವು ಮಾಡಿಸಬೇಕಾದ ತಿದ್ದುಪಡಿ ಅಧಿಕೃತ ವೆಬ್ಸೈಟ್ ಅಥವಾ ಹತ್ತಿರದ ನ್ಯಾಯಬೆಲೆ ಅಂಗಡಿಯಲ್ಲಿ ಅಧಿಕೃತವಾಗಿ ಮಾಹಿತಿ ತಿಳಿದುಕೊಂಡ ನಂತರವೇ ಅರ್ಜಿ ಸಲ್ಲಿಸಿ.ಯಾವುದೇ ಗೊಂದಲಗಳಿಗೆ ಒಳಗಾಗಬೇಡಿ.

ಹೊಸ ಸದಸ್ಯರ ಹೆಸರು ರೇಷನ್ ಕಾರ್ಡ್‌ಗೆ ಸೇರಿಸುವುದು

ಕುಟುಂಬಕ್ಕೆ ಹೊಸ ಸದಸ್ಯರು ಸೇರ್ಪಡೆಯಾದಾಗ ಸರ್ಕಾರದ ವಿವಿಧ ಯೋಜನೆಗಳ ಲಾಭ ಹಾಗೆ ದಾಖಲೆಗಳ ಪುರಾವೆಗೆ ಕುಟುಂಬಕ್ಕೆ ಹೊಸದಾಗಿ ಸೇರ್ಪಡೆಯಾದ ವ್ಯಕ್ತಿಯ ಹೆಸರನ್ನು ಈಗಾಗಲೇ ಇರುವ ರೇಷನ್ ಕಾರ್ಡ್‌ಗೆ ಸೇರಿಸಬೇಕು. ಇಂತಹ ಸಂಧರಬ ಯಾವಾಗ ಬರುತ್ತದೆ ಎಂದರೆ ಉದಾಹರಣೆಗೆ ಮದುವೆಯಾದ ನಂತರ ಪತ್ನಿಯ ಹೆಸರು ಸೇರಿಸುವುದು ಅಥವಾ ಮಗುವಿನ ಹೆಸರು ಸೇರಿಸುವುದು. ಇಲಾಖೆಯ ನಿಯಮದ ಪ್ರಕಾರ ಪತ್ನಿಯ ಹೆಸರು ಸೇರಿಸುವ ಸಂದರ್ಭದಲ್ಲಿ ಆಧಾರ್ ಕಾರ್ಡ್, ಮದುವೆ ಪ್ರಮಾಣಪತ್ರ ಮತ್ತು ಪೋಷಕರ ರೇಷನ್ ಕಾರ್ಡ್ ಸೇರಿದಂತೆ ದಾಖಲೆಗಳನ್ನು ಕೇಳಲಾಗುತ್ತದೆ. ಮಗುವಿನ ಹೆಸರು ಸೇರಿಸುವ ಸಂದರ್ಭದಲ್ಲಿ ಜನನ ಪ್ರಮಾಣಪತ್ರ ಮತ್ತು ಪೋಷಕರ ಆಧಾರ್ ಕಾರ್ಡ್ ಬೇಕಾಗಬಹುದು . ಆದರೆ ದಾಖಲೆಗಳ ಅವಶ್ಯಕತೆ ತಿದ್ದುಪಡಿಯ ಇಲಾಖೆ ಅಥವಾ ಪ್ರಸ್ತುತ ನಿಯಮದ ಪ್ರಕಾರ ಬದಲಾಗಬಹುದು. ಆದ್ದರಿಂದ ಅರ್ಜಿ ಸಲ್ಲಿಸುವ ಸಮಯದಲ್ಲಿ ಅಧಿಕೃತ ವ್ಯವಸ್ಥೆಯಲ್ಲಿ ತೋರಿಸುವ ದಾಖಲೆಗಳ ಪಟ್ಟಿಯನ್ನೇ ಒಮ್ಮೆ ಪರಿಶೀಲಿಸಿ ನಂತರ ಅರ್ಜಿ ಸಲ್ಲಿಸಿ.

ರೇಷನ್ ಕಾರ್ಡ್‌ನಿಂದ ಹೆಸರು ತೆಗೆದುಹಾಕುವುದು

ಕುಟುಂಬದ ಸದಸ್ಯರು ಬೇರೆ ಕುಟುಂಬಕ್ಕೆ ವರ್ಗಾವಣೆಯಾಗಿದ್ದರೆ, ಮರಣ ಹೊಂದಿದ್ದರೆ ಅಥವಾ ಬೇರೆ ಕಾರಣದಿಂದ ಅವರ ಹೆಸರು ರೇಷನ್ ಕಾರ್ಡ್‌ನಲ್ಲಿ ಇರಬೇಕಾದ ಅಗತ್ಯವಿಲ್ಲದಿದ್ದರೆ ಹೆಸರು ತೆಗೆದುಹಾಕುವ ತಿದ್ದುಪಡಿ ಮಾಡಬೇಕು. ಈ ಸಂದರ್ಭದಲ್ಲಿ ಕಾರಣವನ್ನು ದೃಢಪಡಿಸುವ ದಾಖಲೆಗಳನ್ನು ಇಲಾಖೆ ಕೇಳಬಹುದು. ಯಾವ ದಾಖಲೆ ಬೇಕು ಎಂಬುದು ತಿದ್ದುಪಡಿಯ ಕಾರಣವನ್ನು ಅವಲಂಬಿಸಿರುತ್ತದೆ. ಆದ್ದರಿಂದ ದಾಖಲೆ ಇಲ್ಲದೆ ಅರ್ಜಿ ಸಲ್ಲಿಸುವ ಬದಲು ಸಂಬಂಧಿಸಿದ ದಾಖಲೆಗಳನ್ನು ಮೊದಲು ಅಧಿಕೃತ ಇಲಾಖೆಯ ಅಧಿಕೃತ ಮಾಹಿತಿ ತಿಳಿದುಕೊಂಡು ದಾಕಹಲೆ ಸಿದ್ಧಪಡಿಸಿಕೊಳ್ಳುವುದು ಉತ್ತಮ.

ಹೆಸರು ಅಥವಾ ಕುಟುಂಬದ ವಿವರದಲ್ಲಿ ತಪ್ಪಿದ್ದರೆ

ರೇಷನ್ ಕಾರ್ಡ್‌ನಲ್ಲಿರುವ ಹೆಸರು, ಕುಟುಂಬದ ಸದಸ್ಯರ ಮಾಹಿತಿ ಅಥವಾ ಇತರೆ ವೈಯಕ್ತಿಕ ವಿವರಗಳಲ್ಲಿ ತಪ್ಪಿದ್ದರೆ ಅದನ್ನು ತಿದ್ದುಪಡಿ ಮಾಡಿಸಿಕೊಳ್ಳಲು ಸರ್ಕಾರ ಅವಕಾಶ ನೀಡಿದೆ . ಆಧಾರ್ ಕಾರ್ಡ್ ಅಥವಾ ಇತರೆ ಅಧಿಕೃತ ದಾಖಲೆಗಳಲ್ಲಿ ಇರುವ ಮಾಹಿತಿಗೆ ಹೊಂದಿಕೆಯಾಗುವಂತೆ ವಿವರಗಳನ್ನು ಸರಿಯಾಗಿ ನೀಡುವುದರ ಮೂಲಕಸರಿಪಡಿಸಿಕೊಳ್ಳಬಹುದು ಇಲ್ಲವಾದರೆ. ದಾಖಲೆಗಳಲ್ಲಿರುವ ಹೆಸರಿಗೂ ರೇಷನ್ ಕಾರ್ಡ್‌ನಲ್ಲಿ ನೀಡುವ ಹೆಸರಿಗೂ ದೊಡ್ಡ ವ್ಯತ್ಯಾಸವಿದ್ದರೆ ಮುಂದೆ ಪರಿಶೀಲನೆ ಸಂದರ್ಭದಲ್ಲಿ ಸಮಸ್ಯೆ ಉಂಟಾಗುತ್ತದೆ.

ವಿಳಾಸ ಮತ್ತು ಮೊಬೈಲ್ ಸಂಖ್ಯೆ ಬದಲಾವಣೆ

ಕುಟುಂಬ ವಾಸಿಸುತಿದ್ದ ಸ್ಥಳದಿಂದ ಬೇರೆ ವಿಳಾಸಕ್ಕೆ ಸ್ಥಳಾಂತರಗೊಂಡಿದ್ದರೆ ರೇಷನ್ ಕಾರ್ಡ್‌ನ ವಿಳಾಸವನ್ನು ಬದಲಾಯಿಸಬೇಕಾಗಬಹುದು. ಅದೇ ರೀತಿ ಕುಟುಂಬದ ಸಂಪರ್ಕ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಿದ್ದರೆ ತಿದ್ದುಪಡಿ ಮಾಡಬೇಕು. ತಿದ್ದುಪಡಿ ಸೇವೆಯಡಿ ವಿಳಾಸ ಬದಲಾವಣೆ ಮತ್ತು ಮೊಬೈಲ್ ಸಂಖ್ಯೆ ಜೋಡಣೆಗೆ ಅವಕಾಶವನ್ನು ಇಲಾಖೆ ಗ್ರಾಹಕರಿಗೆ ನೀಡಿದೆ. ಅರ್ಜಿ ಸಲ್ಲಿಸುವಾಗ ಹೊಸ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಸರಿಯಾಗಿ ಎರಡು ಬಾರಿ ಪರಿಶೀಲಿಸಿ ನಂತರ ಅರ್ಜಿ ಸಲ್ಲಿಸಿ.

ತಿದ್ದುಪಡಿಗೆ ಯಾವ ದಾಖಲೆಗಳು ಬೇಕಾಗುತ್ತವೆ?

ಎಲ್ಲಾ ತಿದ್ದುಪಡಿಗೂ ಒಂದೇ ರೀತಿಯ ದಾಖಲೆಗಳು ಬೇಕಾಗುವುದಿಲ್ಲ. ನೀವು ಮಾಡುತ್ತಿರುವ ಬದಲಾವಣೆಗೆ ಅನುಗುಣವಾಗಿ ದಾಖಲೆಗಳು ಬದಲಾಗುತ್ತವೆ.

ತಿದ್ದುಪಡಿಸಾಮಾನ್ಯವಾಗಿಬೇಕಾಗಬಹುದಾದದಾಖಲೆ
ಪತ್ನಿ/ಪತಿ ಹೆಸರು ಸೇರ್ಪಡೆಆಧಾರ್, ಮದುವೆ ಪ್ರಮಾಣಪತ್ರ, ಸಂಬಂಧಿತ ರೇಷನ್ ಕಾರ್ಡ್
ಮಗುವಿನ ಹೆಸರು ಸೇರ್ಪಡೆಜನನ ಪ್ರಮಾಣಪತ್ರ, ಪೋಷಕರ ಆಧಾರ್
ಹೆಸರು ತಿದ್ದುಪಡಿಸರಿಯಾದ ಹೆಸರಿರುವ ಅಧಿಕೃತ ದಾಖಲೆ
ವಿಳಾಸ ಬದಲಾವಣೆಹೊಸ ವಿಳಾಸದ ದಾಖಲೆ
ಹೆಸರು ತೆಗೆದುಹಾಕುವುದುಕಾರಣಕ್ಕೆ ಸಂಬಂಧಿಸಿದ ದಾಖಲೆ
ಮಗುವಿನ ವಿವರಜನನ ಪ್ರಮಾಣಪತ್ರ
ಜಾತಿ/ಆದಾಯ ವಿವರಸಂಬಂಧಿತ ಪ್ರಮಾಣಪತ್ರ

ಗಮನಿಸಿ: ಮೇಲಿನ ಪಟ್ಟಿ ಸಾಮಾನ್ಯ ಮಾರ್ಗದರ್ಶನ ಮಾತ್ರ. ಅರ್ಜಿ ಸಲ್ಲಿಸುವಾಗ ಅಧಿಕೃತ ಪೋರ್ಟಲ್ ಅಥವಾ ಸೇವಾ ಕೇಂದ್ರದಲ್ಲಿ ಕೇಳುವ ದಾಖಲೆಗಳನ್ನೇ ಅಂತಿಮವಾಗಿ ಸಲ್ಲಿಸಬೇಕು.

ರೇಷನ್ ಕಾರ್ಡ್ ತಿದ್ದುಪಡಿ ಎಲ್ಲಿ ಮಾಡಿಸಬಹುದು?

ರೇಷನ್ ಕಾರ್ಡ್ ತಿದ್ದುಪಡಿ ಸೇವೆ ಆನ್‌ಲೈನ್ ಮೂಲಕ ಲಭ್ಯವಿದ್ದರೆ ಆಹಾರ ಇಲಾಖೆಯ ಅಧಿಕೃತ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು. ಅಗತ್ಯವಿದ್ದರೆ ಅಧಿಕೃತ ಸೇವಾ ಕೇಂದ್ರಗಳ ಮೂಲಕವೂ ಅರ್ಜಿಸಲ್ಲಿಸಲು ಇಲಾಖೆ ತಿಳಿಸಿದೆ. 2026ರ ತಿದ್ದುಪಡಿ ಕುರಿತು ಪ್ರಕಟವಾದ ಮಾಹಿತಿಯಲ್ಲಿ ಬೆಂಗಳೂರು ಒನ್, ಗ್ರಾಮ ಒನ್, ಕರ್ನಾಟಕ ಒನ್ ಸೇರಿದಂತೆ ಸೇವಾ ಕೇಂದ್ರಗಳ ಮೂಲಕ ತಿದ್ದುಪಡಿ ಅರ್ಜಿ ಸಲ್ಲಿಸುವ ಅವಕಾಶವಿದೆ ಎಂದು ತಿಳಿಸಲಾಗಿದೆ. ಆದರೆ ಯಾವುದೇ ಖಾಸಗಿ ವ್ಯಕ್ತಿ ಅಥವಾ ಏಜೆಂಟ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಅದು ಅಧಿಕೃತ ಸೇವಾ ಕೇಂದ್ರವೇ ಎಂಬುದನ್ನು ಖಚಿತಪಡಿಸಿಕೊಳ್ಳಿ.ವಂಚಿತರಿಂದ ದೂರವಿರಿ ಮೋಸ ಹೋಗಬೇಡಿ.

ರೇಷನ್ ಕಾರ್ಡ್ ತಿದ್ದುಪಡಿ ಅರ್ಜಿಯ ಸ್ಥಿತಿ ಹೇಗೆ ಪರಿಶೀಲಿಸುವುದು?

ತಿದ್ದುಪಡಿ ಅರ್ಜಿ ಸಲ್ಲಿಸಿದ ನಂತರ ಸಿಗುವ ಅರ್ಜಿ ಸಂಖ್ಯೆ ಅಥವಾ ಸ್ವೀಕೃತಿ ಸಂಖ್ಯೆಯನ್ನು ಸೇವ್ ಮಾಡಿ ಇಟ್ಟುಕೊಂಡರೆ . ಮುಂದೆ ಅರ್ಜಿಯ ಸ್ಥಿತಿ ಪರಿಶೀಲಿಸಲು ಅರ್ಜಿ ಹಾಕಿದ ಸಂಖ್ಯೆ ಬೇಕಾಗುತ್ತದೆ. ಆಹಾರ ಇಲಾಖೆಯ ಅಧಿಕೃತ ಪೋರ್ಟಲ್‌ನಲ್ಲಿ ರೇಷನ್ ಕಾರ್ಡ್‌ಗೆ ಸಂಬಂಧಿಸಿದ ಸೇವೆಗಳನ್ನು ತೆರೆದು, ಲಭ್ಯವಿರುವ ಅರ್ಜಿ ಸ್ಥಿತಿ / Status ಆಯ್ಕೆಯ ಮೂಲಕ ಮಾಹಿತಿ ನೋಡಬಹುದು. ಅರ್ಜಿಯ ಸ್ಥಿತಿ ತಕ್ಷಣ ಕಾಣಿಸದಿದ್ದರೆ, ಅರ್ಜಿ ಸಂಖ್ಯೆ ಸರಿಯಾಗಿದೆಯೇ ಎಂದು ಮೊದಲು ಪರಿಶೀಲಿಸಿ. ನಂತರ ಸ್ವಲ್ಪ ಸಮಯದ ಬಳಿಕ ಮತ್ತೆ ಪರಿಶೀಲಿಸಿ.ಕೆಲವೊಮ್ಮೆ ಸರ್ವರ್ ಹಾಗೆ ನೆಟ್ವರ್ಕ್ ಸಮಸ್ಯೆಯಿಂದ ಸರಿಯಾದ ಸ್ಟೇಟಸ್ ತೋರಿಸದೆ ಇರಬಹುದು.ಸ್ವಲ್ಪ ಸಮಯದ ನಂತರವೂ ಸಮಸ್ಯೆ ಮುಂದುವರಿದರೆ ಅಧಿಕೃತ ಸೇವಾ ಕೇಂದ್ರ ಅಥವಾ ಆಹಾರ ಇಲಾಖೆಯ ಸಹಾಯವಾಣಿಯನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳುವುದು ಉತ್ತಮ.

e-KYC ಬಗ್ಗೆ ಚಿಕ್ಕ ಅಪ್‌ಡೇಟ್

ರೇಷನ್ ಕಾರ್ಡ್ ಫಲಾನುಭವಿಗಳಿಗೆ e-KYC ಕೂಡ ಪ್ರಮುಖ ಪ್ರಕ್ರಿಯೆಯಾಗಿದೆ. ಇತ್ತೀಚಿನ ಮಾಹಿತಿಯ ಪ್ರಕಾರ ಕರ್ನಾಟಕದಲ್ಲಿ ರೇಷನ್ ಕಾರ್ಡ್ e-KYCಗೆ ನೀಡಲಾಗಿದ್ದ ಗಡುವನ್ನು 2026ರ ಅಕ್ಟೋಬರ್ 20ರವರೆಗೆ ವಿಸ್ತರಿಸಲಾಗಿದೆ. ನ್ಯಾಯಬೆಲೆ ಅಂಗಡಿಗಳ ಸೇವಾ ಸಮಯದಲ್ಲಿಯೂ ಬದಲಾವಣೆ ಮಾಡಲಾಗಿದೆ. e-KYC ಮಾಡುವ ಸಂಪೂರ್ಣ ವಿಧಾನ, ಯಾರಿಗೆ ಮಾಡಬೇಕು ಮತ್ತು ಮೊಬೈಲ್ ಅಥವಾ ನ್ಯಾಯಬೆಲೆ ಅಂಗಡಿಯ ಮೂಲಕ ಹೇಗೆ ಪೂರ್ಣಗೊಳಿಸಬೇಕು ಎಂಬುದನ್ನು ಪ್ರತ್ಯೇಕವಾಗಿ ಇಲ್ಲಿಂದ ತಿಳಿಯಬಹುದುದು. ರೇಷನ್ ಕಾರ್ಡ್ e-KYC

ರೇಷನ್ ಕಾರ್ಡ್‌ಗೆ ಸಂಬಂಧಿಸಿದ ಅಧಿಕೃತ ವೆಬ್‌ಸೈಟ್

ಕರ್ನಾಟಕ ಸರ್ಕಾರ ರೇಷನ್ ಕಾರ್ಡ್ ಸೇವೆಗಳಿಗೆ ಅಧಿಕೃತವಾಗಿ ಆಹಾರ ಕರ್ನಾಟಕ ಎಂಬ ಪೋರ್ಟಲ್ ವ್ಯವಸ್ಥೆ ಜಾರಿಮಾಡಿದೆ.ಯಾವುದೇ ಅನಾಮಿಕ ವೆಬ್ಸೈಟ್ ಬಳಸುವ ಮೊದಲು ಸರ್ಕಾರದ ಅಧಿಕೃತ ಮಾಹಿತಿಯನ್ನು ಪರಿಶೀಲಿಸಿ ಬಳಸುವುದು ಸುರಕ್ಷಿತ. ರೇಷನ್ ಕಾರ್ಡ್ ಅಥವಾ ಆಹಾರ ಇಲಾಖೆಯ ಸೇವೆಗೆ ಸಂಬಂಧಿಸಿದ ಸಮಸ್ಯೆ ಇದ್ದರೆ ಈ ಸಹಾಯವಾಣಿ ಸಂಖ್ಯೆಗಳನ್ನು ಬಳಸಬಹುದು:1967, 1800-425-9339 ಈ ಎರಡೂ ಸಂಖ್ಯೆಗಳು ಕರ್ನಾಟಕದ ಅಧಿಕೃತ ಆಹಾರ ಇಲಾಖೆಯು ಗ್ರಾಹಕ ಸೇವೆಗಾಗಿ ನೀಡಿದೆ.

ರೇಷನ್ ಕಾರ್ಡ್ ಸಮಸ್ಯೆಗೆ ದೂರು ನೀಡುವುದು ಹೇಗೆ?

ರೇಷನ್ ಕಾರ್ಡ್ ಅಥವಾ ಪಡಿತರ ವಿತರಣೆಗೆ ಸಂಬಂಧಿಸಿದ ಸಮಸ್ಯೆ ಇದ್ದರೆ ಅಧಿಕೃತ ದೂರು ವ್ಯವಸ್ಥೆಯನ್ನು ಬಳಸಬಹುದು.ಆನ್‌ಲೈನ್‌ನಲ್ಲಿ ದೂರು ನೀಡಲು ಸಾಧ್ಯವಾಗದಿದ್ದರೆ ಹತ್ತಿರದ ಆಹಾರ ಇಲಾಖೆಯ ಬೇಟಿ ನೀಡುವುದು ಆಟಹ್ವ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಸಮಸ್ಯೆಯನ್ನು ತಿಳಿಸಬಹುದು.

Fake Website ಮತ್ತು Agents ಬಗ್ಗೆ ಎಚ್ಚರ

ರೇಷನ್ ಕಾರ್ಡ್ ತಿದ್ದುಪಡಿ ಅಥವಾ ಹೊಸ ಕಾರ್ಡ್ ಅರ್ಜಿ ಹೆಸರಿನಲ್ಲಿ ಅನಧಿಕೃತ ವೆಬ್‌ಸೈಟ್‌ಗಳು ಮತ್ತು ವ್ಯಕ್ತಿಗಳು ಹಣ ಕೇಳುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದಿರಿ. ಆಧಾರ್ OTP, ಬ್ಯಾಂಕ್ ಮಾಹಿತಿ, ಪಾಸ್‌ವರ್ಡ್ ಅಥವಾ ಇತರೆ ವೈಯಕ್ತಿಕ ಮಾಹಿತಿಯನ್ನು ಅಪರಿಚಿತ ವ್ಯಕ್ತಿಗಳಿಗೆ ನೀಡಬೇಡಿ. ಸಾಮಾಜಿಕ ಜಾಲತಾಣಗಳಲ್ಲಿ ಸಿಗುವ ಯಾವುದೇ ಅರ್ಜಿ ಲಿಂಕ್ ತೆರೆಯುವ ಮೊದಲು ಅದು ಸರ್ಕಾರದ ಅಧಿಕೃತ ವೆಬ್‌ಸೈಟ್‌ಗೆ ಸೇರಿದದ್ದೇ ಎಂದು ಪರಿಶೀಲಿಸಿ. ಹೊಸ ರೇಷನ್ ಕಾರ್ಡ್ ಅರ್ಜಿ ಅಥವಾ ತಿದ್ದುಪಡಿ ಸೇವೆ ಬಗ್ಗೆ ಮಾಹಿತಿ ಪಡೆಯಲು ಆಹಾರ ಇಲಾಖೆಯ ಅಧಿಕೃತ ಪೋರ್ಟಲ್‌ನ್ನೇ ಆಧಾರವಾಗಿಟ್ಟುಕೊಳ್ಳುವುದು ಸುರಕ್ಷಿತ.

ರೇಷನ್ ಕಾರ್ಡ್ ತಿದ್ದುಪಡಿ ಮುಖ್ಯ ಮಾಹಿತಿ

ವಿಷಯಮಾಹಿತಿ
ಇಲಾಖೆಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ
ತಿದ್ದುಪಡಿ ಆರಂಭ8 ಮೇ 2026 ಎಂದು ವರದಿ
ತಿದ್ದುಪಡಿ ಕೊನೆಯ ದಿನಾಂಕ31 ಮಾರ್ಚ್ 2027 ಎಂದು ವರದಿ
ಹೊಸ ರೇಷನ್ ಕಾರ್ಡ್ಅಧಿಕೃತ ವೆಬ್ಸೈಟ್ ಪರಿಶೀಲಿಸಿ
ಅಧಿಕೃತ ಪೋರ್ಟಲ್ಆಹಾರ ಕರ್ನಾಟಕ
ಸಹಾಯವಾಣಿ1967
ಪರ್ಯಾಯ ಸಹಾಯವಾಣಿ1800-425-9339
ದೂರು ವ್ಯವಸ್ಥೆE2E PDS Grievance Redressal System

ಕೊನೆಯ ಮಾತು

ರೇಷನ್ ಕಾರ್ಡ್ ಹೊಂದಿದವರು ತಿದ್ದುಪಡಿ ಮಾಡಿಸಲು ಕಾಯುತ್ತಿದ್ದಾರೆ ಅವರಿಗೆ ಇದು ಸರಿಯಾದ ಸಮಯ ಸರಕಾರವು ಅಧಿಕೃತವಾಗಿ ತಿದ್ದುಪಡಿದೆಗೆ ಅವಕಾಶವನ್ನು ನೀಡಿದೆ. ಹೆಸರು ಸೇರ್ಪಡೆ, ಹೆಸರು ತೆಗೆದುಹಾಕುವುದು, ವಿಳಾಸ ಬದಲಾವಣೆ, ಮೊಬೈಲ್ ಸಂಖ್ಯೆ ಜೋಡಣೆ ಸೇರಿದಂತೆ ಮುಂತಾದ ಸೇವೆಗಳಿಗೆ ಸರ್ಕಾರ ಆರಂಭಿಸಿದ್ದು ತಿದ್ದುಪಡಿಯ ಅವಶ್ಯಕತೆ ಇದ್ದವರು ಇಲಾಖೆಯ ಅಧಿಕೃತ ನಿಯಮದಂತೆ ತಿದ್ದುಪಡಿ ಮಾಡಿಸಿಕೊಳ್ಳಬಹುದು.ಯಾವುದೇ ಅನಾಮಿಕ ವ್ಯಕ್ತಿಗೆ ಹಣ ನೀಡದೆ ರೇಷನ್ ಕಾರ್ಡ್ ಸಂಬಂಧಪಟ್ಟ ಇಲಾಖೆಯ ಮೂಲಕವೇ ಅರ್ಜಿ ಸಲ್ಲಿಸಿ ಹಾಗೆ ಮಾಹಿತಿ ಇಷ್ಟವಾದರೆ ಬೇರೆಯವರಿಗೂ ತಿಳಿಸಿ.

Leave a Comment