ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ? ಮೊಬೈಲ್‌ನಲ್ಲಿ ಆನ್‌ಲೈನ್ ಅರ್ಜಿ ವಿಧಾನ 2026

ಹೊಸ ಕುಟುಂಬ ಆರಂಭಿಸಿದವರು ಅಥವಾ ಬೇರೆ ಕುಟುಂಬದಿಂದ ಪ್ರತ್ಯೇಕವಾಗಿ ವಾಸಿಸುವವರು ಅಥವಾ ರೇಷನ್ ಕಾರ್ಡ್ ಅಗತ್ಯವಿರುವ ಕುಟುಂಬಗಳು ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಕಾಯುತ್ತಿರುತ್ತಾರೆ ಅಂಥವರಿಗೆ ಈ ಸುದ್ದಿ. ಕರ್ನಾಟಕ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ರೇಷನ್ ಕಾರ್ಡ್ ಸೇವೆಗಳನ್ನು ಅಧಿಕೃತ ಆಹಾರ ಕರ್ನಾಟಕ ಪೋರ್ಟಲ್ ಮೂಲಕ ನಿರ್ವಹಿಸಲಾಗುತ್ತದೆ. ಕೆಲವು ಸರ್ಕಾರಿ ಜಿಲ್ಲಾ ವೆಬ್‌ಸೈಟ್‌ಗಳಲ್ಲಿಯೂ ಹೊಸ ರೇಷನ್ ಕಾರ್ಡ್ ಮತ್ತು ಈಗಿರುವ ರೇಷನ್ ಕಾರ್ಡ್ ತಿದ್ದುಪಡಿಗೆ ಆಹಾರ ಪೋರ್ಟಲ್ ಮೂಲಕ ಆನ್ಲೈನ್ ಅಲ್ಲಿ ಅರ್ಜಿಸಲ್ಲಿಸುವ ಅವಕಾಶವನ್ನು ಸರ್ಕಾರ ನೀಡಿದೆ.ಇಲ್ಲಿ ನೀವು ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವ ಮೊದಲು ಏನು ಸಿದ್ಧಪಡಿಸಬೇಕು, ಬೇಕಾಗುವ ದಾಖಲೆಗಳು ಯಾವುವು, ಮೊಬೈಲ್ ಮೂಲಕ ಆನ್‌ಲೈನ್ ಅರ್ಜಿ ಹೇಗೆ ಸಲ್ಲಿಸಬೇಕು, ಅರ್ಜಿ ಸಲ್ಲಿಸಿದ ನಂತರ ಸ್ಥಿತಿ ಹೇಗೆ ಪರಿಶೀಲಿಸಬೇಕು ಮತ್ತು ಅರ್ಜಿಯಲ್ಲಿ ತಪ್ಪಾದರೆ ಏನು ಮಾಡಬೇಕು ಎಂಬುದನ್ನು ಹಂತ ಹಂತವಾಗಿ ಸಂಪೂರ್ಣ ಮಾಹಿತಿಯೊಂದಿಗೆ ವಿವರಿಸಲಾಗಿದೆ.

ಕರ್ನಾಟಕದಲ್ಲಿ ಹೊಸ ರೇಷನ್ ಕಾರ್ಡ್‌ಗೆ ಆನ್‌ಲೈನ್ ಅರ್ಜಿ ಸಲ್ಲಿಸುವ ವಿಧಾನ

ರೇಷನ್ ಕಾರ್ಡ್ ಎಂದರೇನು?

ರೇಷನ್ ಕಾರ್ಡ್ ಎಂದರೆ ಸರ್ಕಾರವು ತನ್ನ ರಾಜ್ಯದ ನಾಗರಿಕರಿಗೆ ಉಚಿತವಾಗಿ ವಿತರಣಾ ವ್ಯವಸ್ಥೆಯ ಅಡಿಯಲ್ಲಿ ನೀಡುವ ಆಹಾರ ಧಾನ್ಯಗಳನ್ನು ನೀಡಲು ಈ ಕಾರ್ಡ್ ಬಳಸಲಾಗುತ್ತದೆ,ಪ್ರಮುಖವಾಗಿ ಸರ್ಕಾರದ ವಿವಿಧ ಯೋಜನೆಗಳು ಹಾಗೂ ಆಸ್ಪತ್ರೆಗಳಲ್ಲಿ ಬಡವರಿಗೆ ಉಚಿತ ಚಿಕಿತ್ಸೆ ನೀಡಲು ಇದನ್ನ ಬಳಸಲಾಗುತ್ತದೆ.ಹಾಗು ಬಡತನ ರೇಖೆಗಿಂತ ಕೆಳಗಿರುವ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳಿಗೆ ಇದನ್ನು ನೀಡಲಾಗುತ್ತದೆ.ಕರ್ನಾಟಕದಲ್ಲಿ ಸರ್ಕಾರ ಜಾರಿ ಮಾಡಿರುವ ಗೃಹಾಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳಿಗೂ ರೇಷನ್ ಕಾರ್ಡ್ ಮುಖ್ಯವಾದ ದಾಖಲೆಯಾಗಿದೆ.

ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವ ಬೇಕಾಗುವ ದಾಖಲೆಗಳು

ಹೊಸ ರೇಷನ್ ಕಾರ್ಡ್ ಗೆ ಆನ್‌ಲೈನ್ ಅಥವಾ ಸೇವಾಕೇಂದ್ರಗಳಲ್ಲಿ ಅರ್ಜಿ ಪ್ರಾರಂಭಿಸುವ ಮೊದಲು ಕುಟುಂಬದ ಎಲ್ಲಾ ಸದಸ್ಯರ ದಾಖಲೆಗಳನ್ನು ಸಿದ್ಧಪಡಿಸಿಕೊಂಡರೆ ಅರ್ಜಿ ಸಲ್ಲಿಸುವಾಗ ಸಮಯ ಉಳಿಯುತ್ತದೆ.

ಸಾಮಾನ್ಯವಾಗಿ ಈ ಮಾಹಿತಿಗಳು ಮತ್ತು ದಾಖಲೆಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿಸಲ್ಲಿಸಲು ಬೇಕಾಗುತ್ತವೆ:

  • ಕುಟುಂಬದ ಮುಖ್ಯಸ್ಥರ ಆಧಾರ್ ಕಾರ್ಡ್
  • ಕುಟುಂಬದ ಸದಸ್ಯರ ಆಧಾರ್ ಕಾರ್ಡ್
  • ಮೊಬೈಲ್ ಸಂಖ್ಯೆ
  • ವಿಳಾಸಕ್ಕೆ ಸಂಬಂಧಿಸಿದ ದಾಖಲೆ
  • ಕುಟುಂಬದ ಸದಸ್ಯರ ವಿವರಗಳು
  • ಮಕ್ಕಳಿದ್ದರೆ ಜನನ ಪ್ರಮಾಣಪತ್ರ
  • ಅಗತ್ಯವಿದ್ದರೆ ಆದಾಯ ಅಥವಾ ಇತರೆ ಪ್ರಮಾಣಪತ್ರಗಳು
  • ಪ್ರಸ್ತುತ ಕುಟುಂಬದ ಸ್ಥಿತಿಗೆ ಸಂಬಂಧಿಸಿದ ದಾಖಲೆಗಳು

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವವರು ಪ್ರಮುಖವಾಗಿ ಗಮನಿಸಬೇಕಾಗಿದ್ದು ಯಾವ್ಗಳು ಒಂದೇ ರೀತಿಯಾದ ದಾಖಲೆಗಳು ಹಾಗೂ ಮಾಹಿತಿ ಕೇಳುವುದಿಲ್ಲ ಸರ್ಕಾರ ಮಾಡುವ ಬದಲಾವಣೆ ಹಾಗೆ ಇಲಾಖೆಯ ನಿಯಮದ ಮೇಲೆ ಅವಲಂಬಿತವಾಗಿರುತ್ತದೆ,ಅರ್ಜಿ ಸಲ್ಲಿಸುವ ಮೊದಲು ಸದ್ಯದ ಅರ್ಜಿಯ ನಿಯಮ ಹಾಗೆ ಅರ್ಹತೆಯನ್ನು ತಿಳಿದುಕೊಂಡು ನಂತರ ಅಧಿಕೃತ ಮೂಲಗಳಿಂದ ಅರ್ಜಿ ಸಲ್ಲಿಸಿ.

ಮೊಬೈಲ್‌ನಲ್ಲಿ ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?

ಹೊಸ ರೇಷನ್ ಕಾರ್ಡ್‌ಗಾಗಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಹುಡುಕುತ್ತಿದ್ದರೆ ಸರ್ಕಾರ್ದ ಅಧಿಕೃತ ಸೇವಾ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು ಆದರೆ ಕೆಲವೊಮ್ಮೆ ಅಧಿಕೃತ ಪೋರ್ಟಲ್ ನ ಸರ್ವರ್ ಸಮಸ್ಯೆ ಇರುತ್ತದೆ.ಆದ್ದರಿಂದ ಸಾಧ್ಯವಾದಷ್ಟು ಹತ್ತಿರದ ಸೇವಾಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಿ.ಸೇವಾ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಲು ಆಗದೆ ಇದ್ದಾಗ ಆನ್‌ಲೈನ್ ಸೇವೆ ಅಧಿಕೃತ ಪೋರ್ಟಲ್‌ನಲ್ಲಿ ಸಕ್ರಿಯವಾಗಿದ್ದರೆ ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಆರಂಭಿಸಬಹುದು.

ಹಂತ 1: ಅಧಿಕೃತ ಆಹಾರ ಕರ್ನಾಟಕ ವೆಬ್‌ಸೈಟ್ ತೆರೆಯಿರಿ

ಮೊಬೈಲ್‌ನಲ್ಲಿ Chrome ಅಥವಾ ಬೇರೆ ಬ್ರೌಸರ್ ತೆರೆಯಿರಿ.

ಕರ್ನಾಟಕ ಆಹಾರ ಇಲಾಖೆಯ ಅಧಿಕೃತ ವೆಬ್‌ಸೈಟ್:

https://ahara.karnataka.gov.in

ಯಾವುದೇ ಅನಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಿ ನಿಮ್ಮ ದಾಖಲೆಗಳನ್ನು ನೀಡಿ ಮೋಸ ಹೋಗಬೇಡಿ.ಅರ್ಜಿ ಸಲಿಸುವಾಗ ಯಾವಾಗಲು ಕರ್ನಾಟಕ ಸರ್ಕಾರದ ಅಧಿಕೃತ ಪೋರ್ಟಲ್ ಬಳಸಿ, ಕರ್ನಾಟಕದ ಅಧಿಕೃತ NFSA ಪುಟದಲ್ಲಿಯೂ ಆಹಾರ ಇಲಾಖೆಯ ವೆಬ್‌ಸೈಟ್ ಅನ್ನು ನೀಡಲಾಗಿದ್ದು ಅದನ್ನು ಪರಿಶೀಲಿಸಿದ ನಂತರ ಅರ್ಜಿ ಸಲ್ಲಿಸಬಹುದು .

ಹಂತ 2: ಇ-ಸೇವೆಗಳ ವಿಭಾಗ ತೆರೆಯಿರಿ

ಆಹಾರ ಕರ್ನಾಟಕ ವೆಬ್‌ಸೈಟ್ ತೆರೆದ ನಂತರ ಇ-ಸೇವೆಗಳು / E-Services ವಿಭಾಗವನ್ನು ಹುಡುಕಿ.ಇಲ್ಲಿ ರೇಷನ್ ಕಾರ್ಡ್‌ಗೆ ಸಂಬಂಧಿಸಿದ ವಿವಿಧ ಸೇವೆಗಳು ಲಭ್ಯವಿರುತ್ತದೆ.

ಹಂತ 3: ಹೊಸ ರೇಷನ್ ಕಾರ್ಡ್ ಸೇವೆ ಆಯ್ಕೆ ಮಾಡಿ

ರೇಷನ್ ಕಾರ್ಡ್‌ಗೆ ಸಂಬಂಧಿಸಿದ ಸೇವೆಗಳ ಪಟ್ಟಿಯಲ್ಲಿ ಹೊಸ ರೇಷನ್ ಕಾರ್ಡ್ / New Ration Card ಆಯ್ಕೆ ಮಾಡಿ ಅದನ್ನು ತೆರೆಯಿರಿ.ಇಲ್ಲಿ ಒಂದು ವಿಷಯ ಗಮನದಲ್ಲಿಡಿ: ಸೇವೆಯ ಹೆಸರು ಅಥವಾ ವೆಬ್‌ಸೈಟ್‌ನಲ್ಲಿರುವ ಆಯ್ಕೆಗಳ ಸ್ಥಳದಲ್ಲಿ ಸರ್ಕಾರದಿಂದ ಸಮಯಕ್ಕೆ ತಕ್ಕ ಹಾಗೆ ಬದಲಾವಣೆ ಮಾಡಲಾಗುವುದು.ಆದ್ದರಿಂದ ಅರ್ಜಿ ಸಲ್ಲಿಸುವಾಗ ಸರಿಯಾದ ಮಾಹಿತಿ ಹಾಗೆ ವಿವರಗಳನ್ನು ಇಟ್ಟುಕೊಂಡು ಅರ್ಜಿ ಸಲ್ಲಿಸಿ

ಹಂತ 4: ಕುಟುಂಬದ ಮುಖ್ಯಸ್ಥರ ವಿವರ ನಮೂದಿಸಿ

ಅರ್ಜಿಯಲ್ಲಿ ಕೇಳುವ ಕುಟುಂಬದ ಮುಖ್ಯಸ್ಥರ ಮಾಹಿತಿಯನ್ನು ಸರಿಯಾಗಿ ನಮೂದಿಸಬೇಕು.ಹೆಸರು, ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ವಿಳಾಸ ಸೇರಿದಂತೆ ಕೇಳುವ ವಿವರಗಳನ್ನು ಅಧಿಕೃತ ದಾಖಲೆಗಳಿಗೆ ಹೊಂದಿಕೆಯಾಗುವಂತೆ ನಮೂದಿಸಿ.ಹೆಸರಿನ ಅಕ್ಷರದ ತಪ್ಪು ಅಥವಾ ತಪ್ಪಾದ ಆಧಾರ್ ಸಂಖ್ಯೆ ನಮೂದಿಸದಂತೆ ಎಚ್ಚರಿಕೆ ವಹಿಸಿ.

ಹಂತ 5: ಕುಟುಂಬದ ಸದಸ್ಯರ ವಿವರ ಸೇರಿಸಿ

ಹೊಸ ರೇಷನ್ ಕಾರ್ಡ್‌ನಲ್ಲಿ ಸೇರಿಸಬೇಕಾದ ಕುಟುಂಬದ ಪ್ರತಿಯೊಬ್ಬ ಸದಸ್ಯರ ವಿವರಗಳನ್ನು ನಮೂದಿಸಬೇಕು.ಪ್ರತಿಯೊಬ್ಬ ಸದಸ್ಯರ ಹೆಸರು, ಆಧಾರ್ ವಿವರ, ವಯಸ್ಸು ಅಥವಾ ಜನ್ಮ ದಿನಾಂಕ ಸೇರಿದಂತೆ ಕೇಳುವ ಮಾಹಿತಿಯನ್ನು ಸರಿಯಾಗಿ ದಾಖಲಿಸಿ.ಮಕ್ಕಳ ವಿವರಗಳನ್ನು ನಮೂದಿಸುವಾಗ ಅವರ ಜನನ ಪ್ರಮಾಣಪತ್ರದಲ್ಲಿರುವ ಮಾಹಿತಿಯೊಂದಿಗೆ ಹೊಂದಾಣಿಕೆ ಇರುವಂತೆ ನೋಡಿಕೊಳ್ಳಿ.

ಹಂತ 6: ವಿಳಾಸದ ವಿವರ ನೀಡಿ

ರೇಷನ್ ಕಾರ್ಡ್‌ಗೆ ಸಂಬಂಧಿಸಿದ ವಿಳಾಸವನ್ನು ಸರಿಯಾಗಿ ನಮೂದಿಸಬೇಕು.ಮನೆಯ ಸಂಖ್ಯೆ, ಗ್ರಾಮ ಅಥವಾ ನಗರ, ತಾಲೂಕು, ಜಿಲ್ಲೆ ಸೇರಿದಂತೆ ಅರ್ಜಿಯಲ್ಲಿ ಕೇಳುವ ವಿಳಾಸದ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.ವಿಳಾಸದ ದಾಖಲೆ ಕೇಳಿದರೆ ಸ್ಪಷ್ಟವಾದ ದಾಖಲೆ ಸಲ್ಲಿಸಬೇಕು.ಸರಿಯಾದ ಮಾಹಿತಿ ವಿವರವನ್ನು ನೀಡದೆ ಇದ್ದರೆ ನಿಮ್ಮ ಅರ್ಜಿ ತಿರಸ್ಕಾರವಾಗಬಹುದು.

ಹಂತ 7: ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ

ಅರ್ಜಿಯಲ್ಲಿ ಕೇಳಲಾಗುವ ದಾಖಲೆಗಳನ್ನು ಮೊಬೈಲ್‌ನಿಂದಲೇ ಅಪ್‌ಲೋಡ್ ಮಾಡಬಹುದು.ದಾಖಲೆಗಳ ಫೋಟೋ ಅಥವಾ ಸ್ಕ್ಯಾನ್ ಸ್ಪಷ್ಟವಾಗಿರಬೇಕು. ಹೆಸರು, ಸಂಖ್ಯೆ ಮತ್ತು ಇತರೆ ವಿವರಗಳು ಓದಲು ಸಾಧ್ಯವಾಗುವಂತೆ ದಾಖಲೆ ಅಪ್‌ಲೋಡ್ ಮಾಡಿ.ತಪ್ಪಾದ ವ್ಯಕ್ತಿಯ ದಾಖಲೆ ಅಥವಾ ಸಂಬಂಧವಿಲ್ಲದ ದಾಖಲೆ ಅಪ್‌ಲೋಡ್ ಮಾಡಬೇಡಿ.

ಹಂತ 8: ಅರ್ಜಿಯನ್ನು ಪರಿಶೀಲಿಸಿ Submit ಮಾಡಿ

ಅರ್ಜಿಯನ್ನು ಸಲ್ಲಿಸುವ ಮೊದಲು ನೀವು ನೀಡಿರುವ ಎಲ್ಲಾ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ.

ವಿಶೇಷವಾಗಿ:

  • ಕುಟುಂಬದ ಮುಖ್ಯಸ್ಥರ ಹೆಸರು
  • ಆಧಾರ್ ಸಂಖ್ಯೆ
  • ಮೊಬೈಲ್ ಸಂಖ್ಯೆ
  • ವಿಳಾಸ
  • ಕುಟುಂಬದ ಸದಸ್ಯರ ಹೆಸರು
  • ಜನ್ಮ ದಿನಾಂಕ
  • ಅಪ್‌ಲೋಡ್ ಮಾಡಿದ ದಾಖಲೆಗಳು

ಇವೆಲ್ಲ ಸರಿಯಾಗಿದ್ದರೆ ಅರ್ಜಿಯನ್ನು Submit ಮಾಡಿ.

ಹಂತ 9: ಅರ್ಜಿ ಸಂಖ್ಯೆಯನ್ನು ಉಳಿಸಿಕೊಳ್ಳಿ

ಅರ್ಜಿ ಯಶಸ್ವಿಯಾಗಿ ಸಲ್ಲಿಸಿದ ನಂತರ ಅರ್ಜಿ ಸಂಖ್ಯೆ / ಸ್ವೀಕೃತಿ ಸಂಖ್ಯೆ / Reference Number ದೊರೆತರೆ ಅದನ್ನು ತಪ್ಪದೇ ಉಳಿಸಿಕೊಳ್ಳಿ.ಸ್ಕ್ರೀನ್‌ಶಾಟ್ ತೆಗೆದುಕೊಳ್ಳುವುದು ಉತ್ತಮ. ಮುಂದೆ ಅರ್ಜಿಯ ಸ್ಥಿತಿ ಪರಿಶೀಲಿಸಲು ಅಥವಾ ಯಾವುದೇ ಸಮಸ್ಯೆ ಬಂದಾಗ ಈ ಸಂಖ್ಯೆ ಉಪಯೋಗವಾಗುತ್ತದೆ.

ಅರ್ಜಿ ಸಲ್ಲಿಸಿದ ನಂತರ ಏನಾಗುತ್ತದೆ?

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ನಂತರ ಅದು ಇಲಾಖೆಯ ನಿಯಮದ ಪ್ರಕಾರ ಪರಿಶೀಲನೆ ಮಾಡಲಾಗುತ್ತದೆ. ಅರ್ಜಿಯಲ್ಲಿ ನೀಡಿರುವ ಕುಟುಂಬದ ವಿವರಗಳು ಮತ್ತು ದಾಖಲೆಗಳನ್ನು ಪರಿಶೀಲಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.ಅರ್ಜಿ ಸಲ್ಲಿಸಿದ ತಕ್ಷಣ ರೇಷನ್ ಕಾರ್ಡ್ ಸಿಗುತ್ತದೆ ಎಂದು ನಿರೀಕ್ಷಿಸಬಾರದು. ಪರಿಶೀಲನೆಗೆ ಬೇಕಾಗುವ ಸಮಯವು ಅರ್ಜಿಯ ಸ್ವರೂಪ ಮತ್ತು ಇಲಾಖೆಯ ಪ್ರಕ್ರಿಯೆಯನ್ನು ಅವಲಂಬಿಸಿರುತ್ತದೆ.ಯಾವುದೇ ಹೆಚ್ಚುವರಿ ದಾಖಲೆ ಅಥವಾ ಮಾಹಿತಿ ಅಗತ್ಯವಿದ್ದರೆ, ಅಧಿಕೃತ ವ್ಯವಸ್ಥೆಯಲ್ಲಿ ಸೂಚನೆ ನೀಡಬಹುದು.

ಹೊಸ ರೇಷನ್ ಕಾರ್ಡ್ ಅರ್ಜಿಯ Status ಹೇಗೆ ಪರಿಶೀಲಿಸುವುದು?

ಅರ್ಜಿ ಸಲ್ಲಿಸಿದ ನಂತರ ಅದರ ಸ್ಥಿತಿಯನ್ನು ಪರಿಶೀಲಿಸಲು ನೀವು ಪಡೆದ ಅರ್ಜಿ ಸಂಖ್ಯೆ ಅಥವಾ Reference Number ಅನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ.ಆಹಾರ ಕರ್ನಾಟಕದ ಅಧಿಕೃತ ಪೋರ್ಟಲ್‌ಗೆ ಹೋಗಿ ರೇಷನ್ ಕಾರ್ಡ್‌ಗೆ ಸಂಬಂಧಿಸಿದ ಅರ್ಜಿ ಸ್ಥಿತಿ / Status ಸೇವೆಯನ್ನು ಹುಡುಕಿ. ಅಲ್ಲಿ ಕೇಳುವ ಅರ್ಜಿ ಸಂಖ್ಯೆ ಅಥವಾ ಇತರೆ ವಿವರಗಳನ್ನು ನಮೂದಿಸಿ.

ಸ್ಥಿತಿ ಕಾಣಿಸದಿದ್ದರೆ:

  1. ಅರ್ಜಿ ಸಂಖ್ಯೆಯನ್ನು ಮತ್ತೊಮ್ಮೆ ಪರಿಶೀಲಿಸಿ.
  2. ಸರಿಯಾದ ವಿವರ ನಮೂದಿಸಿದ್ದೀರಾ ಎಂದು ನೋಡಿ.
  3. ಸ್ವಲ್ಪ ಸಮಯದ ನಂತರ ಮತ್ತೆ ಪರಿಶೀಲಿಸಿ.
  4. ಸಮಸ್ಯೆ ಮುಂದುವರಿದರೆ ಅಧಿಕೃತ ಸೇವಾ ಕೇಂದ್ರ ಅಥವಾ ಆಹಾರ ಇಲಾಖೆಯ ಸಹಾಯವಾಣಿಯನ್ನು ಸಂಪರ್ಕಿಸಿ.

ಅರ್ಜಿಯಲ್ಲಿ ತಪ್ಪಾದರೆ ಏನು ಮಾಡಬೇಕು?

ಅರ್ಜಿಯನ್ನು ಸಲ್ಲಿಸುವ ಮೊದಲು ಎಲ್ಲ ಮಾಹಿತಿಯನ್ನು ಪರಿಶೀಲಿಸುವುದು ಅತ್ಯಂತ ಮುಖ್ಯ. Submit ಮಾಡಿದ ನಂತರ ಹೆಸರು, ಆಧಾರ್ ಸಂಖ್ಯೆ ಅಥವಾ ಕುಟುಂಬದ ಸದಸ್ಯರ ವಿವರದಲ್ಲಿ ತಪ್ಪು ಕಂಡುಬಂದರೆ, ಅದನ್ನು ಸ್ವತಃ ಬದಲಾಯಿಸಲು ಸಾಧ್ಯವಾಗದೆ ಇರಬಹುದು ಇಂತಹ ಸಂದರ್ಭದಲ್ಲಿ ಅಧಿಕೃತ ನಿಯಮವನ್ನು ಪರಿಶೀಲಿಸಿ ತಿದ್ದುಪಡಿ ಮಾಡಬಹುದು ಎಂದರೆ ಸರಿಯಾದ ಮಾಹಿತಿಯೊಂದಿಗೆ ತಿದ್ದುಪಡಿ ಮಾಡಿ .ತಿದ್ದುಪಡಿ ಆಯ್ಕೆ ಲಭ್ಯವಿಲ್ಲದಿದ್ದರೆ, ಅಧಿಕೃತ ಸೇವಾ ಕೇಂದ್ರ ಅಥವಾ ಆಹಾರ ಇಲಾಖೆಯ ಸಂಬಂಧಿತ ಕಚೇರಿಯನ್ನು ಸಂಪರ್ಕಿಸಿ ಸರಿಯಾದ ವಿಧಾನ ತಿಳಿದುಕೊಳ್ಳಿ.ತಪ್ಪು ಮಾಹಿತಿಯನ್ನು ನೀಡಿ ಮತ್ತೊಂದು ಹೊಸ ಅರ್ಜಿ ಸಲ್ಲಿಸುವ ಮೊದಲು ಅಧಿಕಾರಿಗಳಿಂದ ಮಾಹಿತಿ ಪಡೆದು ನಂತರ ಮತ್ತೊಮ್ಮೆ ಅರ್ಜಿ ಸಲ್ಲಿಸಿ.

ಸೇವಾ ಕೇಂದ್ರದ ಮೂಲಕ ಅರ್ಜಿ ಸಲ್ಲಿಸಬಹುದೇ?

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ತೊಂದರೆ ಇರುವವರು, ಸೇವೆ ಲಭ್ಯವಿದ್ದಲ್ಲಿ ಅಧಿಕೃತ ಕರ್ನಾಟಕ ಒನ್, ಗ್ರಾಮ ಒನ್ ಅಥವಾ ಬೆಂಗಳೂರು ಒನ್ ಮುಂತಾದ ಸೇವಾ ಕೇಂದ್ರಗಳಲ್ಲಿ ರೇಷನ್ ಕಾರ್ಡ್ ಸೇವೆಯ ಬಗ್ಗೆ ವಿಚಾರಿಸಿ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಸೇವೆ ಲಭ್ಯ ಇದ್ದರೆ ಅರ್ಜಿ ಸಲ್ಲಿಸಿ .ಕರ್ನಾಟಕದ ಕೆಲವು ಅಧಿಕೃತ ಜಿಲ್ಲಾ ಸರ್ಕಾರಿ ಪುಟಗಳು ರೇಷನ್ ಕಾರ್ಡ್ ಸೇವೆಗಳಿಗೆ ಆಹಾರ ಪೋರ್ಟಲ್ ಮತ್ತು ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸುವುದರ ಬಗ್ಗೆ ಮಾಹಿತಿ ನೀಡಲಾಗಿದೆ. ಆದರೆ ಸೇವಾ ಕೇಂದ್ರಕ್ಕೆ ಹೋಗುವ ಮೊದಲು ಆ ದಿನ ಯಾವ ಸೇವೆ ಲಭ್ಯವಿದೆ ಎಂಬುದನ್ನು ತಿಳಿದುಕೊಂಡು ನಂತರ ಸೇವಾಕೇಂದ್ರಕ್ಕೆ ಬೇಟಿ ನೀಡಿ ಸೇವೆ ಲಭ್ಯವಿಲ್ಲದಿದರೆ ನಿಮ್ಮ ಸಮಯ ವ್ಯರ್ಥವಾಗುತ್ತದೆ .

ಹೊಸ ರೇಷನ್ ಕಾರ್ಡ್ ಅರ್ಜಿಯಲ್ಲಿ ಗಮನಿಸಬೇಕಾದ ವಿಷಯಗಳು

ರೇಷನ್ ಕಾರ್ಡ್ ಅರ್ಜಿ ಸಲ್ಲಿಸುವಾಗ ಕುಟುಂಬದ ಎಲ್ಲ ಸದಸ್ಯರ ಮಾಹಿತಿಯನ್ನು ಸರಿಯಾದ ದಾಖಲೆಯೊಂದಿಗೆ ನೀಡಬೇಕು. ಆಧಾರ್‌ನಲ್ಲಿ ಇರುವ ಹೆಸರು ಮತ್ತು ಅರ್ಜಿಯಲ್ಲಿ ನೀಡುವ ಹೆಸರು ಸಾಧ್ಯವಾದಷ್ಟು ಒಂದೇ ರೀತಿಯಲ್ಲಿರಲಿ.ಮೊಬೈಲ್ ಸಂಖ್ಯೆ ಸರಿಯಾಗಿ ನೀಡುವುದು ಕೂಡ ಮುಖ್ಯ. ಮುಂದೆ ಅರ್ಜಿ ಅಥವಾ ಸೇವೆಗೆ ಸಂಬಂಧಿಸಿದ ಮಾಹಿತಿ ಪಡೆಯಲು ನೋಂದಾಯಿತ ಮೊಬೈಲ್ ಸಂಖ್ಯೆ ಅಗತ್ಯವಾಗಬಹುದು.ಅರ್ಜಿಯನ್ನು ಸಲ್ಲಿಸಿದ ನಂತರ ದೊರೆಯುವ ಅರ್ಜಿ ಸಂಖ್ಯೆಯನ್ನು ಕಳೆದುಕೊಳ್ಳಬೇಡಿ. ಯಾವುದೇ ಸಮಸ್ಯೆ ಬಂದರೆ ಅದೇ ಸಂಖ್ಯೆಯ ಮೂಲಕ ಅರ್ಜಿಯ ಸ್ಥಿತಿ ತಿಳಿಯಲು ಸುಲಭವಾಗುತ್ತದೆ.

ಹೊಸ ರೇಷನ್ ಕಾರ್ಡ್ ಅರ್ಜಿಗೆ ಸಂಬಂಧಿಸಿದ ಮುಖ್ಯ ಮಾಹಿತಿ

ವಿಷಯಮಾಹಿತಿ
ಇಲಾಖೆಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ
ಅಧಿಕೃತ ಪೋರ್ಟಲ್ಆಹಾರ ಕರ್ನಾಟಕ
ಆನ್‌ಲೈನ್ ಸೇವೆಅಧಿಕೃತ ಪೋರ್ಟಲ್‌ನಲ್ಲಿ ಲಭ್ಯವಿರುವ ಸೇವೆಯ ಪ್ರಕಾರ
ಅಗತ್ಯ ದಾಖಲೆಅರ್ಜಿಯ ಪ್ರಕಾರ ಬದಲಾಗಬಹುದು
ಅರ್ಜಿ ಸಂಖ್ಯೆSubmit ಮಾಡಿದ ನಂತರ ಉಳಿಸಿಕೊಳ್ಳಬೇಕು
Statusಅಧಿಕೃತ ಪೋರ್ಟಲ್‌ನಲ್ಲಿ ಪರಿಶೀಲಿಸಬಹುದು
ಸೇವಾ ಕೇಂದ್ರಅಧಿಕೃತ ಸೇವಾ ಕೇಂದ್ರಗಳಲ್ಲಿ ವಿಚಾರಿಸಬಹುದು
ಸಹಾಯವಾಣಿ1967
ಪರ್ಯಾಯ ಸಂಖ್ಯೆ1800-425-9339

ಅಧಿಕೃತ ವೆಬ್‌ಸೈಟ್ ಮತ್ತು ಆಪ್

ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹಾಗೂ ರೇಷನ್ ಕಾರ್ಡ್‌ಗೆ ಸಂಬಂಧಿಸಿದ ಸೇವೆಗಳಿಗಾಗಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ವೆಬ್‌ಸೈಟ್ ಬಳಸಬಹುದು.

👉 ಕರ್ನಾಟಕ ಆಹಾರ ಇಲಾಖೆಯ ಅಧಿಕೃತ Ahara ವೆಬ್‌ಸೈಟ್

ರೇಷನ್ ಕಾರ್ಡ್ ಹಾಗೂ ಪಡಿತರ ಸಂಬಂಧಿತ ಮಾಹಿತಿಯನ್ನು ಪರಿಶೀಲಿಸಲು ಕೇಂದ್ರ ಸರ್ಕಾರದ Mera Ration App ಬಳಸಬಹುದು.

👉 Mera Ration App – Google Play Store

ಅರ್ಜಿ ಸಲ್ಲಿಸುವ ಮೊದಲು ಸೇವೆ ಲಭ್ಯವಿದೆಯೇ ಎಂಬುದನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಿ.

ಕೊನೆಯ ಮಾತು

ಹೊಸದಾಗಿ ಮದುವೆಯಾದವರು ಹಾಗೆ ಕುಟುಂಬದಿಂದ ಬೇರ್ಪಟ್ಟವರು ಅರ್ಜಿ ಸಲ್ಲಿಸುವಾಗ ಸರಿಯಾದ ದಾಖಲೆಗಳನ್ನು ನೀಡುವುದು ಮುಖ್ಯ ಯಾಕೆಂದರೆ ದಾಖಲೆಗಳಲ್ಲಿ ವ್ಯತ್ಯಾಸ ಕಂಡು ಬಂದರೆ ಅರ್ಜಿ ಹೆಚ್ಚಾಗಿ ತಿರಸ್ಕಾರವಾಗುತ್ತದೆ.ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಮಾಹಿತಿ ಹಾಗೂ ನಿಯಮಗಳನ್ನು ಅಧಿಕೃತ ಮೂಲಗಳಿಂದ ತಿಳಿದುಕೊಳ್ಳಿ, ರೇಷನ್ ಕಾರ್ಡ್ ಸರ್ಕಾರದ ಹಲವಾರು ಯೋಜನೆಗಳಿಗೆ ಹಾಗು ಸರ್ಕಾರ ನೀಡುವ ಆಹಾರ ಧಾನ್ಯಗಳನ್ನ ಉಚಿತವ್ಗೈ ಪಡೆದುಕೊಳ್ಳುದ್ದಕ್ಕೆ ಸಹಾಯಮಾಡುತ್ತದೆ.ಮುಖ್ಯವ್ಗೈ ಯಾವುದೇ ಅನಾಮಿಕ ವ್ಯಕ್ತಿಗೆ ಹೊಸ ರೇಷನ್ ಕಾರ್ಡ್ ಮಾಡಲು ಹಣ ನೀಡಬೇಡಿ ಸರ್ಕಾರ ಕೇವಲ ಅಧಿಕೃತ ವೆಬ್ಸೈಟ್ ಹಾಗೆ ಸೇವಾಕೇಂದ್ರಗಳ ಮೂಲಕವೇ ಅರ್ಜಿ ಸ್ವೀಕಾರ ಮಾಡುವುದು, ವಂಚಿತರಿಂದ ಆದಷ್ಟು ದೂರವಿರಿ,

Leave a Comment