ಕೇವಲ 5 ನಿಮಿಷದಲ್ಲಿ ನಿಮ್ಮ ಮೊಬೈಲ್ನಲ್ಲೇ ಹೊಸ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸಿ!

| ಯೋಜನೆ ಹೆಸರು | ಹೊಸ ರೇಷನ್ ಕಾರ್ಡ್ |
|---|---|
| ಅರ್ಜಿ ಆರಂಭ | ಮೇ 2026 |
| ಅರ್ಹರು | ಕರ್ನಾಟಕ ನಿವಾಸಿಗಳು |
| ಅರ್ಜಿ ವಿಧಾನ | ಆನ್ಲೈನ್ / ಗ್ರಾಮ ಒನ್ |
ನಮ್ಮ ಇಂದಿನ ಜೀವನ ಶೈಲಿಯಲ್ಲಿ ಆಧಾರ್ ಕಾರ್ಡ್, ವೋಟರ್ ಐಡಿ ಎಷ್ಟು ಮುಖ್ಯವೋ, ರೇಷನ್ ಕಾರ್ಡ್ (ಪಡಿತರ ಚೀಟಿ) ಕೂಡ ಅಷ್ಟೇ ಮುಖ್ಯವಾದ ಒಂದು ದಾಖಲೆಯಾಗಿದೆ. ನಮ್ಮ ಅಜ್ಜ ಅಪ್ಪನ ಕಾಲದಲ್ಲಿ ಕೇವಲ ಅಕ್ಕಿ, ಬೇಳೆ ತರಲು ಮಾತ್ರ ರೇಷನ್ ಕಾರ್ಡ್ ಬಳಸಲಾಗುತ್ತಿತ್ತು. ಆದರೆ, ಇಂದಿನ ದಿನಗಳಲ್ಲಿ ಸರ್ಕಾರದಿಂದ ನೀಡುವ ಯಾವುದೇ ಸೌಲಭ್ಯ ಅಥವಾ ಗ್ಯಾರಂಟಿ ಯೋಜನೆಗಳಿಗೆ ಹಾಗೆ ಆರ್ಥಿಕ ನೆರವು ಪಡೆಯಬೇಕಾದರೆ ರೇಷನ್ ಕಾರ್ಡ್ ದಾಖಲೆಯು ಕಡ್ಡಾಯವಾಗಿದೆ.
ನೀವು ಹೊಸದಾಗಿ ಮದುವೆಯಾಗಿ ನಿಮ್ಮ ಕುಟುಂಬ ಬಿಟ್ಟು ಪ್ರತ್ಯೇಕ ಸಂಸಾರ ಶುರು ಮಾಡಿರಬಹುದು, ಅಥವಾ ಹಳೆಯ ಕಾರ್ಡ್ನಲ್ಲಿ ಸಮಸ್ಯೆ ಇದ್ದು ಹೊಸ ಕಾರ್ಡ್ಗಾಗಿ ಕಾಯುತ್ತಿರಬಹುದು, ನಿಮ್ಮಂಥ ಹಲವಾರು ಮಂದಿಗೆ ಸಹಾಯವಾಗಲಿ ಎಂದು ಸರ್ಕಾರ ಹೊಸ ಪಡಿತರ ಚೀಟಿ ಗೆ ಅರ್ಜಿ ಬಿಟ್ಟಿದೆ. ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕುವ ಮುನ್ನ,ನೀವು ತಿಳಿದುಕೊಳ್ಳಬೇಕಾದ ಹಲವಾರು ವಿಷಯ ಹಾಗೆ ಮಾಹಿತಿ ಇಲ್ಲಿದೆ. ಸಂಪೂರ್ಣ ಮಾಹಿತಿಯನ್ನು ಗಮನವಿಟ್ಟು ಓದಿ ನಂತರ ಹೊಸ ರೇಷನ್ರೇ ಕಾರ್ಡ್ಷ ಗೆ ಅರ್ಜಿ ಸಲ್ಲಿಸಿ.ಯಾಕೆಂದರೆ ಸುಮ್ಮನೆ ಸೇವಾ ಸೆಂಟರ್ಗೆ ಹೋಗಿ ಅರ್ಜಿ ಹಾಕಿ ತಿರಸ್ಕೃತಗೊಳ್ಳುವ ಬದಲು, ರೇಷನ್ ಕಾರ್ಡ್ ಅಂದರೆ ಏನು? ಅದರಿಂದ ಏನೆಲ್ಲಾ ಉಪಯೋಗಗಳಿವೆ? ಎಪಿಎಲ್ (APL) ಮತ್ತು ಬಿಪಿಎಲ್ (BPL) ಕಾರ್ಡ್ಗಳ ನಡುವಿನ ವ್ಯತ್ಯಾಸವೇನು? ಮತ್ತು ಹೊಸ ಕಾರ್ಡ್ಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ಮೊದಲೇ ತಿಳಿದುಕೊಳ್ಳುವುದು ಉತ್ತಮ. ನಿಮಗೆ ಅರ್ಥ ಆಗುವ ಹಾಗೆ ಸರಳ ಭಾಷೆಯಲ್ಲಿ ಮಾಹಿತಿಯನ್ನು ವಿವರಿಸಲಾಗಿದೆ. ಗಮನವಿಟ್ಟು ಓದಿ ತಿಳಿದುಕೊಳ್ಳಿ.
ರೇಷನ್ ಕಾರ್ಡ್ (Ration Card) ಅಂದರೆ ಏನು?
ರೇಷನ್ ಕಾರ್ಡ್ ಅಥವಾ ಪಡಿತರ ಚೀಟಿ ರಾಜ್ಯ ಸರ್ಕಾರವು ತನ್ನ ರಾಜ್ಯದ ಜನರಿಗೆ ನೀಡುವ ಅಧಿಕೃತ ದಾಖಲೆಯಾಗಿದೆ. ಇದು ಸಾರ್ವಜನಿಕ ವಿತರಣಾ ವ್ಯವಸ್ಥೆಯ (Public Distribution System – PDS) ಅಡಿಯಲ್ಲಿ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ರಿಯಾಯಿತಿ ದರದಲ್ಲಿ ಅಥವಾ ಉಚಿತವಾಗಿ ದಿನಸಿ ವಸ್ತುಗಳನ್ನು (ಆಹಾರ ಧಾನ್ಯಗಳನ್ನು) ವಿತರಿಸುವ ಉದ್ದೇಶದಿಂದ ಜಾರಿಗೆ ತಂದಿರುವ ವ್ಯವಸ್ಥೆಯಾಗಿದೆ.
ಆದರೆ, ಕಾನೂನಿನ ದೃಷ್ಟಿಯಲ್ಲಿ ನೋಡಿದಾಗ ಇದೊಂದು ಕೇವಲ ದಿನಸಿ ತರುವ ಕಾರ್ಡ್ ಅಲ್ಲ. ಇದೊಂದು ಅಧಿಕೃತ ಗುರುತಿನ ಚೀಟಿ (Identity Proof) ಮತ್ತು ವಿಳಾಸದ ಆಧಾರವಾಗಿ (Address Proof) ಕೂಡ ಕೆಲಸ ಮಾಡುತ್ತದೆ. ಪ್ರತಿಯೊಂದು ಕುಟುಂಬಕ್ಕೂ ಒಂದೇ ರೇಷನ್ ಕಾರ್ಡ್ ಇರುತ್ತದೆ ಮತ್ತು ಆ ಕುಟುಂಬದ ಮುಖ್ಯಸ್ಥರ (ಸಾಮಾನ್ಯವಾಗಿ ಹಿರಿಯ ಮಹಿಳೆ) ಹೆಸರಿನಲ್ಲಿ ಈ ಕಾರ್ಡ್ ಅನ್ನು ನೀಡಲಾಗುತ್ತದೆ. ಕುಟುಂಬದ ಇತರ ಸದಸ್ಯರ ಹೆಸರು ಒಂದೇ ರೇಷನ್ಮಾ ಕಾರ್ಡ್ಡ ಅಥವಾ ಪಡಿತರ ಚೀಟಿಯಲ್ಲಿ ಸೇರಿಸಲಾಗಿರುತ್ತದೆ.
ರೇಷನ್ ಕಾರ್ಡ್ ಏಕೆ ಬೇಕು? ಇದರಿಂದ ಆಗುವ ಪ್ರಮುಖ ಉಪಯೋಗಗಳೇನು?
ಕೆಲವರು “ನಮಗೆ ಸರ್ಕಾರ ಕೊಡುವ ಉಚಿತ ದಿನಸಿ ವಸ್ತುಗಳು ಬೇಡ, ಹಾಗಾಗಿ ನಮಗೆ ರೇಷನ್ ಕಾರ್ಡ್ ಕೂಡ ಬೇಡ” ಎಂದು ಯೋಚಿಸುತ್ತಾರೆ. ಆದರೆ, ಇದು ಅವರ ತಪ್ಪು ಕಲ್ಪನೆ. ರೇಷನ್ ಕಾರ್ಡ್ ಕೇವಲ ಆಹಾರಕ್ಕಾಗಿ ಮಾತ್ರ ಸೀಮಿತವಾಗಿಲ್ಲ. ಇದರಿಂದ ಸಿಗುವ ಲಾಭಗಳು ಮತ್ತು ಇದರ ಉಪಯೋಗಗಳ ಪಟ್ಟಿ ಬಹಳ ದೊಡ್ಡದಿದೆ:
1. ಸರ್ಕಾರದ ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲು: ಕರ್ನಾಟಕದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಸಿದ್ದರಾಮಯ್ಯನವರ ಕಾಂಗ್ರೆಸ್ ಪಕ್ಷದ ಗ್ಯಾರೆಂಟಿ ಯೋಜನೆ ‘ಗೃಹಲಕ್ಷ್ಮಿ’ (ಪ್ರತಿ ತಿಂಗಳು ₹2000), ‘ಅನ್ನಭಾಗ್ಯ’ (ಉಚಿತ ಅಕ್ಕಿ ಮತ್ತು ಹಣ), ‘ಗೃಹಜ್ಯೋತಿ’ (ಉಚಿತ ವಿದ್ಯುತ್) ಮುಂತಾದ ಬಹುತೇಕ ಯೋಜನೆಗಳ ಲಾಭ ಪಡೆಯಲು ರೇಷನ್ ಕಾರ್ಡ್ ಇರುವುದು ಅತ್ಯಂತ ಕಡ್ಡಾಯವಾಗಿದೆ. ಕಾರ್ಡ್ ಇಲ್ಲದಿದ್ದರೆ ಈ ಯಾವ ಯೋಜನೆಗಳ ಹಣವೂ ನಿಮಗೆ ಸಿಗುದಿಲ್ಲ.
2. ಅಧಿಕೃತ ಗುರುತಿನ ಮತ್ತು ವಿಳಾಸದ ಪುರಾವೆಯಾಗಿ: ನೀವು ಯಾವುದೇ ಬ್ಯಾಂಕ್ನಲ್ಲಿ ಹೊಸ ಅಕೌಂಟ್ ತೆರೆಯಲು ಹೋದಾಗ, ಪಾಸ್ಪೋರ್ಟ್ ಮಾಡಿಸಲು ಹೋದಾಗ, ಅಥವಾ ಎಲ್.ಪಿ.ಜಿ (LPG) ಗ್ಯಾಸ್ ಕನೆಕ್ಷನ್ ಪಡೆಯಲು ಹೋದಾಗ ವಿಳಾಸದ ಅಧಿಕೃತ ಪುರಾವೆಯಾಗಿ ರೇಷನ್ ಕಾರ್ಡ್ ಅನ್ನು ಕೇಳಲಾಗುತ್ತದೆ. ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ ಮಾಡಿಸಲೂ ಹಾಗೆ ಹಲವಾರು ಸರ್ಕಾರಿ ದಾಖಲೆಯನ್ನು ಮಾಡಿಸಲು ಇದು ಸಹಕಾರಿ.
3. ಆರೋಗ್ಯ ಮತ್ತು ವಿಮಾ ಸೌಲಭ್ಯಗಳಿಗೆ (ಆಯುಷ್ಮಾನ್ ಭಾರತ್): ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಂಟಿ ಯೋಜನೆಯಾದ ‘ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ’ ಕಾರ್ಡ್ ಮಾಡಿಸಲು ಬಿಪಿಎಲ್ ರೇಷನ್ ಕಾರ್ಡ್ ಬಹಳ ಮುಖ್ಯ. ಬಿಪಿಎಲ್ ಕಾರ್ಡ್ ಇದ್ದರೆ ಖಾಸಗಿ ಆಸ್ಪತ್ರೆಗಳಲ್ಲೂ ಲಕ್ಷಾಂತರ ರೂಪಾಯಿ ಮೌಲ್ಯದ ಉಚಿತ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ಪಡೆದುಕೊಳ್ಳಬಹುದು.
4. ಶಿಕ್ಷಣ ಮತ್ತು ವಿದ್ಯಾರ್ಥಿವೇತನ (Scholarships): ಆರ್ಟಿಇ (RTE – ಶಿಕ್ಷಣ ಹಕ್ಕು ಕಾಯ್ದೆ) ಅಡಿಯಲ್ಲಿ ಖಾಸಗಿ ಶಾಲೆಗಳಲ್ಲಿ ನಿಮ್ಮ ಮಕ್ಕಳಿಗೆ ಉಚಿತ ಸೀಟು ಪಡೆಯಲು, ಕಾಲೇಜುಗಳಲ್ಲಿ ಶುಲ್ಕ ವಿನಾಯಿತಿ ಪಡೆಯಲು, ಮತ್ತು ಸರ್ಕಾರದ ಹಲವಾರು ಬಗೆಯ ಸ್ಕಾಲರ್ಶಿಪ್ಗಳಿಗೆ ಅರ್ಜಿ ಸಲ್ಲಿಸಲು ಪೋಷಕರ ಆದಾಯ ಮತ್ತು ರೇಷನ್ ಕಾರ್ಡ್ ಅನ್ನು ಕೇಳಲಾಗುತ್ತದೆ .
5. ಸರ್ಕಾರದ ವಸತಿ ಯೋಜನೆಗಳಿಗೆ: ಬಡವರಿಗಾಗಿ ಸರ್ಕಾರ ನೀಡುವ ‘ಆಶ್ರಯ ಮನೆ’, ‘ಅಂಬೇಡ್ಕರ್ ವಸತಿ ಯೋಜನೆ’, ‘ಪ್ರಧಾನ ಮಂತ್ರಿ ಆವಾಸ್ ಯೋಜನೆ’ ಮುಂತಾದ ಉಚಿತ ಮನೆಗಳಿಗಾಗಿ ಅರ್ಜಿ ಸಲ್ಲಿಸಲು ಬಿಪಿಎಲ್ ರೇಷನ್ ಕಾರ್ಡ್ ಪ್ರಮುಖ ದಾಖಲೆಯಾಗಿದೆ.
ಕರ್ನಾಟಕದಲ್ಲಿ APL ಮತ್ತು BPL ರೇಷನ್ ಕಾರ್ಡ್ಗಳ ನಡುವಿನ ಪ್ರಮುಖ ವ್ಯತ್ಯಾಸಗಳು
ರೇಷನ್ ಕಾರ್ಡ್ಗಳಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ. ಜನರ ಆರ್ಥಿಕ ಪರಿಸ್ಥಿತಿ ಮತ್ತು ಆದಾಯದ ಆಧಾರದ ಮೇಲೆ ಸರ್ಕಾರವು ರೇಷನ್ ಕಾರ್ಡ್ ಎರಡು ರೀತಿಯಾಗಿ ವಿಂಗಡಿಸಿದೆ. APL ಮತ್ತು BPL ಎಂದು ಇವೆರಡೆರ ನಡುವಿನ ವ್ಯತ್ಯಾಸಗಳು ಇಲ್ಲಿವೆ:
1. ಬಿಪಿಎಲ್ ಕಾರ್ಡ್ (BPL – Below Poverty Line):
- ಯಾರಿಗೆ ಸಿಗುತ್ತದೆ? ಬಡತನ ರೇಖೆಗಿಂತ ಕೆಳಗಿರುವ, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಇದನ್ನು ನೀಡಲಾಗುತ್ತದೆ. ಕರ್ನಾಟಕದಲ್ಲಿ ಇದನ್ನು ಆದ್ಯತಾ ಕುಟುಂಬ (Priority Household – PHH) ಎಂದು ಕರೆಯುತ್ತಾರೆ.
- ಆದಾಯ ಮಿತಿ: ಈ ಕಾರ್ಡ್ ಪಡೆಯಲು ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂಪಾಯಿಗಳಿಗಿಂತ ಕಡಿಮೆ ಇರಬೇಕು (ಗ್ರಾಮೀಣ ಹಾಗೂ ನಗರ ಪ್ರದೇಶಗಳೆರಡಕ್ಕೂ).
- ಷರತ್ತುಗಳು: ಕುಟುಂಬದಲ್ಲಿ ಯಾರೂ ಸರ್ಕಾರಿ ಕೆಲಸ ಹೊಂದಿರಬಾರದು, ಸ್ವಂತ ಕಾರು ಅಥವಾ ಟ್ರ್ಯಾಕ್ಟರ್ (ವಾಣಿಜ್ಯ ಬಳಕೆಯ ವಾಹನ) ಇರಬಾರದು, ಹಾಗೂ ಆದಾಯ ತೆರಿಗೆ ಪಾವತಿಸುತ್ತಿರಬಾರದು.
- ಬಣ್ಣ: ಈ ಕಾರ್ಡ್ಗಳನ್ನು ಸಾಮಾನ್ಯವಾಗಿ ಹಸಿರು (Green ) ಬಣ್ಣದಲ್ಲಿ ಮುದ್ರಿಸಲಾಗಿರುತ್ತದೆ.
2. ಎಪಿಎಲ್ ಕಾರ್ಡ್ (APL – Above Poverty Line):
- ಯಾರಿಗೆ ಸಿಗುತ್ತದೆ? ಬಡತನ ರೇಖೆಗಿಂತ ಮೇಲಿರುವ, ಅಂದರೆ ನಿರ್ದಿಷ್ಟ ಆದಾಯ ಮಿತಿಗಿಂತ ಹೆಚ್ಚು ಸಂಪಾದಿಸುವ ಕುಟುಂಬಗಳಿಗೆ ಇದನ್ನು ನೀಡಲಾಗುತ್ತದೆ. ಇದನ್ನು ಆದ್ಯತೇತರ ಕುಟುಂಬ (Non-Priority Household – NPHH) ಎನ್ನುತ್ತಾರೆ.
- ಆದಾಯ ಮಿತಿ: ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂ. ಗಳಿಗಿಂತ ಹೆಚ್ಚಿದ್ದರೆ ಅಥವಾ ಸರ್ಕಾರಿ ನೌಕರಿಯಲ್ಲಿದ್ದರೆ ಕಡ್ಡಾಯವಾಗಿ ಎಪಿಎಲ್ ಕಾರ್ಡ್ ಮಾತ್ರ ಸಿಗುತ್ತದೆ.
- ಷರತ್ತುಗಳು: ಇದಕ್ಕೆ ಯಾವುದೇ ಕಟ್ಟುನಿಟ್ಟಿನ ಆರ್ಥಿಕ ಷರತ್ತುಗಳಿಲ್ಲ. ಗುರುತಿನ ಚೀಟಿಗಾಗಿ ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದು.
- ಬಣ್ಣ: ಈ ಕಾರ್ಡ್ಗಳು ಬಿಳಿ (White) ಬಣ್ಣದಲ್ಲಿರುತ್ತವೆ.
(ಸೂಚನೆ: ಇದಲ್ಲದೆ, ಅತಿ ಬಡವರಿಗಾಗಿ ಎಎವೈ (AAY – Antyodaya Anna Yojana) ಎಂಬ ಹಳದಿ ಬಣ್ಣದ ಕಾರ್ಡ್ ಕೂಡ ಇದೆ, ಇದನ್ನು ನಿರ್ಗತಿಕರಿಗೆ, ವಿಧವೆಯರಿಗೆ ಮತ್ತು ತೀವ್ರ ಬಡತನದಲ್ಲಿರುವವರಿಗೆ ನೀಡಲಾಗುತ್ತದೆ.)
ರೇಷನ್ ಕಾರ್ಡ್ನಿಂದ ಸಿಗುವ ವಸ್ತುಗಳು ಮತ್ತು ಲಾಭಗಳ ಪೂರ್ಣ ವಿವರ
ಈಗ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಇದ್ದವರಿಗೆ ನ್ಯಾಯಬೆಲೆ ಅಂಗಡಿಗಳಲ್ಲಿ (Ration Shops) ಏನೇನು ಸಿಗುತ್ತದೆ ಮತ್ತು ಸರ್ಕಾರದ ಯೋಜನೆಗಳ ಲಾಭ ಹೇಗೆ ಸಿಗುತ್ತದೆ ಎಂಬುದನ್ನು ನೋಡೋಣ.
ಬಿಪಿಎಲ್ (BPL / PHH) ಕಾರ್ಡ್ದಾರರಿಗೆ ಸಿಗುವ ಲಾಭಗಳು:
- ಅನ್ನಭಾಗ್ಯ ಯೋಜನೆ: ಪ್ರತಿ ಬಿಪಿಎಲ್ ಕಾರ್ಡ್ನಲ್ಲಿರುವ ಪ್ರತಿಯೊಬ್ಬ ಸದಸ್ಯರಿಗೂ ತಲಾ 10 ಕೆಜಿ ಅಕ್ಕಿ ನೀಡಲು ಸರ್ಕಾರ ನಿರ್ಧರಿಸಿದೆ. ಪ್ರಸ್ತುತ, ಪ್ರತಿ ಸದಸ್ಯನಿಗೆ 5 ಕೆಜಿ ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುತ್ತಿದೆ ಮತ್ತು ಉಳಿದ 5 ಕೆಜಿ ಅಕ್ಕಿ ಬದಲು ಹಣ ಹಾಕಲಾಗುತ್ತಿದೆ.
- ಡಿಬಿಟಿ (DBT) ಹಣ: ಉಳಿದ 5 ಕೆಜಿ ಅಕ್ಕಿಯ ಬದಲಾಗಿ, ಪ್ರತಿ ಸದಸ್ಯನಿಗೆ ಕೆಜಿಗೆ 34 ರೂ. ನಂತೆ 170 ರೂಪಾಯಿಗಳನ್ನು ನೇರವಾಗಿ ಕುಟುಂಬದ ಯಜಮಾನಿಯ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ. (ಉದಾಹರಣೆಗೆ: ಮನೆಯಲ್ಲಿ 4 ಜನರಿದ್ದರೆ 680 ರೂ. ಹಣ ಬರುತ್ತದೆ).
- ಇತರ ವಸ್ತುಗಳು: ಕೆಲವು ವಿಶೇಷ ಹಬ್ಬಗಳ ಸಮಯದಲ್ಲಿ ಅಥವಾ ಸರ್ಕಾರದ ನಿರ್ಧಾರದಂತೆ ರಿಯಾಯಿತಿ ದರದಲ್ಲಿ ಸಕ್ಕರೆ, ಉಪ್ಪು, ಖಾದ್ಯ ತೈಲ (ಅಡುಗೆ ಎಣ್ಣೆ) ಮತ್ತು ಗೋಧಿಯನ್ನು ನೀಡಲಾಗುತ್ತದೆ.
- ಗೃಹಲಕ್ಷ್ಮಿ ಯೋಜನೆ: ಮನೆಯ ಯಜಮಾನಿಗೆ ಪ್ರತಿ ತಿಂಗಳು 2000 ರೂ. ಪಡೆಯಲು ಬಿಪಿಎಲ್ ಕಾರ್ಡ್ದಾರರು ನೇರವಾಗಿ ಅರ್ಹರಾಗುತ್ತಾರೆ.
ಎಪಿಎಲ್ (APL / NPHH) ಕಾರ್ಡ್ದಾರರಿಗೆ ಸಿಗುವ ಲಾಭಗಳು:
- ಎಪಿಎಲ್ ಕಾರ್ಡ್ದಾರರಿಗೆ ಉಚಿತವಾಗಿ ರೇಷನ್ ಸಿಗುವುದಿಲ್ಲ. ಆದರೆ, ಸರ್ಕಾರಿ ಗೋಡೌನ್ಗಳಲ್ಲಿ ಆಹಾರ ಧಾನ್ಯಗಳ ದಾಸ್ತಾನು ಹೆಚ್ಚಾಗಿದ್ದಾಗ, ಎಪಿಎಲ್ ಕಾರ್ಡ್ದಾರರಿಗೂ ರಿಯಾಯಿತಿ ದರದಲ್ಲಿ (ಸುಮಾರು 15 ರೂ. ಪ್ರತಿ ಕೆಜಿಗೆ) ಅಕ್ಕಿಯನ್ನು ವಿತರಿಸಲಾಗುತ್ತದೆ.
- ಇವರು ಅನ್ನಭಾಗ್ಯದ 170 ರೂ. ಡಿಬಿಟಿ ಹಣ ಪಡೆಯಲು ಅರ್ಹರಾಗಿರುವುದಿಲ್ಲ.
- ಆದರೆ, ಎಪಿಎಲ್ ಕಾರ್ಡ್ ಇದ್ದರೂ, ಅವರು ಟ್ಯಾಕ್ಸ್ ಕಟ್ಟುವವರಲ್ಲದಿದ್ದರೆ ಗೃಹಲಕ್ಷ್ಮಿ ಯೋಜನೆಯ (2000 ರೂ.) ಲಾಭ ಪಡೆಯಬಹುದು. ಜೊತೆಗೆ, ಗೃಹಜ್ಯೋತಿ ಉಚಿತ ವಿದ್ಯುತ್ ಯೋಜನೆಗೂ ಈ ಕಾರ್ಡ್ ಬಳಕೆಯಾಗುತ್ತದೆ.
ಹೊಸ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸಲು ಬೇಕಾಗುವ ಕಡ್ಡಾಯ ದಾಖಲೆಗಳು
ನೀವು ಹೊಸ ರೇಷನ್ ಕಾರ್ಡ್ ಮಾಡಿಸಲು ಸೈಬರ್ ಸೆಂಟರ್ ಅಥವಾ ನಾಡಕಚೇರಿಗೆ ಹೋಗುವ ಮುನ್ನ ಈ ಕೆಳಗಿನ ಎಲ್ಲಾ ಮೂಲ ದಾಖಲೆಗಳನ್ನು (Original Documents) ತಪ್ಪದೆ ತೆಗೆದುಕೊಂಡು ಹೋಗಿ:
- ಆಧಾರ್ ಕಾರ್ಡ್ (Aadhaar Card): ಕಾರ್ಡ್ನ ಮುಖ್ಯಸ್ಥೆ (ಮಹಿಳೆ) ಮತ್ತು ಕಾರ್ಡ್ಗೆ ಸೇರ್ಪಡೆ ಮಾಡಬೇಕಾದ ಎಲ್ಲಾ ಕುಟುಂಬ ಸದಸ್ಯರ ಆಧಾರ್ ಕಾರ್ಡ್ಗಳು ಕಡ್ಡಾಯ. ಆಧಾರ್ ಕಾರ್ಡ್ನಲ್ಲಿರುವ ಹೆಸರು, ಹುಟ್ಟಿದ ದಿನಾಂಕ ಮತ್ತು ವಿಳಾಸ ಸರಿಯಾಗಿರಬೇಕು.
- ಆದಾಯ ಪ್ರಮಾಣಪತ್ರ (Income Certificate): ನೀವು ಬಿಪಿಎಲ್ ಕಾರ್ಡ್ಗೆ ಅರ್ಜಿ ಹಾಕುತ್ತಿದ್ದರೆ, ಕಂದಾಯ ಇಲಾಖೆಯಿಂದ ಪಡೆದ, ಚಾಲ್ತಿಯಲ್ಲಿರುವ (ವ್ಯಾಲಿಡಿಟಿ ಇರುವ) ಆದಾಯ ಪ್ರಮಾಣಪತ್ರ ಅತ್ಯಗತ್ಯ. ಇದರಲ್ಲಿ ಆದಾಯ 1.2 ಲಕ್ಷಕ್ಕಿಂತ ಕಡಿಮೆ ಇರಬೇಕು.
- ಜಾತಿ ಪ್ರಮಾಣಪತ್ರ (Caste Certificate): ಎಸ್ಸಿ/ಎಸ್ಟಿ (SC/ST) ಅಥವಾ ಒಬಿಸಿ (OBC) ವರ್ಗದವರಾಗಿದ್ದರೆ ಜಾತಿ ಪ್ರಮಾಣಪತ್ರ ಒದಗಿಸುವುದು ಉತ್ತಮ.
- ವಯಸ್ಸಿನ ದೃಢೀಕರಣ: 5 ಅಥವಾ 6 ವರ್ಷದೊಳಗಿನ ಮಕ್ಕಳ ಹೆಸರನ್ನು ಸೇರಿಸಬೇಕಾದರೆ, ಅವರ ಜನನ ಪ್ರಮಾಣಪತ್ರ (Birth Certificate) ಬೇಕಾಗುತ್ತದೆ.
- ಮೊಬೈಲ್ ನಂಬರ್: ಅರ್ಜಿ ಸಲ್ಲಿಸುವಾಗ ಆಧಾರ್ ಕಾರ್ಡ್ಗೆ ಲಿಂಕ್ ಆಗಿರುವ ಆಕ್ಟಿವ್ ಮೊಬೈಲ್ ನಂಬರ್ ಇರಲೇಬೇಕು. ಒಟಿಪಿ (OTP) ಮತ್ತು ಮುಂದಿನ ಎಲ್ಲಾ ಮೆಸೇಜ್ಗಳು ಇದೇ ನಂಬರ್ಗೆ ಬರುತ್ತವೆ.
- ಭಾವಚಿತ್ರ (Photos): ಕುಟುಂಬದ ಹಿರಿಯ ಮಹಿಳೆಯ (ಯಜಮಾನಿಯ) ಪಾಸ್ಪೋರ್ಟ್ ಅಳತೆಯ ಇತ್ತೀಚಿನ 2-3 ಫೋಟೋಗಳು.
- ವಿಳಾಸದ ಪುರಾವೆ (Address Proof): ನೀವು ಪ್ರಸ್ತುತ ವಾಸವಿರುವ ಮನೆಯ ವಿದ್ಯುತ್ ಬಿಲ್ (ಕರೆಂಟ್ ಬಿಲ್), ನೀರಿನ ಬಿಲ್ ಅಥವಾ ಎಲ್.ಪಿ.ಜಿ ಗ್ಯಾಸ್ ರಸೀದಿ.
ಹೊಸ ರೇಷನ್ ಕಾರ್ಡ್ಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಸರಿಯಾದ ವಿಧಾನ
ಇತ್ತೀಚಿನ ದಿನಗಳಲ್ಲಿ ರೇಷನ್ ಕಾರ್ಡ್ ಪ್ರಕ್ರಿಯೆಯನ್ನು ಸರ್ಕಾರ ಸಂಪೂರ್ಣವಾಗಿ ಡಿಜಿಟಲೀಕರಣ ಮಾಡಿದೆ. ನೀವು ಖುದ್ದಾಗಿ ಆನ್ಲೈನ್ ಮೂಲಕ ಅಥವಾ ನಿಮ್ಮ ಹತ್ತಿರದ ಸೇವಾ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಬಹುದು. ಇದರ ಹಂತಹಂತದ ವಿಧಾನ ಇಲ್ಲಿದೆ:
ವಿಧಾನ 1: ಸೇವಾ ಕೇಂದ್ರಗಳ ಮೂಲಕ (ಅತ್ಯಂತ ಸುರಕ್ಷಿತ ಮತ್ತು ಸುಲಭ ಮಾರ್ಗ) ನಿಮ್ಮ ಊರಿನಲ್ಲಿರುವ ‘ಗ್ರಾಮ ಒನ್’ (Grama One), ‘ಬೆಂಗಳೂರು ಒನ್’, ‘ಕರ್ನಾಟಕ ಒನ್’ ಅಥವಾ ಸಿಎಸ್ಸಿ (CSC) ಕೇಂದ್ರಗಳಿಗೆ ಮೇಲ್ಕಂಡ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಹೋಗಿ. ಅಲ್ಲಿನ ಸಿಬ್ಬಂದಿ ತಮ್ಮ ಲಾಗಿನ್ ಮೂಲಕ ನಿಮ್ಮ ಆಧಾರ್ ಸಂಖ್ಯೆಯನ್ನು ಹಾಕಿ, ನಿಮ್ಮ ಕಣ್ಣಿನ ಸ್ಕ್ಯಾನ್ ಅಥವಾ ಬೆರಳಚ್ಚು (Biometric) ಪಡೆದು ಬಹಳ ನಿಖರವಾಗಿ ಅರ್ಜಿ ಸಲ್ಲಿಸುತ್ತಾರೆ. ಅರ್ಜಿ ಸಲ್ಲಿಕೆಯಾದ ನಂತರ ಅವರು ನಿಮಗೆ ಒಂದು ಸ್ವೀಕೃತಿ ಪತ್ರವನ್ನು (Acknowledgement Receipt) ನೀಡುತ್ತಾರೆ. ಇದನ್ನು ಭದ್ರವಾಗಿಟ್ಟುಕೊಳ್ಳಿ.
ವಿಧಾನ 2: ನೀವೇ ಸ್ವತಃ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವುದು (Online Process) ನಿಮಗೆ ಇಂಟರ್ನೆಟ್ ಮತ್ತು ಕಂಪ್ಯೂಟರ್ ಜ್ಞಾನವಿದ್ದರೆ, ಮನೆಯಲ್ಲೇ ಕುಳಿತು ಆಹಾರ ಇಲಾಖೆಯ ವೆಬ್ಸೈಟ್ ಮೂಲಕ ಅರ್ಜಿ ಹಾಕಬಹುದು.
- ಹಂತ 1: ಮೊದಲಿಗೆ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ನಲ್ಲಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
- ಹಂತ 2: ವೆಬ್ಸೈಟ್ನ ಮುಖಪುಟದಲ್ಲಿ (Home Page) ಕಾಣುವ “ಇ-ಸೇವೆಗಳು” (e-Services) ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ಹಂತ 3: ಎಡಭಾಗದಲ್ಲಿ ಮೆನು ಬರುತ್ತದೆ. ಅದರಲ್ಲಿ “ಇ-ಪಡಿತರ ಚೀಟಿ” (e-Ration Card) ವಿಭಾಗಕ್ಕೆ ಹೋಗಿ, “ಹೊಸ ಪಡಿತರ ಚೀಟಿ” (New Ration Card) ಎಂಬ ಬಟನ್ ಒತ್ತಿ.
- ಹಂತ 4: ಈಗ ನಿಮ್ಮ ಭಾಷೆ (ಕನ್ನಡ ಅಥವಾ ಇಂಗ್ಲಿಷ್) ಆಯ್ಕೆ ಮಾಡಿ, ನಿಮಗೆ ಬಿಪಿಎಲ್ ಬೇಕೇ ಅಥವಾ ಎಪಿಎಲ್ ಬೇಕೇ ಎಂಬುದನ್ನು ಸೆಲೆಕ್ಟ್ ಮಾಡಿ.
- ಹಂತ 5: ಕುಟುಂಬದ ಯಜಮಾನಿಯ ಆಧಾರ್ ನಂಬರ್ ನಮೂದಿಸಿ, ಒಟಿಪಿ (OTP) ಮೂಲಕ ವೆರಿಫೈ ಮಾಡಿ. ನಂತರ ಒಂದೊಂದಾಗಿ ಗಂಡ ಮತ್ತು ಮಕ್ಕಳ ಆಧಾರ್ ಸಂಖ್ಯೆಗಳನ್ನು ‘Add Member’ ಮಾಡುವ ಮೂಲಕ ಸೇರಿಸಿ.
- ಹಂತ 6: ಕೊನೆಯಲ್ಲಿ ನಿಮ್ಮ ಆದಾಯ ಪ್ರಮಾಣಪತ್ರದ ಆರ್ಡಿ (RD) ಸಂಖ್ಯೆ ಹಾಕಿ, ಸರಿಯಾದ ವಿಳಾಸ ಬರೆದು ಫಾರ್ಮ್ ಅನ್ನು ‘ಸಬ್ಮಿಟ್’ (Submit) ಮಾಡಿ.
ಅರ್ಜಿ ಸಲ್ಲಿಸಿದ ನಂತರ ಏನಾಗುತ್ತದೆ? ನೀವು ಅರ್ಜಿ ಸಲ್ಲಿಸಿದ ಮೇಲೆ, ಸಿಸ್ಟಮ್ ಆಟೋಮ್ಯಾಟಿಕ್ ಆಗಿ ನಿಮ್ಮ ಆದಾಯ, ವಾಹನ ಹೊಂದಿರುವ ಮಾಹಿತಿ, ಮತ್ತು ಸರ್ಕಾರಿ ನೌಕರಿ ಬಗ್ಗೆ ಡೇಟಾಬೇಸ್ ಮೂಲಕ ಪರಿಶೀಲಿಸುತ್ತದೆ. ಎಲ್ಲವೂ ಸರಿಯಿದ್ದರೆ, ನಿಮ್ಮ ತಾಲೂಕಿನ ಆಹಾರ ನಿರೀಕ್ಷಕರು (Food Inspector) ನಿಮ್ಮ ಮನೆಗೆ ಬಂದು ಭೌತಿಕ ಪರಿಶೀಲನೆ (Physical Verification) ಮಾಡುತ್ತಾರೆ. ಅವರು ಒಪ್ಪಿಗೆ ನೀಡಿದ ನಂತರ ನಿಮ್ಮ ರೇಷನ್ ಕಾರ್ಡ್ ಪ್ರಿಂಟ್ ಆಗಿ ಪೋಸ್ಟ್ ಮೂಲಕ ನಿಮ್ಮ ಮನೆಗೆ ಬರುತ್ತದೆ.
ಅಧಿಕೃತ ವೆಬ್ಸೈಟ್ ಮತ್ತು ಸಹಾಯವಾಣಿ (Helpline) ಮಾಹಿತಿ
ಯಾವುದೇ ಸುಳ್ಳು ವೆಬ್ಸೈಟ್ಗಳನ್ನು ನಂಬಬೇಡಿ. ಸರ್ಕಾರಿ ಕೆಲಸಗಳಿಗಾಗಿ ಯಾವಾಗಲೂ ಅಧಿಕೃತ ಲಿಂಕ್ಗಳನ್ನೇ ಬಳಸಿ.
- ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್: ahara.karnataka.gov.in
- ರಾಜ್ಯಮಟ್ಟದ ಟೋಲ್ ಫ್ರೀ ಸಹಾಯವಾಣಿ ಸಂಖ್ಯೆ (Toll-Free Number): 1967
- ಗ್ರಾಹಕ ಸಹಾಯವಾಣಿ ಸಂಖ್ಯೆ: 1800 425 9339
- ದೂರು ಸಲ್ಲಿಕೆ: ನಿಮ್ಮ ಕಾರ್ಡ್ ರಿಜೆಕ್ಟ್ ಆಗಿದ್ದರೆ ಅಥವಾ ಡೀಲರ್ ಸರಿಯಾಗಿ ರೇಷನ್ ಕೊಡದಿದ್ದರೆ ವೆಬ್ಸೈಟ್ನಲ್ಲಿರುವ ‘ಕುಂದು-ಕೊರತೆ’ (Grievance) ವಿಭಾಗದಲ್ಲಿ ಆನ್ಲೈನ್ ಮೂಲಕ ದೂರು ದಾಖಲಿಸಬಹುದು.
ಯಾವುದೇ ಕಾರಣಕ್ಕೂ ಮಧ್ಯವರ್ತಿಗಳಿಗೆ ಹಣ ಕೊಟ್ಟು ಮೋಸ ಹೋಗಬೇಡಿ. ಎಲ್ಲಾ ದಾಖಲೆಗಳು ಸರಿಯಾಗಿದ್ದರೆ, ಸರ್ಕಾರದ ನಿಯಮಗಳ ಪ್ರಕಾರ ರೇಷನ್ ಕಾರ್ಡ್ ನಿಮ್ಮ ಕೈಸೇರುತ್ತದೆ. ನೀವು ಹೊಸದಾಗಿ ಮದುವೆಯಾಗಿದ್ದರೆ, ಮೊದಲು ನಿಮ್ಮ ತವರು ಮನೆಯ ಕಾರ್ಡ್ನಿಂದ ನಿಮ್ಮ ಹೆಸರನ್ನು ಅಳಿಸಿ, ಆ ಅಳಿಸಿದ ಕಾಪಿಯ ಜೊತೆ ಗಂಡನ ಮನೆಯ ಹೊಸ ಕಾರ್ಡ್ಗೆ ಅರ್ಜಿ ಸಲ್ಲಿಸುವುದನ್ನು ಮರೆಯಬೇಡಿ.
ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs)
1. ರೇಷನ್ ಕಾರ್ಡ್ ಸ್ಟೇಟಸ್ ಆನ್ಲೈನ್ನಲ್ಲಿ ಚೆಕ್ ಮಾಡುವುದು ಹೇಗೆ? ಆಹಾರ ಇಲಾಖೆಯ ವೆಬ್ಸೈಟ್ನ ‘ಇ-ಸ್ಟೇಟಸ್’ (e-Status) ವಿಭಾಗದಲ್ಲಿ ನಿಮ್ಮ ರಸೀದಿ ಅಥವಾ ಆಧಾರ್ ಸಂಖ್ಯೆ ಹಾಕಿ ತಕ್ಷಣ ಚೆಕ್ ಮಾಡಬಹುದು.
2. ರೇಷನ್ ಕಾರ್ಡ್ ಕಳೆದುಹೋದರೆ ಆನ್ಲೈನ್ ಕಾಪಿ ಪಡೆಯಬಹುದೇ? ಹೌದು, ಇಲಾಖೆಯ ವೆಬ್ಸೈಟ್ನಲ್ಲಿ ನಿಮ್ಮ ಆಧಾರ್ ನಂಬರ್ ಮತ್ತು ಒಟಿಪಿ (OTP) ನಮೂದಿಸಿ ಇ-ರೇಷನ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಬಹುದು.
3. APL ಕಾರ್ಡ್ ಅನ್ನು BPL ಕಾರ್ಡ್ಗೆ ಬದಲಾಯಿಸಲು ಸಾಧ್ಯವೇ? ಹೌದು, ನಿಮ್ಮ ಆದಾಯ 1.20 ಲಕ್ಷಕ್ಕಿಂತ ಕಡಿಮೆಯಿದ್ದರೆ ಹೊಸ ಆದಾಯ ಪ್ರಮಾಣಪತ್ರದೊಂದಿಗೆ ತಾಲೂಕು ಕಚೇರಿಗೆ ಭೇಟಿ ನೀಡಿ ಬದಲಾಯಿಸಿಕೊಳ್ಳಬಹುದು.
4. ಒಬ್ಬರ ಹೆಸರನ್ನು ಎರಡು ರೇಷನ್ ಕಾರ್ಡ್ಗಳಲ್ಲಿ ಸೇರಿಸಬಹುದೇ? ಇಲ್ಲ, ಖಂಡಿತಾ ಸಾಧ್ಯವಿಲ್ಲ. ಆಧಾರ್ ಲಿಂಕ್ ಇರುವುದರಿಂದ ಒಂದೇ ಹೆಸರನ್ನು ಎರಡು ಕಡೆ ಸೇರಿಸಿದರೆ ಸಿಸ್ಟಮ್ ತಕ್ಷಣವೇ ಅರ್ಜಿಯನ್ನು ರಿಜೆಕ್ಟ್ ಮಾಡುತ್ತದೆ.
1 thought on “ಹೊಸ ರೇಷನ್ ಕಾರ್ಡ್ ಅರ್ಜಿ ಶುರು: ಇಂದೇ ಅಪ್ಲೈ ಮಾಡಿ, ಇಲ್ಲಿದೆ ಡೈರೆಕ್ಟ್ ಲಿಂಕ್!”