PMMVY ಗರ್ಭಿಣಿಯರಿಗೆ ₹5,000 ರಿಂದ ₹6,000 ಆರ್ಥಿಕ ನೆರವು

PMMVY ಮಾತೃ ವಂದನಾ ಯೋಜನೆ 2026 ಗರ್ಭಿಣಿಯರಿಗೆ ₹5000 ರಿಂದ ₹6000 ಆರ್ಥಿಕ ನೆರವು ಅರ್ಜಿ ಮತ್ತು ಅರ್ಹತೆ

PMMVY ಮಾತೃ ವಂದನಾ ಯೋಜನೆ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಸರ್ಕಾರದಿಂದ ಸಿಗುವ ಒಂದು ಆರ್ಥಿಕ ನೆರವು. ಅರ್ಹ ಗರ್ಭಿಣಿ ಮಹಿಳೆಯರು ಯಾವುದಾದರು ಆರ್ಥಿಕ ಸಹಾಯದ ಮಾಹಿತಿ ಹುಡುಕುತ್ತಿದ್ದರೆ ಅಂಥವರಿಗೆ ಈ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ (PMMVY) ಮುಖ್ಯವಾದ ಯೋಜನೆಯಾಗಿದೆ. ಈ ಯೋಜನೆಯ ಮೂಲಕ ಅರ್ಹ ಮಹಿಳೆಯರಿಗೆ ಗರ್ಭಾವಸ್ಥೆ ಮತ್ತು ಮಗುವಿಗೆ ಜನನ ನೀಡಿದ ನಂತರ ಕೆಲವು ಷರತ್ತುಗಳನ್ನು  ಮಹಿಳೆ ಪೂರೈಸಿದರೆ ಅಂತಹ ಅರ್ಹ ಮಹಿಳೆಯರಿಗೆ  ನೇರವಾಗಿ ಹಣದ ನೆರವು ನೀಡಲಾಗುತ್ತದೆ.ಈ ಯೋಜನೆಯಡಿ ಮೊದಲ ಮಗುವಿಗೆ ಒಟ್ಟು ₹5,000 ಮತ್ತು ಎರಡನೇ ಮಗು ಹೆಣ್ಣು ಮಗುವಾಗಿದ್ದರೆ ₹6,000 ಆರ್ಥಿಕ ನೆರವು ಸಿಗುತ್ತದೆ.ಆದರೆ ಈ ಯೋಜನೆಯ ಹಣವು ಪ್ರತಿಯೊಬ್ಬ ಗರ್ಭಿಣಿ ಮಹಿಳೆಗೂ ಸ್ವಯಂಚಾಲಿತವಾಗಿ ಸಿಗುವುದಿಲ್ಲ. ಸರ್ಕಾರ ನಿಗದಿಪಡಿಸಿರುವ ಅರ್ಹತಾ ನಿಯಮಗಳನ್ನು ಮಹಿಳೆ ಪೂರೈಸಿದ ನಂತರ ಆರ್ಥಿಕ ನೆರವು ನೀಡಲಾಗುವುದು. ಜೊತೆಗೆ ಗರ್ಭಧಾರಣೆ ನೋಂದಣಿ, ಆರೋಗ್ಯ ತಪಾಸಣೆ ಮತ್ತು ಮಗುವಿನ ಲಸಿಕೆಗೆ ಸಂಬಂಧಿಸಿದ ಕೆಲವು ಷರತ್ತುಗಳನ್ನು ಪೂರ್ಣಗೊಳಿಸಬೇಕು.ಯಾವ ರೀತಿಯ ನಿಯಮಗಳು ಅರ್ಜಿ ಸಲ್ಲಿಸೋದು ಹೇಗೆ ಅಂತ ಇಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ ತಿಳ್ಕೊಂಡು ನೀವು ಅಪ್ಲೈ ಮಾಡಬಹುದು.

PMMVY ಮಾತೃ ವಂದನಾ ಯೋಜನೆ ಎಂದರೇನು?

ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯು(PMMVY) ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಮೂಲಕ 1 ಜನವರಿ 2017 ರಿಂದ ಜಾರಿ ಮಾಡಿದ ಯೋಜನೆಯಾಗಿದೆ.ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರಿಗೆ ಗರ್ಭಾವಸ್ಥೆಯ ಸಮಯದಲ್ಲಿ ಉಂಟಾಗಬಹುದಾದ ಆದಾಯ ನಷ್ಟಕ್ಕೆ ಭಾಗಶಃ ಪರಿಹಾರ ನೀಡುವುದು ಮತ್ತು ತಾಯಿ ಹಾಗೂ ಮಗುವಿನ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡವ ಉದ್ದೇಶ ಈ ಯೋಜನೆಯ ಪ್ರಮುಖ ಅಂಶವಾಗಿದೆ.ಈ ಯೋಜನೆಯು ಈಗ ಮಿಷನ್ ಶಕ್ತಿ ಅಡಿಯಲ್ಲಿ ಮುಂದುವರಿಯುತ್ತಿದೆ.PMMVY 2.0 ಅಡಿಯಲ್ಲಿ ಮೊದಲ ಮಗುವಿನ ಜೊತೆಗೆ, ಎರಡನೇ ಮಗು ಹೆಣ್ಣು ಮಗುವಾಗಿದ್ದರೆ ₹6000  ಸಹಾಯಧನ ನೇರವಾಗಿ ನೀಡುವ ವ್ಯವಸ್ಥೆ ಜಾರಿಮಾಡಲಾಗಿದೆ.

ಮೊದಲ ಮಗುವಿಗೆ ₹5,000 ಹೇಗೆ ಸಿಗುತ್ತದೆ?

ಮಹಿಳೆಗೆ ಮೊದಲ ಮಗುವಾದಾಗ ಅಂತ ಮಹಿಳೆ ಸರ್ಕಾರದ ಅರ್ಹ ನಿಯಮವನ್ನು ಪೂರೈಸಿದರೆ ಅಂತಹ ಅರ್ಹರಾಗಿರುವ ಮಹಿಳೆಗೆ ಒಟ್ಟು ₹5,000  ನೆರವನ್ನು ನೇರವಾಗಿ ನೀಡಲಾಗುತ್ತದೆ.ಈ ಹಣವನ್ನು ಎರಡು ಹಂತಗಳಲ್ಲಿ ಪಡೆಯಲು ಅವಕಾಶವಿದೆ.ಮೊದಲನೇ ಹಂತದಲ್ಲಿ ₹3,000 ಗರ್ಭಧಾರಣೆ ನೋಂದಣಿ ಮಾಡಿಸಿಕೊಂಡು ಅಗತ್ಯ ಗರ್ಭಪೂರ್ವ ಆರೋಗ್ಯ ತಪಾಸಣೆಗಳನ್ನು ಮಾಡಿಸಿಕೊಂಡ ನಂತರ ಮೊದಲ ಹಂತದ ಹಣ ಪಡೆಯುವ ಅರ್ಹತೆ ಆ ಮಹಿಳೆಗೆ ಬರುತ್ತದೆ.ಎರಡನೇ ಹಂತದ ₹2,000 ಹಣವನ್ನು ಮಗುವಿನ ಜನನ ನೋಂದಣಿ ಮಾಡಿದ ನಂತರ ಮತ್ತು ಮಗುವಿಗೆ ನಿಗದಿಪಡಿಸಿರುವ ಮೊದಲ ಹಂತದ ಲಸಿಕೆಗಳನ್ನು ಪೂರ್ಣಗೊಳಿಸಿದ ಬಳಿಕ ಉಳಿದ ಹಣವನ್ನು ಪಡೆಯಲು ಅರ್ಹರಾಗುತ್ತಾರೆ. ಹೀಗಾಗಿ ಕೇವಲ ಗರ್ಭಧಾರಣೆ ನೋಂದಣಿ ಮಾಡಿದರೆ ಸಂಪೂರ್ಣ ₹5,000 ಒಂದೇ ಬಾರಿ ಖಾತೆಗೆ ಬರುತ್ತದೆ ಎಂದು ತಿಳಿಯುವುದು ತಪ್ಪು ಎರಡು ಹಂತಗಳಲ್ಲಿ ನಿಯಮಗಳನ್ನು ಪೂರೈಸಿದ ನಂತರವೇ ಹಣ ಸಿಗುತ್ತದೆ.

ಎರಡನೇ ಮಗು ಹೆಣ್ಣು ಮಗುವಾಗಿದ್ದರೆ ₹6,000

PMMVY 2.0ರ ಪ್ರಮುಖ ಬದಲಾವಣೆಗಳಲ್ಲಿ ಎರಡನೇ ಮಗುವಿಗೂ ನೆರವು ನೀಡುವುದು ಮುಖ್ಯ ಉದ್ದೇಶವಾಗಿದೆ.ಎರಡನೇ ಮಗು ಹೆಣ್ಣು ಮಗುವಾಗಿದ್ದರೆ ಅರ್ಹ ಮಹಿಳೆಗೆ ₹6,000 ಆರ್ಥಿಕ ನೆರವು ನೀಡಲಾಗುತ್ತದೆ. ಆದರೆ ಮೊದಲ ಮಗುವಿನ ಸಂಧರ್ಭದಲ್ಲಿ ನೀಡುವ ಹಾಗೆ ಹಂತ ಹಂತವಾಗಿ ಹಣವನ್ನು ನೀಡಲಾಗುವುದಿಲ್ಲ ಬದಲಿಗೆ ಈ ಹಣವನ್ನು ಒಂದೇ ಕಂತಿನಲ್ಲಿ ನೀಡುವ ವ್ಯವಸ್ಥೆಯನ್ನು ಸರ್ಕಾರ ಜಾರಿ ಮಾಡಿದೆ.ಇದಕ್ಕೂ ಗರ್ಭಧಾರಣೆ ನೋಂದಣಿ, ಗರ್ಭಪೂರ್ವ ತಪಾಸಣೆ, ಮಗುವಿನ ಜನನ ನೋಂದಣಿ ಮತ್ತು ಲಸಿಕೆಗೆ ಸಂಬಂಧಿಸಿದ ಷರತ್ತುಗಳನ್ನು ಪೂರೈಸಬೇಕಾಗುತ್ತದೆ.ಇದರ ಪ್ರಮುಖ ಉದ್ದೇಶ ಹೆಣ್ಣು ಮಗುವಿನ ಜನನವನ್ನು ಪ್ರೋತ್ಸಾಹಿಸುವುದರ ಜೊತೆಗೆ ತಾಯಿ ಮತ್ತು ಮಗುವಿನ ಆರೋಗ್ಯದ ಬಗ್ಗೆ ಕುಟುಂಬಗಳು ಗಮನ ಹರಿಸುವಂತೆ ಮಾಡುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ.

ಗರ್ಭಿಣಿಯರಿಗೆ ಮಡಿಲು ಕಿಟ್ ಸೌಲಭ್ಯ

ಕರ್ನಾಟಕದಲ್ಲಿ ಸರ್ಕಾರದ ವತಿಯಿಂದ ಅರ್ಹ ಗರ್ಭಿಣಿ ಮಹಿಳೆಯರಿಗೆ ಸರಿ ಸುಮಾರು 1500 ಸಾವಿರದಷ್ಟು ಬೆಲೆ ಬಾಳುವ ಮಡಿಲು ಕಿಟ್ ಕೊಡುವ ಸೌಲಭ್ಯ ಜಾರಿಯಲ್ಲಿದೆ.

ಕಿಟ್‌ನಲ್ಲಿ ಸಿಗುವ ವಸ್ತುಗಳು:

  • ಮಗುವಿನ ಬಟ್ಟೆ, ಟೋಪಿ ಮತ್ತು ಸಾಕ್ಸ್
  • ಬೆಡ್‌ಶೀಟ್, ಟವೆಲ್ ಮತ್ತು ರಬ್ಬರ್ ಶೀಟ್
  • ಮಗುವಿನ ಎಣ್ಣೆ, ಸೋಪು ಮತ್ತು ಇತರ ಆರೈಕೆ ವಸ್ತುಗಳು

ಅಗತ್ಯ ದಾಖಲೆಗಳು:

  • ಆಧಾರ್ ಕಾರ್ಡ್
  • ಬಿಪಿಎಲ್ ಪಡಿತರ ಚೀಟಿ
  • ತಾಯಿ ಕಾರ್ಡ್
  • ಅನ್ವಯಿಸಿದರೆ ಜಾತಿ ಪ್ರಮಾಣಪತ್ರ
  • ಬ್ಯಾಂಕ್ ಖಾತೆ ವಿವರಗಳು ಮತ್ತು ಮೊಬೈಲ್ ಸಂಖ್ಯೆ

ಅರ್ಜಿ ವಿಧಾನ: ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ,ಗರ್ಭಿಣಿಯರು ತಮ್ಮ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿರಬೇಕು ಎಲ್ಲ ಅಂಗನವಾಡಿ ಆಶಾ ಕಾರ್ಯಕರ್ತಾರ ಮೂಲಕ ತಾಯಿ ಕಾರ್ಡ್ ನೋಂದಣಿ ಮಾಡಿಕೊಂಡಿರಬೇಕು.ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾದ ತಕ್ಷಣವೇ ಆಸ್ಪತ್ರೆಯ ವತಿಯಿಂದ ತಾಯಿಗೆ ಈ ಮಡಿಲು ಕಿಟ್‌ ಅನ್ನು ಸ್ವಯಂಚಾಲಿತವಾಗಿ (ಖುದ್ದಾಗಿ) ವಿತರಿಸಲಾಗುತ್ತದೆ

ಯಾರಿಗೆ PMMVY ಮಾತೃ ವಂದನಾ ಯೋಜನೆ ಹಣ ಸಿಗಬಹುದು?

PMMVY ಮಾತೃ ವಂದನಾ ಯೋಜನೆಯು ಎಲ್ಲಾ ಮಹಿಳೆಯರಿಗೆ ಯಾವುದೇ ಷರತ್ತಿಲ್ಲದೆ ನೀಡುವ ಸಾಮಾನ್ಯ ಹಣದ ಯೋಜನೆಯಲ್ಲ.ಕೇಂದ್ರ ಸರ್ಕಾರ ಗುರುತಿಸಿರುವ ನಿರ್ದಿಷ್ಟ ಅರ್ಹ ವರ್ಗಗಳಿಗೆ ಸೇರಿದ ಅರ್ಹ ಮಹಿಳೆಯರು ಈ ಯೋಜನೆಯಡಿ ಪ್ರಯೋಜನ ಪಡೆಯಬಹುದಾಗಿದೆ.

ಪ್ರಮುಖವಾಗಿ ಕೆಳಗಿನ ವರ್ಗಗಳಿಗೆ ಸೇರಿದ ಮಹಿಳೆಯರು ಅರ್ಹರಾಗಿರಬಹುದು:

  • ಪರಿಶಿಷ್ಟ ಜಾತಿ(SC) ಅಥವಾ ಪರಿಶಿಷ್ಟ ಪಂಗಡದ(ST) ಮಹಿಳೆಯರು
  • ಶೇ.40 ಅಥವಾ ಅದಕ್ಕಿಂತ ಹೆಚ್ಚಿನ ಅಂಗವೈಕಲ್ಯ ಹೊಂದಿರುವ ಮಹಿಳೆಯರು
  • BPL ರೇಷನ್ ಕಾರ್ಡ್ ಹೊಂದಿರುವ ಮಹಿಳೆಯರು
  • NFSA ರೇಷನ್ ಕಾರ್ಡ್ ಹೊಂದಿರುವ ಮಹಿಳೆಯರು
  • e-Shram ಕಾರ್ಡ್ ಹೊಂದಿರುವವರು
  • MGNREGA ಜಾಬ್ ಕಾರ್ಡ್ ಹೊಂದಿರುವವರು
  • ಆಯುಷ್ಮಾನ್ ಭಾರತ್ ಯೋಜನೆಯ ಫಲಾನುಭವಿಗಳು
  • ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಡಿ ಫಲಾನುಭವಿಯಾಗಿರುವ ಮಹಿಳಾ ರೈತರು
  • ಕುಟುಂಬದ ವಾರ್ಷಿಕ ಆದಾಯ ₹8 ಲಕ್ಷಕ್ಕಿಂತ ಕಡಿಮೆ ಇರುವ ಮಹಿಳೆಯರು
  • ಅಂಗನವಾಡಿ ಕಾರ್ಯಕರ್ತೆಯರು
  • ಅಂಗನವಾಡಿ ಸಹಾಯಕಿಯರು
  • ಆಶಾ ಕಾರ್ಯಕರ್ತೆಯರು
  • ಸರ್ಕಾರ ಗುರುತಿಸಿರುವ ಇತರೆ ಅರ್ಹ ವರ್ಗಗಳ ಮಹಿಳೆಯರು

ನಿಮ್ಮ ಪರಿಸ್ಥಿತಿಗೆ ಯಾವ ಅರ್ಹತಾ ವರ್ಗ ಅನ್ವಯಿಸುತ್ತದೆ ಎನ್ನುವುದನ್ನು ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಮಾಹಿತಿಯನ್ನು ಪರಿಶೀಲಿಸಬೇಕು ನಂತರ ಅರ್ಜಿ ಸಲ್ಲಿಸಿ

PMMVY ಮಾತೃ ವಂದನಾ ಯೋಜನೆ ಎಷ್ಟು ಹಣ ಸಿಗುತ್ತದೆ?

ಫಲಾನುಭವಿಸಿಗುವಆರ್ಥಿಕನೆರವು
ಮೊದಲ ಮಗು – ಮೊದಲ ಹಂತ₹3,000
ಮೊದಲ ಮಗು – ಎರಡನೇ ಹಂತ₹2,000
ಮೊದಲಮಗುವಿಗೆಒಟ್ಟು₹5,000
ಎರಡನೇ ಮಗು ಹೆಣ್ಣು ಮಗುವಾಗಿದ್ದರೆ₹6,000
ಹಣ ನೀಡುವ ವಿಧಾನನೇರವಾಗಿ ಬ್ಯಾಂಕ್/ಅಂಚೆ ಖಾತೆಗೆ

ಮುಖ್ಯ ಮಾಹಿತಿ: ಈ ಮೊತ್ತವನ್ನು ಪಡೆಯಲು ಯೋಜನೆಯ ಅರ್ಹತಾ ನಿಯಮಗಳು ಮತ್ತು ಸಂಬಂಧಿಸಿದ ಷರತ್ತುಗಳನ್ನು ಮಹಿಳೆ ಪೂರೈಸುವುದು ಕಡ್ಡಾಯವಾಗಿದೆ.

ಯೋಜನೆಯ ಮುಖ್ಯ ಉದ್ದೇಶಗಳೇನು?

PMMVY ಮಾತೃ ವಂದನಾ ಯೋಜನೆ ಹಿಂದೆ ಕೆಲವು ಪ್ರಮುಖ ಉದ್ದೇಶಗಳಿವೆ.

ಮೊದಲನೆಯದಾಗಿ ಈ ಯೋಜನೆಯ ಪ್ರಮುಖ ಉದ್ದೇಶವೆನೆಂದರೆ, ಗರ್ಭಾವಸ್ಥೆಯಲ್ಲಿ ಇರುವಾಗ ಮಹಿಳೆಯರಿಗೆ ಆಗುವ ಆದಾಯ ನಷ್ಟಕ್ಕೆ ಸ್ವಲ್ಪ ಆರ್ಥಿಕ ನೆರವು ನೀಡುವುದು.ಎರಡನೆಯದಾಗಿ, ಗರ್ಭಿಣಿಯರು ಸಮಯಕ್ಕೆ ಸರಿಯಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಪ್ರೋತ್ಸಾಹಿಸುವುದು.ಮೂರನೆಯದಾಗಿ, ಮಗುವಿನ ಜನನವನ್ನು ಸರಿಯಾಗಿ ನೋಂದಣಿ ಮಾಡಿಸುವಂತೆ ಮಾಡುವುದು.ನಾಲ್ಕನೆಯದಾಗಿ, ಮಗುವಿಗೆ ಅಗತ್ಯವಿರುವ ಲಸಿಕೆಗಳನ್ನು ಸಮಯಕ್ಕೆ ಸರಿಯಾಗಿ ಕೊಡಿಸುವುದಕ್ಕೆ ಆರ್ಥಿಕವಾಗಿ ಪ್ರೋತ್ಸಾಹ  ಧನ ನೀಡುವುದು.ಎರಡನೇ ಮಗು ಹೆಣ್ಣು ಮಗುವಾಗಿದ್ದರೆ ₹6,000 ನೀಡುವ ಮೂಲಕ ಹೆಣ್ಣು ಮಗುವಿನ ಜನನವನ್ನು ಪ್ರೋತ್ಸಾಹಿಸುವ  ಉದ್ದೇಶವನ್ನು ಸರ್ಕಾರ ಹೊಂದಿದ್ದು ಈ ಯೋಜನೆ ಜಾರಿ ಮಾಡಲಾಗಿದೆ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು

ಅರ್ಜಿ ಸಲ್ಲಿಸುವಾಗ ಅಗತ್ಯ ದಾಖಲೆಗಳನ್ನು ಸಿದ್ಧವಾಗಿ ಇಟ್ಟುಕೊಳ್ಳುವುದು ಉತ್ತಮ.

  • ಆಧಾರ್ ಕಾರ್ಡ್
  • ಮೊಬೈಲ್ ಸಂಖ್ಯೆ
  • ಬ್ಯಾಂಕ್ ಅಥವಾ ಅಂಚೆ ಖಾತೆಯ ವಿವರ
  • ಗರ್ಭಧಾರಣೆ ನೋಂದಣಿ ವಿವರ
  • MCP/RCH ಕಾರ್ಡ್
  • ಗರ್ಭಪೂರ್ವ ಆರೋಗ್ಯ ತಪಾಸಣೆಯ ವಿವರ(ANC)
  • ಮಗುವಿನ ಜನನ ಪ್ರಮಾಣಪತ್ರ
  • ಮಗುವಿನ ಲಸಿಕೆ ವಿವರ
  • ಜಾತಿ ಪ್ರಮಾಣಪತ್ರ
  • ಆದಾಯ ಪ್ರಮಾಣಪತ್ರ,
  • BPL ಅಥವಾ NFSA ಪಡಿತರ ಚೀಟಿ,
  • e-Shram ಕಾರ್ಡ್,
  • MGNREGA ಜಾಬ್ ಕಾರ್ಡ್,
  • ಇತರೆ ಅರ್ಹತಾ ದಾಖಲೆಗಳು

ಎಲ್ಲಾ ಮಹಿಳೆಯರಿಗೂ ಮೇಲಿನ ಪ್ರತಿಯೊಂದು ದಾಖಲೆಯಾಗಲಿ ಅರ್ಹತ ನಿಯಮಗಳಾಗಲಿ ಒಂದೇ ರೀತಿ ಇರುವುದಿಲ್ಲ ಕೆಲವೊಮ್ಮೆ ವರ್ಗ ಹಾಗೆ ಸಮುದಾಯದ ಮೇಲೆ ದಾಖಲೆಗಳು ಬದಲಾಗುತ್ತವೆ.ಅಂತಹ ಸಂಧರ್ಭದಲ್ಲಿ ಮಹಿಳೆ ಅರ್ಹತೆಯ ವರ್ಗಕ್ಕೆ ಸಂಬಂಧಿಸಿದ ದಾಖಲೆಗಳನ್ನು ಅರ್ಜಿ ಸಲ್ಲಿಸಲು ನೀಡಬೇಕಾಗುತ್ತದೆ.

PMMVY ಮಾತೃ ವಂದನಾ ಯೋಜನೆ ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಬಹುದೇ?

ಹೌದು, PMMVYಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ವ್ಯವಸ್ಥೆಯನ್ನ ಸರ್ಕಾರ ಜಾರಿ ಮಾಡಿದೆ.ಮೊಬೈಲ್‌ನಲ್ಲಿ ಅರ್ಜಿ ಸಲ್ಲಿಸಲು ಮೊದಲು ಯೋಜನೆಯ ಅಧಿಕೃತ ಜಾಲತಾಣಕ್ಕೆ ಹೋಗಬೇಕು.ನಂತರ ನೋಂದಣಿ ಅಥವಾ ಅರ್ಜಿ ಸಲ್ಲಿಸುವ ಆಯ್ಕೆಯನ್ನು ಬಳಸಿಕೊಂಡು ಕೇಳಲಾಗುವ ಮಾಹಿತಿಯನ್ನು ನೀಡಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವಾಗ ಗಮನಿಸಬೇಕಾದ ಅಂಶಗಳು :

1. ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಅಗತ್ಯ ವೈಯಕ್ತಿಕ ವಿವರಗಳನ್ನು ನಮೂದಿಸಿ.

2. ಆಧಾರ್ ಮತ್ತು ಇತರೆ ಗುರುತಿನ ವಿವರಗಳನ್ನು ನೀಡಿ.

3. ಗರ್ಭಧಾರಣೆಗೆ ಸಂಬಂಧಿಸಿದ ಮಾಹಿತಿಯನ್ನು ದಾಖಲಿಸಿ.

4. ನಿಮ್ಮ ಅರ್ಹತೆಯ ವರ್ಗಕ್ಕೆ ಸಂಬಂಧಿಸಿದ ವಿವರಗಳನ್ನು ನೀಡಿ.

5. ಅಗತ್ಯ ಆರೋಗ್ಯ ತಪಾಸಣೆ ಮತ್ತು ಮಗುವಿನ ವಿವರಗಳನ್ನು ದಾಖಲಿಸಿ.

6. ಬ್ಯಾಂಕ್ ಅಥವಾ ಅಂಚೆ ಖಾತೆಯ ವಿವರಗಳನ್ನು ಸರಿಯಾಗಿ ನಮೂದಿಸಿ.

7. ಅರ್ಜಿಯಲ್ಲಿರುವ ಎಲ್ಲಾ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ.

8. ನಂತರ ಅರ್ಜಿಯನ್ನು ಸಲ್ಲಿಸಿ.

ಮೊಬೈಲ್ ಮೂಲಕ ಅರ್ಜಿ ಸಲ್ಲಿಸಲು ಕಷ್ಟವಾಗುವವರು ಹತ್ತಿರದ ಅಂಗನವಾಡಿ ಕಾರ್ಯಕರ್ತೆ ಅಥವಾ ಆಶಾ ಕಾರ್ಯಕರ್ತೆಯ ಸಹಾಯ ಪಡೆದು ನೇರವಾಗಿ ಅರ್ಜಿ ಸಲ್ಲಿಸಬಹುದು.

ಅಂಗನವಾಡಿ ಕೇಂದ್ರದಲ್ಲಿ ಅರ್ಜಿ ಹಾಕಬಹುದೇ?

ಸ್ವತಃ ಮೊಬೈಲ್‌ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದ ಸಂಧರ್ಭದಲ್ಲಿ ಮಹಿಳೆಯರು ತಮ್ಮ ಪ್ರದೇಶದ ಅಂಗನವಾಡಿ ಕಾರ್ಯಕರ್ತೆ ಅಥವಾ ಆಶಾ ಕಾರ್ಯಕರ್ತೆಯನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು.ಅವರು ಯೋಜನೆಯ ಅರ್ಹತೆ ಮತ್ತು ಅರ್ಜಿ ಪ್ರಕ್ರಿಯೆಯ ಬಗ್ಗೆ ಮಾಹಿತಿ ನೀಡಿ ಅರ್ಜಿ ಸಲ್ಲಿಸಲು ಸಹಾಯ ಮಾಡುತ್ತಾರೆ. ಅಗತ್ಯವಿದ್ದರೆ ಆನ್‌ಲೈನ್ ಅಲ್ಲಿ ಅರ್ಜಿ ಸಲ್ಲಿಸುವಲ್ಲಿಯೂ ಸಹಾಯ ಮಾಡಬಹುದು.ಅರ್ಜಿಯನ್ನು ಸಲ್ಲಿಸುವ ಮೊದಲು ನಿಮ್ಮ ದಾಖಲೆಗಳಲ್ಲಿ ಹೆಸರು, ಆಧಾರ್ ವಿವರ, ಬ್ಯಾಂಕ್ ಖಾತೆ ವಿವರ ಮುಂತಾದವು ಸರಿಯಾಗಿದೆಯೇ ಎಂದು ಪರಿಶೀಲಿಸಿ ನಂತರ ಅರ್ಜಿ ಸಲ್ಲಿಸುವುದು ಮುಖ್ಯ.

ಹಣ ಯಾವ ಖಾತೆಗೆ ಬರುತ್ತದೆ?

PMMVY ಯೋಜನೆಯ ಹಣವನ್ನು ಫಲಾನುಭವಿಯ ಬ್ಯಾಂಕ್ ಅಥವಾ ಅಂಚೆ ಖಾತೆಗೆ ನೇರವಾಗಿ ಜಮಾ ಮಾಡುವ ವ್ಯವಸ್ಥೆ ಇದ್ದು .ಆದ್ದರಿಂದ ಅರ್ಹ ಮಹಿಳೆಯರು ಅರ್ಜಿ ಸಲ್ಲಿಸುವಾಗ ಬ್ಯಾಂಕ್ ಖಾತೆಯ ವಿವರಗಳನ್ನು ಸರಿಯಾಗಿ ನೀಡಬೇಕು.ಆಧಾರ್ ಮತ್ತು ಬ್ಯಾಂಕ್ ಖಾತೆಗೆ ಸಂಬಂಧಿಸಿದ ವಿವರಗಳಲ್ಲಿ ಸಮಸ್ಯೆ ಇದ್ದರೆ ಹಣ ಜಮಾ ಆಗುವುದರಲ್ಲಿ ತಡವಾಗಬಹುದು.ಅರ್ಜಿ ಅನುಮೋದನೆಯಾದ ನಂತರ ಸರ್ಕಾರದ ನಿಯಮದಂತೆ ಹಣವನ್ನು ನೇರವಾಗಿ ಅರ್ಹ ಮಹಿಳೆಯ ಫಲಾನುಭವಿಯ ಖಾತೆಗೆ ನೆರಯವಾಗಿ ವರ್ಗಾಯಿಸಲಾಗುತ್ತದೆ.

ಅರ್ಜಿ ಹಾಕುವ ಮೊದಲು ಗಮನಿಸಿ

PMMVYಗೆ ಅರ್ಜಿ ಸಲ್ಲಿಸುವಾಗ ಈ ವಿಷಯಗಳನ್ನು ತಪ್ಪದೇ ಗಮನಿಸಿ.

  • ಮೊದಲು ನಿಮ್ಮ ಅರ್ಹತೆಯನ್ನು ಪರಿಶೀಲಿಸಿ.
  • ಗರ್ಭಧಾರಣೆಯನ್ನು ಸಮಯಕ್ಕೆ ಸರಿಯಾಗಿ ನೋಂದಣಿ ಮಾಡಿಸಿ.
  • ಅಗತ್ಯ ಗರ್ಭಪೂರ್ವ ಆರೋಗ್ಯ ತಪಾಸಣೆಗಳನ್ನು ಮಾಡಿಸಿಕೊಳ್ಳಿ.
  • ಆಧಾರ್ ವಿವರ ಸರಿಯಾಗಿದೆಯೇ ಪರಿಶೀಲಿಸಿ.
  • ಬ್ಯಾಂಕ್ ಖಾತೆ ವಿವರ ಸರಿಯಾಗಿ ನೀಡಿ.
  • ಮಗುವಿನ ಜನನವನ್ನು ನೋಂದಣಿ ಮಾಡಿಸಿ.
  • ಮಗುವಿನ ಲಸಿಕೆಗಳನ್ನು ಸಮಯಕ್ಕೆ ಸರಿಯಾಗಿ ಹಾಕಿಸಿ.
  • ಅರ್ಜಿ ಸಲ್ಲಿಸಿದ ನಂತರ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸುತ್ತಿರಿ.
  • ಅನಧಿಕೃತ ವ್ಯಕ್ತಿಗಳಿಗೆ ಹಣ ನೀಡಿ ಅರ್ಜಿ ಸಲ್ಲಿಸಿಸಿಕೊಳ್ಳಬೇಡಿ.
  • ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಸುಳ್ಳು ಲಿಂಕ್‌ಗಳನ್ನು ಬಳಸಬೇಡಿ.
  • ಅಧಿಕೃತ ಪೋರ್ಟಲ್ ಅಥವಾ ಅಂಗನವಾಡಿ/ಆಶಾ ಕಾರ್ಯಕರ್ತೆಯ ಮೂಲಕವೇ ಮಾಹಿತಿ ಪಡೆದುಕೊಳ್ಳಿ.

PMMVY ಮಾತೃ ವಂದನಾ ಯೋಜನೆ ಅರ್ಜಿಗೆ ಕೊನೆಯ ದಿನಾಂಕ ಇದೆಯೇ?

ಈ ಯೋಜನೆಗೆ ಸಂಬಂಧಿಸಿದ ಅರ್ಜಿ ಪ್ರಕ್ರಿಯೆ ಮತ್ತು ಅವಧಿ ಸರ್ಕಾರದ ನಿಯಮಗಳ ಪ್ರಕಾರ ಬದಲಾಗುತ್ತಿರುತ್ತದೆ .ಎಲ್ಲಾ ರಾಜ್ಯಗಳಲ್ಲಿ ಅಥವಾ ಎಲ್ಲಾ ಸಂದರ್ಭಗಳಲ್ಲಿ ಒಂದೇ ರೀತಿಯ ಕೊನೆಯ ದಿನಾಂಕ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ.ಆದ್ದರಿಂದ WhatsApp, Facebook ಅಥವಾ YouTubeನಲ್ಲಿ ಕಾಣಿಸುವ ಕೊನೆಯ ದಿನಾಂಕವನ್ನು ನಂಬುವ ಬದಲು ಅರ್ಜಿ ಸಲ್ಲಿಸುವ ಮೊದಲು ಅಧಿಕೃತ PMMVY ಪೋರ್ಟಲ್‌ನಲ್ಲಿ ಇತ್ತೀಚಿನ ಮಾಹಿತಿಯನ್ನು ಪರಿಶೀಲಿಸಿ ನಂತರ ಅರ್ಜಿ ಸಲ್ಲಿಸಿ.

PMMVY ಮಾತೃ ವಂದನಾ ಯೋಜನೆ ಅಧಿಕೃತ ಲಿಂಕ್

PMMVY ಅಧಿಕೃತ ಮಾಹಿತಿ:
https://www.spniwcd.wcd.gov.in/pradhan-mantri-matru-vandana-yojna

PMMVY ಅಧಿಕೃತ ಪ್ರಶ್ನೋತ್ತರ:
https://www.spniwcd.wcd.gov.in/pradhan-mantri-matru-vandana-yojna/faqs

ಕೊನೆಯ ಮಾತು

ಈ ಯೋಜನೆಯ ಪ್ರಮುಖ ಉದ್ದೇಶವೇ ಗರ್ಭಿಣಿ ಹಾಗೆ ಬಾಣಂತಿ ಮಹಿಳೆಯರಿಗೆ ಇಂತಹ ಸಂಧರ್ಭದಲ್ಲಿ ಯಾವುದೇ ತೊಂದರೆ ಹಾಗೆ ಆರ್ಥಿಕ ಕಷ್ಟ ಬರಬಾರದು ಅಂತ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯು ಅರ್ಹ ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರಿಗೆ ಆರ್ಥಿಕ ನೆರವು ನೀಡುವದು ಕೇಂದ್ರ ಸರ್ಕಾರದ ಮೂಲ ಉದ್ದೇಶವಾಗಿದೆ.ಮೊದಲ ಮಗುವಿಗೆ ₹5,000 ಮತ್ತು ಎರಡನೇ ಮಗು ಹೆಣ್ಣು ಮಗುವಾಗಿದ್ದರೆ ₹6,000 ಪಡೆಯಲು ಅವಕಾಶವಿದೆ. ಮೊದಲ ಮಗುವಿನ ಹಣವನ್ನು ಎರಡು ಹಂತಗಳಲ್ಲಿ ನೀಡಲಾಗುತ್ತದೆ.ಆದರೆ ಯೋಜನೆಯ ಹಣ ಪಡೆಯಲು ಅರ್ಹತಾ ನಿಯಮಗಳನ್ನು ಮಹಿಳೆ ಪೂರೈಸುವುದರ ಜೊತೆಗೆ ಗರ್ಭಧಾರಣೆ ನೋಂದಣಿ, ಆರೋಗ್ಯ ತಪಾಸಣೆ, ಮಗುವಿನ ಜನನ ನೋಂದಣಿ ಮತ್ತು ಲಸಿಕೆ ಸಂಬಂಧಿತ ಷರತ್ತುಗಳನ್ನು ಪೂರ್ಣಗೊಳಿಸಬೇಕು.ಅರ್ಹರಾಗಿರುವ ಮಹಿಳೆಯರು ಅಧಿಕೃತ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು. ಮೊಬೈಲ್‌ನಲ್ಲಿ ಅರ್ಜಿ ಸಲ್ಲಿಸಲು ತೊಂದರೆ ಇದ್ದರೆ ಹತ್ತಿರದ ಅಂಗನವಾಡಿ ಅಥವಾ ಆಶಾ ಕಾರ್ಯಕರ್ತೆಯ ಸಹಾಯ ಪಡೆಯಬಹುದು.ಯೋಜನೆಗೆ ಸಂಬಂಧಿಸಿದ ಹಣ, ಅರ್ಹತೆ ಅಥವಾ ಅರ್ಜಿ ದಿನಾಂಕದ ಬಗ್ಗೆ ಅಂತಿಮ ಮಾಹಿತಿಗಾಗಿ ಯಾವಾಗಲೂ ಸರ್ಕಾರದ ಅಧಿಕೃತ ಜಾಲತಾಣವನ್ನೇ ಪರಿಶೀಲಿಸಿ.ಸಮಯ ಸಂಧರ್ಭಕ್ಕೆ ತಕ್ಕ ಹಾಗೆ ನಿಯಮಗಳು ಬದಲಾಗುತ್ತಲೇ ಇರುತ್ತವೆ, ಯಾವುದೇ ಅನ್ಯ ವ್ಯಕ್ತಿ ಗೆ ಹಣ ನೀಡಬೇಡಿ, ಮಾಹಿತಿ ಇಷ್ಟವಾದರೆ ಬೇರೆಯವರೊಂದಿಗೂ ಶೇರ್ ಮಾಡಿ,

1 thought on “PMMVY ಗರ್ಭಿಣಿಯರಿಗೆ ₹5,000 ರಿಂದ ₹6,000 ಆರ್ಥಿಕ ನೆರವು”

Leave a Comment