ನಿಮ್ಮ ಬಳಿ ಇರುವ ಅಜ್ಜ-ಅಜ್ಜಿ ಕಾಲದ ಹಳೆಯ ನಾಣ್ಯಗಳು ಅಥವಾ ಹಳೆಯ ನೋಟುಗಳು ಇದ್ದು ಮನೆಯಲ್ಲಿ ಹಲವು ವರ್ಷಗಳಿಂದ ಹಾಗೆಯೇ ಇಟ್ಟುಕೊಂಡಿದ್ದಾರೆ ತಕ್ಷಣ ನಿಮ್ಮ ಬಳಿ ಇರುವ ಹಳೆಯ ನಾಣ್ಯಗಳ (Old Coin) ಬೆಲೆ ತಿಳಿದು ಕೊಂಡು ಮಾರಾಟ ಮಾಡಿ ಕೆಲವು ಅಪರೂಪದ ನಾಣ್ಯಗಳಿಗೆ ಲಕ್ಷಗಟ್ಟಲೆ ಬೆಲೆ ಕೊಟ್ಟು ಖರೀದಿ ಮಾಡೋರು ಇದ್ದರೆ. ನೀವು ನಾಣ್ಯ ಮಾರಬೇಕು ಅಂತ ಆನ್ಲೈನ್ ನಲ್ಲಿ ಹುಡುಕುತ್ತಿದ್ದರೆ ಈ ಮಾಹಿತಿ ನಿಮಗಾಗಿಯೇ ಸಂಪೂರ್ಣ ಮಾಹಿತಿ ಓದಿ ನೀವು ನಿಮ್ಮ ಹಳೆಯ ನಾಣ್ಯವನ್ನು ಮಾರಾಟ ಮಾಡಿ.
ಇತ್ತೀಚಿನ ದಿನಗಳಲ್ಲಿ ಹಳೆಯ ನಾಣ್ಯಗಳನ್ನು Online ಮೂಲಕ ನಾಣ್ಯ ಸಂಗ್ರಹಿಸುವವರಿಗೆ ಮತ್ತು ಖರೀದಿದಾರರಿಗೆ ಮಾರಾಟ ಮಾಡುವ ಅವಕಾಶವಿದೆ. ಅದರಲ್ಲೂ ಅಪರೂಪದ ನಾಣ್ಯಗಳು, ಐತಿಹಾಸಿಕ ಹಿನ್ನೆಲೆ ಇರುವ ನಾಣ್ಯಗಳು ಹಾಗೂ ಚಿನ್ನ, ಬೆಳ್ಳಿ ಅಥವಾ ತಾಮ್ರದಿಂದ ಮಾಡಿರುವ ಕೆಲವು ನಾಣ್ಯಗಳಿಗೆ ಸಂಗ್ರಹಕಾರರಲ್ಲಿ ಹೆಚ್ಚು ಬೇಡಿಕೆ ಇರುತ್ತದೆ.

ಆದರೆ ಇಲ್ಲಿ ಒಂದು ಮುಖ್ಯ ವಿಷಯವನ್ನು ನೆನಪಿಟ್ಟುಕೊಳ್ಳಬೇಕು. ಮನೆಯಲ್ಲಿ ಹಳೆಯ ನಾಣ್ಯ ಇದೆ ಎಂದ ಮಾತ್ರಕ್ಕೆ ಅದಕ್ಕೆ ಲಕ್ಷಾಂತರ ರೂಪಾಯಿ ಬೆಲೆ ಇರುತ್ತದೆ ಎಂದಲ್ಲ. ನಾಣ್ಯ ಯಾವ ವರ್ಷದದ್ದು, ಯಾವ ಲೋಹದಿಂದ ಮಾಡಲಾಗಿದೆ, ಅದು ಎಷ್ಟು ಅಪರೂಪ, ಅದರ ಸ್ಥಿತಿ ಹೇಗಿದೆ ಮತ್ತು ಅದಕ್ಕೆ ಖರೀದಿದಾರರ ಬೇಡಿಕೆ ಎಷ್ಟಿದೆ ಎಂಬುದರ ಮೇಲೆ ನಾಣ್ಯದ ಬೆಲೆ ನಿರ್ಧಾರವಾಗುತ್ತದೆ.
ಯಾವ ಹಳೆಯ ನಾಣ್ಯಗಳಿಗೆ(Old Coin) ಹೆಚ್ಚು ಬೆಲೆ ಸಿಗಬಹುದು?
ನಾಣ್ಯ ಎಷ್ಟು ಹಳೆಯದು ಎನ್ನುವುದು ಮಾತ್ರ ಅದರ ಬೆಲೆ ನಿರ್ಧರಿಸುವುದಿಲ್ಲ. ನಾಣ್ಯದ ಕೆಲವು ವಿಶೇಷತೆಗಳನ್ನು ಗಮನಿಸಿ ಬೆಲೆ ನಿರ್ಧಾರವಾಗುತ್ತದೆ.
- ನಾಣ್ಯ ಯಾವ ವರ್ಷದದ್ದು?
- ಯಾವ ದೇಶದಲ್ಲಿ ಅಥವಾ ಯಾವ ಮುದ್ರಣ ಕೇಂದ್ರದಲ್ಲಿ ತಯಾರಾಗಿದೆ?
- ನಾಣ್ಯದ ಮೇಲೆ ಯಾವುದಾದರೂ ವಿಶೇಷ ಗುರುತು ಇದೆಯೇ?
- ಚಿನ್ನ, ಬೆಳ್ಳಿ ಅಥವಾ ತಾಮ್ರದ ನಾಣ್ಯವೇ?
- ಆ ನಾಣ್ಯ ಅಪರೂಪವಾಗಿದೆಯೇ?
- ನಾಣ್ಯದ ಸ್ಥಿತಿ ಹೇಗಿದೆ?
- ನಾಣ್ಯ ತಯಾರಿಸುವಾಗ ಯಾವುದಾದರೂ ತಪ್ಪು ಮುದ್ರಣವಾಗಿದೆಯೇ?
- ನಾಣ್ಯಕ್ಕೆ ಐತಿಹಾಸಿಕ ಮಹತ್ವ ಇದೆಯೇ?
- ನಾಣ್ಯ ಸಂಗ್ರಹಿಸುವವರಲ್ಲಿ ಅದಕ್ಕೆ ಬೇಡಿಕೆ ಇದೆಯೇ?
ವಿಶೇಷವಾಗಿ 18ನೇ ಮತ್ತು 19ನೇ ಶತಮಾನದ ಕೆಲವು ಭಾರತೀಯ ಹಾಗೂ ವಿದೇಶಿ ನಾಣ್ಯಗಳು ನಾಣ್ಯ ಸಂಗ್ರಹ ಮಾಡುವವರ ಗಮನವನ್ನು ಹೆಚ್ಚಾಗಿ ಸೆಳೆಯುತ್ತವೆ.
Old Coin ಅನ್ನು Onlineನಲ್ಲಿ ಹೇಗೆ ಮಾರಾಟ ಮಾಡುವುದು?
ನಿಮ್ಮ ಬಳಿ ಇರುವ ಹಳೆಯ ನಾಣ್ಯವನ್ನು Onlineನಲ್ಲಿ ಮಾರಾಟ ಮಾಡಬೇಕು ಎಂದರೆ ಮೊದಲು ಆ ನಾಣ್ಯದ ಬಗ್ಗೆ ಸಾಧ್ಯವಾದಷ್ಟು ಮಾಹಿತಿ ತಿಳಿದುಕೊಂಡು ನಂತರ ಮಾರಾಟ ಮಾಡುವುದು ಉತ್ತಮ. ನಾಣ್ಯದ ಮುಂಭಾಗ ಮತ್ತು ಹಿಂಭಾಗದ ಸ್ಪಷ್ಟ ಫೋಟೋಗಳನ್ನು ತೆಗೆದುಕೊಂಡು. ನಾಣ್ಯದ ಮೇಲೆ ಇರುವ ವರ್ಷ,ಗುರುತುಗಳು, ಚಿಹ್ನೆಗಳು ಮತ್ತು ಬರಹಗಳು ಸ್ಪಷ್ಟವಾಗಿ ಕಾಣುವಂತೆ ಫೋಟೋ ಇರಲಿ.ಇಂದರಿಂದ ನಾಣ್ಯವನ್ನು ಖರೀದಿ ಮಾಡುವವರಿಗೆ ಸ್ಪಷ್ಟವಾದ ಮಾಹಿತಿ ದೊರಯುತ್ತದೆ.ನಂತರ ಆ ನಾಣ್ಯಕ್ಕೆ ಸಾಮಾನ್ಯವಾಗಿ ಬೆಲೆ ಎಷ್ಟಿರಬಹುದು ಎಂದು ತಿಳಿದುಕೊಳ್ಳಿ. ಇದಕ್ಕಾಗಿ ನಾಣ್ಯ ತಜ್ಞರು, ನಂಬಿಕಸ್ಥ ವ್ಯಾಪಾರಿಗಳು ಅಥವಾ ಹಳೆಯ ನಾಣ್ಯಗಳ ಹರಾಜಿನ ದಾಖಲೆಗಳನ್ನು ಪರಿಶೀಲಿಸಬಹುದು.
ಹಳೆಯ Coins ಮಾರಾಟಕ್ಕೆ ಯಾವ Online Platforms ಬಳಸಬಹುದು?
ಹಳೆಯ ನಾಣ್ಯಗಳನ್ನು ಮಾರಾಟ ಮಾಡಲು ಹಲವು Online Platformsಗಳಿವೆ. ಜಾಗತಿಕವಾಗಿ eBay, Etsy, Catawiki ಮುಂತಾದ ತಾಣಗಳಲ್ಲಿ ನಾಣ್ಯಗಳು ಮತ್ತು ಇತರ ಸಂಗ್ರಹಿಸಬಹುದಾದ ವಸ್ತುಗಳು ಮಾರಾಟವಾಗುತ್ತವೆ.ಭಾರತದಲ್ಲಿ OLX, Quikr ಮತ್ತು IndiaMART ಮುಂತಾದ ವೇದಿಕೆಗಳನ್ನು ಕೆಲವರು ಬಳಸುತ್ತಾರೆ.ಅಪರೂಪದ ಅಥವಾ ಹೆಚ್ಚಿನ ಬೆಲೆಯ ನಾಣ್ಯಗಳಿದ್ದರೆ ಸಾಮಾನ್ಯ Shopping Platformಗಿಂತ ವಿಶೇಷ ನಾಣ್ಯ ಹರಾಜು ತಾಣಗಳು ಅಥವಾ ನಾಣ್ಯ ಸಂಗ್ರಹಕ್ಕೆ ಸಂಬಂಧಿಸಿದ ಹರಾಜು ಸಂಸ್ಥೆಗಳ ಮೂಲಕ ಮಾರಾಟ ಮಾಡುವುದು ಸೂಕ್ತವಾಗುತ್ತದೆ ಯಾಕೆಂದ್ರೆ ಶಾಪಿಂಗ್ ಪ್ಲಫಾರ್ಮ್ಗಿಂತ ಹೆಚ್ಚು ಬೆಲೆ ಸಿಗುತ್ತದೆ.ಆದರೆ ಯಾವುದೇ ವೇದಿಕೆಯಲ್ಲಿ ನಾಣ್ಯವನ್ನು ಹಾಕುವ ಮೊದಲು ಅದರ ನಿಯಮಗಳು, ಮಾರಾಟ ಶುಲ್ಕ, ಹಣ ಪಡೆಯುವ ವಿಧಾನ ಮತ್ತು ನಾಣ್ಯವನ್ನು ಕಳುಹಿಸುವ ವ್ಯವಸ್ಥೆ ಬಗ್ಗೆ ಮೊದಲೇ ಸರಿಯಾಗಿ ತಿಳಿದುಕೊಂಡು ನಿರ್ಧಾರ ತೆಗೆದುಕೊಳ್ಳಿ ವಂಚನೆಗಳಿಗೆ ಸಿಲುಕಬೇಡಿ.
Old Coin Selling: ಹಂತ ಹಂತವಾಗಿ
| ಹಂತ | ಏನುಮಾಡಬೇಕು? |
| 1. ಮೌಲ್ಯ ಅಂದಾಜು | ನಾಣ್ಯದ ವರ್ಷ, ಇತಿಹಾಸ, ಲೋಹ ಮತ್ತು ಅಪರೂಪತೆ ತಿಳಿದುಕೊಳ್ಳಿ |
| 2. ಫೋಟೋ ತೆಗೆದು ಹಾಕಿ | ನಾಣ್ಯದ ಮುಂಭಾಗ ಮತ್ತು ಹಿಂಭಾಗದ ಸ್ಪಷ್ಟ ಫೋಟೋಗಳನ್ನು ಹಾಕಿ |
| 3. ಮಾರಾಟದ ವೇದಿಕೆ ಆಯ್ಕೆ | eBay, Etsy, Catawiki ಅಥವಾ ಸೂಕ್ತ ಹರಾಜು ವೇದಿಕೆ ಪರಿಶೀಲಿಸಿ |
| 4. ಪ್ರಮಾಣಪತ್ರ | ಸಾಧ್ಯವಾದರೆ ನಾಣ್ಯದ ನೈಜತೆಯ ದಾಖಲೆ ಅಥವಾ ಗುಣಮಟ್ಟದ ಪ್ರಮಾಣಪತ್ರ ಸೇರಿಸಿ |
| 5. ಬೆಲೆ ನಿಗದಿ | ಇದೇ ರೀತಿಯ ನಾಣ್ಯಗಳು ಎಷ್ಟು ಬೆಲೆಗೆ ಮಾರಾಟವಾಗಿವೆ ಎಂದು ಪರಿಶೀಲಿಸಿ |
| 6. ಪಾವತಿ | ಸುರಕ್ಷಿತ ಪಾವತಿ ವಿಧಾನ ಬಳಸಿ |
| 7. ಕಳುಹಿಸುವುದು | ನಾಣ್ಯವನ್ನು ಸುರಕ್ಷಿತವಾಗಿ ಪ್ಯಾಕ್ ಮಾಡಿ ಕಳುಹಿಸಿ |
ನಾಣ್ಯಕ್ಕೆ Certificate ಇದ್ದರೆ ಏನು ಪ್ರಯೋಜನ?
ನಾಣ್ಯ ನಿಜವಾದದ್ದು ಎಂಬುದನ್ನು ತಿಳಿಸುವ ದಾಖಲೆ ಅಥವಾ ಗುಣಮಟ್ಟದ ಪ್ರಮಾಣಪತ್ರ ಇದ್ದರೆ ಖರೀದಿದಾರರಿಗೆ ಹೆಚ್ಚು ವಿಶ್ವಾಸ ಬರಬಹುದು ಹಾಗೂ ಹೆಚ್ಚಿನ ಬೆಲೆ ಕೊಟ್ಟು ನಾಣ್ಯ ಖರೀದಿ ಮಾಡಬಹುದು.ಆದರೆ ಯಾರಾದರೂ ತೋರಿಸಿದ Certificate ನೋಡಿ ತಕ್ಷಣ ನಂಬಬೇಡಿ. ಆ ಪ್ರಮಾಣಪತ್ರವನ್ನು ನೀಡಿರುವ ಸಂಸ್ಥೆ ನಂಬಿಕಸ್ಥದ್ದೇ ಎಂಬುದನ್ನು ಮೊದಲು ಪರಿಶೀಲಿಸಿ.ನಂತರ ಸರ್ಟಿಫಿಕೇಟ್ ಕೊಡುವುದು ಅಥವಾ ತೆಗೆದುಕೊಳ್ಳುವುದು ಉತ್ತಮ ನಿರ್ಧಾರವಾಗಿರುತ್ತದೆ.
ಹಳೆಯ ನಾಣ್ಯಗಳನ್ನು ಮಾರುವ ಮೊದಲು ಬೆಲೆ ಪರಿಶೀಲಿಸಿ
Onlineನಲ್ಲಿ ಯಾರಾದರೂ ಒಂದೇ ರೀತಿಯ ನಾಣ್ಯಕ್ಕೆ ₹10 ಲಕ್ಷ ಅಥವಾ ₹20 ಲಕ್ಷ ಬೆಲೆ ಹಾಕಿರುವುದನ್ನು ನೋಡಿ, ನಿಮ್ಮ ಬಳಿ ಇರುವ ನಾಣ್ಯಕ್ಕೂ ಅಷ್ಟೇ ಬೆಲೆ ಇದೆ ಎಂದು ನಿರ್ಧರಿಸಬೇಡಿ.ಒಬ್ಬರು ಕೇಳುತ್ತಿರುವ ಬೆಲೆ ಮತ್ತು ನಿಜವಾಗಿ ಆ ನಾಣ್ಯ ಮಾರಾಟವಾದ ಬೆಲೆ ಎರಡೂ ಒಂದೇ ಆಗಿರಬೇಕೆಂದಿಲ್ಲ.ಆದ್ದರಿಂದ ಸಾಧ್ಯವಾದರೆ ಹಿಂದಿನ ಹರಾಜುಗಳಲ್ಲಿ ಅದೇ ರೀತಿಯ ಅಥವಾ ಹೋಲುವ ನಾಣ್ಯಗಳು ಎಷ್ಟು ಬೆಲೆಗೆ ಮಾರಾಟವಾಗಿವೆ ಎಂಬುದನ್ನು ಪರಿಶೀಲಿಸಿ. ಇದರಿಂದ ನಾಣ್ಯದ ನಿಜವಾದ ಬೆಲೆ ಬಗ್ಗೆ ಒಂದು ಅಂದಾಜು ಸಿಗಬಹುದು.
ಹಳೆಯ ನೋಟುಗಳಿಗೂ ಬೆಲೆ ಇದೆಯೇ?
ಹಳೆಯ ನೋಟುಗಳಿಗೂ ಕೆಲವು ಸಂದರ್ಭಗಳಲ್ಲಿ ಸಂಗ್ರಹಕಾರರ ನಡುವೆ ಬೇಡಿಕೆ ಇರಬಹುದು. ಅವರ ಹುಟ್ಟಿದ ದಿನದ ನಂಬರ್ ಇರುವ ನೋಟ್, ಅವರ ಇಷ್ಟದ ನಂಬರ್ ಇರುವ ನೋಟ್, ಸಿಕ್ಕರೆ ಹೆಚ್ಚು ಬೆಲೆ ಕೊಟ್ಟು ಖರೀದಿ ಮಾಡುತ್ತಾರೆ.ವಿಶೇಷವಾಗಿ ಕೆಲವು ಹಳೆಯ ನೋಟುಗಳಲ್ಲಿ ಇರುವ ವಿಶೇಷ ಸರಣಿ ಸಂಖ್ಯೆಗಳು ಖರೀದಿದಾರರ ಗಮನ ಸೆಳೆಯುತ್ತವೆ.
ಉದಾಹರಣೆಗೆ:
- 1111
- 2222
- 6666
- 9999
- 786
- ಒಂದರ ನಂತರ ಒಂದು ಬರುವ ಸಂಖ್ಯೆಗಳು
- ಕಡಿಮೆ ಸರಣಿ ಸಂಖ್ಯೆಗಳು
ಇಂತಹ ವಿಶೇಷ ಸರಣಿ ಸಂಖ್ಯೆ ಇರುವ ನೋಟುಗಳಿಗೆ ಸಾಮಾನ್ಯ ನೋಟುಗಳಿಗಿಂತ ಹೆಚ್ಚಿನ ಬೆಲೆ ಸಿಗುವ ಉದಾಹರಣೆಗಳಿವೆ.ಆದರೆ ನೋಟು ಹಳೆಯದು ಎಂಬ ಕಾರಣಕ್ಕೆ ಮಾತ್ರ ಹೆಚ್ಚಿನ ಬೆಲೆ ಸಿಗುವುದಿಲ್ಲ. ಅದರ ಸ್ಥಿತಿ, ಸರಣಿ ಸಂಖ್ಯೆ, ಅಪರೂಪತೆ ಮತ್ತು ಸಂಗ್ರಹಕಾರರಲ್ಲಿ ಇರುವ ಬೇಡಿಕೆ ಕೂಡ ಮುಖ್ಯವಾಗುತ್ತದೆ.
ಹಳೆಯ ನಾಣ್ಯಗಳನ್ನು ಮಾರುವಾಗ Scam ಬಗ್ಗೆ ಎಚ್ಚರ
ಹಳೆಯ ನಾಣ್ಯಗಳು ಮತ್ತು ನೋಟುಗಳನ್ನು ಮಾರಾಟ ಮಾಡುವವರನ್ನು ಗುರಿಯಾಗಿಸಿಕೊಂಡು Onlineನಲ್ಲಿ ಹಲವಾರು ಅನಾಮಿಕರು ವಂಚನೆ ನಡೆಸುವ ಸಾಧ್ಯತೆ ಇರುತ್ತದೆ . ಹೀಗಾಗಿ ಯಾರನ್ನಾದರೂ ನಂಬುವ ಮೊದಲು ಸರಿಯಾಗಿ ಪರಿಶೀಲಿಸಿ.“ನಿಮ್ಮ ನಾಣ್ಯಕ್ಕೆ ₹50 ಲಕ್ಷ ಕೊಡುತ್ತೇವೆ, ಮೊದಲು Registration Fee ಕೊಡಿ”, “GST ಪಾವತಿಸಿ”, “RBI Clearance charge ಕೊಡಿ”, “TDS ಕಟ್ಟಿದ ನಂತರ ಹಣ ಸಿಗುತ್ತದೆ” ಎಂದು ಯಾರಾದರೂ ಹೇಳಿದರೆ ಹಣ ಕಳುಹಿಸಬೇಡಿ.RBI ಕೂಡ ಹಳೆಯ ನೋಟುಗಳು ಮತ್ತು ನಾಣ್ಯಗಳ ಖರೀದಿ-ಮಾರಾಟದ ಹೆಸರಿನಲ್ಲಿ ನಡೆಯುವ ನಕಲಿ ಆಫರ್ಗಳ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿದೆ. RBI ಸ್ವತಃ ಹಳೆಯ ನಾಣ್ಯಗಳು ಅಥವಾ ನೋಟುಗಳನ್ನು ಖರೀದಿ-ಮಾರಾಟ ಮಾಡುವುದಿಲ್ಲ.ಹೀಗಾಗಿ ಮೊದಲು ಹಣ ಕೊಡಿ, ನಂತರ ನಿಮ್ಮ ನಾಣ್ಯವನ್ನು ಖರೀದಿಸುತ್ತೇವೆ ಎಂದು ಹೇಳುವವರಿಂದ ದೂರವಿರುವುದು ಉತ್ತಮ.
ಹಳೆಯ ನಾಣ್ಯಗಳ ಬೆಲೆ ಎಷ್ಟು?
ಹಳೆಯ ನಾಣ್ಯಗಳ ಬೆಲೆ ಒಂದೇ ರೀತಿಯಾಗಿ ಇರುವುದಿಲ್ಲ. ನಾಣ್ಯದ ಪ್ರಕಾರ, ಅಪರೂಪತೆ, ಸ್ಥಿತಿ ಮತ್ತು ಸಂಗ್ರಹಕಾರರಲ್ಲಿ ಇರುವ ಬೇಡಿಕೆಗೆ ಅನುಗುಣವಾಗಿ ಬೆಲೆ ಬದಲಾಗುತ್ತದೆ.
ಕೆಲವು ಜಾಗತಿಕ ಮಾರುಕಟ್ಟೆಗಳಲ್ಲಿ ಕಾಣುವ ಅಂದಾಜು ಬೆಲೆ ಶ್ರೇಣಿ ಹೀಗಿದೆ:
| ನಾಣ್ಯದಪ್ರಕಾರ | ಬೇಡಿಕೆಇರುವಮಾರುಕಟ್ಟೆಗಳು | ಅಂದಾಜುಬೆಲೆಶ್ರೇಣಿ |
| ಚಿನ್ನದ ಹಳೆಯ ನಾಣ್ಯಗಳು | ಅಮೇರಿಕಾ, ಯುರೋಪ್, ಜಪಾನ್ | $500 – $50,000 |
| ಬೆಳ್ಳಿಯ ಹಳೆಯ ನಾಣ್ಯಗಳು | ಯುರೋಪ್, ಚೀನಾ, ಭಾರತ | $100 – $10,000 |
| ತಾಮ್ರದ ಹಳೆಯ ನಾಣ್ಯಗಳು | ಭಾರತ, ಮಧ್ಯಪ್ರಾಚ್ಯ | $20 – $2,000 |
ಗಮನಿಸಿ: ಇದು ಸಾಮಾನ್ಯ ಅಂದಾಜು ಶ್ರೇಣಿ ಮಾತ್ರ. ನಿಮ್ಮ ಬಳಿ ಇರುವ ಯಾವುದೇ ಒಂದು ನಾಣ್ಯಕ್ಕೆ ಇದೇ ಬೆಲೆ ಸಿಗುತ್ತದೆ ಎಂದು ಹೇಳಲಾಗುವುದಿಲ್ಲ. ನಾಣ್ಯ ಎಷ್ಟು ಅಪರೂಪ, ಅದರ ಸ್ಥಿತಿ ಹೇಗಿದೆ, ಅದು ನಿಜವಾದದ್ದೇ ಮತ್ತು ಅದಕ್ಕೆ ಸಂಗ್ರಹಕಾರರಲ್ಲಿ ಎಷ್ಟು ಬೇಡಿಕೆ ಇದೆ ಎಂಬುದರ ಮೇಲೆ ನಿಜವಾದ ಬೆಲೆ ಹೆಚ್ಚು ಅಥವಾ ಕಡಿಮೆ ಇರಬಹುದು.
ಇದನ್ನೂ ಓದಿ
→ ಕರ್ನಾಟಕ ರೇಷನ್ ಕಾರ್ಡ್ e-KYC 2026: ಮೊಬೈಲ್ನಲ್ಲೇ e-KYC ಮಾಡುವ ವಿಧಾನ
→ SSP Scholarship 2026: ಕರ್ನಾಟಕ ವಿದ್ಯಾರ್ಥಿಗಳಿಗೆ ₹3,000 ರಿಂದ ₹60,000 ವಿದ್ಯಾರ್ಥಿವೇತನ
ನಿಮ್ಮ ಹಳೆಯ Coin ಮಾರಾಟ ಮಾಡುವ ಸರಿಯಾದ ವಿಧಾನ
ನಿಮ್ಮ ಬಳಿ ಹಳೆಯ ನಾಣ್ಯ ಇದ್ದರೆ ಮೊದಲು ಅದನ್ನು ಸ್ವಚ್ಛಗೊಳಿಸಲು ಅಥವಾ ಹೊಳಪು ಮಾಡಲು ಪ್ರಯತ್ನಿಸಬೇಡಿ. ಅದು ಯಾವ ಸ್ಥಿತಿಯಲ್ಲಿ ಇದೆಯೋ ಅದೇ ಸ್ಥಿತಿಯಲ್ಲಿ ಇಟ್ಟುಕೊಳ್ಳುವುದು ಉತ್ತಮ.ನಂತರ ನಾಣ್ಯ ಯಾವ ವರ್ಷದದ್ದು, ಅದರ ಗುರುತು, ಮುಖಬೆಲೆ, ಲೋಹ ಮತ್ತು ಸ್ಥಿತಿ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ. ಮುಂಭಾಗ ಮತ್ತು ಹಿಂಭಾಗದ ಉತ್ತಮ ಫೋಟೋಗಳನ್ನು ತೆಗೆದುಕೊಳ್ಳಿ.ನಂತರ ನಂಬಿಕಸ್ಥ ನಾಣ್ಯ ಸಂಗ್ರಹಕಾರ, ವ್ಯಾಪಾರಿ ಅಥವಾ ಹರಾಜು ವೇದಿಕೆಯ ಮೂಲಕ ಅದರ ಬೆಲೆ ಬಗ್ಗೆ ವಿಚಾರಿಸಿ. ಒಂದಕ್ಕಿಂತ ಹೆಚ್ಚು ಕಡೆ ಬೆಲೆ ತಿಳಿದುಕೊಂಡು ನಂತರ ಮಾರಾಟ ಮಾಡುವ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ.ಇಂದಿನ ದಿನಗಳಲ್ಲಿ ಹಳೆಯ ನಾಣ್ಯಗಳನ್ನು Onlineನಲ್ಲಿ ಮಾರಾಟ ಮಾಡುವುದರಿಂದ ದೂರದಲ್ಲಿರುವ ನಾಣ್ಯ ಸಂಗ್ರಹಕಾರರನ್ನು ಕೂಡ ತಲುಪಬಹುದು. ಆದರೆ ಸರಿಯಾದ ವೇದಿಕೆಯನ್ನು ಆಯ್ಕೆ ಮಾಡುವುದು, ನಾಣ್ಯದ ನಿಜವಾದ ಬೆಲೆ ತಿಳಿದುಕೊಳ್ಳುವುದು ಮತ್ತು ಸುರಕ್ಷಿತವಾಗಿ ಹಣ ಪಡೆಯುವುದು ಬಹಳ ಮುಖ್ಯ.ನಿಮ್ಮ ಬಳಿ ಹಳೆಯ ನಾಣ್ಯ ಇದೆ ಎಂದರೆ ಅದು ಖಂಡಿತವಾಗಿಯೂ ಲಕ್ಷಾಂತರ ರೂಪಾಯಿ ಬೆಲೆ ಬಾಳುತ್ತದೆ ಎಂದು ಭಾವಿಸಬೇಡಿ. ಮೊದಲು ನಾಣ್ಯದ ನಿಜವಾದ ಮಾಹಿತಿ ಮತ್ತು ಅಪರೂಪತೆ ತಿಳಿದುಕೊಂಡು, ನಂತರ ಅದರ ಮಾರುಕಟ್ಟೆ ಬೆಲೆ ಪರಿಶೀಲಿಸಿ ಮಾರಾಟ ಮಾಡುವುದು ಉತ್ತಮ.ಇಲ್ಲವಾದರೆ ವಂಚನೆಗಳಿಗೆ ಸೆರೆ ಆಗುತ್ತೀರ ಅದಕ್ಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು ಸರಿಯಾಗಿ ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳಿ. ಮಾಹಿತಿ ಇಷ್ಟವಾದರೆ ನಿಮ್ಮ ಫ್ರೆಂಡ್ಸ್ ಹಾಗೆ ಫ್ಯಾಮಿಲಿ ಜೊತೆ ಹಂಚಿಕೊಳ್ಳಿ.