ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ? LPG ಬುಕ್ಕಿಂಗ್ ಮಾಡುವವರಿಗೆ ಹೊಸ ಅಪ್ಡೇಟ್

LPG gas cylinder price hike and new booking rules Kannada ,ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಹೊಸ ದರ ಮತ್ತು ಬುಕ್ಕಿಂಗ್ ಅಪ್ಡೇಟ್ ಮಾಹಿತಿ

 ಈಗಿನ ಕಾಲದಲ್ಲಿ ಪ್ರತಿಯೊಂದು ಕುಟುಂಬದ ಅಡುಗೆಮನೆಯ ಪ್ರಮುಖ ಜೀವನಾಡಿ ಎಂದರೆ ಅದು ಎಲ್‌ಪಿಜಿ (LPG ) ಗ್ಯಾಸ್ ಸಿಲಿಂಡರ್. ಗ್ರಾಮೀಣ ಭಾಗದಿಂದ ಹಿಡಿದು ನಗರ ದಲ್ಲಿ  ಪ್ರತಿಯೊಂದು ಮನೆಯಲ್ಲೂ ಗ್ಯಾಸ್ ಸಿಲಿಂಡರ್ ಅತಿ ಮುಖ್ಯವಾದ ಅವಶ್ಯಕ  ವಸ್ತುವಾಗಿದೆ.ಮುಂಜಾನೆಯ ಬಿಸಿ ಚಹಾದಿಂದ ಹಿಡಿದು ರಾತ್ರಿಯ ಊಟದವರೆಗೆ ಅಡುಗೆಮನೆಯ ಎಲ್ಲಾ ಅಗತ್ಯದ ಕೆಲಸಗಳಲ್ಲಿ ಗ್ಯಾಸ್ ಸಿಲಿಂಡರ್ ಮೇಲೆಯೇ ಅವಲಂಬಿತವಾಗಿರುವುದನ್ನು ನೋಡ್ತಿದ್ದೀವಿ.ಮೊದಲು ಎಲ್ಲಾ ಕಡೆ Gas Book  ಮಾಡಲು ಅಥವಾ ಸಿಲಿಂಡರ್ ಪಡೆಯಲು Gas Agency ಗಳ ಮುಂದೆ ದಿನ ಪೂರ್ತಿ ಗಂಟೆಗಟ್ಟಲೆ ಕ್ಯೂ ನಿಲ್ಲಬೇಕಾದ ಪರಿಸ್ಥಿತಿ ಇತ್ತು.ಆದರೆ ಈಗಿನ ಸಂಧರ್ಭದಲ್ಲಿ ನಿಮ್ಮ ಕೈಯಲ್ಲಿರುವ ಸ್ಮಾರ್ಟ್‌ಫೋನ್ ಉಪಯೋಗ ಮಾಡಿಕೊಡು ಕೇವಲ  ಮನೆಯಲ್ಲೇ ಕುಳಿತು ಗ್ಯಾಸ್ ಸಿಲಿಂಡರ್ ಬುಕ್ ಮಾಡಬಹುದು. 

ಆದರೆ, ಈಗಿನ ಕಾಲದಲ್ಲಿ  ಭಾರತದಾದ್ಯಂತ ಹಾಗೂ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ಕೊರತೆ (LPG Shortage) ಉಂಟಾಗುತ್ತಿದೆ ಎಂಬ ಆತಂಕ  ಭಯ  ಸಾರ್ವಜನಿಕರಲ್ಲಿ  ಮೂಡಿದೆ. ಇದರೊಂದಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯ ಏರಿಳಿತಗಳಿಂದಾಗಿ ಗ್ಯಾಸ್ ಸಿಲಿಂಡರ್ ಬೆಲೆಗಳಲ್ಲೂ ಗಮನಾರ್ಹ ಬದಲಾವಣೆಗಳಾಗುತ್ತಿವೆ. ನಿಮ್ಮ ಮನೆಯಲ್ಲಿ ಇಂಡೇನ್ (Indane), ಎಚ್‌ಪಿ (HP) ಅಥವಾ ಭಾರತ್ ಗ್ಯಾಸ್ (Bharat Gas) – ಇವುಗಳಲ್ಲಿ ಯಾವುದೇ ಕಂಪನಿಯ ಗ್ಯಾಸ್ ಸಂಪರ್ಕ ಇರಲಿ, ಅದನ್ನು ವಾಟ್ಸಾಪ್, ಮಿಸ್ಡ್ ಕಾಲ್ ಅಥವಾ ಆನ್‌ಲೈನ್ ಆ್ಯಪ್‌ಗಳ ಮೂಲಕ ಬುಕ್ ಮಾಡುವುದು ಹೇಗೆ? ಪ್ರಸ್ತುತ ಮಾರುಕಟ್ಟೆಯಲ್ಲಿ ಗೃಹಬಳಕೆಯ ಮತ್ತು ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಎಷ್ಟಿದೆ? ಮಾರುಕಟ್ಟೆಯಲ್ಲಿ ಗ್ಯಾಸ್ ವಿಳಂಬವಾಗಲು ನಿಜವಾದ ಕಾರಣಗಳೇನು? ಮತ್ತು ತುರ್ತು ಸಂದರ್ಭಗಳಲ್ಲಿ ನೀವು ಸಂಪರ್ಕಿಸಬೇಕಾದ ಅಧಿಕೃತ ಸಹಾಯವಾಣಿಗಳು ಯಾವುವು ಎಂಬ ಪ್ರತಿಯೊಂದುರ ಸಂಪೂರ್ಣ ಮಾಹಿತಿ  ಕೆಳ್ಗೆ ಲೇಖನದಲ್ಲಿ ವಿವರಿಸಲಾಗಿದೆ  

ಎಲ್‌ಪಿಜಿ ಗ್ಯಾಸ್ ಕೊರತೆ (LPG Shortage) ಮತ್ತು ವಿಳಂಬ: ಮಾರುಕಟ್ಟೆಯ ನೈಜ ಸ್ಥಿತಿ

ಇತ್ತೀಚಿನ ದಿನಗಳಲ್ಲಿLPG ಗ್ಯಾಸ್ ಬುಕ್ ಮಾಡಿದ  ನಂತರ  24 ರಿಂದ 48 ಗಂಟೆಗಳ ಒಳಗೆ ಸಿಲಿಂಡರ್ ಮನೆ ಬಾಗಿಲಿಗೆ ಬರುತ್ತಿಲ್ಲ, ಬದಲಾಗಿ 4 ರಿಂದ 7 ದಿನಗಳ ಕಾಲ ಕಾಯಬೇಕಾಗುತ್ತಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಈ ಪೂರೈಕೆಯ ಕೊರತೆ ಅಥವಾ ವಿಳಂಬಕ್ಕೆ ಪ್ರಮುಖವಾಗಿ ಕೆಲವು ದೇಶೀಯ ಮತ್ತು ವಿದೇಶಿ ಕಾರಣಗಳಿವೆ:

1. ಅಂತರರಾಷ್ಟ್ರೀಯ ಇಂಧನ ಮಾರುಕಟ್ಟೆಯ ಬಿಕ್ಕಟ್ಟು

ಭಾರತವು ತನಗೆ ಬೇಕಾಗುವ ಒಟ್ಟು ಎಲ್‌ಪಿಜಿ ಬಳಕೆಯ ಸುಮಾರು ಶೇಕಡಾ 40% ಕ್ಕಿಂತ ಹೆಚ್ಚು ಭಾಗವನ್ನು ಮಧ್ಯಪ್ರಾಚ್ಯ (Middle East) ದೇಶಗಳಿಂದ ಮತ್ತು ಅಮೆರಿಕಾದಿಂದ ಆಮದು ಮಾಡಿಕೊಳ್ಳುತ್ತದೆ. ಜಾಗತಿಕವಾಗಿ ನಡೆಯುತ್ತಿರುವ ಭೌಗೋಳಿಕ ರಾಜಕೀಯ ಆತಂಕ ಉಂಟಾಗಿದೆ.ಮತ್ತು ಇರಾನ್ ಮುಂತಾದ ತೈಲ ಉತ್ಪಾದಕ ದೇಶಗಳ ಬಿಕ್ಕಟ್ಟಿನಿಂದಾಗಿ ಭಾರತಕ್ಕೆ ಬರುವ ಎಲ್‌ಪಿಜಿ ಆಮದು ಪ್ರಮಾಣದಲ್ಲಿ ತಾತ್ಕಾಲಿಕ ಸ್ಥಗಿತ ಕಂಡುಬಂದಿದೆ. ಇದು ದೇಶೀಯ ರಿಫಿಲ್ಲಿಂಗ್ ಪ್ಲಾಂಟ್‌ಗಳ ಮೇಲೆ ನೇರ ಪರಿಣಾಮ ಬೀರಿದೆ.

2. ಕಡ್ಡಾಯ ಬಯೋಮೆಟ್ರಿಕ್ ಇ-ಕೆವೈಸಿ (e-KYC) ಪ್ರಕ್ರಿಯೆ

ಕೇಂದ್ರ ಸರ್ಕಾರದ ನಿರ್ದೇಶನದಂತೆ ನಕಲಿ ಗ್ಯಾಸ್ ಸಂಪರ್ಕಗಳನ್ನು ತಡೆಗಟ್ಟಲು ಮತ್ತು ನೈಜ ಫಲಾನುಭವಿಗಳಿಗೆ ಮಾತ್ರ ಸಬ್ಸಿಡಿ ತಲುಪಿಸಲು ಪ್ರಸ್ತುತ ಎಲ್ಲಾ ಗ್ರಾಹಕರಿಗೆ ಬಯೋಮೆಟ್ರಿಕ್ ಇ-ಕೆವೈಸಿ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಗ್ಯಾಸ್ ಡೆಲಿವರಿ ಮಾಡುವ ಸಿಬ್ಬಂದಿಗಳು ಮನೆ ಮನೆಗೆ ಹೋದಾಗ ಗ್ರಾಹಕರ ಹೆಬ್ಬೆರಳ ಗುರುತು ಅಥವಾ ದಾಖಲೆಗಳನ್ನು ಆಪ್ ಗಳ ಮೂಲಕ  ಪರಿಶೀಲಿಸುತ್ತಿರುವುದರಿಂದ, ಪ್ರತಿ ಸಿಲಿಂಡರ್ ವಿತರಣೆಗೆ ತೆಗೆದುಕೊಳ್ಳುವ ಸಮಯ ಹೆಚ್ಚಾಗುತ್ತಿದೆ. ಅದರಿಂದ ಪೂರೈಕೆ ಸರಪಳಿ ನಿದಾನಕ್ಕೆಒಂದು ಕಾರಣವಾಗಿದೆ.

3. ಹವಾಮಾನ ಮತ್ತು ಸಾರಿಗೆ ಸಮಸ್ಯೆಗಳು

ಮಳೆಗಾಲದ ಆರಂಭದಲ್ಲಿ ಅಥವಾ ಹಬ್ಬ ಹರಿದಿನಗಳ ಸೀಸನ್‌ನಲ್ಲಿ ಸಾರಿಗೆ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗುತ್ತದೆ. ದೊಡ್ಡ ದೊಡ್ಡ ಗ್ಯಾಸ್ ಟ್ಯಾಂಕರ್‌ಗಳು ರಿಫಿಲ್ಲಿಂಗ್ ಪ್ಲಾಂಟ್‌ಗಳಿಂದ ಸ್ಥಳೀಯ ವಿತರಕ ಏಜೆನ್ಸಿಗಳಿಗೆ ತಲುಪುವುದು ತಡವಾಗುವುದರಿಂದ ಗ್ರಾಹಕರಿಗೆ ಸಕಾಲದಲ್ಲಿ ಸಿಲಿಂಡರ್ ತಲುಪಿಸಲು ಸಾಧ್ಯವಾಗುತ್ತಿಲ್ಲ. ಆದರೆ ತೈಲ ಕಂಪನಿಗಳು ಗ್ರಾಹಕರಿಗೆ ಆತಂಕಪಡದಂತೆ (Panic Buying ಮಾಡದಂತೆ) ಮತ್ತು ಸದ್ಯದಲ್ಲೇ ಪೂರೈಕೆ ಸಂಪೂರ್ಣ ಸುಗಮವಾಗಲಿದೆ ಎಂದು ಭರವಸೆ ನೀಡಿವೆ.

ಪ್ರಸ್ತುತ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಗಳು (LPG Cylinder Prices)

ಗ್ಯಾಸ್ ಸಿಲಿಂಡರ್ ಬೆಲೆಗಳನ್ನು ಪ್ರತಿ ತಿಂಗಳ 1ನೇ ತಾರೀಖಿನಂದು ಅಂತರರಾಷ್ಟ್ರೀಯ ಕಚ್ಚಾ ತೈಲದ ಬೆಲೆ (Crude Oil Prices) ಮತ್ತು ಡಾಲರ್ ಎದುರು ರೂಪಾಯಿಯ ಮೌಲ್ಯದ ಆಧಾರದ ಮೇಲೆ ತೈಲ ಮಾರ್ಕೆಟಿಂಗ್ ಕಂಪನಿಗಳು (OMCs) ಪರಿಷ್ಕರಿಸುತ್ತವೆ. ಗೃಹಬಳಕೆಯ ಮತ್ತು ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಇಂದಿನ ಬೆಲೆಯ ವಿವರ ಗಳು ಇಲ್ಲಿದೆ:

ಗೃಹಬಳಕೆಯ ಸಿಲಿಂಡರ್ (14.2 ಕೆ.ಜಿ)

 ಸಾರ್ವಜನಿಕರು ಅಡುಗೆ ಮನೆಗೆ ಬಳಸುವ 14.2 ಕೆ.ಜಿ ತೂಕದ ಗೃಹಬಳಕೆಯ LPG  ಸಿಲಿಂಡರ್ ಬೆಲೆಯು ಪ್ರಸ್ತುತ ಸ್ಥಿರವಾಗಿದೆ. ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಇದರ ಬೆಲೆ ಸದ್ಯಕ್ಕೆ ಸರಿಸುಮಾರು ₹915.50 ರೂಪಾಯಿಗಳಾಗಿದೆ. ಸ್ಥಳೀಯ ಸಾರಿಗೆ ವೆಚ್ಚ ಮತ್ತು ತೆರಿಗೆಗಳ (Local Taxes) ಆಧಾರದ ಮೇಲೆ ಜಿಲ್ಲೆಯಿಂದ ಜಿಲ್ಲೆಗೆ ಇದರಲ್ಲಿ 5 ರಿಂದ 10 ರೂಪಾಯಿಗಳ ಹೆಚ್ಚು ಕಡಿಮೆವ್ಯತ್ಯಾಸವಿರಬಹುದು.

ವಾಣಿಜ್ಯ ಬಳಕೆಯ ಸಿಲಿಂಡರ್ (19 ಕೆ.ಜಿ)

ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಕ್ಯಾಟರಿಂಗ್ ಸರ್ವೀಸ್ ಮತ್ತು ಸಣ್ಣ ಸಣ್ಣ ತಿನಿಸು ಅಂಗಡಿಗಳಲ್ಲಿ ಬಳಸುವ 19 ಕೆ.ಜಿ ತೂಕದ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಇತ್ತೀಚೆಗೆ ಭಾರಿ ಏರಿಕೆ ಕಂಡುಬಂದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಒತ್ತಡದಿಂದಾಗಿ ವಾಣಿಜ್ಯ ಸಿಲಿಂಡರ್ ಬೆಲೆಯು ಬರೋಬ್ಬರಿ ₹3,152.00 ರೂಪಾಯಿಗಳಿಗೆ ತಲುಪಿದೆ. ಈ ಭಾರಿ ದರ ಏರಿಕೆಯು ಹೋಟೆಲ್ ಉದ್ಯಮ ಮತ್ತು ಸಣ್ಣ ವ್ಯಾಪಾರಿಗಳ ಮೇಲೆ ಹೆಚ್ಚಿನ ಆರ್ಥಿಕ ಹೊರೆಯನ್ನುಕಂಡು ಬರುವುದನ್ನು ಕಾಣುತ್ತೇವೆ Gruhalakshmi ಹಣದ ಸ್ಟೇಟಸ್ ಚೆಕ್ ಮಾಡುವ ವಿಧಾನ ಇಲ್ಲಿ ನೋಡಿ  

ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಸಬ್ಸಿಡಿ

ಕೇಂದ್ರ ಸರ್ಕಾರದ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಂಪರ್ಕ ಪಡೆದಿರುವ ಅತ್ಯಂತ ಬಡ ಮತ್ತು ಹಿಂದುಳಿದ ವರ್ಗದ ಕುಟುಂಬಗಳಿಗೆ ಸರ್ಕಾರವು ಪ್ರತಿ ಸಿಲಿಂಡರ್‌ಗೆ ₹300 ರೂ.ಗಳ ನೇರ ಸಬ್ಸಿಡಿಯನ್ನು (Subsidy) ನೀಡುತ್ತಾ ಬಂದಿದೆ. ಈ ಗ್ರಾಹಕರಿಗೆ 14.2 ಕೆ.ಜಿ ಸಿಲಿಂಡರ್ ಕೇವಲ ₹615.50  ರೂಪಾಯಿಗಳ ಮಹತ್ವಾಕಾಂಕ್ಷೆಯು ಲಭ್ಯವಾಗುತ್ತಿದೆ.

ಭಾರತದ ಪ್ರಮುಖ ಎಲ್‌ಪಿಜಿ ಗ್ಯಾಸ್ ಕಂಪನಿಗಳು ಮತ್ತು ಅವುಗಳ ಸೇವೆಗಳು

ಭಾರತೀಯ ಮಾರುಕಟ್ಟೆಯಲ್ಲಿ ಪ್ರಮುಖವಾಗಿ ಮೂರು ಸರ್ಕಾರಿ ಮಾಲಿಕತ್ವ  ಪ್ರಸಿದ್ಧ ತೈಲ ಕಂಪನಿಗಳು ಮನೆ ಮನೆಗೆ ಅಡುಗೆ ಅನಿಲವನ್ನು ಪೂರೈಸುತ್ತವೆ. ಈ ಮೂರೂ ಕಂಪನಿಗಳು ಗ್ರಾಹಕರ ಅನುಕೂಲಕ್ಕಾಗಿ ಅತ್ಯುತ್ತಮ ಡಿಜಿಟಲ್ ಸೇವೆಗಳನ್ನು ಒದಗಿಸುತ್ತಿವೆ:

  • ಇಂಡೇನ್ ಗ್ಯಾಸ್ (Indane Gas): ಇದು ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL) ಸಂಸ್ಥೆಯ ಅಡಿಯಲ್ಲಿ ಬರುವ ದೇಶದ ದೊಡ್ಡ ದೊಡ್ಡ ಎಲ್‌ಪಿಜಿ ಬ್ರ್ಯಾಂಡ್ ಆಗಿದೆ. ಭಾರತದ ಮೂಲೆ ಮೂಲೆಗೂ, ಗ್ರಾಮೀಣ ಭಾಗಗಳಿಗೂ ಸುಲಭವಾಗಿ ಇಂಡೇನ್ ಗ್ಯಾಸ್ ತನ್ನ ವಿಸ್ತಾರವಾದ ವಿತರಕರ ಜಾಲವನ್ನು ಹೊಂದಿದೆ.
  • ಎಚ್‌ಪಿ ಗ್ಯಾಸ್ (HP Gas): ಇದು ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಸಂಸ್ಥೆಯ ಎಲ್‌ಪಿಜಿ ವಿಭಾಗವಾಗಿದೆ. ‘ಜಿಎಚ್‌ಪಿ’ (JI HA HP Gas) ಎಂಬ ಸ್ಲೋಗನ್ ಹೊಂದಿರುವ ಈ ಕಂಪನಿಯು ತ್ವರಿತ ಗ್ರಾಹಕ ಸೇವೆ ಮತ್ತು ಆನ್‌ಲೈನ್ ಪೋರ್ಟಲ್ ನಿರ್ವಹಣೆಗೆ ಹೆಸರುವಾಸಿಯಾಗಿದೆ.
  • ಭಾರತ್ ಗ್ಯಾಸ್ (Bharat Gas): ಇದು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ತಂತ್ರಜ್ಞಾನ ಅಳವಡಿಕೆಯಲ್ಲಿ ಈ ಕಂಪನಿ ಸದಾ ಮುಂಚೂಣಿಯಲ್ಲಿದ್ದು, ದೇಶದಲ್ಲಿಯೇ ಮೊದಲ ಬಾರಿಗೆ ವಾಟ್ಸಾಪ್ ಮೂಲಕ ಗ್ಯಾಸ್ ಬುಕಿಂಗ್ ವ್ಯವಸ್ಥೆಯನ್ನು ಜಾರಿಗೆ ತಂದ ಹೆಗ್ಗಳಿಕೆ ಇದಕ್ಕೆ ಸಲ್ಲುತ್ತದೆ.

ಕೇವಲ 1 ನಿಮಿಷದಲ್ಲಿ ಎಲ್‌ಪಿಜಿ ಗ್ಯಾಸ್ ಬುಕ್ ಮಾಡುವ 4 ಸ್ಮಾರ್ಟ್ ವಿಧಾನಗಳು

ಈಗಿನ ಡಿಜಿಟಲ್ ಜಗತ್ತಿನಲ್ಲಿ ಗ್ಯಾಸ್ ಬುಕ್ ಮಾಡಲು ನೀವು ಎಲ್ಲೂ ಅಲೆಯಬೇಕಾಗಿಲ್ಲ. ನಿಮ್ಮ ಮನೆಯಲ್ಲಿ ಯಾವ ಕಂಪನಿಯ ಗ್ಯಾಸ್ ಇದ್ದರೂ, ಕೆಳಗಿನ ನಾಲ್ಕು ವಿಧಾನಗಳಲ್ಲಿ ಅತ್ಯಂತ ಸುಲಭವಾಗಿ ಬುಕಿಂಗ್ ಮಾಡಬಹುದು: ಇದಕ್ಕೂ ಮೊದಲು ಸರ್ಕಾರ ಹೊಸ ರೇಷನ್ ಕಾರ್ಡ್ ಬಗ್ಗೆ ಕೂಡ update ನೀಡಿತ್ತು. ಹೊಸ ರೇಷನ್ ಕಾರ್ಡ್ ಅರ್ಜಿ ಮಾಹಿತಿ ಇಲ್ಲಿ ನೋಡಿ

ವಿಧಾನ 1: ವಾಟ್ಸಾಪ್ (WhatsApp) ಮೂಲಕ ಅತ್ಯಂತ ಸುಲಭ ಬುಕಿಂಗ್

 ಈಗ ಪ್ರತಿಯೊಂದು ಮನೆಯಲ್ಲೂ ಫೋನ್ ಬಳಕೆ ಇರುತ್ತದೆ  . ನಿಮ್ಮ ಗ್ಯಾಸ್ ಏಜೆನ್ಸಿಗೆ ಲಿಂಕ್ ಆಗಿರುವ (Registered) ಮೊಬೈಲ್ ಸಂಖ್ಯೆಯಿಂದ ಈ ಕೆಳಗಿನ ನಂಬರ್‌ಗಳಿಗೆ ಸಂದೇಶ ಕಳುಹಿಸುವ ಮೂಲಕ ಗ್ಯಾಸ್ ಬುಕ್ ಮಾಡಬಹುದು:

  • ಇಂಡೇನ್ ಗ್ರಾಹಕರು: ನಿಮ್ಮ ಮೊಬೈಲ್‌ನಲ್ಲಿ 7588888824 ಸಂಖ್ಯೆಯನ್ನು ಸೇವ್ ಮಾಡಿಕೊಳ್ಳಿ. ನಂತರ ವಾಟ್ಸಾಪ್‌ನಲ್ಲಿ ‘REFILL’ ಎಂದು ಇಂಗ್ಲಿಷ್‌ನಲ್ಲಿ ಟೈಪ್ ಮಾಡಿ ಸಂದೇಶ ಕಳುಹಿಸಿದರೆ ನಿಮ್ಮ ಬುಕಿಂಗ್ ತಕ್ಷಣ ಕನ್ಫರ್ಮ್ ಆಗುತ್ತದೆ.
  • ಎಚ್‌ಪಿ ಗ್ಯಾಸ್ ಗ್ರಾಹಕರು: ನಿಮ್ಮ ಮೊಬೈಲ್‌ನಲ್ಲಿ 9222201122 ಸಂಖ್ಯೆಯನ್ನು ಸೇವ್ ಮಾಡಿ, ವಾಟ್ಸಾಪ್ ಚಾಟ್‌ನಲ್ಲಿ ‘BOOK’ ಎಂದು ಟೈಪ್ ಮಾಡಿ ಕಳುಹಿಸಬೇಕು.
  • ಭಾರತ್ ಗ್ಯಾಸ್ ಗ್ರಾಹಕರು: ನಿಮ್ಮ ಮೊಬೈಲ್‌ನಲ್ಲಿ 1800224344 ಸಂಖ್ಯೆಯನ್ನು ಸೇವ್ ಮಾಡಿಕೊಂಡು, ವಾಟ್ಸಾಪ್‌ನಲ್ಲಿ ‘Hi’ ಅಥವಾ ‘BOOK’ ಎಂದು ಮೆಸೇಜ್ ಕಳುಹಿಸಿದರೆ ಸಾಕು.

ವಿಧಾನ 2: ರಿಜಿಸ್ಟರ್ಡ್ ಮೊಬೈಲ್‌ನಿಂದ ಮಿಸ್ಡ್ ಕಾಲ್ (Missed Call) ಸೇವೆ

ನಿಮ್ಮ ಬಳಿ ಇಂಟರ್ನೆಟ್ ಸಂಪರ್ಕವಿಲ್ಲದಿದ್ದರೆ ಅಥವಾ ಸಾಮಾನ್ಯ ಕೀಪ್ಯಾಡ್ ಮೊಬೈಲ್ ಫೋನ್ ಇದ್ದರೆ ನೀವು ಮಿಸ್ಡ್ ಕಾಲ್ ಕೊಡುವ ಮೂಲಕ ಉಚಿತವಾಗಿ ಗ್ಯಾಸ್ ಬುಕ್ ಮಾಡಬಹುದು. ನಿಮ್ಮ ರಿಜಿಸ್ಟರ್ಡ್ ನಂಬರ್‌ನಿಂದ ಈ ಕೆಳಗಿನ ಸಂಖ್ಯೆಗಳಿಗೆ ಕರೆ ಮಾಡಿ:

  • ಇಂಡೇನ್ ಗ್ಯಾಸ್ ಬುಕಿಂಗ್ ಸಂಖ್ಯೆ: 8454955555 ಗೆ ಮಿಸ್ಡ್ ಕಾಲ್ ಕೊಡಿ. ಕರೆ ತಾನಾಗಿಯೇ ಕಟ್ ಆಗಿ ಬುಕಿಂಗ್ ಸಂಖ್ಯೆಯ SMS ಬರುತ್ತದೆ.
  • ಭಾರತ್ ಗ್ಯಾಸ್ ಬುಕಿಂಗ್ ಸಂಖ್ಯೆ: 7710955555 ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಸುಲಭವಾಗಿ ರಿಫಿಲ್ ಆರ್ಡರ್ ಮಾಡಬಹುದು.
  • ಎಚ್‌ಪಿ ಗ್ಯಾಸ್: ಎಚ್‌ಪಿ ಗ್ರಾಹಕರು ತಮ್ಮ ತಮ್ಮ ಜಿಲ್ಲೆಗೆ ನಿಗದಿಪಡಿಸಲಾದ ಪ್ರಾದೇಶಿಕ IVRS ಸಂಖ್ಯೆಗೆ ಕರೆ ಮಾಡಿ ಕಂಪ್ಯೂಟರ್ ಧ್ವನಿಯ ಸೂಚನೆಯಂತೆ ಬಟನ್ ಒತ್ತುವ ಮೂಲಕ ಬುಕ್ ಮಾಡಬೇಕಾಗುತ್ತದೆ.

ವಿಧಾನ 3: ಯುಪಿಐ ಆ್ಯಪ್‌ಗಳ ಮೂಲಕ ಬುಕಿಂಗ್ ಮತ್ತು ಪಾವತಿ (PhonePe, GPay, Paytm)

ನೀವು ಫೋನ್‌ಪೇ ಅಥವಾ ಗೂಗಲ್ ಪೇ ಬಳಸುತ್ತಿದ್ದರೆ ಗ್ಯಾಸ್ ಬುಕ್ ಮಾಡುವುದರ ಜೊತೆಗೆ ಆನ್‌ಲೈನ್‌ನಲ್ಲೇ ಹಣವನ್ನೂ ಪಾವತಿಸಬಹುದು:

  • ನಿಮ್ಮ ಫೋನ್‌ಪೇ (PhonePe) ಅಥವಾ ಗೂಗಲ್ ಪೇ (GPay) ಆ್ಯಪ್ ಓಪನ್ ಮಾಡಿ.
  • ಅಲ್ಲಿ ಕಾಣುವ ‘Recharge & Pay Bills’ ಸೆಕ್ಷನ್‌ನಲ್ಲಿ ‘Book a Cylinder’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ಎಲ್‌ಪಿಜಿ ಗ್ಯಾಸ್ ಕಂಪನಿಯನ್ನು (Bharat Gas, HP Gas, Indane) ಆಯ್ಕೆ ಮಾಡಿಕೊಳ್ಳಿ.
  • ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್ ಅಥವಾ 17 ಅಂಕಿಗಳ ಎಲ್‌ಪಿಜಿ ಐಡಿ (LPG ID) ನಮೂದಿಸಿ.
  • ತಕ್ಷಣ ನಿಮ್ಮ ಹೆಸರಿನಲ್ಲಿರುವ ಬಿಲ್ ಮೊತ್ತ ಪರದೆಯ ಮೇಲೆ ಮೂಡುತ್ತದೆ. ನಿಮ್ಮ ಯುಪಿಐ ಪಿನ್ (UPI PIN) ನಮೂದಿಸಿ ಹಣ ಪಾವತಿಸಿದರೆ ಬುಕಿಂಗ್ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

ವಿಧಾನ 4: ಗ್ಯಾಸ್ ಕಂಪನಿಗಳ ಅಧಿಕೃತ ಮೊಬೈಲ್ ಆ್ಯಪ್‌ಗಳು

ಮೂರೂ ತೈಲ ಕಂಪನಿಗಳು ತಮ್ಮದೇ ಆದ ಅಧಿಕೃತ ಆ್ಯಪ್‌ಗಳನ್ನು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಬಿಡುಗಡೆ ಮಾಡಿವೆ. ಈ ಆ್ಯಪ್‌ಗಳ ಮೂಲಕ ಗ್ಯಾಸ್ ಬುಕ್ ಮಾಡಬಹುದು, ಹಳೆಯ ಹಿಸ್ಟರಿ ನೋಡಬಹುದು ಮತ್ತು ಸಬ್ಸಿಡಿ ವಿವರವನ್ನೂ ಟ್ರ್ಯಾಕ್ ಮಾಡಬಹುದು.

  • ಇಂಡೇನ್ ಗ್ರಾಹಕರಿಗಾಗಿ: IndianOil One App
  • ಎಚ್‌ಪಿ ಗ್ರಾಹಕರಿಗಾಗಿ: HP Pay App
  • ಭಾರತ್ ಗ್ಯಾಸ್ ಗ್ರಾಹಕರಿಗಾಗಿ: Hello BPCL App
  • ಇದಲ್ಲದೆ ಕೇಂದ್ರ ಸರ್ಕಾರದ UMANG App ಮೂಲಕವೂ ಈ ಮೂರೂ ಕಂಪನಿಗಳ ಗ್ಯಾಸ್ ಬುಕ್ ಮಾಡಲು ಅವಕಾಶವಿದೆ.

ಎಲ್‌ಪಿಜಿ ಗ್ರಾಹಕರ ಸುರಕ್ಷತಾ ನಿಯಮಗಳು ಮತ್ತು ತುರ್ತು ಸಹಾಯವಾಣಿಗಳು (Helplines)

ಗ್ಯಾಸ್ ಸಿಲಿಂಡರ್ ಬಳಸುವಾಗ ಪ್ರತಿಯೊಬ್ಬ ನಾಗರಿಕನೂ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು. ಸ್ವಲ್ಪ ನಿರ್ಲಕ್ಷ್ಯ ವಹಿಸಿದರೂ ದೊಡ್ಡ ಅವಘಡಗಳು ಸಂಭವಿಸುವ ಅಪಾಯವಿರುತ್ತದೆ. ಗ್ಯಾಸ್ ಸೋರಿಕೆಯಾದಲ್ಲಿ (Gas Leakage) ಅಥವಾ ಯಾವುದೇ ತುರ್ತು ಸಂದರ್ಭ ಎದುರಾದಲ್ಲಿ ತಕ್ಷಣ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಿ ಮತ್ತು ಅಧಿಕೃತ ಸಹಾಯವಾಣಿಗೆ ಕರೆ ಮಾಡಿ. html

📢 LPG Gas Booking Quick Access
ಗಮನಿಸಿ: ಮೊದಲು ಕಂಪನಿ ಹೆಸರಿನ ಬಟನ್ ಮಾತ್ರ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿದ ನಂತರ WhatsApp Booking, SMS Booking ಮತ್ತು Online Booking ಆಯ್ಕೆಗಳು ತೆರೆಯುತ್ತವೆ.

ರಾಷ್ಟ್ರೀಯ ಎಲ್‌ಪಿಜಿ ತುರ್ತು ಸಹಾಯವಾಣಿ ಸಂಖ್ಯೆ: 1906

ನಿಮ್ಮ ಮನೆಯಲ್ಲಿ ಗ್ಯಾಸ್ ವಾಸನೆ ಬರುತ್ತಿದ್ದರೆ ಅಥವಾ ರೆಗ್ಯುಲೇಟರ್‌ನಿಂದ ಗ್ಯಾಸ್ ಲೀಕ್ ಆಗುತ್ತಿದ್ದರೆ, ಯಾವುದೇ ಕಾರಣಕ್ಕೂ ತಡ ಮಾಡದೆ ತಕ್ಷಣ 1906 ಸಂಖ್ಯೆಗೆ ಕರೆ ಮಾಡಿ. ಇದು ಭಾರತ ಸರ್ಕಾರದ ಅಧಿಕೃತ, ದಿನದ 24 ಗಂಟೆಯೂ (24/7) ಕಾರ್ಯನಿರ್ವಹಿಸುವ ರಾಷ್ಟ್ರೀಯ ಟೋಲ್-ಫ್ರೀ ತುರ್ತು ಸಂಖ್ಯೆಯಾಗಿದೆ. ನೀವು ಕರೆ ಮಾಡಿದ ಕೆಲವೇ ನಿಮಿಷಗಳಲ್ಲಿ ನಿಮ್ಮ ಭಾಗದ ತುರ್ತು ನಿರ್ವಹಣಾ ಸಿಬ್ಬಂದಿ (Emergency Leakage Team) ನಿಮ್ಮ ಮನೆಗೆ ಬಂದು ಉಚಿತವಾಗಿ ಪರಿಶೀಲಿಸಿ ಸಮಸ್ಯೆಯನ್ನು ಬಗೆಹರಿಸುತ್ತಾರೆ.

ಸಾಮಾನ್ಯ ದೂರುಗಳಿಗಾಗಿ ಕಸ್ಟಮರ್ ಕೇರ್ ಸಂಖ್ಯೆ: 1800-2333-555

ನಿಮ್ಮ ಸಿಲಿಂಡರ್ ಡೆಲಿವರಿ ವಿಪರೀತ ತಡವಾಗುತ್ತಿದ್ದರೆ, ಸಿಲಿಂಡರ್‌ನಲ್ಲಿ ಗ್ಯಾಸ್ ತೂಕ ಕಡಿಮೆ ಇದೆ ಎಂದು ಅನುಮಾನ ಬಂದರೆ ಅಥವಾ ಸ್ಥಳೀಯ ಗ್ಯಾಸ್ ಏಜೆನ್ಸಿಯವರು ನಿಮ್ಮ ಇ-ಕೆವೈಸಿ ಮಾಡಲು ನಿರಾಕರಿಸಿದರೆ, ನೀವು ಈ ಜಂಟಿ ಗ್ರಾಹಕ ಸೇವಾ ಸಂಖ್ಯೆಯಾದ 1800-2333-555 ಗೆ ಕರೆ ಮಾಡಿ ಅಧಿಕೃತವಾಗಿ ದೂರನ್ನು ದಾಖಲಿಸಬಹುದು.

ಗ್ಯಾಸ್ ಸೋರಿಕೆಯಾದಾಗ ಪಾಲಿಸಬೇಕಾದ ಸುರಕ್ಷತಾ ಕ್ರಮಗಳು:

  1. ತಕ್ಷಣವೇ ಗ್ಯಾಸ್ ಸಿಲಿಂಡರ್‌ನ ರೆಗ್ಯುಲೇಟರ್ (Regulator) ಅನ್ನು ಆಫ್ ಮಾಡಿ ಮತ್ತು ಗ್ಯಾಸ್ ಸ್ಟವ್‌ನ ನಾಬ್‌ಗಳನ್ನು ಮುಚ್ಚಿ.
  2. ಮನೆಯ ಎಲ್ಲಾ ಕಿಟಕಿ ಮತ್ತು ಬಾಗಿಲುಗಳನ್ನು ಸಂಪೂರ್ಣವಾಗಿ ತೆರೆಯಿರಿ, ಇದರಿಂದ ಜಮೆಯಾಗಿರುವ ಅನಿಲ ಹೊರಗೆ ಹೋಗುತ್ತದೆ.
  3. ಬಹಳ ಮುಖ್ಯ: ಮನೆಯ ಯಾವುದೇ ಎಲೆಕ್ಟ್ರಿಕ್ ಸ್ವಿಚ್‌ಗಳನ್ನು ಆನ್ ಅಥವಾ ಆಫ್ ಮಾಡಬೇಡಿ. ಲೈಟರ್, ಬೆಂಕಿಪೊಟ್ಟಣ ಅಥವಾ ಮೇಣದಬತ್ತಿಯನ್ನು ಹಚ್ಚಬೇಡಿ. ಸ್ವಿಚ್ ಆನ್/ಆಫ್ ಮಾಡುವಾಗ ಬರುವ ಸಣ್ಣ ಕಿಡಿ (Spark) ಇಡೀ ಮನೆಗೆ ಬೆಂಕಿ ಹತ್ತಿಸಲು ಕಾರಣವಾಗಬಹುದು.
  4. ಸಿಲಿಂಡರ್ ಮೇಲಿರುವ ರೆಗ್ಯುಲೇಟರ್ ತೆಗೆದು, ಅದರ ಸುರಕ್ಷತಾ ಕ್ಯಾಪ್ (Safety Cap) ಅನ್ನು ಕಡ್ಡಾಯವಾಗಿ ಅಳವಡಿಸಿ.

ಹೆಚ್ಚುವರಿ ಡೆಲಿವರಿ ಚಾರ್ಜ್ ಕೇಳಿದರೆ ಗ್ರಾಹಕರು ಏನು ಮಾಡಬೇಕು?

ಇದು ಪ್ರಸ್ತುತ ಗ್ರಾಹಕರು ಎದುರಿಸುತ್ತಿರುವ ಮತ್ತೊಂದು ಪ್ರಮುಖ ಸಮಸ್ಯೆಯಾಗಿದೆ. ಗ್ಯಾಸ್ ಸಿಲಿಂಡರ್ ಮನೆಗೆ ತಂದಾಗ ಡೆಲಿವರಿ ಮಾಡುವ ವ್ಯಕ್ತಿಗಳು ಬಿಲ್‌ನಲ್ಲಿರುವ ಮೊತ್ತಕ್ಕಿಂತ ₹20, ₹30 ಅಥವಾ ₹50 ರೂಪಾಯಿಗಳನ್ನು ಹೆಚ್ಚುವರಿಯಾಗಿ (Delivery Charges ಅಥವಾ ಮಾಮೂಲಿ ರೂಪದಲ್ಲಿ) ಬೇಡಿಕೆ ಇಡುತ್ತಾರೆ.

ಗ್ರಾಹಕರು ತಿಳಿಯಬೇಕಾದ ಕಾನೂನು ಏನೆಂದರೆ, ತೈಲ ಕಂಪನಿಗಳು ನೀಡುವ ಅಧಿಕೃತ ಗ್ಯಾಸ್ ಬಿಲ್‌ನಲ್ಲಿಯೇ (Cash Memo) ನಿಮ್ಮ ಮನೆ ಬಾಗಿಲಿಗೆ ತಲುಪಿಸುವ ಸಾಗಾಟದ ವೆಚ್ಚ (Transportation Cost) ಮತ್ತು ಏಜೆನ್ಸಿ ಕಮಿಷನ್ ಎಲ್ಲವೂ ಸೇರಿರುತ್ತದೆ. ಆದ್ದರಿಂದ ಬಿಲ್‌ಗಿಂತ ಒಂದು ರೂಪಾಯಿ ಕೂಡ ಹೆಚ್ಚಿಗೆ ಕೊಡುವ ಅಗತ್ಯ ಗ್ರಾಹಕರಿಗೆ ಇರುವುದಿಲ್ಲ. ಒಂದು ವೇಳೆ ಅವರು ಹೆಚ್ಚುವರಿ ಹಣಕ್ಕಾಗಿ ಬಲವಂತ ಮಾಡಿದರೆ ಅಥವಾ ಸಿಲಿಂಡರ್ ನೀಡಲು ನಿರಾಕರಿಸಿದರೆ, ನೀವು ನೇರವಾಗಿ ನಿಮ್ಮ  ಹಣ ವನ್ನು ಏಜೆನ್ಸಿ ಅಥವಾ ಮ್ಯಾನೇಜರ್ ನಂಬರ್‌ಗೆ ಅಥವಾ ಸರ್ಕಾರದ 1800-2333-555 ಸಹಾಯವಾಣಿಗೆ ಕರೆ ಮಾಡಿ ದೂರು ನೀಡಬಹುದು. ನಿಮ್ಮ ಗ್ರಾಹಕ ಹಕ್ಕನ್ನು ಚಲಾಯಿಸಿ, ಯಾವುದೇ ಕಾರಣಕ್ಕೂ ಅನಗತ್ಯ ಹಣ ನೀಡಿ ದಲ್ಲಾಳಿತನಕ್ಕೆ ಪ್ರೋತ್ಸಾಹ ನೀಡಬೇಡಿ.

ಇದನ್ನೂ ಓದಿ

ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs)

1. ನನ್ನ ಬ್ಯಾಂಕ್ ಖಾತೆಗೆ ಗ್ಯಾಸ್ ಸಬ್ಸಿಡಿ ಹಣ ಜಮೆಯಾಗುತ್ತಿದೆಯೇ ಎಂದು ಆನ್‌ಲೈನ್‌ನಲ್ಲಿ ಚೆಕ್ ಮಾಡುವುದು ಹೇಗೆ? ನೀವು ಅಧಿಕೃತ ವೆಬ್‌ಸೈಟ್ ಆದ mylpg.in ಗೆ ಭೇಟಿ ನೀಡಿ, ನಿಮ್ಮ ಗ್ಯಾಸ್ ಕಂಪನಿಯನ್ನು ಆಯ್ಕೆ ಮಾಡಿ, ನಿಮ್ಮ 17 ಅಂಕಿಗಳ ಎಲ್‌ಪಿಜಿ ಐಡಿ (LPG ID) ನಮೂದಿಸುವ ಮೂಲಕ ನಿಮ್ಮ ಖಾತೆಗೆ ಸಬ್ಸಿಡಿ ಬಂದಿರುವ ಸಂಪೂರ್ಣ ಇತಿಹಾಸವನ್ನು (Subsidy History) ಆನ್‌ಲೈನ್‌ನಲ್ಲೇ ಪರಿಶೀಲಿಸಬಹುದು.

2. ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಇ-ಕೆವೈಸಿ (e-KYC) ಮಾಡಿಸಲು ಕೊನೆಯ ದಿನಾಂಕ ಯಾವುದು? ಸರ್ಕಾರವು ಇ-ಕೆವೈಸಿ ಪ್ರಕ್ರಿಯೆಯನ್ನು ನಿರಂತರವಾಗಿ ನಡೆಸುತ್ತಿದ್ದು, ಸದ್ಯಕ್ಕೆ ಯಾವುದೇ ಕಠಿಣ ಕೊನೆಯ ದಿನಾಂಕವನ್ನು ನಿಗದಿಪಡಿಸಿಲ್ಲ. ಆದರೆ ನಿಮ್ಮ ಸಬ್ಸಿಡಿ ಹಣ ತಡೆರಹಿತವಾಗಿ ಬರಲು ಆದಷ್ಟು ಬೇಗ ನಿಮ್ಮ ಹತ್ತಿರದ ಗ್ಯಾಸ್ ಏಜೆನ್ಸಿಗೆ ಆಧಾರ್ ಕಾರ್ಡ್ ಮತ್ತು ಸಿಲಿಂಡರ್ ಪಾಸ್‌ಬುಕ್ ತೆಗೆದುಕೊಂಡು ಹೋಗಿ ಹೆಬ್ಬೆರಳ ಗುರುತು ನೀಡಿ ಕೆವೈಸಿ ಪೂರ್ಣಗೊಳಿಸುವುದು ಜಾಣತನ.

3. ಹೊಸದಾಗಿ ಎಲ್‌ಪಿಜಿ ಗ್ಯಾಸ್ ಸಂಪರ್ಕ (New Connection) ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದೇ? ಹೌದು, ನೀವು ಇಂಡೇನ್, ಎಚ್‌ಪಿ ಅಥವಾ ಭಾರತ್ ಗ್ಯಾಸ್‌ನ ಅಧಿಕೃತ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ ‘Register for New Connection’ ಲಿಂಕ್ ಕ್ಲಿಕ್ ಮಾಡುವ ಮೂಲಕ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಬಹುದು. ನಿಮ್ಮ ಆಧಾರ್, ರೇಷನ್ ಕಾರ್ಡ್ ಮತ್ತು ಫೋಟೋವನ್ನು ಅಪ್‌ಲೋಡ್ ಮಾಡಿದರೆ ಕೆಲವೇ ದಿನಗಳಲ್ಲಿ ಹೊಸ ಸಂಪರ್ಕ ಮಂಜೂರಾಗುತ್ತದೆ.

4. ಸಿಲಿಂಡರ್ ಬುಕ್ ಮಾಡಿದ ನಂತರ ವಿತರಣೆಯಾಗದಿದ್ದರೆ ಬುಕಿಂಗ್ ಕ್ಯಾನ್ಸಲ್ ಮಾಡಿ ರೀಫಂಡ್ ಪಡೆಯಬಹುದೇ? ಖಂಡಿತ ಸಾಧ್ಯ. ನೀವು ಫೋನ್‌ಪೇ ಅಥವಾ ಗೂಗಲ್ ಪೇ ನಂತಹ ಆನ್‌ಲೈನ್ ಆ್ಯಪ್‌ಗಳ ಮೂಲಕ ಹಣ ಪಾವತಿಸಿ ಬುಕ್ ಮಾಡಿದ್ದು, ತಾಂತ್ರಿಕ ಕಾರಣಗಳಿಂದ ಸಿಲಿಂಡರ್ ಡೆಲಿವರಿ ಆಗದಿದ್ದರೆ, ಆಯಾ ಕಂಪನಿಯ ಅಧಿಕೃತ ಮೊಬೈಲ್ ಆ್ಯಪ್‌ಗೆ ಲಾಗಿನ್ ಆಗಿ ‘Cancel Order’ ಮಾಡಬಹುದು. ನಿಮ್ಮ ಹಣ 2 ರಿಂದ 3 ಕೆಲಸದ ದಿನಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಮರುಪಾವತಿಯಾಗುತ್ತದೆ (Refund).

2 thoughts on “ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ? LPG ಬುಕ್ಕಿಂಗ್ ಮಾಡುವವರಿಗೆ ಹೊಸ ಅಪ್ಡೇಟ್”

Leave a Comment