PUC 2026: ನಾಳೆಯಿಂದ 2nd PUC ಪರೀಕ್ಷೆ ಆರಂಭ – ಕಠಿಣ ನಿಯಮ ಜಾರಿ , ಸಂಪೂರ್ಣ ವೇಳಾಪಟ್ಟಿ ಇಲ್ಲಿ ನೋಡಿ

 Karnataka 2nd PUC Exam 2026 – Full Time Table & Important Guidelines

ಕರ್ನಾಟಕ ರಾಜ್ಯದ 2nd PUC ವಾರ್ಷಿಕ ಪರೀಕ್ಷೆಗಳು ನಾಳೆಯಿಂದ (ಫೆಬ್ರವರಿ 28) ಶುರುವಾಗಲಿದೆ. ರಾಜ್ಯದಾದ್ಯಂತ ಸುಮಾರು 7.10 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದಾರೆ.

Karnataka 2nd PUC Exam 2026

2nd PUC ಆರಂಭಿಕ ಪರೀಕ್ಷಾ ವೇಳಾಪಟ್ಟಿ

ಕರ್ನಾಟಕ ರಾಜ್ಯದ 2nd PUC Exam ವೇಳಾಪಟ್ಟಿಯನ್ನು Karnataka School Examination and Assessment Board ಪ್ರಕಟಿಸಿದ್ದು. ಪ್ರಮುಖ ವಿಷಯಗಳ ಪರೀಕ್ಷಾ ದಿನಾಂಕಗಳು ಹೀಗಿವೆ:

  • ಫೆಬ್ರವರಿ 28 (ಶುಕ್ರವಾರ) – ಕನ್ನಡ,ಅರೇಬಿಕ್ 

  • ಮಾರ್ಚ್ 2 (ಸೋಮವಾರ) – ಭೂಗೋಳಶಾಸ್ತ್ರ, ಸಂಖ್ಯಾಶಾಸ್ತ್ರ, ಮನಃಶಾಸ್ತ್ರ 

  • ಮಾರ್ಚ್ 3 (ಮಂಗಳವಾರ) – ಇಂಗ್ಲಿಷ್ 

  • ಮಾರ್ಚ್ 5 (ಗುರುವಾರ ) – ಇತಿಹಾಸ,

  • ಮಾರ್ಚ್ 6 (ಶುಕ್ರವಾರ ) – ಭೌತಶಾಸ್ತ್ರ

  • ಮಾರ್ಚ್ 7 (ಶನಿವಾರ ) – ಐಚ್ಛಿಕ ಕನ್ನಡ, ವ್ಯವಹಾರ ಅಧ್ಯಯನ,ಭೂಗರ್ಭಶಾಸ್ತ್ರ

  • ಮಾರ್ಚ್ 10 (ಮಂಗಳವಾರ)  ಅರ್ಥಶಾಸ್ತ್ರ 

 ಪರೀಕ್ಷಾ ಸಮಯ

  • ಬೆಳಗ್ಗೆ 10:15 ರಿಂದ ಮಧ್ಯಾಹ್ನ 1:30ರವರೆಗೆ
    (ಕೆಲವೆಡೆ 10:00 – 1:00ರವರೆಗೆ)

  •  ಕನಿಷ್ಠ 1 ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರಕೆ ತಲುಪಿ.

 ಕಠಿಣ ನಿಯಮಗಳು ಜಾರಿ

  •  ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ CCTV ಅಳವಡಿಸಲಾಗಿದೆ 
  • ಮೊಬೈಲ್ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳಿಗೆ ಸಂಪೂರ್ಣ ನಿಷೇಧ
  • ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್ ನಿಷೇಧಿತ ವಲಯ ಎಂದು ಘೋಷಿಸಲಾಗಿದೆ 

ವಿದ್ಯಾರ್ಥಿಗಳಿಗೆ ಮುಖ್ಯ ಸೂಚನೆ

ಹಾಲ್ ಟಿಕೆಟ್ ಕಡ್ಡಾಯ : ಪರೀಕ್ಷೆಗೆ ಹೊರಡುವ ಮುನ್ನ ಹಾಲ್ ಟಿಕೆಟ್, ಶಾಲಾ id ,ಅಗತ್ಯ pen ಹಾಗೆ ಪೆನ್ಸಿಲ್ ಕಡ್ಡಾಯವಾಗಿ ಎರಡು ಬಾರಿ ಪರಿಶೀಲಿಸಿಕೊಳ್ಳುವುದು ಉತ್ತಮ.

 ವಿದ್ಯಾರ್ಥಿಗಳಿಗೆ ಕೊನೆಯ ಸಲಹೆ

ನಾಳೆ ಕನ್ನಡ ಹಾಗೆ ಅರೇಬಿಕ್ ಪರೀಕ್ಷೆ ಇರುವುದರಿಂದ ಅದನ್ನ ಮಾತ್ರ ರಿವಿಸನ್ ಮಾಡಿ ಹಾಗೆ ರಾತ್ರಿ ಸರಿಯಾದ ರೀತಿಯಾದ ನಿದ್ರೆ ಮಾಡಿ ಹೊಸದಾಗಿ ಯಾವ ವಿಷಯವನ್ನು ಓದಬೇಡಿ.

ಎಲ್ಲಾ ವಿದ್ಯಾರ್ಥಿಗಳಿಗೆ ಹಾರ್ದಿಕ ಶುಭಾಶಯಗಳು 

Leave a Comment