ಗೃಹಲಕ್ಷ್ಮಿ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್!

 ಗೃಹಲಕ್ಷ್ಮಿ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್! ಪ್ರತಿ ತಿಂಗಳು ₹2000 ಪಡೆಯಲು ಯಾರೆಲ್ಲಾ ಅರ್ಜಿ ಹಾಕಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ

ಗೃಹಲಕ್ಷ್ಮಿ ಯೋಜನೆಯ ₹2000 ಹಣ - Gruhalakshmi Yojana Amount Details

 

ಯೋಜನೆ ಹೆಸರು ಗೃಹಲಕ್ಷ್ಮಿ ಯೋಜನೆ
ಸಹಾಯಧನ ₹2000 ಪ್ರತಿ ತಿಂಗಳು
ಅರ್ಹರು ಮನೆಯ ಯಜಮಾನಿ ಮಹಿಳೆ
ಅರ್ಜಿ ವಿಧಾನ ಗ್ರಾಮ ಒನ್ / ಕರ್ನಾಟಕ ಒನ್
ಪ್ರತಿಯೊಬ್ಬರ ಮನೆಯಲ್ಲಿ ಮಹಿಳೆಯರ ಪಾತ್ರ ಬಹಳ ದೊಡ್ಡದು. ಬೆಳಗ್ಗೆ ಸೂರ್ಯ ಹುಟ್ಟುವ ಮುನ್ನ ಏಳುವ ಮನೆಯ ಯಜಮಾನಿ, ರಾತ್ರಿ ಎಲ್ಲರೂ ಮಲಗಿದ ಮೇಲೆಯೇ ನಿದ್ರೆ ಮಾಡುತ್ತಾಳೆ . ಅಡುಗೆ ಮಾಡುವುದು, ಮಕ್ಕಳನ್ನು ಶಾಲೆಗೆ ಕಳುಹಿಸುವುದು, ವಯಸ್ಸಾದವರ ಆರೈಕೆ ಮಾಡುವುದು, ಮನೆ ಸ್ವಚ್ಛಗೊಳಿಸುವುದು—ಹೀಗೆ ಆಕೆ ಮಾಡುವ ದೈನಂದಿನ ಕೆಲಸಗಳಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಆದರೆ ದುರಾದೃಷ್ಟವಶಾತ್, ಮಹಿಳೆಯರು ಮನೆಯೊಳಗೆ ಮಾಡುವ ಈ ಶ್ರಮಕ್ಕೆ ಯಾವುದೇ ರೀತಿಯ ಆರ್ಥಿಕ ಮೌಲ್ಯವಾಗಲಿ ಅಥವಾ ತಿಂಗಳ ‘ಸಂಬಳ’ವಾಗಲಿ ಸಿಗುವುದಿಲ್ಲ.

ಇಂತಹ ಲಕ್ಷಾಂತರ ತಾಯಂದಿರ ಶ್ರಮವನ್ನು ಅಧಿಕೃತವಾಗಿ ಗುರುತಿಸಿ, ಅವರ ಮುಖದಲ್ಲಿ ಮಂದಹಾಸ ಮೂಡಿಸಲು ಮತ್ತು ಅವರನ್ನು ಆರ್ಥಿಕವಾಗಿ ಸ್ವತಂತ್ರರನ್ನಾಗಿಸಲು ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಒಂದು ಐತಿಹಾಸಿಕ ಮತ್ತು ಅದ್ಭುತ ಯೋಜನೆಯೇ ‘ಗೃಹಲಕ್ಷ್ಮಿ ಯೋಜನೆ’. ಇಂದಿನ ಬೆಲೆ ಏರಿಕೆಯ ಕಾಲದಲ್ಲಿ, ದಿನಸಿ ತರಲು, ಮಕ್ಕಳ ಶಾಲಾ ಖರ್ಚಿಗೆ ಅಥವಾ ತಮ್ಮ ಸಣ್ಣಪುಟ್ಟ ಆಸೆಗಳನ್ನು ಈಡೇರಿಸಿಕೊಳ್ಳಲು ಮಹಿಳೆಯರು ಬೇರೆಯವರ ಮುಂದೆ ಕೈಯೊಡ್ಡುವ ಪರಿಸ್ಥಿತಿ ಇತ್ತು. ಆದರೆ ಈಗ, ಪ್ರತಿ ತಿಂಗಳು ನೇರವಾಗಿ ಬ್ಯಾಂಕ್ ಖಾತೆಗೆ ಬರುವ ₹2000 ಹಣ ರಾಜ್ಯದ ಲಕ್ಷಾಂತರ ತಾಯಂದಿರಿಗೆ ದೊಡ್ಡ ಆಸರೆಯಾಗಿದೆ. ನೀವಿನ್ನೂ ಈ ಯೋಜನೆಗೆ ಅರ್ಜಿ ಹಾಕಿಲ್ಲವೇ? ಹಾಗಾದರೆ ಈ ಗೃಹಲಕ್ಷ್ಮಿ ಯೋಜನೆಗೆ ಯಾರೆಲ್ಲಾ ಅರ್ಹರು, ಏನೆಲ್ಲಾ ಲಾಭಗಳಿವೆ ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ  ವಿವರಿಸಲಾಗಿದೆ.

ಏನಿದು ಗೃಹಲಕ್ಷ್ಮಿ ಯೋಜನೆ? ಇದರ ಹಿನ್ನೆಲೆ ಏನು?

ಕರ್ನಾಟಕ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರವು  ಮೇ 20, 2023 ರಲ್ಲಿ ಅಧಿಕಾರಕ್ಕೆ ಬಂದ ತಕ್ಷಣ, ತಾವು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಐದು ಪ್ರಮುಖ ‘ಗ್ಯಾರಂಟಿ’ ಯೋಜನೆಗಳಿಗೆ ಚಾಲನೆ ನೀಡಲಾಯಿತು. ಆ ಐದು ಗ್ಯಾರಂಟಿಗಳಲ್ಲಿ ಅತ್ಯಂತ ದೊಡ್ಡದು, ಅತಿ ಹೆಚ್ಚು ಬಜೆಟ್ ಹೊಂದಿರುವ ಹಾಗೂ ಮಹಿಳೆಯರ ಪಾಲಿನ ಆಶಾಕಿರಣವಾಗಿರುವ ಯೋಜನೆಯೇ ಈ ಗೃಹಲಕ್ಷ್ಮಿ.

ಆಗಸ್ಟ್  30,2023 ರಲ್ಲಿ ಮೈಸೂರಿನಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಅಧಿಕೃತವಾಗಿ ಜಾರಿಗೆ ತರಲಾಯಿತು. ಈ ಯೋಜನೆಯಡಿ ರಾಜ್ಯದ ಬಡ ಮತ್ತು ಮಧ್ಯಮ ವರ್ಗದ ಕುಟುಂಬದ ‘ಮನೆಯ ಯಜಮಾನಿ’ಯ (Head of the Family) ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ನೇರವಾಗಿ 2,000 ರೂಪಾಯಿಗಳನ್ನು (ವರ್ಷಕ್ಕೆ 24,000 ರೂಪಾಯಿ) ಜಮೆ ಮಾಡಲಾಗುತ್ತದೆ ಎಂದು ಪ್ರಕಟಿಸಲಾಯಿತು. ಇದು ಡಿಬಿಟಿ (DBT – Direct Benefit Transfer) ಮುಖಾಂತರ ನಡೆಯುವುದರಿಂದ ಯಾವುದೇ ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ.

ಈ ಯೋಜನೆಯನ್ನು ಜಾರಿಗೊಳಿಸಿದ ಪ್ರಮುಖ ಉದ್ದೇಶವೇನು?

ಸಿದ್ದರಾಮಯ್ಯನವರ  ಕಾಂಗ್ರೆಸ್ ಸರ್ಕಾರವು ಕೇವಲ ಜನಪ್ರಿಯತೆಗಾಗಿ ಈ ಯೋಜನೆಯನ್ನು ತಂದಿಲ್ಲ, ಬದಲಾಗಿ ಇದರ ಹಿಂದೆ ಒಂದು ದೊಡ್ಡ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ ಉದ್ದೇಶವಿದೆ:

  • ಮಹಿಳಾ ಸಬಲೀಕರಣ (Women Empowerment): ಮಹಿಳೆಯರ ಕೈಯಲ್ಲಿ ಹಣವಿದ್ದಾಗ ಇಡೀ ಕುಟುಂಬದ ನಿರ್ವಹಣೆ ಸರಳವಾಗಿ ಉತ್ತಮವಾಗುತ್ತದೆ ಎನ್ನುವುದು ಆರ್ಥಿಕ ತಜ್ಞರ ಅಭಿಪ್ರಾಯ.

  • ಗೃಹ ಕಾರ್ಮಿಕರಿಗೆ ಗೌರವ: ಮನೆಯಲ್ಲಿ ಮಹಿಳೆಯರು ಮಾಡುವ ಕೆಲಸವನ್ನು, ಕಾರ್ಯಗಳನ್ನು (Unpaid Care Work) ಗುರುತಿಸಿ, ಅದಕ್ಕೆ ಒಂದು ಗೌರವದಂತೆ ಹಣ ನೀಡುವ ಉದ್ದೇಶ.

  • ಸ್ಥಳೀಯ ಆರ್ಥಿಕತೆಯ ಅಭಿವೃದ್ಧಿ: ಮಹಿಳೆಯರ ಕೈಗೆ ತಿಂಗಳಿಗೆ ₹2000 ಸೇರಿದರೆ, ಅವರು ಅದನ್ನು ಊರಿನ ಅಂಗಡಿಗಳಲ್ಲಿ ದಿನಸಿ, ಬಟ್ಟೆ, ಮಕ್ಕಳ ಪುಸ್ತಕ ಖರೀದಿಸಲು ಬಳಸುತ್ತಾರೆ. ಇದರಿಂದ ಸ್ಥಳೀಯ ವ್ಯಾಪಾರ-ವಹಿವಾಟು ಹೆಚ್ಚಾಗಿ ಆರ್ಥಿಕತೆಯಲ್ಲಿ ಬದಲಾವಣೆ ಕಾಣಬಹುದಾಗಿದೆ.

ಗೃಹಲಕ್ಷ್ಮಿ ಯೋಜನೆಯಿಂದ ಮಹಿಳೆಯರ ಬದುಕಿನಲ್ಲಿ ಆಗುತ್ತಿರುವ ಪ್ರಮುಖ ಬದಲಾವಣೆಗಳು

ಸರ್ಕಾರದ ಗೃಹಲಕ್ಷ್ಮಿ ಯೋಜನೆಯು ಕೇವಲ 2000 ರೂಪಾಯಿಗಳ ನೋಟುಗಳಲ್ಲ, ಅದು ಎಷ್ಟೋ ಮನೆ- ಮನೆಗಳಲ್ಲಿ ನಗುವಿನ ಮತ್ತು ನೆಮ್ಮದಿಯ ಸಂಕೇತವಾಗಿದೆ. ಇದರಿಂದ ಮಹಿಳೆಯರಿಗೆ ಆಗುತ್ತಿರುವ ಪ್ರಮುಖ ಲಾಭಗಳು ಹೀಗಿವೆ:

1. ಆರ್ಥಿಕ ಸ್ವಾತಂತ್ರ್ಯ ಮತ್ತು ಸ್ವಾಭಿಮಾನದ ಬದುಕು

ಹಿಂದೆಲ್ಲಾ ಮಹಿಳೆಯರು ತಮಗೆ ಏನಾದರೂ ವಸ್ತುವಿನ ಅಗತ್ಯವಿದ್ದರೆ, ಅಥವಾ ತವರಿಗೆ ಹೋಗಲು ಬಸ್ ಚಾರ್ಜ್ ಬೇಕಿದ್ದರೆ ಗಂಡನ ಬಳಿಯೋ ಅಥವಾ ದುಡಿಯುವ ಮಕ್ಕಳ ಬಳಿಯೋ ಕೇಳಬೇಕಿತ್ತು. ಕೆಲವೊಂದು ಸಂದರ್ಭದಲ್ಲಿ ಹಣ ಕೇಳಲು ಒಂದು ರೀತಿಯ ಮುಜುಗರ, ಸಂಕೋಚ ಇರುತ್ತಿತ್ತು. ಆದರೆ ಈಗ ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರಾಗಿದ್ದಾರೆ. ತಮ್ಮ ವೈಯಕ್ತಿಕ ಖರ್ಚುಗಳಿಗಾಗಿ ಬೇರೆಯವರ ಮುಂದೆ ಕೈ ಒಡ್ಡುವ ಪರಿಸ್ಥಿತಿ ತಪ್ಪಿದೆ, ಮಹಿಳೆಯರ ಸ್ವಾಭಿಮಾನ ಹೆಚ್ಚಾಗಿದೆ.

2. ಸರಳ ಕುಟುಂಬ ನಿರ್ವಹಣೆ

ಅಗತ್ಯ ವಸ್ತುಗಳ ಬೆಲೆ ದಿನೇ ದಿನೇ ಏರುತ್ತಿರುವ ಈ ಕಾಲದಲ್ಲಿ, ಸಾಮಾನ್ಯ ಕುಟುಂಬಗಳಿಗೆ ತಿಂಗಳ ಬಜೆಟ್ ಸರಿದೂಗಿಸುವುದು ದೊಡ್ಡ ಸವಾಲಾಗಿತ್ತು. ಆದರೆ ಈಗ ಗೃಹಲಕ್ಷ್ಮಿ ಯೋಜನೆಯಿಂದ ಬರುವ ಎರಡು ಸಾವಿರ ಹಣದಲ್ಲಿ ಮಹಿಳೆಯರು ಮನೆಯ ಹಾಲಿನ ಬಿಲ್, ಕೇಬಲ್ ಬಿಲ್, ಕರೆಂಟ್ ಬಿಲ್ ಕಟ್ಟಲು ಅಥವಾ ದಿನಸಿ ಪದಾರ್ಥಗಳ ಖರೀದಿಗೆ ಬಳಸುತ್ತಿದ್ದಾರೆ. ಇದು ಗಂಡಸರ ಮೇಲಿನ ಆರ್ಥಿಕ ಹೊರೆಯನ್ನು ಕೂಡ ಪರೋಕ್ಷವಾಗಿ ಕಡಿಮೆ ಮಾಡಿ ಸಂತೋಷ ತುಂಬಿದ ಕುಟುಂಬ ನಿರ್ವಹಿಸಲು ಸಹಾಯವಾಗುತ್ತಿದೆ.

3. ಮಕ್ಕಳ ವಿದ್ಯಾಭ್ಯಾಸಕ್ಕೆ ಆಸರೆ

ಹಳ್ಳಿಗಳಲ್ಲಿ ಎಷ್ಟೋ ತಾಯಂದಿರು ಗೃಹಲಕ್ಷ್ಮಿ ಹಣವನ್ನು ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಮೀಸಲಿಟ್ಟಿದ್ದಾರೆ. ಮಕ್ಕಳ ಸ್ಕೂಲ್ ಫೀಸ್ ಕಟ್ಟಲು, ನೋಟ್ ಬುಕ್, ಪೆನ್ನು, ಸ್ಕೂಲ್ ಬ್ಯಾಗ್ ಖರೀದಿಸಲು ಅಥವಾ ಅವರಿಗೆ ಉತ್ತಮ ಟ್ಯೂಷನ್ (Tuition) ಕೊಡಿಸಲು ಗೃಹಲಕ್ಷ್ಮಿ ಹಣವನ್ನು   ಬಹಳ ಅಚ್ಚುಕಟ್ಟಾಗಿ ಬಳಸುತ್ತಿದ್ದಾರೆ.

4. ಭವಿಷ್ಯಕ್ಕಾಗಿ ಸಣ್ಣ ಉಳಿತಾಯ (Micro Savings)

ಗೃಹಲಕ್ಷ್ಮಿ ಯೋಜನೆಯ ಬಹುದೊಡ್ಡ ಪ್ಲಸ್ ಪಾಯಿಂಟ್ ಎಂದರೆ ಮಹಿಳೆಯರಲ್ಲಿ ಹಣವನ್ನು  ಉಳಿತಾಯ ಮಾಡಬೇಕು ಎಂಬ ಮನೋಭಾವ ಬೆಳೆಯುತ್ತಿರುವುದು. ಪ್ರತಿ ತಿಂಗಳು ಬರುವ ಹಣದಲ್ಲಿ ಸ್ವಲ್ಪ ಮೊತ್ತವನ್ನು ಪೋಸ್ಟ್ ಆಫೀಸ್ (Post Office) ಸ್ಕೀಮ್‌ಗಳಲ್ಲಿ, ಆರ್.ಡಿ (RD) ಖಾತೆಗಳಲ್ಲಿ ಕೂಡಿಡುತ್ತಿದ್ದಾರೆ. ಇನ್ನೂ ಕೆಲವರು ಹಬ್ಬದ ಖರ್ಚಿಗಾಗಿ ಅಥವಾ ಮನೆಯ ಸದಸ್ಯರ ಆರೋಗ್ಯ ಹದಗೆಟ್ಟಾಗ ಆಸ್ಪತ್ರೆ ಖರ್ಚಿಗೆಂದು  ಗೃಹಲಕ್ಷ್ಮಿ  ಹಣವನ್ನು  ಕೂಡಿಡುತ್ತಿದ್ದಾರೆ.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾರೆಲ್ಲಾ ಅರ್ಹರು? (ಅರ್ಹತಾ ನಿಯಮಗಳು)

ಸರ್ಕಾರವು ಈ ಯೋಜನೆಯನ್ನು ಗರಿಷ್ಠ ಜನರಿಗೆ ತಲುಪಿಸಲು ನಿಯಮಗಳನ್ನು ಬಹಳ ಸರಳವಾಗಿ ರೂಪಿಸಿದೆ. ನೀವು ಅರ್ಜಿ ಹಾಕುವ ಮುನ್ನ ಈ ಕೆಳಗಿನ ಪ್ರಮುಖ ಅರ್ಹತೆಗಳನ್ನು ಹೊಂದಿದ್ದೀರಾ ಎಂದು ಖಚಿತಪಡಿಸಿಕೊಳ್ಳಿ:

  • ರೇಷನ್ ಕಾರ್ಡ್ ಕಡ್ಡಾಯ: ಈ ಯೋಜನೆಯ ಲಾಭ ಪಡೆಯಲು ಕುಟುಂಬವು ಕಡ್ಡಾಯವಾಗಿ ರೇಷನ್ ಕಾರ್ಡ್ ಹೊಂದಿರಲೇಬೇಕು. ಬಿಪಿಎಲ್ (BPL), ಎಪಿಎಲ್ (APL) ಅಥವಾ ಅಂತ್ಯೋದಯ (AAY) ಕಾರ್ಡ್—ಯಾವುದಿದ್ದರೂ ಅರ್ಜಿ ಸಲ್ಲಿಸಬಹುದು.

  • ಮನೆಯ ಯಜಮಾನಿ ಮಾತ್ರ ಅರ್ಹರು: ರೇಷನ್ ಕಾರ್ಡ್‌ನಲ್ಲಿ ‘ಮನೆಯ ಯಜಮಾನಿ’ (Head of the Family) ಎಂದು ಯಾರ ಹೆಸರು(ತಾಯಿ, ಅಜ್ಜಿ) ನಮೂದಾಗಿರುತ್ತದೆಯೋ, ಆ ಮಹಿಳೆ ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

  • ಒಂದು ಕುಟುಂಬಕ್ಕೆ ಒಬ್ಬರಿಗೆ ಮಾತ್ರ ಅವಕಾಶ: ಸರ್ಕಾರದ ನಿಯಮದ ಪ್ರಕಾರ ಒಂದು ರೇಷನ್ ಕಾರ್ಡ್‌ಗೆ ಕೇವಲ ಒಬ್ಬ ಮಹಿಳೆಗೆ ಮಾತ್ರ ಗೃಹಲಕ್ಷ್ಮಿಯ ₹2000 ಹಣ ಸಿಗುತ್ತದೆ. ಉದಾಹರಣೆಗೆ: ರೇಷನ್ ಕಾರ್ಡ್‌ನಲ್ಲಿ ಅತ್ತೆ ಮತ್ತು ಸೊಸೆ ಇಬ್ಬರ ಹೆಸರೂ ಇದ್ದರೆ, ಮನೆಯ ಯಜಮಾನಿ ಯಾರು ಎಂದು ಅವರಿಬ್ಬರೇ ನಿರ್ಧರಿಸಿ ಒಬ್ಬರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.

  • ಆದಾಯ ತೆರಿಗೆ (Income Tax) ಕಟ್ಟುವಂತಿಲ್ಲ: ಇದು ಬಹಳ ಮುಖ್ಯವಾದ ನಿಯಮ. ಮನೆಯ ಯಜಮಾನಿ ಅಥವಾ ಆಕೆಯ ಪತಿ ಆದಾಯ ತೆರಿಗೆ (Income Tax) ಪಾವತಿಸುವವರಾಗಿದ್ದರೆ, ಅಂತಹ ಕುಟುಂಬಗಳಿಗೆ  ಈ  ಗೃಹಲಕ್ಷ್ಮಿ ಯೋಜನೆಯು ಅನ್ವಯಿಸುವುದಿಲ್ಲ.

  • ಜಿಎಸ್‌ಟಿ (GST) ಪಾವತಿಸುವಂತಿಲ್ಲ: ಮನೆಯ ಯಜಮಾನಿ ಅಥವಾ ಪತಿಯು ದೊಡ್ಡ ವ್ಯಾಪಾರಸ್ಥರಾಗಿದ್ದು (Businesse Man), ವಾಣಿಜ್ಯ ತೆರಿಗೆ ಅಥವಾ ಜಿಎಸ್ಟಿ (GST) ರಿಟರ್ನ್ಸ್ ಫೈಲ್ ಮಾಡುತ್ತಿದ್ದರೆ, ಅವರಿಗೂ ಗೃಹಲಕ್ಷ್ಮಿ ಯೋಜನೆಯ ಹಣ ಸಿಗುವುದಿಲ್ಲ.

ಹೊಸದಾಗಿ ಅರ್ಜಿ ಸಲ್ಲಿಸಲು ಸಿದ್ಧವಾಗಿಟ್ಟುಕೊಳ್ಳಬೇಕಾದ ಮೂಲ ದಾಖಲೆಗಳು

ನೀವು ಇದುವರೆಗೂ ಅರ್ಜಿ ಸಲ್ಲಿಸಿಲ್ಲ ಎಂದರೆ, ಸೇವಾ ಕೇಂದ್ರಗಳಿಗೆ ಹೋಗಿ ಪರದಾಡುವುದನ್ನು ತಪ್ಪಿಸಲು ಈ ಕೆಳಗಿನ ಎಲ್ಲಾ ದಾಖಲೆಗಳನ್ನು ಮೂಲ ರೂಪದಲ್ಲಿ (Original) ಹಾಗೂ ಒಂದು ಸೆಟ್ ಜೆರಾಕ್ಸ್ ಪ್ರತಿಯೊಂದಿಗೆ ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು:

  1. ರೇಷನ್ ಕಾರ್ಡ್ (Ration Card): ಬಿಪಿಎಲ್, ಎಪಿಎಲ್ ಅಥವಾ ಅಂತ್ಯೋದಯ ಕಾರ್ಡ್. ಇದರಲ್ಲಿ ನಿಮ್ಮ ಹೆಸರು ಮನೆಯ ಯಜಮಾನಿ ಎಂದು ಕಡ್ಡಾಯವಾಗಿ ಇರಬೇಕು.

  2. ಆಧಾರ್ ಕಾರ್ಡ್ (Aadhaar Card): ಮನೆಯ ಯಜಮಾನಿಯ ಆಧಾರ್ ಕಾರ್ಡ್. (ಗಮನಿಸಿ: ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್‌ನಲ್ಲಿ ನಿಮ್ಮ ಹೆಸರು ಒಂದೇ ರೀತಿಯಲ್ಲಿ ಇರಬೇಕು, ಒಂದೇ ರೀತಿಯಲ್ಲಿ ಇಲ್ಲದಿದ್ದರೆ ನೀವು ಅರ್ಜಿ ಹಾಕಲು ಸಾಧ್ಯವಿಲ್ಲ).

  3. ಪತಿಯ ಆಧಾರ್ ಕಾರ್ಡ್: ಯಜಮಾನಿಯ ಪತಿಯ (ಗಂಡನ) ಆಧಾರ್ ಕಾರ್ಡ್ ಕೂಡ ಕಡ್ಡಾಯ. (ಅವರು ಟ್ಯಾಕ್ಸ್ ಕಟ್ಟುತ್ತಿದ್ದಾರಾ ಎಂದು ಪರಿಶೀಲಿಸಲು ಇದು ಅಗತ್ಯ ದಾಖಲೆಯಾಗಿದೆ).

  4. ಬ್ಯಾಂಕ್ ಖಾತೆಯ ಪಾಸ್‌ಬುಕ್: ನಿಮ್ಮ ಹೆಸರಿನಲ್ಲಿರುವ ಬ್ಯಾಂಕ್ ಪಾಸ್‌ಬುಕ್. (ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರಬೇಕು ಮತ್ತು ಕಡ್ಡಾಯವಾಗಿ NPCI ಮ್ಯಾಪಿಂಗ್ ಸಕ್ರಿಯವಾಗಿರಬೇಕು. ಇಲ್ಲದಿದ್ದರೆ ಸರ್ಕಾರ ಹಾಕುವ ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಜಮೆಯಾಗುವುದಿಲ್ಲ).

  5. ಮೊಬೈಲ್ ನಂಬರ್:  ನಿಮ್ಮ ಹತ್ತಿರ ಕಡ್ಡಾಯವಾಗಿ ಚಾಲ್ತಿಯಲ್ಲಿರುವ, ಓಟಿಪಿ (OTP) ರಿಸೀವ್ ಮಾಡಲು ಸಾಧ್ಯವಿರುವ ಒಂದು ಮೊಬೈಲ್ ನಂಬರ್.

1 thought on “ಗೃಹಲಕ್ಷ್ಮಿ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್!”

Leave a Comment