ರೈತರಿಗೆ ಗುಡ್ ನ್ಯೂಸ್! ಗಂಗಾ ಕಲ್ಯಾಣ ಯೋಜನೆಯಡಿ ಉಚಿತ ಬೋರ್ವೆಲ್ & ಪಂಪ್ ಸೆಟ್‌ಗೆ ಅರ್ಜಿ ಆಹ್ವಾನ

 ಗಂಗಾ ಕಲ್ಯಾಣ ಯೋಜನೆ: ಉಚಿತ ಬೋರ್‌ವೆಲ್ ಮತ್ತು ಪಂಪ್‌ಸೆಟ್ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ? ಅರ್ಹತೆ ಹಾಗೂ ದಾಖಲೆಗಳ ಸಂಪೂರ್ಣ ಮಾಹಿತಿ

Ganga Kalyana Yojana Free Borewell Pump Set Application 2026 – ಗಂಗಾ ಕಲ್ಯಾಣ ಯೋಜನೆಯಡಿ ಉಚಿತ ಬೋರ್ವೆಲ್ ಪಂಪ್ ಸೆಟ್ ಅರ್ಜಿ

ಕರ್ನಾಟಕ ರಾಜ್ಯವು  ಪ್ರಮುಖವಾಗಿ ಕೃಷಿ ಪ್ರಧಾನವಾದ ರಾಜ್ಯವಾಗಿದೆ. ಇಲ್ಲಿನ ಲಕ್ಷಾಂತರ ಕುಟುಂಬಗಳು ಜೀವನಕ್ಕೆ ಸಂಪೂರ್ಣವಾಗಿ ಕೃಷಿ ಬೇಸಾಯವನ್ನೇ ನಂಬಿಕೊಂಡು ಜೀವನದ ಪ್ರಮುಖ ಆದಾಯವನ್ನಗಿಸಿಕೊಂಡು ಅವಲಂಬಿತರಾಗಿದ್ದಾರೆ. ಆದರೆ ಇತ್ತೀಚಿನ   ವರ್ಷಗಳಲ್ಲಿ  ಹವಾಮಾನದಲ್ಲಿ ಆಗಿರೋ ಬದಲಾವಣೆಗಳು,  ಸರಿಯಾದ ಕಾಲಕ್ಕೆ ಮಳೆ ಬರದೇ ಇರುವುದು ಮತ್ತು ಭೀಕರ ಬರಗಾಲದ ಪರಿಸ್ಥಿತಿಯಿಂದಾಗಿ ರೈತನಿಗೆ  ಕೃಷಿ ಮಾಡುವುದು ತೀವ್ರ ಕಷ್ಟದ ಪರಿಸ್ಥಿತಿಯಾಗಿದೆ. ಹೆಚ್ಚಾಗಿ ಸಣ್ಣ ಮತ್ತು ಅತಿ ಸಣ್ಣ ರೈತರು, ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಹಾಗೂ ಹಿಂದುಳಿದ ವರ್ಗಗಳ (OBC) ರೈತರು ನೀರಾವರಿ ಸೌಲಭ್ಯವಿಲ್ಲದೆ ಕೇವಲ ಮಳೆಯನ್ನೇ  ನಂಬಿಕೊಂಡು ಬೆಳೆ ಬೆಳೆಯುತ್ತಾರೆ. ಮಳೆ ಸರಿಯಾಗಿದ್ದರೆ  ರೈತನು ಬೆಳೆ ಬೆಳೆದಿದ್ದೆಲ್ಲಾ ನಷ್ಟವಾಗುತ್ತದೆ. ರೈತನ ಮೂಲ ಆದಾಯ ಕೃಷಿಯಾಗಿರುವುದರಿಂದ  ವರ್ಷದ ಆದಾಯಕ್ಕೆ ದೊಡ್ಡ ಹೊಡೆತ ಬಿದ್ದ ಹಾಗೆ ಆಗುತ್ತದೆ . ಸರಿಯಾದ ನೀರಿನ ಸೌಕರ್ಯವಿಲ್ಲದ ಕಾರಣ ವರ್ಷಕ್ಕೆ ಒಂದು ಬೆಳೆ ತೆಗೆಯುವುದೂ ಕಷ್ಟವಾಗಿ, ಸಾಲದ ಹೊರೆ ಹೆಚ್ಚಾಗಿ ಕಷ್ಟದ ಪರಿಸ್ಥಿತಿ ಎದುರಿಸಬೇಕಾಗುತ್ತದೆ .

ಇಂತಹ ಕಡು ಬಡ ಹಾಗೂ ಆರ್ಥಿಕವಾಗಿ ಹಿಂದುಳಿದ ರೈತರ ಜಮೀನುಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಿ, ಅವರ ಆರ್ಥಿಕ  ಜೀವನ  ಮಟ್ಟವನ್ನು ಸುಧಾರಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಜಾರಿಗೆ ತಂದಿರುವ ಅತ್ಯಂತ ಜನಪ್ರಿಯ ಯೋಜನೆಯೇ ‘ಮುಖ್ಯಮಂತ್ರಿ ಗಂಗಾ ಕಲ್ಯಾಣ ಯೋಜನೆ’ (Ganga Kalyana Yojana). ಈ ಯೋಜನೆಯಡಿ ಅರ್ಹ ರೈತರ ಜಮೀನುಗಳಲ್ಲಿ ಸರ್ಕಾರವೇ ಸ್ವಂತ  ತನ್ನ  ಖರ್ಚಿನಲ್ಲಿ ಉಚಿತವಾಗಿ ಬೋರ್‌ವೆಲ್ (ಬಾವಿ) ಕೊರೆಸಿ, ಅದಕ್ಕೆ ಬೇಕಾಗುವ ಪಂಪ್‌ಸೆಟ್, ಮೋಟಾರ್ ಹಾಗೂ ವಿದ್ಯುದ್ದೀಕರಣ (Electricity Connection) ಸೌಲಭ್ಯವನ್ನು ಸಂಪೂರ್ಣ ಉಚಿತವಾಗಿ ಒದಗಿಸುತ್ತದೆ.ಇದರಿಂದ ರೈತರು ಕೃಷಿಗೆ ನೀರಿನ ತೊಂದರೆ ಇಲ್ಲದೇ ಸ್ವಂತ ಜಮೀನಿನಲ್ಲಿ ಬೆಳೆ ಬೆಳೆಸಿ ಆದಾಯ ಹೆಚ್ಚಿಸಿಕೊಳ್ಳೋಕೆ ಸಹಾಯ ಆಗುತ್ತದೆ.

ನಿಮ್ಮ ಬಳಿ ಸ್ವಂತ ಕೃಷಿ ಭೂಮಿ ಇದ್ದು, ನೀರಾವರಿ ಸೌಲಭ್ಯವಿಲ್ಲದೆ ಕೃಷಿ ಮಾಡೋಕೆ   ತೊಂದರೆ ಅನುಭವಿಸುತ್ತಿದ್ದರೆ, ಈ ಯೋಜನೆಯ ಲಾಭವನ್ನು ನೀವು ಹೇಗೆ ಪಡೆಯಬಹುದು? ಈ ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಕಡ್ಡಾಯ ಅರ್ಹತೆಗಳೇನು? ಯಾವೆಲ್ಲಾ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕು? ಮತ್ತು ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನವನ್ನು. ಈ ವಿಸ್ತೃತ ಮಾರ್ಗದರ್ಶನದಲ್ಲಿ ಅರ್ಜಿ ಹಾಕುವ ಪ್ರಕ್ರಿಯೆ, ಬೇಕಾಗುವ ದಾಖಲೆಗಳು, ಆಯ್ಕೆ ವಿಧಾನ ಸೇರಿದಂತೆ ಪ್ರತಿಯೊಂದು ವಿಷಯವನ್ನೂ ಎಳೆಎಳೆಯಾಗಿ ಸುಲಭವಾಗಿ ವಿವರಿಸಿದ್ದೇವೆ.

ಗಂಗಾ ಕಲ್ಯಾಣ ಯೋಜನೆಯ ಪ್ರಮುಖ ಉದ್ದೇಶ ಮತ್ತು ಹಿನ್ನೆಲೆ

ಗಂಗಾ ಕಲ್ಯಾಣ ಯೋಜನೆಯ ಮುಖ್ಯ ಉದ್ದೇಶವೇ  ನೀರಿನ ಸೌಲಭ್ಯವಿಲ್ಲದೆ  ಬೇಸಾಯ ಮಾಡುವ ರೈತರ ಭೂಮಿಯನ್ನು ಹಸಿರಾಗಿಸುವುದು. ರೈತನ ಕೃಷಿಗೆ ಸಹಾಯವಾಗುವಂತಹ   ಭೂಗರ್ಭದಲ್ಲಿರುವ ಜಲಮೂಲಗಳನ್ನು ಗುರುತಿಸಿ, ಬೋರ್‌ವೆಲ್ ಕೊರೆಯುವ ಮೂಲಕ ರೈತರಿಗೆ ವರ್ಷದ ಹನ್ನೆರಡು ತಿಂಗಳೂ ಕೃಷಿ ಮಾಡಲು ಅನುಕೂಲ ಮಾಡಿಕೊಡುವುದು ಇದರ ಮುಖ್ಯ  ಗುರಿಯಾಗಿದೆ. ಈ ಗಂಗಾ ಕಲ್ಯಾಣ  ಯೋಜನೆಯನ್ನು ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ವಿವಿಧ ಅಭಿವೃದ್ಧಿ ನಿಗಮಗಳ ಮೂಲಕ ಅನುಷ್ಠಾನಗೊಳಿಸಲಾಗುತ್ತದೆ.

ಈ ಯೋಜನೆಯಲ್ಲಿ ಪ್ರಮುಖವಾಗಿ ಎರಡು ರೀತಿಯ ನೀರಾವರಿ ಸೌಲಭ್ಯಗಳನ್ನು ನೀಡಲಾಗುತ್ತದೆ:

  1. ವ್ಯಕ್ತಿಗತ ಬೋರ್‌ವೆಲ್ ಯೋಜನೆ (Individual Borewell Scheme): ಒಬ್ಬನೇ ರೈತನಿಗೆ ಸೇರಿದ ಕನಿಷ್ಠ ಜಮೀನಿನ ಮಿತಿ ಇದ್ದಲ್ಲಿ, ಆತನ ಜಮೀನಿನಲ್ಲಿ ಪ್ರತ್ಯೇಕವಾಗಿ ಬೋರ್‌ವೆಲ್ ಕೊರೆಸಿಕೊಡುವುದು ರೈತನ ಕೃಷಿಗೆ ನೀರಾವರಿ ಯೋಜನೆ ಮಾಡಿಕೊಡುವುದು .
  2. ಸಾಮೂಹಿಕ ಏತ ನೀರಾವರಿ ಯೋಜನೆ (Community Borewell Scheme): ಪಕ್ಕ ಪಕ್ಕದಲ್ಲಿರುವ ಹಲವಾರು ಸಣ್ಣ ಕೃಷಿ ನಂಬಿಕೊಂಡಿರುವ ರೈತರ  ಜಮೀನುಗಳನ್ನು ಒಟ್ಟುಗೂಡಿಸಿ (ಸಾಮೂಹಿಕವಾಗಿ) ಒಂದು ಕಡೆ  ದೊಡ್ಡ ಬೋರ್‌ವೆಲ್ ಅಥವಾ ತೆರೆದ ಬಾವಿಯ ಮೂಲಕ ಎಲ್ಲರ ಜಮೀನುಗಳಿಗೂ ಪೈಪ್‌ಲೈನ್ ಮೂಲಕ ನೀರುನ್ನು ದೀರ್ಘಕಾಲದ ವರೆಗೆ ಕೃಷಿ ಉಪಯೋಗಕ್ಕೆ ನೀರಾವರಿ ಯೋಜನೆಯನ್ನು  ನಿಯಂತ್ರಿಸುವುದು.

ಯಾವೆಲ್ಲಾ ನಿಗಮಗಳ ಅಡಿಯಲ್ಲಿ ಗಂಗಾ ಕಲ್ಯಾಣ ಯೋಜನೆ ಲಭ್ಯವಿದೆ?

ಅರ್ಜಿದಾರರು ತಮ್ಮ ಜಾತಿಗೆ ಅನುಗುಣವಾಗಿ ಆಯಾ ನಿರ್ದಿಷ್ಟ ಅಭಿವೃದ್ಧಿ ನಿಗಮಗಳ ಮೂಲಕವೇ ಅರ್ಜಿ ಸಲ್ಲಿಸಬೇಕಾಗುತ್ತದೆ. ಕರ್ನಾಟಕದಲ್ಲಿ ಈ ಕೆಳಗಿನ ಪ್ರಮುಖ ನಿಗಮಗಳ ಅಡಿಯಲ್ಲಿ ಈ ಯೋಜನೆ ಚಾಲ್ತಿಯಲ್ಲಿದೆ:

  • ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ: ಪರಿಶಿಷ್ಟ ಜಾತಿ (SC) ವರ್ಗಕ್ಕೆ ಸೇರಿದ ರೈತರಿಗಾಗಿ.
  • ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ: ಪರಿಶಿಷ್ಟ ಪಂಗಡ (ST) ವರ್ಗದ ರೈತರಿಗಾಗಿ.
  • ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ: ಒಬಿಸಿ (OBC) ವರ್ಗದ ವಿವಿಧ ಉಪಜಾತಿಗಳ ರೈತರಿಗಾಗಿ.
  • ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (KMDC): ಮುಸ್ಲಿಂ, ಕ್ರಿಶ್ಚಿಯನ್, ಜೈನ, ಸಿಖ್, ಬೌದ್ಧ ಮುಂತಾದ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯದ ರೈತರಿಗಾಗಿ.
  • ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮ.
  • ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ.
  • ಲಿಂಗಾಯತ ಮತ್ತು ಒಕ್ಕಲಿಗ ಅಭಿವೃದ್ಧಿ ನಿಗಮಗಳು (ಅವಶ್ಯಕತೆಗೆ ಅನುಗುಣವಾಗಿ ಹೊಸದಾಗಿ ಸೇರಿಸಲಾದ ನಿಗಮಗಳು).

ಗಂಗಾ ಕಲ್ಯಾಣ ಯೋಜನೆಯಡಿ ಸಿಗುವ ಆರ್ಥಿಕ ಸಹಾಯಧನ (Subsidy) ಎಷ್ಟು?

ಈ ಯೋಜನೆಯು ಸಂಪೂರ್ಣವಾಗಿ ಉಚಿತವಾಗಿದ್ದರೂ, ಸರ್ಕಾರವು ಪ್ರತಿ ಬೋರ್‌ವೆಲ್ ನಿರ್ಮಾಣಕ್ಕೆ ನಿಗದಿಪಡಿಸಿರುವ ಒಟ್ಟು ಬಜೆಟ್ ಮತ್ತು ಸಬ್ಸಿಡಿ ಮೊತ್ತ ಜಿಲ್ಲೆಗಳಿಗೆ ತಕ್ಕಂತೆ ವ್ಯತ್ಯಾಸವಾಗುತ್ತದೆ:

1. ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಮತ್ತು ತುಮಕೂರು ಜಿಲ್ಲೆಗಳು

ಈ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ (Water Table) ಅತ್ಯಂತ ಆಳದಲ್ಲಿ ಇರುವುದರಿಂದ ಬೋರ್‌ವೆಲ್ ಕೊರೆಸಲು ಹೆಚ್ಚಿನ ವೆಚ್ಚವಾಗುತ್ತದೆ. ಆದ್ದರಿಂದ ಇಲ್ಲಿ ಸರ್ಕಾರವು ಪ್ರತಿ ಫಲಾನುಭವಿಗೆ ಒಟ್ಟು ₹4.50 ಲಕ್ಷ ರೂಪಾಯಿಗಳ ಆರ್ಥಿಕ ನೆರವು ನೀಡುತ್ತದೆ. ಇದರಲ್ಲಿ ₹4.00 ಲಕ್ಷ ರೂಪಾಯಿಗಳು ಬೋರ್‌ವೆಲ್ ಕೊರೆಯಲು ಹಾಗೂ ಮೋಟಾರ್ ಅಳವಡಿಸಲು ಸಿಗುವ ಸಂಪೂರ್ಣ ಉಚಿತ ಸಬ್ಸಿಡಿಯಾಗಿದ್ದರೆ, ಇನ್ನುಳಿದ ₹50,000 ರೂಪಾಯಿಗಳನ್ನು ವಿದ್ಯುತ್ ಸಂಪರ್ಕಕ್ಕಾಗಿ (ESCOMS ಕಾಮಗಾರಿ) ಬಳಸಲಾಗುತ್ತದೆ.

2. ರಾಜ್ಯದ ಇತರೆ ಎಲ್ಲಾ ಜಿಲ್ಲೆಗಳು

ಉಳಿದ ಜಿಲ್ಲೆಗಳಲ್ಲಿ ಪ್ರತಿ ಬೋರ್‌ವೆಲ್‌ಗೆ ಒಟ್ಟು ₹3.50 ಲಕ್ಷ ರೂಪಾಯಿಗಳ ಅನುದಾನ ಲಭ್ಯವಿದೆ. ಇದರಲ್ಲಿ ₹3.00 ಲಕ್ಷ ರೂಪಾಯಿಗಳು ಬೋರ್‌ವೆಲ್ ಮತ್ತು ಪಂಪ್‌ಸೆಟ್‌ಗೆ ಸಬ್ಸಿಡಿ ರೂಪದಲ್ಲಿ ಸಿಕ್ಕರೆ, ₹50,000 ರೂಪಾಯಿಗಳು ವಿದ್ಯುದ್ದೀಕರಣಕ್ಕೆ ಮೀಸಲಾಗಿರುತ್ತದೆ.

ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಕಡ್ಡಾಯ ಅರ್ಹತೆಗಳು

ಸರ್ಕಾರವು ಈ ಯೋಜನೆಯನ್ನು ಕೇವಲ ನೈಜ ಬಡ ಕುಟುಂಬದ ರೈತರಿಗೆ ತಲುಪಿಸಲು ಕೆಲವು ಕಟ್ಟುನಿಟ್ಟಾದ ಅರ್ಹತಾ ಮಾನದಂಡಗಳನ್ನು ವಿಧಿಸಿದೆ. ಅರ್ಜಿದಾರರು ಈ ಕೆಳಗಿನ ಎಲ್ಲಾ ಅರ್ಹತೆಗಳನ್ನು ಹೊಂದಿರಬೇಕು:

  • ಕರ್ನಾಟಕದ ನಿವಾಸಿ: ಅರ್ಜಿದಾರರು ಕಡ್ಡಾಯವಾಗಿ ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
  • ಜಾತಿ ಮತ್ತು ವರ್ಗ: ಅರ್ಜಿದಾರರು ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಹಿಂದುಳಿದ ವರ್ಗಗಳು (OBC) ಅಥವಾ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿರಬೇಕು.
  • ಜಮೀನಿನ ಮಿತಿ (Land Limit):
    • ವ್ಯಕ್ತಿಗತ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿದಾರರು ಕನಿಷ್ಠ 1 ಎಕರೆ 20 ಗುಂಟೆ (1.5 ಎಕರೆ) ಇಂದ ಗರಿಷ್ಠ 5 ಎಕರೆ ಒಳಗಿನ ಒಣ ಭೂಮಿ (ಖುಷ್ಕಿ ಜಮೀನು) ಹೊಂದಿರಬೇಕು.
    • ಸಾಮೂಹಿಕ ಏತ ನೀರಾವರಿ ಯೋಜನೆಗೆ ಕನಿಷ್ಠ 3 ಜನ ರೈತರ ಜಮೀನುಗಳು ಒಟ್ಟಿಗೆ ಸೇರಿ ಕನಿಷ್ಠ 8 ಎಕರೆ ವಿಸ್ತೀರ್ಣ ಇರಬೇಕಾಗುತ್ತದೆ.
  • ವಯಸ್ಸಿನ ಮಿತಿ: ಅರ್ಜಿದಾರ ರೈತನ ವಯಸ್ಸು ಕನಿಷ್ಠ 18 ವರ್ಷ ತುಂಬಿರಬೇಕು ಮತ್ತು ಗರಿಷ್ಠ 60 ವರ್ಷದ ಒಳಗಿರಬೇಕು.
  • ಆದಾಯದ ಮಿತಿ: ಕುಟುಂಬದ ವಾರ್ಷಿಕ ಆದಾಯ ಗ್ರಾಮೀಣ ಭಾಗದವರಿಗೆ ₹1.50 ಲಕ್ಷಕ್ಕಿಂತ ಒಳಗಿರಬೇಕು ಮತ್ತು ನಗರ ಪ್ರದೇಶದ ವ್ಯಾಪ್ತಿಯಲ್ಲಿರುವ ರೈತರಿಗೆ ₹2.00 ಲಕ್ಷಕ್ಕಿಂತ ಒಳಗಿರಬೇಕು.
  • ಸಣ್ಣ ಮತ್ತು ಅತಿ ಸಣ್ಣ ರೈತ: ಅರ್ಜಿದಾರರು ಸಣ್ಣ ಅಥವಾ ಅತಿ ಸಣ್ಣ ರೈತರಾಗಿರಬೇಕು ಹಾಗೂ ಅವರ ಜಮೀನಿಗೆ ಬೇರೆ ಯಾವುದೇ ನೀರಾವರಿ ಮೂಲಗಳು (ನದಿ, ಕಾಲುವೆ ಅಥವಾ ಹಳೇ ಬೋರ್‌ವೆಲ್) ಇರಬಾರದು.
  • ಹಿಂದೆ ಸೌಲಭ್ಯ ಪಡೆದಿರಬಾರದು: ಕುಟುಂಬದ ಯಾವುದೇ ಸದಸ್ಯರು ಈ ಹಿಂದೆ ಸರ್ಕಾರದ ಯಾವುದೇ ನಿಗಮದಿಂದ ಗಂಗಾ ಕಲ್ಯಾಣ ಯೋಜನೆಯ ಲಾಭ ಪಡೆದಿರಬಾರದು.

ಅರ್ಜಿ ಸಲ್ಲಿಸಲು ಕಡ್ಡಾಯವಾಗಿ ಬೇಕಾಗುವ ಪ್ರಮುಖ ದಾಖಲೆಗಳು (Documents List)

ಆನ್‌ಲೈನ್‌ನಲ್ಲಿ ಅರ್ಜಿ ಅಪ್‌ಲೋಡ್ ಮಾಡುವ ಮುನ್ನ ಕೆಳಗೆ ನೀಡಿರುವ ಎಲ್ಲಾ ಪ್ರಮುಖ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸ್ಕ್ಯಾನ್ ಮಾಡಿ ಸಿದ್ಧವಾಗಿಟ್ಟುಕೊಳ್ಳಿ:

  1. ಆಧಾರ್ ಕಾರ್ಡ್: ಅರ್ಜಿದಾರ ರೈತನ ಆಧಾರ್ ಕಾರ್ಡ್ (ಮೊಬೈಲ್ ಸಂಖ್ಯೆ ಲಿಂಕ್ ಆಗಿರುವುದು ಕಡ್ಡಾಯ).
  2. ಇತ್ತೀಚಿನ ಜಾತಿ ಪ್ರಮಾಣಪತ್ರ: ಕಂದಾಯ ಇಲಾಖೆಯಿಂದ (ತಹಶೀಲ್ದಾರ್) ಪಡೆದ ಆರ್‌ಡಿ ಸಂಖ್ಯೆ (RD Number) ಹೊಂದಿರುವ ಪ್ರಮಾಣಪತ್ರ.
  3. ಆದಾಯ ಪ್ರಮಾಣಪತ್ರ: ಕುಟುಂಬದ ವಾರ್ಷಿಕ ಆದಾಯದ ಇತ್ತೀಚಿನ ಪ್ರಮಾಣಪತ್ರ.
  4. ಭೂಮಿ ದಾಖಲೆಗಳು (RTC / ಪಹಣಿ): ಜಮೀನಿನ ಇತ್ತೀಚಿನ ವರ್ಷದ ಚಾಲ್ತಿ ಪಹಣಿ ಉತಾರ.
  5. ಖಾತಾ ಬದಲಾವಣೆ ಪತ್ರ (Mutation copy) ಮತ್ತು ಟಿಪ್ಪಣಿ: ಜಮೀನಿನ ನಕ್ಷೆ ಮತ್ತು ಹಕ್ಕು ಬದಲಾವಣೆ ಪತ್ರ.
  6. ಸಣ್ಣ ಮತ್ತು ಅತಿ ಸಣ್ಣ ರೈತರ ಪ್ರಮಾಣಪತ್ರ: ನಿಮ್ಮ ಭಾಗದ ರೈತ ಸಂಪರ್ಕ ಕೇಂದ್ರ (RSK) ಅಥವಾ ಸಹಾಯಕ ಕೃಷಿ ನಿರ್ದೇಶಕರಿಂದ (ADA) ಪಡೆದ ಅಧಿಕೃತ ಪ್ರಮಾಣಪತ್ರ.
  7. ಬ್ಯಾಂಕ್ ಪಾಸ್‌ಬುಕ್ ಪ್ರತಿ: ಅರ್ಜಿದಾರರ ಹೆಸರಿನಲ್ಲಿರುವ ಸಕ್ರಿಯ ಬ್ಯಾಂಕ್ ಖಾತೆಯ ಮುಖಪುಟದ ಜೆರಾಕ್ಸ್.
  8. ಭೂ ಅಳತೆ ನಕ್ಷೆ (Survey Map): ಸರ್ವೇ ಇಲಾಖೆಯಿಂದ ಪಡೆದ ಜಮೀನಿನ ನಕ್ಷೆ.
  9. ಆಸ್ತಿ ಹೊಣೆಗಾರಿಕೆ ಇಲ್ಲದ ಪ್ರಮಾಣಪತ್ರ (Encumbrance Certificate – EC): ಕಳೆದ 13 ವರ್ಷಗಳ ಜಮೀನಿನ ಋಣಭಾರ ರಾಹಿತ್ಯ ಪ್ರಮಾಣಪತ್ರ (ಸಬ್ ರಿಜಿಸ್ಟ್ರಾರ್ ಕಚೇರಿಯಿಂದ ಪಡೆದಿರಬೇಕು).
  10. ರೈತನ ಇತ್ತೀಚಿನ ಭಾವಚಿತ್ರ: ಪಾಸ್‌ಪೋರ್ಟ್ ಸೈಜ್ ಫೋಟೋ.

ಗಂಗಾ ಕಲ್ಯಾಣ ಯೋಜನೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನ (Step-by-Step)

ಕರ್ನಾಟಕ ಸರ್ಕಾರವು ಇತ್ತೀಚಿನ ದಿನಗಳಲ್ಲಿ ಇಡೀ ಪ್ರಕ್ರಿಯೆಯನ್ನು ಪಾರದರ್ಶಕಗೊಳಿಸಲು ‘ಸೇವಾ ಸಿಂಧು’ (Seva Sindhu) ಅಥವಾ ಕಲ್ಯಾಣ ಮಿತ್ರ ಪೋರ್ಟಲ್ ಮೂಲಕ ಆನ್‌ಲೈನ್ ಅರ್ಜಿಯನ್ನು ಕಡ್ಡಾಯಗೊಳಿಸಿದೆ. ಅರ್ಜಿ ಸಲ್ಲಿಸಲು ಕೆಳಗಿನ ಹಂತಗಳನ್ನು ಅನುಸರಿಸಿ:

ಹಂತ 1: ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ

ಮೊದಲು ಕರ್ನಾಟಕ ಸರ್ಕಾರದ ಸೇವಾ ಸಿಂಧು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ ನಿಮ್ಮ ಜಾತಿಯ ನಿಗಮದ ಅಧಿಕೃತ ಜಾಲತಾಣಕ್ಕೆ ಲಾಗಿನ್ ಆಗಿ (ಉದಾಹರಣೆಗೆ: kmdconline.karnataka.gov.in ಅಥವಾ dbcdc.karnataka.gov.in). ನಿಮ್ಮ ಬಳಿ ಲಾಗಿನ್ ಐಡಿ ಇಲ್ಲದಿದ್ದರೆ ಹತ್ತಿರದ ‘ಗ್ರಾಮ ಒನ್’ (Gram One), ‘ಕರ್ನಾಟಕ ಒನ್’ ಅಥವಾ ‘ಬೆಂಗಳೂರು ಒನ್’ ಕೇಂದ್ರಕ್ಕೆ ಭೇಟಿ ನೀಡುವುದು ಅತ್ಯಂತ ಉತ್ತಮ.

ಹಂತ 2: ಯೋಜನೆಯನ್ನು ಆಯ್ಕೆ ಮಾಡಿ

ಅಪ್ಲಿಕೇಶನ್ ಸೆಕ್ಷನ್‌ನಲ್ಲಿ ನಿಮ್ಮ ನಿಗಮವನ್ನು ಆರಿಸಿಕೊಂಡು, ಅಲ್ಲಿ ಕಾಣಿಸುವ “ಅಪ್ಲಿಕೇಶನ್ ಫಾರ್ ಗಂಗಾ ಕಲ್ಯಾಣ ಸ್ಕೀಮ್” (Application for Ganga Kalyana Yojana) ಲಿಂಕ್ ಮೇಲೆ ಕ್ಲಿಕ್ ಮಾಡಿ.

ಹಂತ 3: ವೈಯಕ್ತಿಕ ಮತ್ತು ಜಮೀನಿನ ವಿವರಗಳನ್ನು ಭರ್ತಿ ಮಾಡಿ

ಈಗ ಸ್ಕ್ರೀನ್ ಮೇಲೆ ಮೂಡುವ ಡಿಜಿಟಲ್ ಫಾರ್ಮ್‌ನಲ್ಲಿ ರೈತನ ಹೆಸರು, ಆಧಾರ್ ಸಂಖ್ಯೆ, ಪಡಿತರ ಚೀಟಿ ಸಂಖ್ಯೆ, ಮೊಬೈಲ್ ಸಂಖ್ಯೆ ಮತ್ತು ವಿಳಾಸವನ್ನು ನಿಖರವಾಗಿ ಟೈಪ್ ಮಾಡಿ. ನಂತರ ನಿಮ್ಮ ಜಮೀನು ಇರುವ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಮತ್ತು ಸರ್ವೇ ನಂಬರ್ ಅನ್ನು ನಮೂದಿಸಿ.

ಹಂತ 4: ದಾಖಲೆಗಳನ್ನು ಅಪ್‌ಲೋಡ್ ಮಾಡಿ

ನಾವು ಮೇಲೆ ತಿಳಿಸಿದ ಎಲ್ಲಾ ದಾಖಲೆಗಳನ್ನು (ಪಹಣಿ, ಜಾತಿ, ಆದಾಯ ಪತ್ರ, ಕೃಷಿ ಪ್ರಮಾಣಪತ್ರ) ನಿಗದಿತ ಸೈಜ್‌ನಲ್ಲಿ ಸ್ಪಷ್ಟವಾಗಿ ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.

ಹಂತ 5: ಅರ್ಜಿ ಸಲ್ಲಿಕೆ ಮತ್ತು ಪ್ರಿಂಟ್ ಔಟ್

ಎಲ್ಲಾ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ (Preview), ‘Submit’ ಬಟನ್ ಒತ್ತಿ. ಈಗ ನಿಮಗೆ ಒಂದು ಅರ್ಜಿ ಸಂಖ್ಯೆ (Application Number / Acknowledgement) ಸಿಗುತ್ತದೆ. ಅದನ್ನು ಪ್ರಿಂಟ್ ತೆಗೆದು ಸುರಕ್ಷಿತವಾಗಿ ಇಟ್ಟುಕೊಳ್ಳಿ. ಇದರ ಮೂಲಕ ನಿಮ್ಮ ಅರ್ಜಿ ಎಲ್ಲಿದೆ ಎಂದು ಮುಂದೆ ಟ್ರ್ಯಾಕ್ ಮಾಡಬಹುದು.

ಅರ್ಜಿ ಸಲ್ಲಿಕೆಯ ನಂತರದ ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?

ಬಹಳಷ್ಟು ಜನ ರೈತರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ತಕ್ಷಣ ತಮಗೆ ಬೋರ್‌ವೆಲ್ ಮಂಜೂರಾಗುತ್ತದೆ ಎಂದು ಭಾವಿಸುತ್ತಾರೆ. ಆದರೆ ಇದರ ಹಿಂದೆ ಒಂದು ವ್ಯವಸ್ಥಿತವಾದ ಪರಿಶೀಲನಾ ಪ್ರಕ್ರಿಯೆ ಇರುತ್ತದೆ:

  1. ದಾಖಲೆಗಳ ವೆರಿಫಿಕೇಶನ್: ನೀವು ಸಲ್ಲಿಸಿದ ಆನ್‌ಲೈನ್ ಅರ್ಜಿಗಳು ಮೊದಲು ಆಯಾ ಜಿಲ್ಲೆಯ ನಿಗಮದ ಜಿಲ್ಲಾ ವ್ಯವಸ್ಥಾಪಕರ (District Manager) ಕಚೇರಿಗೆ ತಲುಪುತ್ತವೆ. ಅಲ್ಲಿ ಅಧಿಕಾರಿಗಳು ನಿಮ್ಮ ದಾಖಲೆಗಳ ನೈಜತೆಯನ್ನು ಪರಿಶೀಲಿಸುತ್ತಾರೆ.
  2. ಸ್ಥಳ ತನಿಖೆ (Spot Inspection): ನಿಗಮದ ತಾಂತ್ರಿಕ ಸಿಬ್ಬಂದಿಗಳು ಮತ್ತು ಭೂಗರ್ಭ ವಿಜ್ಞಾನಿಗಳು (Geologists) ನೇರವಾಗಿ ನಿಮ್ಮ ಜಮೀನಿಗೆ ಭೇಟಿ ನೀಡುತ್ತಾರೆ. ಅಲ್ಲಿ ವೈಜ್ಞಾನಿಕವಾಗಿ ಜಲದ ಲಭ್ಯತೆಯನ್ನು ಪರೀಕ್ಷಿಸಿ, ಬೋರ್‌ವೆಲ್ ಪಾಯಿಂಟ್ (Water Point) ಗುರುತಿಸಿ ವರದಿ ಸಿದ್ಧಪಡಿಸುತ್ತಾರೆ.
  3. ಶಾಸಕರ ಅಧ್ಯಕ್ಷತೆಯ ಸಮಿತಿ ಆಯ್ಕೆ: ಪ್ರತಿ ತಾಲೂಕಿಗೆ ಇಂತಿಷ್ಟೇ ಬೋರ್‌ವೆಲ್ ಕೊರೆಯಬೇಕು ಎಂಬ ಕೋಟಾ (Target) ಇರುತ್ತದೆ. ಬಂದಿರುವ ಸಾವಿರಾರು ಅರ್ಜಿಗಳಲ್ಲಿ ಅರ್ಹರನ್ನು ಆಯ್ಕೆ ಮಾಡಲು ಆಯಾ ಕ್ಷೇತ್ರದ ಶಾಸಕರ (MLA) ಅಧ್ಯಕ್ಷತೆಯಲ್ಲಿ ಒಂದು ಸಮಿತಿ ಇರುತ್ತದೆ. ಈ ಸಮಿತಿಯು ಅರ್ಹ ಫಲಾನುಭವಿಗಳ ಅಂತಿಮ ಪಟ್ಟಿಯನ್ನು ಅನುಮೋದಿಸುತ್ತದೆ.
  4. ವರ್ಕ್ ಆರ್ಡರ್ ಮತ್ತು ಕಾಮಗಾರಿ: ಆಯ್ಕೆಯಾದ ರೈತರ ಪಟ್ಟಿಯನ್ನು ಪ್ರಕಟಿಸಿ, ನಿಗಮದಿಂದ ಅನುಮೋದಿತ ಬೋರ್‌ವೆಲ್ ಏಜೆನ್ಸಿಗೆ ಕೆಲಸದ ಆದೇಶ (Work Order) ನೀಡಲಾಗುತ್ತದೆ. ತದನಂತರ ನಿಮ್ಮ ಜಮೀನಿನಲ್ಲಿ ಬೋರ್‌ವೆಲ್ ಕೊರೆಯುವ ಕೆಲಸ ಆರಂಭವಾಗುತ್ತದೆ.

ಗಂಗಾ ಕಲ್ಯಾಣ ಯೋಜನೆಯ ಮುಖ್ಯಾಂಶಗಳು ಒಂದೇ ನೋಟದಲ್ಲಿ

ವಿವರಗಳು

ಮಾಹಿತಿ

ಯೋಜನೆಯ ಹೆಸರು

ಮುಖ್ಯಮಂತ್ರಿ ಗಂಗಾ ಕಲ್ಯಾಣ ಯೋಜನೆ (GKY)

ಜಾರಿಗೊಳಿಸಿದ ಸರ್ಕಾರ

ಕರ್ನಾಟಕ ಸರ್ಕಾರ

ಮುಖ್ಯ ಫಲಾನುಭವಿಗಳು

SC, ST, OBC ಮತ್ತು ಅಲ್ಪಸಂಖ್ಯಾತ ಸಣ್ಣ ರೈತರು

ಮುಖ್ಯ ಸೌಲಭ್ಯ

ಉಚಿತ ಬೋರ್‌ವೆಲ್, ಪಂಪ್‌ಸೆಟ್ ಮತ್ತು ವಿದ್ಯುತ್ ಸಂಪರ್ಕ

ಗರಿಷ್ಠ ಸಬ್ಸಿಡಿ ಮೊತ್ತ

₹3.50 ಲಕ್ಷದಿಂದ ₹4.50 ಲಕ್ಷದವರೆಗೆ (ಜಿಲ್ಲೆಗಳ ಆಧಾರದ ಮೇಲೆ)

ಕನಿಷ್ಠ ಜಮೀನಿನ ಮಿತಿ

1 ಎಕರೆ 20 ಗುಂಟೆ (ಒಣ ಭೂಮಿ)

ಅರ್ಜಿ ಸಲ್ಲಿಸುವ ವಿಧಾನ

ಆನ್‌ಲೈನ್ (ಸೇವಾ ಸಿಂಧು / ಗ್ರಾಮ ಒನ್ ಕೇಂದ್ರಗಳು)

ರೈತರ ಗಮನಕ್ಕೆ ಪ್ರಮುಖ ಎಚ್ಚರಿಕೆ: ಗಂಗಾ ಕಲ್ಯಾಣ ಯೋಜನೆಯು ಸಂಪೂರ್ಣವಾಗಿ ಉಚಿತವಾಗಿದ್ದು, ಸರ್ಕಾರವೇ ನೇರವಾಗಿ ಏಜೆನ್ಸಿಗಳಿಗೆ ಹಣ ಪಾವತಿಸುತ್ತದೆ. ಯಾವುದೇ ಮಧ್ಯವರ್ತಿಗಳು ಅಥವಾ ದಲ್ಲಾಳಿಗಳು “ನಿಮಗೆ ಬೇಗನೆ ಬೋರ್‌ವೆಲ್ ಮಂಜೂರು ಮಾಡಿಸಿಕೊಡುತ್ತೇವೆ” ಎಂದು ಹಣ ಕೇಳಿದರೆ ಯಾರಿಗೂ ಒಂದು ರೂಪಾಯಿಯನ್ನೂ ಕೊಡಬೇಡಿ. ಸುಳ್ಳು ಭರವಸೆ ನೀಡಿ ಹಣ ವಸೂಲಿ ಮಾಡುವವರ ಬಗ್ಗೆ ತಕ್ಷಣ ನಿಮ್ಮ ಜಿಲ್ಲಾ ನಿಗಮದ ಕಚೇರಿಗೆ ದೂರು ನೀಡಿ.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs)

1. ನನ್ನ ಜಮೀನಿನಲ್ಲಿ ಬೋರ್‌ವೆಲ್ ಕೊರೆದ ನಂತರ ನೀರು ಬೀಳದಿದ್ದರೆ (Failure ಬೋರ್‌ವೆಲ್) ಏನು ಮಾಡಲಾಗುತ್ತದೆ?

ಒಂದು ವೇಳೆ ಬೋರ್‌ವೆಲ್ ಕೊರೆದಾಗ ನೀರು ಬರದೇ ಹೋದರೆ (ಡ್ರೈ ಬೋರ್‌ವೆಲ್ ಆದ್ರೆ), ಆ ಕಾಮಗಾರಿಯ ಸಂಪೂರ್ಣ ನಷ್ಟವನ್ನು ಸರ್ಕಾರವೇ ಭರಿಸುತ್ತದೆ. ರೈತರಿಂದ ಯಾವುದೇ ಹಣ ವಸೂಲಿ ಮಾಡುವುದಿಲ್ಲ. ನಿಯಮಾವಳಿಗಳ ಪ್ರಕಾರ ಅಂತಹ ರೈತರಿಗೆ ಮತ್ತೊಮ್ಮೆ ಅವಕಾಶ ನೀಡುವ ಬಗ್ಗೆ ನಿಗಮದ ಅಧಿಕಾರಿಗಳು ತೀರ್ಮಾನಿಸುತ್ತಾರೆ.

2. ತೋಟದ ಭೂಮಿ ಅಥವಾ ನೀರಾವರಿ ಜಮೀನು ಇರುವವರು ಈ ಯೋಜನೆಗೆ ಅರ್ಹರೇ?

ಖಂಡಿತ ಇಲ್ಲ. ಈಗಾಗಲೇ ಬಾವಿ, ಕಾಲುವೆ ಅಥವಾ ತೋಟದ ನೀರಾವರಿ ಸೌಲಭ್ಯ ಹೊಂದಿರುವ ರೈತರು ಈ ಯೋಜನೆಗೆ ಅರ್ಹರಲ್ಲ. ಕೇವಲ ಒಣ ಬೇಸಾಯ (Rainfed Land) ಮಾಡುವ, ಮಳೆಯನ್ನೇ ನಂಬಿರುವ ಬಡ ರೈತರಿಗೆ ಮಾತ್ರ ಈ ಯೋಜನೆಯಲ್ಲಿ ಆದ್ಯತೆ ನೀಡಲಾಗುತ್ತದೆ.

3. ಜಂಟಿ ಖಾತೆ (Joint Holder) ಹೊಂದಿರುವ ಪಹಣಿ ಇದ್ದರೆ ಅರ್ಜಿ ಸಲ್ಲಿಸಬಹುದೇ?

ಜಂಟಿ ಖಾತೆ ಇದ್ದರೆ ಅರ್ಜಿ ಸಲ್ಲಿಸಬಹುದು. ಆದರೆ ಪಹಣಿಯಲ್ಲಿರುವ ನಿಮ್ಮ ಹಿಸ್ಸಾ (ಭಾಗ) ಕನಿಷ್ಠ 1 ಎಕರೆ 20 ಗುಂಟೆ ಇರಬೇಕು ಮತ್ತು ಉಳಿದ ಜಂಟಿ ಮಾಲೀಕರಿಂದ “ನಮ್ಮ ಜಮೀನಿನಲ್ಲಿ ಬೋರ್‌ವೆಲ್ ಕೊರೆಯಲು ಯಾವುದೇ ಅಭ್ಯಂತರವಿಲ್ಲ” ಎಂಬ ಅಧಿಕೃತ ಒಪ್ಪಿಗೆ ಪತ್ರವನ್ನು (No Objection Certificate – NOC) ಪಡೆದು ಅರ್ಜಿಯೊಂದಿಗೆ ಲಗತ್ತಿಸಬೇಕಾಗುತ್ತದೆ.

4. ಬೋರ್‌ವೆಲ್ ಕೊರೆದ ಎಷ್ಟು ದಿನಗಳ ನಂತರ ವಿದ್ಯುತ್ ಸಂಪರ್ಕ (Power Connection) ಸಿಗುತ್ತದೆ?

ಬೋರ್‌ವೆಲ್ ಕೊರೆದು ಮೋಟಾರ್ ಅಳವಡಿಸಿದ ನಂತರ ನಿಗಮವು ಹೆಸ್ಕಾಂ, ಬೆಸ್ಕಾಂ ಅಥವಾ ಜೆಸ್ಕಾಂನಂತಹ ಸ್ಥಳೀಯ ವಿದ್ಯುತ್ ಸರಬರಾಜು ಕಂಪನಿಗಳಿಗೆ ಹಣ ಪಾವತಿಸುತ್ತದೆ. ಸರ್ಕಾರಿ ಪ್ರಕ್ರಿಯೆಗಳು ಮತ್ತು ಲೈನ್ ಎಳೆಯುವ ಕಾಮಗಾರಿ ಇರುವುದರಿಂದ ಸಾಮಾನ್ಯವಾಗಿ ಬೋರ್‌ವೆಲ್ ಕೊರೆದ 3 ರಿಂದ 6 ತಿಂಗಳ ಒಳಗೆ ವಿದ್ಯುತ್ ಸಂಪರ್ಕ ಸಿಗುತ್ತದೆ.

2 thoughts on “ರೈತರಿಗೆ ಗುಡ್ ನ್ಯೂಸ್! ಗಂಗಾ ಕಲ್ಯಾಣ ಯೋಜನೆಯಡಿ ಉಚಿತ ಬೋರ್ವೆಲ್ & ಪಂಪ್ ಸೆಟ್‌ಗೆ ಅರ್ಜಿ ಆಹ್ವಾನ”

Leave a Comment