Labour Card ಇದ್ದವರಿಗೆ ಭರ್ಜರಿ ಸಿಹಿಸುದ್ದಿ! ಸರ್ಕಾರದಿಂದ ₹60,000 ವರೆಗೆ ಸಹಾಯಧನ

 ಕಾರ್ಮಿಕ ಕಾರ್ಡ್ ಮಾಡಿಸುವುದು ಹೇಗೆ? ಈ ಒಂದು ಸ್ಮಾರ್ಟ್ ಕಾರ್ಡ್‌ನಿಂದ ಸಿಗುವ  ಬೃಹತ್ ಲಾಭಗಳ ಸಂಪೂರ್ಣ ಮಾಹಿತಿ (ಲೇಬರ್ ಕಾರ್ಡ್ ಸ್ಕಾಲರ್‌ಶಿಪ್)

Karnataka Labour Card Benefits,Labour Card Scheme Karnataka,ಲೇಬರ್ ಕಾರ್ಡ್ ಹೊಸ ಅಪ್ಡೇಟ್ ಚಿತ್ರ


  ಈ ಆಧುನಿಕ ಕಾಲದಲ್ಲೂ ಕೂಡ ಬೆಳಿಗ್ಗೆ ಯಿಂದ ಸಂಜೆಯವರೆಗೆ ಸುಡು ಬಿಸಿಲು, ಮಳೆ, ಕೊರೆಯುವ ಚಳಿ  ಯಾವುದನ್ನು ಲೆಕ್ಕಿಸದೆ ಬೆವರು ಸುರಿಸಿ ದುಡಿಯುವವರು ನಮ್ಮ ಕಟ್ಟಡ ಕಾರ್ಮಿಕರು. ನೂರಾರು ಅಡಿ ಎತ್ತರದ  ದೊಡ್ಡ ಐಷಾರಾಮಿ ಮನೆ,ಬಂಗಲೆಗಳು, ಅಪಾರ್ಟ್‌ಮೆಂಟ್‌ಗಳು, ಬೃಹತ್ ವಾಣಿಜ ಸಂಕೀರ್ಣಗಳು ಮತ್ತು ಮಾಲ್‌ಗಳನ್ನು ತಮ್ಮ ಜೀವದ ಮೇಲೆ ಅಸೆ ಆಕಾಂಕ್ಷೆ  ಹಂಗು ತೊರೆದು ಕಟ್ಟಡ ಕಟ್ಟುವ ಈ ಕಾರ್ಮಿಕರ ಸ್ವಂತ ಬದುಕು ಮಾತ್ರ ಯಾವುದೋ ಒಂದು ಸಣ್ಣ ಗುಡಿಸಲಿನಲ್ಲಿಯೇ ಕಳೆದುಹೋಗುತ್ತದೆ.

ದಿನಗೂಲಿ ನಂಬಿಕೊಂಡು ಬದುಕುವ ಇಂತಹ ಎಷ್ಟೋ ಕಾರ್ಮಿಕರು ಅಸಂಘಟಿತ ವಲಯದ ಕಾರ್ಮಿಕರ ಭವಿಷ್ಯಕ್ಕೆ, ಅವರ ಆರೋಗ್ಯಕ್ಕೆ ಅಥವಾ ಅವರ ಮಕ್ಕಳ ಶಿಕ್ಷಣಕ್ಕೆ ಯಾವುದೇ ರೀತಿಯ ಆರ್ಥಿಕ ಭದ್ರತೆ ಮತ್ತು ರಕ್ಷಣೆ  ಇರುವುದಿಲ್ಲ. ಒಂದು ದಿನ ಕೆಲಸಕ್ಕೆ ಹೋಗದೆ ಇದ್ದರೆ ಒಂದು ದಿನದ ಊಟಕು ಕಷ್ಟಪಡುವ ಪರಿಸ್ಥಿತಿ.ಒಂದೆರಡು ದಿನ ಜ್ವರ ಬಂದು ಮಲಗಿದರೆ ಇಡೀ ಕುಟುಂಬ ಉಪವಾಸ ಇರಬೇಕಾದ ಪರಿಸ್ಥಿತಿಸಿ ಹಲವರದ್ದು  ಎಂಬಂತಹ ಕರುಣಾಜನಕ ಪರಿಸ್ಥಿತಿಯಲ್ಲಿರುವ ಲಕ್ಷಾಂತರ ಕುಟುಂಬಗಳು ನಮ್ಮ ಕರ್ನಾಟಕದಲ್ಲಿವೆ.

 ಕಾರ್ಮಿಕರ ಕಷ್ಟಗಳಿಗೆ ಅವರು ಜೀವನ ಉಪಯೋಗಕ್ಕೆ ,ಅವರ ಕಣ್ಣೊರೆಸಲು ಮತ್ತು ಅವರ ಇಡೀ ಕುಟುಂಬದ ಆರ್ಥಿಕ ಭದ್ರತೆಗೆ ಸಹಾಯವಾಗಲು ಮತ್ತು ಆಸರೆಯಾಗಲು ಕರ್ನಾಟಕ ಸರ್ಕಾರವು ಜಾರಿಗೆ ತಂದಿರುವ ಅತ್ಯಂತ ಜನಪ್ರಿಯ ಹಾಗೂ ಮಹತ್ವಾಕಾಂಕ್ಷಿ ಯೋಜನೆಯೇ ‘ಕಟ್ಟಡ ಕಾರ್ಮಿಕ ಕಾರ್ಡ್’ (Labour Card). ಇದು ಕೇವಲ ನಿಮ್ಮ ಗುರುತಿನ ಚೀಟಿಯಲ್ಲ, ಬದಲಾಗಿ ಇದು  ಲಕ್ಷಾಂತರ ಕುಟುಂಬಗಳ ಜೀವನ ಉಪಯೋಗಕ್ಕಾಗಿ ಆರ್ಥಿಕ ನೆರವನ್ನು ಒದಗಿಸುವ ಕಾಮಧೇನುವಾಗಿದೆ.

ನಿಮ್ಮ ಬಳಿ ಅಥವಾ ನಿಮ್ಮ ಮನೆಯವರ ಬಳಿ ಈ ಕಾರ್ಮಿಕ ಕಾರ್ಡ್ ಇದ್ದರೆ, ನಿಮ್ಮ ಮಕ್ಕಳ ಎಲ್‌ಕೆಜಿ (LKG) ಶಿಕ್ಷಣದಿಂದ ಹಿಡಿದು ಇಂಜಿನಿಯರಿಂಗ್, ಮೆಡಿಕಲ್ ಓದುವವರೆಗೂ ಲಕ್ಷಾಂತರ ರೂಪಾಯಿಗಳ ವಿದ್ಯಾರ್ಥಿ ವೇತನವನ್ನು (Scholarship) ಸರ್ಕಾರವೇ ನೀಡುತ್ತದೆ. ಅಷ್ಟೇ ಅಲ್ಲದೆ, ಹೆಣ್ಣುಮಕ್ಕಳ ಮದುವೆಗೆ ಆರ್ಥಿಕ ನೆರವು, ಗರ್ಭಿಣಿಯರ ಹೆರಿಗೆ ಖರ್ಚಿಗೆ ಭತ್ಯೆ, ಪ್ರಾಣಾಪಾಯ ಉಂಟುಮಾಡುವ ದೊಡ್ಡ ದೊಡ್ಡ ಕಾಯಿಲೆಗಳ ವೈದ್ಯಕೀಯ ಚಿಕಿತ್ಸೆಗೆ ಉಚಿತ ನೆರವು ಮತ್ತು ವಯಸ್ಸಾದ ಮೇಲೆ ಯಾರಿಗೂ ಭಾರವಾಗದಂತೆ  ಬದುಕಲು ಪ್ರತಿ ತಿಂಗಳು ಪಿಂಚಣಿಯೂ (Pension) ಸಿಗುತ್ತದೆ.

ಆದರೆ, ವಿಪರ್ಯಾಸವೆಂದರೆ ಬಹಳಷ್ಟು ಜನರಿಗೆ ಈ ಕಾರ್ಮಿಕ ಕಾರ್ಡ್ ಅನ್ನು ಸರಿಯಾದ ರೀತಿಯಲ್ಲಿ ಮಾಡಿಸುವುದು ಹೇಗೆ ಎಂದು ಗೊಂದಲಗಳಿವೆ ? ಕಾಂಟ್ರಾಕ್ಟರ್ ಬಳಿ ಯಾವ ಫಾರ್ಮ್‌ಗೆ ಸಹಿ ಹಾಕಿಸಿಕೊಳ್ಳಬೇಕು? ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗ ಯಾವ ತಪ್ಪುಗಳನ್ನು ಮಾಡಬಾರದು? ಮತ್ತು ಕಾರ್ಡ್ ಬಂದ ಮೇಲೆ ಸ್ಕಾಲರ್‌ಶಿಪ್‌ಗೆ ಹೇಗೆ ಕ್ಲೈಮ್ ಮಾಡಬೇಕು ಎಂಬ ಸಂಪೂರ್ಣ ಮಾಹಿತಿಯೇ ಇರುವುದಿಲ್ಲ. ಮಧ್ಯವರ್ತಿಗಳ (ಏಜೆಂಟರ) ಮೊರೆ ಹೋಗಿ ಸಾವಿರಾರು ರೂಪಾಯಿ ಕಳೆದುಕೊಂಡು ಮೋಸ ಹೋಗುವ ಬದಲು, ಕಾರ್ಮಿಕ ಕಾರ್ಡ್‌ನ ಪ್ರತಿಯೊಂದು ನಿಯಮ, ಲಾಭ ಮತ್ತು ಅರ್ಜಿ ಪ್ರಕ್ರಿಯೆಯ ಕುರಿತಾದ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರವಾಗಿ ತಿಳಿದುಕೊಳ್ಳೋಣ.

 ಕಾರ್ಮಿಕ ಕಾರ್ಡ್ (Labour Card) ಎಂದರೇನು? ಈ ಬೃಹತ್ ನಿಧಿ ಎಲ್ಲಿಂದ ಬರುತ್ತದೆ?

ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಯ ಅಡಿಯಲ್ಲಿ ಬರುವ ‘ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ’ (Karnataka Building and Other Construction Workers Welfare Board – KBOCWWB) ಮುಖಾಂತರ ಕಟ್ಟಡ ಕಾರ್ಮಿಕರಿಗೆ ಅಧಿಕೃತವಾಗಿ ನೀಡುವ ಸ್ಮಾರ್ಟ್ ಗುರುತಿನ ಚೀಟಿಯೇ ಈ ಕಾರ್ಮಿಕ ಕಾರ್ಡ್.

ಬಹಳಷ್ಟು ಜನರಿಗೆ ಒಂದು ಸಹಜವಾದ ಪ್ರಶ್ನೆ ಮೂಡಬಹುದು: “ಸರ್ಕಾರ ಇಷ್ಟು ದೊಡ್ಡ ಮಟ್ಟದ ಹಣವನ್ನು, ಇಷ್ಟೊಂದು ಬೃಹತ್ ಸ್ಕಾಲರ್‌ಶಿಪ್ ಅನ್ನು ಕಾರ್ಮಿಕರಿಗೆ ಎಲ್ಲಿಂದ ಕೊಡುತ್ತದೆ? ಇದು ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುವುದಿಲ್ಲವೇ?”.

ಇದರ ಹಿಂದಿರುವ ನೈಜ ಸತ್ಯಾಂಶವೆಂದರೆ, ರಾಜ್ಯದಲ್ಲಿ ಯಾವುದೇ ಹೊಸ ಕಟ್ಟಡ, ಅಪಾರ್ಟ್‌ಮೆಂಟ್, ವಾಣಿಜ್ಯ ಸಂಕೀರ್ಣ ಅಥವಾ ಸರ್ಕಾರಿ ಪ್ರಾಜೆಕ್ಟ್ (10 ಲಕ್ಷಕ್ಕೂ ಮೀರಿದ ಬಜೆಟ್‌ನ ಯಾವುದೇ ಕಟ್ಟಡಗಳು) ನಿರ್ಮಾಣವಾಗುವಾಗ, ಬಿಲ್ಡರ್‌ಗಳು, ಮಾಲೀಕರು ಅಥವಾ ಗುತ್ತಿಗೆದಾರರು ತಮ್ಮ ಒಟ್ಟು ನಿರ್ಮಾಣ ವೆಚ್ಚದ ಶೇಕಡಾ 1% ರಷ್ಟು ಹಣವನ್ನು ಕಡ್ಡಾಯವಾಗಿ ‘ಕಾರ್ಮಿಕ ಕಲ್ಯಾಣ ಸೆಸ್’ (Labour Cess) ರೂಪದಲ್ಲಿ ಸರ್ಕಾರಕ್ಕೆ ಪಾವತಿಸಬೇಕಾಗುತ್ತದೆ. ಹೀಗೆ ರಾಜ್ಯಾದ್ಯಂತ ಸಂಗ್ರಹವಾಗುವ ಸಾವಿರಾರು ಕೋಟಿ ರೂಪಾಯಿಗಳ ಬೃಹತ್ ನಿಧಿ ಈ ಮಂಡಳಿಯಲ್ಲಿ ಜಮೆಯಾಗುತ್ತದೆ.

ಈ ಹಣವನ್ನು ಕೇವಲ ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ, ಅವರ ಅಭಿವೃದ್ಧಿಗಾಗಿ ಮತ್ತು ಅವರ ಸೌಲಭ್ಯಗಳಿಗಾಗಿ ಮಾತ್ರ ಬಳಸಬೇಕು ಎಂಬುದು ಭಾರತ ಸರ್ಕಾರದ ಕಟ್ಟುನಿಟ್ಟಿನ ನಿಯಮವಾಗಿದೆ. ಆದ್ದರಿಂದ, ಇದರಲ್ಲಿ ಸಿಗುವ ಪ್ರತಿಯೊಂದು ರೂಪಾಯಿಯೂ ಕಷ್ಟಪಟ್ಟು  ಬೆವರು ಸುರಿಸಿ ದುಡಿಯುವ ಕಾರ್ಮಿಕನ ಹಕ್ಕಾಗಿದೆ.

ಕಾರ್ಮಿಕ ಕಾರ್ಡ್ ಪಡೆಯಲು ಯಾರೆಲ್ಲಾ ಅರ್ಹರು? (ವಯೋಮಿತಿ ಮತ್ತು ಕಡ್ಡಾಯ ನಿಯಮಗಳು)

ಈ ಕಾರ್ಡ್ ಅನ್ನು ಕಂಡ ಕಂಡವರೆಲ್ಲರೂ, ಅಂದರೆ ಯಾವುದೋ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವವರು, ಕೃಷಿ ಮಾಡುವವರು ಅಥವಾ ದಿನಸಿ ಅಂಗಡಿಯಲ್ಲಿ ವ್ಯಾಪಾರ ಮಾಡುವವರು ಮಾಡಿಸುವಂತಿಲ್ಲ. ನೈಜ ಕಟ್ಟಡ ಕಾರ್ಮಿಕರಿಗೆ ಮಾತ್ರ ಸೌಲಭ್ಯ ಸಿಗಬೇಕು ಎಂಬ ದೃಷ್ಟಿಯಿಂದ ಸರ್ಕಾರವು ಇದಕ್ಕೆ ಕೆಲವು ನಿರ್ದಿಷ್ಟ ಮತ್ತು ಕಟ್ಟುನಿಟ್ಟಿನ ನಿಯಮಗಳನ್ನು ನಿಗದಿಪಡಿಸಿದೆ. ನೀವು ಈ ಕೆಳಗಿನ ಅರ್ಹತೆಗಳನ್ನು ಹೊಂದಿದ್ದರೆ ಮಾತ್ರ ಅರ್ಜಿ ಸಲ್ಲಿಸಬಹುದು:

  • ವಯಸ್ಸಿನ ಮಿತಿ (Age Limit): ಆನ್‌ಲೈನ್ ಮೂಲಕ ಕಾರ್ಮಿಕ ಕಾರ್ಡ್‌ಗೆ ಅರ್ಜಿ ಸಲ್ಲಿಸುವ ಯಾವುದೇ ಕಾರ್ಮಿಕನ ವಯಸ್ಸು ಕನಿಷ್ಠ 18 ವರ್ಷ ತುಂಬಿರಲೇಬೇಕು. ಹಾಗೆಯೇ ಆತನ ಗರಿಷ್ಠ ವಯಸ್ಸು 60 ವರ್ಷ ಮೀರಿರಬಾರದು. 60 ವರ್ಷ ಮೇಲ್ಪಟ್ಟ ವೃದ್ಧರಿಗೆ ಈ ಕಾರ್ಡ್ ಅನ್ನು ಹೊಸದಾಗಿ ಮಾಡಿಸಲು ಕಾನೂನಿನಲ್ಲಿ ಅವಕಾಶವಿಲ್ಲ.
  • 90 ದಿನಗಳ ಕಡ್ಡಾಯ ಕೆಲಸದ ನಿಯಮ: ಅರ್ಜಿದಾರನು ತಾನು ಅರ್ಜಿ ಸಲ್ಲಿಸುತ್ತಿರುವ ದಿನಾಂಕದಿಂದ ಹಿಂದಿನ 12 ತಿಂಗಳುಗಳಲ್ಲಿ (ಅಂದರೆ ಕಳೆದ ಒಂದು ವರ್ಷದ ಅವಧಿಯಲ್ಲಿ) ಕನಿಷ್ಠ 90 ದಿನಗಳ ಕಾಲವಾದರೂ ಕಟ್ಟಡ ನಿರ್ಮಾಣ ಅಥವಾ ಅದಕ್ಕೆ ನೇರವಾಗಿ ಸಂಬಂಧಿಸಿದ ಕೆಲಸವನ್ನು ಕರ್ನಾಟಕ ರಾಜ್ಯದೊಳಗೆ ಕಡ್ಡಾಯವಾಗಿ ಮಾಡಿರಬೇಕು. ಇದನ್ನು ಕಾಂಟ್ರಾಕ್ಟರ್ ಮೂಲಕ ದೃಢೀಕರಿಸಬೇಕಾಗುತ್ತದೆ.
  • ಯಾವೆಲ್ಲಾ ವೃತ್ತಿಯ ಕೆಲಸಗಾರರು ಅರ್ಹರು?: ಕಟ್ಟಡ ನಿರ್ಮಾಣವೆಂದರೆ ಕೇವಲ ಕಲ್ಲು ಹೊರುವವರು ಅಥವಾ ಸಿಮೆಂಟ್ ಬೆರೆಸುವವರು ಮಾತ್ರವಲ್ಲ. ಇದರಲ್ಲಿ ವಿಶಾಲವಾದ ವೃತ್ತಿಗಳ ಪಟ್ಟಿಯೇ ಇದೆ. ಮೇಸ್ತ್ರಿ (ಗಾರೆ ಕೆಲಸಗಾರರು), ಬಡಗಿಗಳು (Carpenters), ಪೇಂಟರ್ಸ್, ಪ್ಲಂಬರ್ಸ್, ಎಲೆಕ್ಟ್ರಿಷಿಯನ್, ಕಲ್ಲು ಒಡೆಯುವವರು, ಇಟ್ಟಿಗೆ ಮತ್ತು ಹೆಂಚು ಮಾಡುವವರು, ಟೈಲ್ಸ್ ಮತ್ತು ಮಾರ್ಬಲ್ ಹಾಕುವವರು, ವೆಲ್ಡಿಂಗ್ ಮಾಡುವವರು, ಬಾರ್ ಬೆಂಡಿಂಗ್ (ಕಬ್ಬಿಣದ ಕೆಲಸ) ಮಾಡುವವರು, ರಸ್ತೆ ನಿರ್ಮಾಣದ ಕೂಲಿಗಳು, ಡಾಂಬರು ಹಾಕುವವರು ಹಾಗೂ ಚಿತ್ತಾಳು ಕೆಲಸ ಮಾಡುವ ಪ್ರತಿಯೊಬ್ಬ ಕಾರ್ಮಿಕರೂ ಈ ಕಾರ್ಡ್ ಪಡೆಯಲು ಸಂಪೂರ್ಣ ಅರ್ಹರಾಗಿರುತ್ತಾರೆ.
  • ಯಾರಿಗೆ ಅವಕಾಶವಿಲ್ಲ?: ಸಿದ್ಧ ಉಡುಪು (ಗಾರ್ಮೆಂಟ್ಸ್) ಕಾರ್ಖಾನೆ ಕೆಲಸಗಾರರು, ಬಟ್ಟೆ ಅಂಗಡಿಗಳಲ್ಲಿ ಅಥವಾ ಮಾಲ್‌ಗಳಲ್ಲಿ ಕೆಲಸ ಮಾಡುವವರು, ಕೃಷಿ ಕಾರ್ಮಿಕರು, ಆಟೋ/ಕ್ಯಾಬ್ ಚಾಲಕರು, ಅಥವಾ ಐಟಿ-ಬಿಟಿ ಕಂಪನಿ ಉದ್ಯೋಗಿಗಳು ಯಾವುದೇ ಕಾರಣಕ್ಕೂ ಈ ಕಾರ್ಡ್ ಮಾಡಿಸುವಂತಿಲ್ಲ. ಒಂದು ವೇಳೆ ಸುಳ್ಳು ದಾಖಲೆ ನೀಡಿ ಸಿಕ್ಕಿಬಿದ್ದರೆ ಕ್ರಿಮಿನಲ್ ಪ್ರಕರಣ ದಾಖಲಾಗುವ ಸಾಧ್ಯತೆ ಇರುತ್ತದೆ.

ಕಾರ್ಮಿಕ ಕಾರ್ಡ್ ಇದ್ದರೆ ಸಿಗುವ ಬಂಪರ್ ಲಾಭಗಳು (ಅತಿ ದೊಡ್ಡ ಸೌಲಭ್ಯಗಳ ಪಟ್ಟಿ)

ಕೇವಲ ಒಂದು ಕಾರ್ಮಿಕ ಕಾರ್ಡ್ ನಿಮ್ಮ ಜೀವನ ರೂಪಿಸುವ  ಹಾಗೂ ಸರ್ಕಾರದಿಂದ ನಿಮ್ಮ ಇಡೀ ಕುಟುಂಬಕ್ಕೆ ಹುಟ್ಟಿನಿಂದ ಸಾಯುವವರೆಗೂ  ಸಿಗುವ ಆರ್ಥಿಕ ಸಹಾಯ ದ ವಿವರವಾದ ಪಟ್ಟಿ ಇಲ್ಲಿದೆವು . ಇದನ್ನು ಓದಿದರೆ ನೀವೇ ಆಶ್ಚರ್ಯಪಡುತ್ತೀರಿ!

1. ಮಕ್ಕಳ ಶಿಕ್ಷಣಕ್ಕಾಗಿ ಬೃಹತ್ ‘ಕಲಿಕಾ ಭಾಗ್ಯ’ ಸ್ಕಾಲರ್‌ಶಿಪ್ (Educational Assistance)

ಕಟ್ಟಡ ಕಾರ್ಮಿಕರ ಮಕ್ಕಳು ಬಡತನ ಮತ್ತು ಕಷ್ಟದ ಕಾರಣಕ್ಕೆ ಅರ್ಧದಲ್ಲೇ ಶಾಲೆ ಬಿಡಬಾರದು, ಶಿಕ್ಷಣದಿಂದ ವಂಚಿತರಾಗಬಾರದು, ಕಾರ್ಮಿಕರ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಮತ್ತು ಸಮಾಜದಲ್ಲಿ ಸ್ಥಾನಮಾನದಲ್ಲಿ  ಉನ್ನತ ಶಿಕ್ಷಣ ಪಡೆಯುವ  ಉದ್ದೇಶದಿಂದ ‘ಕಲಿಕಾ ಭಾಗ್ಯ’ ಯೋಜನೆಯಡಿ ಪ್ರತಿ ವರ್ಷ ಬೃಹತ್ ಮೊತ್ತದ ಸ್ಕಾಲರ್‌ಶಿಪ್ ನೀಡಲಾಗುತ್ತದೆ. (ಗಮನಿಸಿ: ಕಾರ್ಮಿಕ ಮಂಡಳಿಯ ನಿಯಮದಂತೆ ಒಬ್ಬ ಕಾರ್ಮಿಕನ ಗರಿಷ್ಠ ಇಬ್ಬರು ಮಕ್ಕಳಿಗೆ ಮಾತ್ರ ಇದು ಅನ್ವಯಿಸುತ್ತದೆ).

  • ಪ್ರಾಥಮಿಕ ಶಿಕ್ಷಣ: ನರ್ಸರಿ (LKG/UKG) ಯಿಂದ 4ನೇ ತರಗತಿಯವರೆಗೆ ಓದುತ್ತಿರುವ ಸಣ್ಣ ಮಕ್ಕಳಿಗೆ ವಾರ್ಷಿಕ ₹3,000 ದಿಂದ ₹4,000 ದವರೆಗೆ ಸಹಾಯಧನ.
  • ಮಾಧ್ಯಮಿಕ ಶಿಕ್ಷಣ: 5ನೇ ತರಗತಿಯಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರ್ಷಿಕ ₹4,000 ದಿಂದ ₹6,000 ದವರೆಗೆ.
  • ಪ್ರೌಢ ಶಿಕ್ಷಣ (SSLC ವರೆಗೆ): 9ನೇ ಮತ್ತು 10ನೇ ತರಗತಿ ಓದುವ ಮಕ್ಕಳಿಗೆ ಬೋರ್ಡ್ ಪರೀಕ್ಷೆಯ ಖರ್ಚಿಗಾಗಿ ವಾರ್ಷಿಕ ₹8,000 ದಿಂದ ₹10,000 ದವರೆಗೆ.
  • ಪದವಿ ಪೂರ್ವ ಶಿಕ್ಷಣ: ಪಿಯುಸಿ (PUC), ಐಟಿಐ (ITI), ಡಿಪ್ಲೊಮಾ (Diploma) ಓದುವ ವಿದ್ಯಾರ್ಥಿಗಳಿಗೆ ವಾರ್ಷಿಕ ₹10,000 ದಿಂದ ₹15,000 ದವರೆಗೆ.
  • ಸಾಮಾನ್ಯ ಪದವಿ (Degree): ಬಿಎ (BA), ಬಿಕಾಂ (BCom), ಬಿಎಸ್‌ಸಿ (BSc) ಓದುತ್ತಿರುವವರಿಗೆ ಅವರ ಕಾಲೇಜು ಶುಲ್ಕ ಭರಿಸಲು ವಾರ್ಷಿಕ ₹20,000 ದಿಂದ ₹25,000.
  • ಸ್ನಾತಕೋತ್ತರ ಪದವಿ (PG): ಎಂಎ, ಎಂಕಾಂ, ಎಂಎಸ್ಸಿ ನಂತಹ ಉನ್ನತ ವ್ಯಾಸಂಗಕ್ಕೆ ವಾರ್ಷಿಕ ₹30,000.
  • ವೃತ್ತಿಪರ ಕೋರ್ಸ್‌ಗಳು (Professional Courses): ಇಂಜಿನಿಯರಿಂಗ್ (BE/BTech), ಬಿ.ಎಸ್ಸಿ ಅಗ್ರಿ, ಬಿ.ಫಾರ್ಮ, ನರ್ಸಿಂಗ್ ಅಥವಾ ಮೆಡಿಕಲ್ (MBBS) ಓದುವ ವಿದ್ಯಾರ್ಥಿಗಳಿಗೆ ವಾರ್ಷಿಕ ₹50,000 ದಿಂದ ₹60,000 ಗಳವರೆಗೆ ಭಾರಿ ಮೊತ್ತದ ವಿದ್ಯಾರ್ಥಿ ವೇತನ ಸಿಗುತ್ತದೆ.
  • ಪ್ರತಿಭಾ ಪುರಸ್ಕಾರ: ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಶೇ.75 ಕ್ಕಿಂತ ಹೆಚ್ಚು ಅಂಕ ಪಡೆದು ಉತ್ತೀರ್ಣರಾದರೆ, ಸರ್ಕಾರದಿಂದ ವಿಶೇಷ ‘ಪ್ರತಿಭಾ ಪುರಸ್ಕಾರ’ದ ರೂಪದಲ್ಲಿ ಹೆಚ್ಚುವರಿ ಆರ್ಥಿಕ ಬಹುಮಾನವೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಿಗುತ್ತದೆ.

2. ಹೆಣ್ಣುಮಕ್ಕಳಿಗೆ ಮದುವೆ ಸಹಾಯಧನ (ಮದುವೆ ಭಾಗ್ಯ)

ಬಡತನದಲ್ಲಿರುವ ಕಾರ್ಮಿಕ ಕುಟುಂಬದಲ್ಲಿ  ತಮ್ಮ ಮಕ್ಕಳ ಮದುವೆ ಮಾಡುವುದು, ಅದರಲ್ಲೂ ಹೆಣ್ಣುಮಕ್ಕಳ ವಿವಾಹ ಮಾಡುವುದು ಎಂದರೆ ದೊಡ್ಡ ಆರ್ಥಿಕ ಹೊರೆಯಾಗಿದೆ . ಸಾಲ ಮಾಡಿ ಮಗಳ ಮದುವೆ ಮಾಡಬೇಕು  ಅನೋ ಕಡು ಬಡತನದ ಪರಿಸ್ಥಿತಿ ಯನ್ನು  ಅರಿತಿರುವ ಸರ್ಕಾರವು ನೋಂದಾಯಿತ ಕಾರ್ಮಿಕನಿಗೆ (ಅವಿವಾಹಿತನಾಗಿದ್ದರೆ) ಅಥವಾ ಅವನ ಇಬ್ಬರು ಮಕ್ಕಳ (ಗಂಡು ಅಥವಾ ಹೆಣ್ಣು) ಮದುವೆಗೆ ಆರ್ಥಿಕ ನೆರವು ನೀಡುತ್ತದೆ. ಮದುವೆಗೆ ಮುಂಚಿತವಾಗಿ ಅಥವಾ ಮದುವೆಯಾದ ಆರು ತಿಂಗಳ ಒಳಗೆ ಮದುವೆ ಕಾರ್ಡ್ ಮತ್ತು ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದರೆ, ₹50,000 ರೂ. ಸಹಾಯಧನ ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ಡಿಬಿಟಿ (DBT) ಮೂಲಕ ಜಮಾ ಆಗುತ್ತದೆ.

3. ತಾಯಿ-ಮಗುವಿಗೆ ಹೆರಿಗೆ ಸೌಲಭ್ಯ ಮತ್ತು ಸಹಾಯ ಹಸ್ತ

ನೋಂದಾಯಿತ ಮಹಿಳಾ ಕಾರ್ಮಿಕರಿಗೆ, ಅಥವಾ ಪುರುಷ ಕಾರ್ಮಿಕನ ಹೆಂಡತಿಗೆ ಹೆರಿಗೆಯಾದ ಸಮಯದಲ್ಲಿ (ಗರಿಷ್ಠ 2 ಮಕ್ಕಳಿಗೆ ಮಾತ್ರ) ಉತ್ತಮ ಪೌಷ್ಟಿಕಾಂಶದ ಆಹಾರ ಸಾಗಿಸಲು ಆರ್ಥಿಕ ನೆರವು ಸಿಗುತ್ತದೆ. ಹೆಣ್ಣು ಮಗುವಾದರೆ ₹30,000 ಮತ್ತು ಗಂಡು ಮಗುವಾದರೆ ₹20,000 ಸಹಾಯಧನವನ್ನು ಸರ್ಕಾರ ನೀಡುತ್ತದೆ. ಇದರಿಂದ ಬಾಣಂತಿ ಮತ್ತು ಮಗುವಿನ ಆರೋಗ್ಯ ಕಾಪಾಡಲು ಬಹಳ ಅನುಕೂಲವಾಗುತ್ತದೆ.

4. ಪ್ರಾಣಾಪಾಯದ ಕಾಯಿಲೆಗಳಿಗೆ ವೈದ್ಯಕೀಯ ನೆರವು (ಚಿಕಿತ್ಸಾ ಭಾಗ್ಯ)

ಬಡ ಕಾರ್ಮಿಕರಿಗೆ ದೊಡ್ಡ ಕಾಯಿಲೆ ಬಂದರೆ ಲಕ್ಷಾಂತರ ರೂಪಾಯಿ ಆಸ್ಪತ್ರೆ ಬಿಲ್ ಕಟ್ಟಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಕಾರ್ಮಿಕರಿಗೆ ಅಥವಾ ಅವರ ಅವಲಂಬಿತರಿಗೆ ಹೃದಯ ಶಸ್ತ್ರಚಿಕಿತ್ಸೆ (Heart Surgery), ಕಿಡ್ನಿ ವೈಫಲ್ಯ (Dialysis), ಕ್ಯಾನ್ಸರ್, ಪಾರ್ಶ್ವವಾಯು (Stroke), ನರರೋಗ, ಅಥವಾ ಕಣ್ಣಿನ ಶಸ್ತ್ರಚಿಕಿತ್ಸೆಯಂತಹ ಗಂಭೀರ ಕಾಯಿಲೆಗಳು ಬಂದು ಆಸ್ಪತ್ರೆಗೆ ದಾಖಲಾದರೆ, ಮಂಡಳಿಯು ನಿಗದಿಪಡಿಸಿದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಸಂಪೂರ್ಣ ಉಚಿತ ಚಿಕಿತ್ಸೆ ಲಭ್ಯವಿದೆ. ಆಸ್ಪತ್ರೆಯ ಲಕ್ಷಾಂತರ ರೂಪಾಯಿಗಳ ಖರ್ಚು ವೆಚ್ಚವನ್ನು   ಕಾರ್ಮಿಕರ ಕಲ್ಯಾಣ ಮಂಡಳಿಯೇ ನೇರವಾಗಿ ಆಸ್ಪತ್ರೆಗೆ ಭರಿಸುತ್ತದೆ.

5. 60 ವರ್ಷದ ನಂತರ ಪಿಂಚಣಿ ಸೌಲಭ್ಯ (Pension Scheme)

ಯಾವುದೇ ಕಟ್ಟಡ ಕಾರ್ಮಿಕನಿಗೆ 60 ವರ್ಷ ವಯಸ್ಸಾದ ನಂತರ ಆತನಿಗೆ ಮೊದಲಿನಂತೆ  ದುಡಿಯುವ ಅರ್ಹತೆಯನ್ನು  ಕಳೆದುಕೊಳ್ಳುತ್ತಾನೆ ಮತ್ತು   ಭಾರ ಎತ್ತಲು, ಸಿಮೆಂಟ್ ಚೀಲ ಹೊರಲು ಅಥವಾ ದಿನವಿಡೀ ನಿಂತು ಕೂಲಿ ಕೆಲಸ ಮಾಡಲು ದೈಹಿಕವಾಗಿ ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ, ಸತತ 3 ವರ್ಷಗಳ ಕಾಲ ಕಾರ್ಮಿಕ ಕಾರ್ಡ್ ಅನ್ನು ತಪ್ಪದೆ ನವೀಕರಣ (Renewal) ಮಾಡಿರುವ ಕಾರ್ಮಿಕರಿಗೆ, 60 ವರ್ಷ ತುಂಬಿದ ನಂತರ ಪ್ರತಿ ತಿಂಗಳು ₹3,000 ರೂ. ಜೀವಿತಾವಧಿ ಪಿಂಚಣಿ (Pension) ನೀಡಲಾಗುತ್ತದೆ. ಇದರಿಂದ ವೃದ್ಧಾಪ್ಯದಲ್ಲಿ, ಮೈಯಲ್ಲಿ ಶಕ್ತಿ ಇಲ್ಲದಾಗ ಮಕ್ಕಳ ಮುಂದೆಯೂ ಕೈಚಾಚುವ ಪರಿಸ್ಥಿತಿ ಬರುವುದಿಲ್ಲ.

6. ಅಪಘಾತ ಪರಿಹಾರ ಮತ್ತು ಅಂತ್ಯಸಂಸ್ಕಾರದ ವೆಚ್ಚ

ಕಟ್ಟಡ ನಿರ್ಮಾಣ ಸ್ಥಳವು ಅತ್ಯಂತ ಅಪಾಯಕಾರಿ ಜಾಗ. ಕೆಲಸ ಮಾಡುವಾಗ ಆಕಸ್ಮಿಕವಾಗಿ ಮೇಲಿಂದ ಬಿದ್ದು ಅಥವಾ ವಿದ್ಯುತ್ ಸ್ಪರ್ಶದಂತಹ ಅಪಘಾತ ಸಂಭವಿಸಿ ಕಾರ್ಮಿಕ ಮೃತಪಟ್ಟರೆ, ಆತನನ್ನೇ ನಂಬಿದ್ದ ಕುಟುಂಬ ಬೀದಿಗೆ ಬೀಳಬಾರದು ಎಂಬ ಕಾರಣಕ್ಕೆ ₹5 ಲಕ್ಷ ರೂ. ಗಳ ಬೃಹತ್ ಪರಿಹಾರ ಸಿಗುತ್ತದೆ. ಒಂದು ವೇಳೆ ಕೆಲಸದ ವೇಳೆ ಶಾಶ್ವತ ಅಂಗವೈಕಲ್ಯ ಉಂಟಾದರೆ (ಕೈ ಕಾಲು ಕಳೆದುಕೊಂಡರೆ) ₹2 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ. ದುರದೃಷ್ಟವಶಾತ್ ಕಾರ್ಮಿಕ ಮೃತಪಟ್ಟರೆ, ಅಂತ್ಯಸಂಸ್ಕಾರದ ಖರ್ಚಿಗಾಗಿ ತಕ್ಷಣವೇ ₹50,000 ರೂ. ನೆರವು ಸಿಗುತ್ತದೆ.

7. ವಸತಿ ಯೋಜನೆ, ಟೂಲ್ ಕಿಟ್ ಮತ್ತು ಉಚಿತ ಬಸ್ ಪಾಸ್

ಸ್ವಂತ ಮನೆ ಕಟ್ಟಿಕೊಳ್ಳಲು ಅಥವಾ ಖರೀದಿಸಲು ಮಂಡಳಿಯಿಂದ ಧನಸಹಾಯ ಸಿಗುತ್ತದೆ. ಕೆಲಸಕ್ಕೆ ಪ್ರತಿದಿನ ದೂರದ ಊರುಗಳಿಗೆ ಹೋಗಿ ಬರಲು ಅನುಕೂಲವಾಗುವಂತೆ ಕಾರ್ಮಿಕರಿಗೆ ಉಚಿತ ಬಿಎಂಟಿಸಿ (BMTC) ಅಥವಾ ಕೆಎಸ್ಆರ್‌ಟಿಸಿ (KSRTC) ಬಸ್ ಪಾಸ್ ನೀಡುವ ವ್ಯವಸ್ಥೆಯೂ ಇದೆ. ಜೊತೆಗೆ, ಎಲೆಕ್ಟ್ರಿಷಿಯನ್, ಪ್ಲಂಬರ್, ಮತ್ತು ಬಡಗಿ ಕೆಲಸ ಮಾಡುವ ಕರಕುಶಲ ಕಾರ್ಮಿಕರಿಗೆ ತಮ್ಮ ವೃತ್ತಿಗೆ ಅತ್ಯಗತ್ಯವಿರುವ ದುಬಾರಿ ಪರಿಕರಗಳನ್ನು (Tool kits) ಮಂಡಳಿಯಿಂದಲೇ ಉಚಿತವಾಗಿ ಒದಗಿಸಲಾಗುತ್ತದೆ.

ಹೊಸ ಕಾರ್ಮಿಕ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಕಡ್ಡಾಯವಾಗಿ ಬೇಕಾಗುವ ದಾಖಲೆಗಳ ಪಟ್ಟಿ

ನೀವು ಆನ್‌ಲೈನ್ ಸೆಂಟರ್‌ಗೆ ಹೋಗುವ ಮುನ್ನ ನಿಮ್ಮ ಬಳಿ ಈ ಕೆಳಗಿನ ಮೂಲ ದಾಖಲೆಗಳು ಕಡ್ಡಾಯವಾಗಿ ಸಿದ್ಧವಿರಬೇಕು. ಒಂದೇ ಒಂದು ದಾಖಲೆ ಕಡಿಮೆಯಾದರೂ ಆನ್‌ಲೈನ್‌ನಲ್ಲಿ ನಿಮ್ಮ ಅರ್ಜಿ ಸಲ್ಲಿಕೆಯಾಗುವುದಿಲ್ಲ:

  1. ಆಧಾರ್ ಕಾರ್ಡ್ (Aadhaar Card): ಇದು ಅತ್ಯಂತ ಪ್ರಮುಖ ಗುರುತಿನ ದಾಖಲೆ. ನಿಮ್ಮ ಆಧಾರ್ ಕಾರ್ಡ್‌ಗೆ ನಿಮ್ಮ ಪ್ರಸ್ತುತ ಚಾಲ್ತಿಯಲ್ಲಿರುವ ಮೊಬೈಲ್ ನಂಬರ್ ಕಡ್ಡಾಯವಾಗಿ ಲಿಂಕ್ ಆಗಿರಲೇಬೇಕು (ಲಾಗಿನ್ ಓಟಿಪಿ ಪಡೆಯಲು ಮತ್ತು ಸ್ಟೇಟಸ್ ಮೆಸೇಜ್ ಪಡೆಯಲು ಇದು ಅತ್ಯಗತ್ಯ).
  2. ರೇಷನ್ ಕಾರ್ಡ್ (Ration Card): ಅರ್ಜಿದಾರರ ಹೆಸರಿರುವ ಬಿಪಿಎಲ್ (BPL) ಅಥವಾ ಎಪಿಎಲ್ (APL) ಪಡಿತರ ಚೀಟಿ. ಇದರಲ್ಲಿ ಕುಟುಂಬದ ಎಲ್ಲಾ ಸದಸ್ಯರ (ಗಂಡ, ಹೆಂಡತಿ, ಮಕ್ಕಳು) ಹೆಸರು ಕಡ್ಡಾಯವಾಗಿ ಇರಬೇಕು. ಇದರಿಂದಲೇ ಸ್ಕಾಲರ್‌ಶಿಪ್ ಮತ್ತು ಹೆರಿಗೆ ಭತ್ಯೆ ನಿರ್ಧಾರವಾಗುತ್ತದೆ.
  3. ಬ್ಯಾಂಕ್ ಪಾಸ್‌ಬುಕ್ (Bank Passbook): ಸರ್ಕಾರದ ಸಹಾಯಧನ ನೇರವಾಗಿ ಜಮಾ ಆಗಲು NPCI ಮ್ಯಾಪಿಂಗ್ ಆಗಿರುವ (ಆಧಾರ್ ಲಿಂಕ್ ಆಗಿರುವ) ನಿಮ್ಮ ಸ್ವಂತ ಬ್ಯಾಂಕ್ ಖಾತೆಯ ಪಾಸ್‌ಬುಕ್.
  4. ಭಾವಚಿತ್ರಗಳು (Photos): ಅರ್ಜಿದಾರರ ಇತ್ತೀಚಿನ 3 ಪಾಸ್‌ಪೋರ್ಟ್ ಸೈಜ್ ಬಣ್ಣದ ಫೋಟೋಗಳು.
  5. ವಯಸ್ಸಿನ ದೃಢೀಕರಣ (Age Proof): ನಿಮ್ಮ ವಯಸ್ಸನ್ನು ಖಚಿತಪಡಿಸಲು ಎಸ್ಸೆಸ್ಸೆಲ್ಸಿ (SSLC) ಮಾರ್ಕ್ಸ್ ಕಾರ್ಡ್, ಪ್ಯಾನ್ ಕಾರ್ಡ್, ವೋಟರ್ ಐಡಿ ಅಥವಾ ಡ್ರೈವಿಂಗ್ ಲೈಸೆನ್ಸ್.
  6. ಉದ್ಯೋಗ ಪ್ರಮಾಣಪತ್ರ (ನಮೂನೆ 5 – Form 5): ಇದು ಇಡೀ ಅರ್ಜಿಯ ಜೀವನಾಡಿ! ನೀವು ಮೇಸ್ತ್ರಿ, ಲೈಸೆನ್ಸ್ ಹೊಂದಿರುವ ಕಾಂಟ್ರಾಕ್ಟರ್, ಲೇಬರ್ ಇನ್ಸ್‌ಪೆಕ್ಟರ್ ಅಥವಾ ಟ್ರೇಡ್ ಯೂನಿಯನ್ ಮುಖಂಡರ ಬಳಿ ಕಳೆದ 1 ವರ್ಷದಲ್ಲಿ ಕನಿಷ್ಠ 90 ದಿನ ಕಟ್ಟಡ ಕೆಲಸ ಮಾಡಿದ್ದೀರಿ ಎಂದು ಖಚಿತವಾಗಿ ದೃಢೀಕರಿಸುವ ಪ್ರಮಾಣಪತ್ರವಿದು. ಈ ‘ನಮೂನೆ 5’ ರಲ್ಲಿ ಕಾಂಟ್ರಾಕ್ಟರ್‌ನ ರಿಜಿಸ್ಟ್ರೇಷನ್ ನಂಬರ್, ಅವರ ಸಹಿ ಮತ್ತು ಮೊಹರು (Seal) ಕಡ್ಡಾಯವಾಗಿ ಇರಲೇಬೇಕು.

ಆನ್‌ಲೈನ್ ಮೂಲಕ ಕಾರ್ಮಿಕ ಕಾರ್ಡ್‌ಗೆ ಅರ್ಜಿ ಸಲ್ಲಿಸುವ ಹಂತ-ಹಂತದ ವಿಧಾನ (Step-by-Step Process)

ಹಿಂದಿನ ಕಾಲದಂತೆ ಕಾರ್ಮಿಕ ಇಲಾಖೆಯ ಕಚೇರಿಗಳಿಗೆ ದಿನಗಟ್ಟಲೆ ಅಲೆದಾಡಿ, ಮಧ್ಯವರ್ತಿಗಳಿಗೆ ಕಮಿಷನ್ ಕೊಟ್ಟು ಕಾರ್ಡ್ ಮಾಡಿಸುವ ವ್ಯವಸ್ಥೆ ಈಗಿಲ್ಲ. ಸರ್ಕಾರದ ಪ್ರಕ್ರಿಯೆ ಈಗ ಸಂಪೂರ್ಣ ಪಾರದರ್ಶಕ ಮತ್ತು ಆನ್‌ಲೈನ್ ಆಗಿದೆ. ನೀವು ನಿಮ್ಮ ಹತ್ತಿರದ ಸೇವಾ ಕೇಂದ್ರಗಳ ಮೂಲಕ ಅತ್ಯಂತ ಸುಲಭವಾಗಿ ಅರ್ಜಿ ಸಲ್ಲಿಸಬಹುದು:

  • ಹಂತ 1: ಮೊದಲಿಗೆ ನೀವು ನಿಮ್ಮ ಊರಿನಲ್ಲಿರುವ ಅಥವಾ ವಾರ್ಡ್‌ನಲ್ಲಿರುವ ಹತ್ತಿರದ ‘ಗ್ರಾಮ ಒನ್’ (Grama One), ‘ಕರ್ನಾಟಕ ಒನ್’ (Karnataka One) ಅಥವಾ ಕಾಮನ್ ಸರ್ವೀಸ್ ಸೆಂಟರ್ (CSC) ಕೇಂದ್ರಗಳಿಗೆ ಖುದ್ದಾಗಿ ಭೇಟಿ ನೀಡಿ.
  • ಹಂತ 2: ನಿಮ್ಮ ಎಲ್ಲಾ ಮೂಲ ದಾಖಲೆಗಳು, ಆಧಾರ್ ಕಾರ್ಡ್, ಮತ್ತು ನೀವು ಕೆಲಸ ಮಾಡುವ ಕಾಂಟ್ರಾಕ್ಟರ್ ಕಡೆಯಿಂದ ದೃಢೀಕರಿಸಿದ ಅಸಲಿ ‘ಫಾರ್ಮ್ 5’ ಅನ್ನು ಕಂಪ್ಯೂಟರ್ ಆಪರೇಟರ್‌ಗೆ ನೀಡಿ.
  • ಹಂತ 3: ಆಪರೇಟರ್ ಸರ್ಕಾರದ ಅಧಿಕೃತ ‘ಸೇವಾ ಸಿಂಧು’ (Seva Sindhu Plus) ಪೋರ್ಟಲ್‌ನಲ್ಲಿ ಲಾಗಿನ್ ಆಗಿ, ನಿಮ್ಮ ಆಧಾರ್ ನಂಬರ್ ಹಾಕಿ, ಬಯೋಮೆಟ್ರಿಕ್ ಅಥವಾ ಓಟಿಪಿ (OTP) ಮೂಲಕ ಇ-ಕೆವೈಸಿ (e-KYC) ಮಾಡಿ ಆನ್‌ಲೈನ್ ಅರ್ಜಿಯನ್ನು ಸಂಪೂರ್ಣವಾಗಿ ಭರ್ತಿ ಮಾಡುತ್ತಾರೆ.
  • ಹಂತ 4: ಅರ್ಜಿ ಸಲ್ಲಿಸುವಾಗ ಕಾರ್ಮಿಕ ಮಂಡಳಿಗೆ ನಿಗದಿತ ನೊಂದಣಿ ಶುಲ್ಕ (Registration Fee) ಕೇವಲ ₹25 ಮತ್ತು ಮುಂದಿನ 3 ವರ್ಷಗಳ ವಂತಿಗೆ ಶುಲ್ಕ ಸೇರಿ ಅತ್ಯಂತ ಸಣ್ಣ ಮೊತ್ತವನ್ನು ಸರ್ಕಾರಕ್ಕೆ ಪಾವತಿಸಬೇಕಾಗುತ್ತದೆ. (ಇದರ ಜೊತೆಗೆ ಆಪರೇಟರ್‌ಗೆ ನಿಗದಿತ ಸೇವಾ ಶುಲ್ಕವನ್ನು ನೀವು ನೀಡಬೇಕಾಗುತ್ತದೆ).
  • ಹಂತ 5: ನಿಮ್ಮ ಅರ್ಜಿ ಯಶಸ್ವಿಯಾಗಿ ಸಲ್ಲಿಕೆಯಾದ ನಂತರ, ನಿಮ್ಮ ತಾಲೂಕಿನ ಸಂಬಂಧಪಟ್ಟ ಕಾರ್ಮಿಕ ನಿರೀಕ್ಷಕರು (Labour Inspector / Labour Officer) ನಿಮ್ಮ ಆನ್‌ಲೈನ್ ದಾಖಲೆಗಳನ್ನು ಮತ್ತು ಫಾರ್ಮ್ 5 ಅನ್ನು ಕೂಲಂಕಷವಾಗಿ ಪರಿಶೀಲಿಸುತ್ತಾರೆ. ಅನುಮಾನ ಬಂದರೆ ಅವರು ಖುದ್ದಾಗಿ ಕೆಲಸದ ಸ್ಥಳಕ್ಕೆ ಭೇಟಿ ನೀಡಿ ವೆರಿಫಿಕೇಶನ್ ಮಾಡಬಹುದು.
  • ಹಂತ 6: ನೀವು ನೀಡಿದ ಎಲ್ಲಾ ದಾಖಲೆಗಳು ಸರಿಯಾಗಿದ್ದರೆ, ಕೆಲವೇ ವಾರಗಳಲ್ಲಿ ನಿಮ್ಮ ಅರ್ಜಿ ಇಲಾಖೆಯಿಂದ ಅಪ್ರೂವ್ ಆಗುತ್ತದೆ. ನಿಮ್ಮ ಮೊಬೈಲ್‌ಗೆ ಒಪ್ಪಿಗೆಯಾದ ಮೆಸೇಜ್ ಬರುತ್ತದೆ. ನಂತರ ಆನ್‌ಲೈನ್‌ನಲ್ಲೇ ಕ್ಯೂಆರ್ ಕೋಡ್ (QR Code), ನಿಮ್ಮ ಫೋಟೋ ಮತ್ತು ನೋಂದಣಿ ಸಂಖ್ಯೆ ಇರುವ ಸ್ಮಾರ್ಟ್ ಕಾರ್ಮಿಕ ಕಾರ್ಡ್ ಜನರೇಟ್ ಆಗುತ್ತದೆ. ಅದನ್ನು ನೀವು ಅದೇ ಕೇಂದ್ರದಲ್ಲಿ ಕಲರ್ ಪ್ರಿಂಟ್ ತೆಗೆದುಕೊಂಡು, ಲ್ಯಾಮಿನೇಷನ್ ಮಾಡಿಸಿಕೊಂಡು ನಿಮ್ಮ ಬಳಿ ಭದ್ರವಾಗಿ ಇಟ್ಟುಕೊಳ್ಳಬಹುದು.

ಕಾರ್ಮಿಕ ಕಾರ್ಡ್‌ಗೆ ಅರ್ಜಿ ಸಲ್ಲಿಸುವಾಗ ನೀವು ಮಾಡಬಾರದ ಪ್ರಮುಖ ತಪ್ಪುಗಳು!

ಹಲವಾರು ಜನರು ಸುಲಭವಾಗಿ ಹಣ, ಸ್ಕಾಲರ್‌ಶಿಪ್ ಸಿಗುತ್ತದೆ ಎಂಬ ದುರಾಸೆಯಿಂದ ಅಥವಾ ಯಾರೋ ಏಜೆಂಟರ ಮಾತು ಕೇಳಿ ಮಾಡಬಾರದ ತಪ್ಪುಗಳನ್ನು ಮಾಡುತ್ತಾರೆ. ನೀವು ಅರ್ಜಿ ಸಲ್ಲಿಸುವಾಗ ಈ ಕೆಳಗಿನ ಎಚ್ಚರಿಕೆಗಳನ್ನು ವಹಿಸಿ:

  • ನೀವು ಕಾರ್ಮಿಕರಲ್ಲದಿದ್ದರೆ ಅರ್ಜಿ ಹಾಕದಿರಿ: ನೀವು ನಿಜವಾಗಿಯೂ ಕಟ್ಟಡ ನಿರ್ಮಾಣ ಅಥವಾ ಸಂಬಂಧಿತ ಕೂಲಿ ಕೆಲಸ ಮಾಡುವವರಾಗಿದ್ದರೆ ಮಾತ್ರ ಪ್ರಾಮಾಣಿಕವಾಗಿ ಅರ್ಜಿ ಸಲ್ಲಿಸಿ. ಬೇರೆ ವೃತ್ತಿಯಲ್ಲಿದ್ದುಕೊಂಡು ಸರ್ಕಾರದ ಈ ಸೌಲಭ್ಯ ಪಡೆಯಲು ಅಡ್ಡದಾರಿ ಹಿಡಿಯಬೇಡಿ.
  • ನಕಲಿ ಫಾರ್ಮ್ 5 (Fake Form 5) ನೀಡಬೇಡಿ: ಲೇಬರ್ ಇನ್ಸ್‌ಪೆಕ್ಟರ್ ಪರಿಶೀಲನೆಗೆ ಬಂದಾಗ ಅಥವಾ ಕ್ರಾಸ್-ಚೆಕ್ ಮಾಡಿದಾಗ, ನೀವು ನೀಡಿದ ಕಾಂಟ್ರಾಕ್ಟರ್‌ನ ಸಹಿ, ಮೊಹರು ನಕಲಿ ಎಂದು ಸಾಬೀತಾದರೆ ಅಥವಾ ಆ ಸ್ಥಳದಲ್ಲಿ ನೀವು ಕೆಲಸವೇ ಮಾಡಿಲ್ಲ ಎಂದು ತಿಳಿದುಬಂದರೆ, ನಿಮ್ಮ ಅರ್ಜಿಯನ್ನು ಸ್ಥಳದಲ್ಲೇ ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಲಾಗುತ್ತದೆ. ಅಷ್ಟೇ ಅಲ್ಲ, ಸರ್ಕಾರದ ಜೊತೆ ವಂಚನೆ ಮಾಡಿದ ಆರೋಪದ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸುವ ಸಾಧ್ಯತೆಯೂ ಇರುತ್ತದೆ.
  • ಸರಿಯಾದ ಬ್ಯಾಂಕ್ ಖಾತೆ ನೀಡಿ: ನಿಮ್ಮ ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ಆಧಾರ್ ಲಿಂಕ್ ಮತ್ತು NPCI ಮ್ಯಾಪಿಂಗ್ ಆಗಿದೆಯೇ ಎಂದು ಬ್ಯಾಂಕ್ ಮ್ಯಾನೇಜರ್ ಬಳಿ ಖಚಿತಪಡಿಸಿಕೊಳ್ಳಿ. ಮ್ಯಾಪಿಂಗ್ ಆಗಿಲ್ಲದಿದ್ದರೆ ಎಷ್ಟೇ ದೊಡ್ಡ ಸ್ಕಾಲರ್‌ಶಿಪ್ ಅಪ್ರೂವ್ ಆದರೂ ಒಂದು ರೂಪಾಯಿ ಕೂಡ ನಿಮ್ಮ ಖಾತೆಗೆ ಜಮಾ ಆಗುವುದಿಲ್ಲ.  {ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ ನೋಡಿ}

ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs)

1. ಕಾರ್ಮಿಕ ಕಾರ್ಡ್‌ನ ವ್ಯಾಲಿಡಿಟಿ (Validity) ಎಷ್ಟು ವರ್ಷ ಇರುತ್ತದೆ? ನೀವು ಒಮ್ಮೆ ಮಾಡಿಸಿದ ಕಾರ್ಮಿಕ ಕಾರ್ಡ್ ಕೇವಲ 3 ವರ್ಷಗಳ ಕಾಲ ವ್ಯಾಲಿಡಿಟಿ (ಮಾನ್ಯತೆ) ಹೊಂದಿರುತ್ತದೆ. ಆ 3 ವರ್ಷ ಪೂರ್ಣಗೊಂಡ ನಂತರ ಕಡ್ಡಾಯವಾಗಿ ನಿರ್ದಿಷ್ಟ ವಂತಿಗೆ ಹಣ ಕಟ್ಟಿ ಕಾರ್ಡ್ ಅನ್ನು ಮರು-ನವೀಕರಣ (Renewal) ಮಾಡಿಸಲೇಬೇಕು. ನವೀಕರಣ ಮಾಡಿಸದಿದ್ದರೆ ಸೌಲಭ್ಯಗಳು ರದ್ದಾಗುತ್ತವೆ.

2. ಮಕ್ಕಳ ಸ್ಕಾಲರ್‌ಶಿಪ್‌ಗಾಗಿ ಯಾವಾಗ ಮತ್ತು ಎಲ್ಲಿ ಅರ್ಜಿ ಸಲ್ಲಿಸಬೇಕು? ಪ್ರತಿ ವರ್ಷ ಶಾಲಾ-ಕಾಲೇಜುಗಳು ಆರಂಭವಾದ ನಂತರ (ಸಾಮಾನ್ಯವಾಗಿ ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ) ಕರ್ನಾಟಕ ಸರ್ಕಾರದ ಅಧಿಕೃತ ಎಸ್‌ಎಸ್‌ಪಿ (SSP – State Scholarship Portal) ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬೇಕು.

3. ಗಾರೆ ಕೆಲಸ ಮಾಡುವವರ ಹೆಂಡತಿ ತನ್ನ ಹೆಸರಿನಲ್ಲಿ ಈ ಕಾರ್ಡ್ ಮಾಡಿಸಬಹುದಾ? ಇಲ್ಲ, ಯಾರು ನೇರವಾಗಿ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಕೂಲಿ ಕೆಲಸ ಮಾಡುತ್ತಾರೋ ಅವರು ಮಾತ್ರ ಕಾರ್ಡ್ ಮಾಡಿಸಲು ಅರ್ಹರು. ಆದರೆ ಗಂಡನ ಹೆಸರಿನಲ್ಲಿ ಕಾರ್ಡ್ ಇದ್ದರೆ, ಹೆಂಡತಿಗೆ ಹೆರಿಗೆ ಭತ್ಯೆ ಹಾಗೂ ಅವಲಂಬಿತರಿಗೆ ವೈದ್ಯಕೀಯ ಸೌಲಭ್ಯಗಳು ಸಹಜವಾಗಿ ಸಿಗುತ್ತವೆ.

4. ಆನ್‌ಲೈನ್‌ನಲ್ಲಿ ಅರ್ಜಿಯ ಸ್ಟೇಟಸ್ ಚೆಕ್ ಮಾಡುವುದು ಹೇಗೆ? ನೀವು ಸೇವಾ ಸಿಂಧು (Seva Sindhu) ಪೋರ್ಟಲ್‌ನಲ್ಲಿ ‘Check Application Status’ ಆಯ್ಕೆಯನ್ನು ಬಳಸಿ, ನೀವು ಅರ್ಜಿ ಸಲ್ಲಿಸಿದಾಗ ಪಡೆದ ಸ್ವೀಕೃತಿ ಸಂಖ್ಯೆಯನ್ನು (Acknowledgement Number) ನಮೂದಿಸುವ ಮೂಲಕ ನಿಮ್ಮ ಅರ್ಜಿಯ ಪ್ರಸ್ತುತ ಸ್ಥಿತಿಯನ್ನು ಪರಿಶೀಲಿಸಬಹುದು.

Leave a Comment